HD Kumaraswamy: ಜೆಡಿಎಸ್ ಸಭೆಯಲ್ಲಿ ಯುಟರ್ನ್ ತೆಗೆದುಕೊಂಡ ಎಚ್​ಡಿ ಕುಮಾರಸ್ವಾಮಿ; ಎಂಎಲ್​ಸಿಗಳ ಬಳಿ ಕ್ಷಮೆ

ಎಚ್​ಡಿ ಕುಮಾರಸ್ವಾಮಿ ಜೆಡಿಎಸ್​ ಎಂಎಲ್​ಸಿಗಳನ್ನು ಅವಮಾನ ಮಾಡಿದ್ದರು. ಈ ಬಗ್ಗೆ ಎಂಎಲ್​ಸಿಗಳು ಅಸಮಾಧಾನಗೊಂಡಿದ್ದರು. ಸಂಧಾನ ಮಾಡಲು ದೇವೇಗೌಡ ಪದ್ಮನಾಭನಗರದ ನಿವಾಸದಲ್ಲಿ ಸಭೆ ಕರೆದಿದ್ದರು. ಸತತ ನಾಲ್ಕು ಗಂಟೆ ನಡೆದ ಸಂಧಾನ ಸಭೆ ಯಶಸ್ವಿಯಾಗಿದೆ.

Rajesh Duggumane | news18-kannada
Updated:November 13, 2019, 8:12 AM IST
HD Kumaraswamy: ಜೆಡಿಎಸ್ ಸಭೆಯಲ್ಲಿ ಯುಟರ್ನ್ ತೆಗೆದುಕೊಂಡ ಎಚ್​ಡಿ ಕುಮಾರಸ್ವಾಮಿ; ಎಂಎಲ್​ಸಿಗಳ ಬಳಿ ಕ್ಷಮೆ
ಮಾಜಿ ಸಿಎಂ ಕುಮಾರಸ್ವಾಮಿ
  • Share this:
ಬೆಂಗಳೂರು (ನ.13): ಜೆಡಿಎಸ್ ವಿಧಾನಸಭಾ ಪರಿಷತ್​ ಸದಸ್ಯರನ್ನು ಅವಮಾನಗೊಳಿಸಿದ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿ ​ಕ್ಷಮೆ ಕೋರಿದ್ದಾರೆ ಎನ್ನಲಾಗಿದೆ. ಈ ಮೂಲಕ ಜೆಡಿಎಸ್​ ವರಿಷ್ಠ ಹೆಚ್ ಡಿ ದೇವೇಗೌಡ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ಯಶಸ್ವಿಯಾಗಿದೆ.

ಎಚ್​ಡಿಕೆ ಸಿಎಂ ಆಗಿದ್ದ ಅವಧಿಯಲ್ಲಿ ತಮ್ಮನ್ನು ಅವಮಾನಗೊಳಿಸಿದ್ದಾರೆ ಎಂದು ಜೆಡಿಎಸ್​ ಮೇಲ್ಮನೆ ಸದಸ್ಯರು ಬಂಡಾಯ ಎದ್ದಿದ್ದರು. ಈ ವಿಚಾರವಾಗಿ ಕಳೆದ ವಾರ ನಡೆದ ಪತ್ರಿಕಾ ಸಂವಾದದಲ್ಲಿ ಮಾತನಾಡಿದ್ದ ಕುಮಾರಸ್ವಾಮಿ “ಮೇಲ್ಮನೆ ಸದಸ್ಯರು ತಮ್ಮ ರೋಗ ಏನು ಎಂದೇ ಹೇಳಿಕೊಂಡಿಲ್ಲ. ಹೀಗಿರುವಾಗ ಹೇಗೆ ಚಿಕಿತ್ಸೆ ನೀಡಲಿ,” ಎಂದು ಪ್ರಶ್ನಿಸಿ ಎಂಲ್​ಸಿಗಳನ್ನು ಮತ್ತೆ ಅವಮಾನಗೊಳಿಸಿದ್ದರು.

ಇದನ್ನು ಸಂಧಾನ ಮಾಡಲು ದೇವೇಗೌಡ ಪದ್ಮನಾಭನಗರದ ನಿವಾಸದಲ್ಲಿ ಸಭೆ ಕರೆದಿದ್ದರು. ಸತತ ನಾಲ್ಕು ಗಂಟೆ ನಡೆದ ಸಂಧಾನ ಸಭೆ ಯಶಸ್ವಿಯಾಗಿದೆ. “ನನ್ನ ಆಡಳಿತಾವಧಿಯಲ್ಲಿ 24 ಗಂಟೆಯೂ ಒತ್ತಡದಲ್ಲಿ ಇರುತ್ತಿದ್ದೆ. ಶಾಸಕರು, ಸಚಿವರು ಮತ್ತು ಅಧಿಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕಿತ್ತು. ಈ ಸಂದರ್ಭದಲ್ಲಿ ನಿಮ್ಮನ್ನು ಕಡೆಗಣನೆ ಮಾಡಿದ್ದರೆ ಇದಕ್ಕೆ ಕ್ಷಮೆ ಕೋರುತ್ತೇನೆ. ಮುಂದೆ ದೇವೇಗೌಡರ ಆಣತಿಯಂತೆ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ,” ಎಂದು ಹೇಳುವ ಮೂಲಕ ರಾಗ ಬದಲಿಸಿದ್ದಾರೆ.

ಇದನ್ನೂ ಓದಿ: ಸುಪ್ರೀಂಕೋರ್ಟ್​​ನಲ್ಲಿ ಇಂದು 17 ಅನರ್ಹ ಶಾಸಕರ ಭವಿಷ್ಯ ನಿರ್ಧಾರ; ನಡೆಯುತ್ತಾ ಉಪಚುನಾವಣೆ?

ಈ ವೇಳೆ ಮಧ್ಯ ಪ್ರವೇಶಿಸಿದ ದೇವೇಗೌಡರು, “ಸಣ್ಣ ಮನಸ್ತಾಪದಿಂದ ನಾವು ಪ್ರಾದೇಶಿಕ ಪಕ್ಷವನ್ನು ಹಾಳು ಮಾಡುವುದು ಬೇಡ. ನಮ್ಮನ್ನು ನಂಬಿ ಸಾವಿರಾರು ಕಾರ್ಯಕರ್ತರು ಇದ್ದಾರೆ. ಕುಮಾರಸ್ವಾಮಿಗೆ ನಾನು‌ ಬುದ್ಧಿ ಹೇಳುತ್ತೇನೆ. ಮುಂದೆ ಹೀಗೆ ಆಗದಂತೆ ನಾನು ಭಾಷೆ ಕೊಡುತ್ತೇನೆ,” ಎಂದು ಸಭೆಯಲ್ಲಿ ಎಚ್​ಡಿಡಿ ಭಾವುಕರಾದರು ಎನ್ನುವುದು ಮೂಲಗಳ ಮಾಹಿತಿ.

ಎಚ್​ಡಿಕೆ ವರ್ತನೆ ಬಗ್ಗೆ ಹೊರಟ್ಟಿ ಮತ್ತು ಮರಿತಿಬ್ಬೇಗೌಡ ಸೇರಿ ಆರು ಮೇಲ್ಮನೆ ಸದಸ್ಯರ ಅಸಮಾಧಾನ ಹೊರ ಹಾಕಿದ್ದಾರೆ. ಸಭೆಗೆ 17 ಜೆಡಿಎಸ್ ಮೇಲ್ಮನೆ ಸದಸ್ಯರ ಪೈಕಿ ರಮೇಶ್ ಗೌಡ ಮತ್ತು ಬಿ.ಎಂ.ಫಾರೂಕ್ ಗೈರಾಗಿದ್ದರು. ಗೌಡರ ಮಾತಿಗೆ, ಎಚ್ಡಿಕೆ ಕ್ಷಮೆಗೆ ಬೆಲೆ ನೀಡಿ ಪಕ್ಷದ ಸಂಘಟನೆಗೆ ಮುಂದಾಗುತ್ತೇವೆ ಎಂದು ಮೇಲ್ಮನೆ ಸದಸ್ಯರು ಪ್ರಮಾಣ ಮಾಡಿದ್ದಾರೆ.

(ವರದಿ: ಶ್ರೀನಿವಾಸ ಹಳಕಟ್ಟಿ)
First published:November 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading