HOME » NEWS » State » HD KUMARASWAMY ANNOUNCES KRISHNAMURTHY AS JDS CANDIDATE FOR RR NAGAR BYPOLL SHM SNVS

ಆರ್ ಆರ್ ನಗರಕ್ಕೆ ಕೃಷ್ಣಮೂರ್ತಿ ಜೆಡಿಎಸ್ ಅಭ್ಯರ್ಥಿ; ನಾಳೆ ನಾಮಪತ್ರ ಸಲ್ಲಿಕೆ

ಜೆಡಿಎಸ್ ಕಾರ್ಯಕರ್ತ ಕೃಷ್ಣಮೂರ್ತಿ ಅವರಿಗೆ ಟಿಕೆಟ್ ನೀಡಿದ್ದೇವೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ನಮ್ಮ ಸಮಾನ ಶತ್ರುಗಳಾಗಿದ್ದು, ಜೆಡಿಎಸ್ ಅಭ್ಯರ್ಥಿ ಪರವಾಗಿ ಎಲ್ಲರೂ ಕೆಲಸ ಮಾಡಬೇಕೆಂದು ಆರ್.ಆರ್. ನಗರದ ಕಾರ್ಯಕರ್ತರಿಗೆ ಕುಮಾರಸ್ವಾಮಿ ಕರೆ ನೀಡಿದ್ಧಾರೆ.

news18-kannada
Updated:October 13, 2020, 4:04 PM IST
ಆರ್ ಆರ್ ನಗರಕ್ಕೆ ಕೃಷ್ಣಮೂರ್ತಿ ಜೆಡಿಎಸ್ ಅಭ್ಯರ್ಥಿ; ನಾಳೆ ನಾಮಪತ್ರ ಸಲ್ಲಿಕೆ
ಜೆಡಿಎಸ್​ನ ಕೃಷ್ಣಮೂರ್ತಿ
  • Share this:
ಬೆಂಗಳೂರು(ಅ. 13): ರಾಜರಾಜೇಶ್ವರಿ ನಗರ ಉಪಕದನಕ್ಕೆ ಸ್ಪರ್ಧಾಳುಗಳು ಬಹುತೇಕ ಫಿಕ್ಸ್ ಆಗಿದ್ಧಾರೆ. ಮಾಜಿ ಶಾಸಕ ಮುನಿರತ್ನಗೆ ಬಿಜೆಪಿ ಟಿಕೆಟ್ ಕೊಡುವುದು ನಿಶ್ಚಿತವಾಗುತ್ತಿದ್ದಂತೆಯೇ ಜೆಡಿಎಸ್ ಪಕ್ಷ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಕೃಷ್ಣಮೂರ್ತಿ ಅವರು ಜೆಡಿಎಸ್ ಅಭ್ಯರ್ಥಿಯಾಗಲಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. ಕೃಷ್ಣಮೂರ್ತಿ ತಂದೆ ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದವರು. ಈಗ ಅವರ ಮಗನಿಗೆ ಟಿಕೆಟ್ ಕೊಟ್ಟಿದ್ದೇವೆ. ಕೃಷ್ಣಮೂರ್ತಿ ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಹೆಚ್​ಡಿಕೆ ಹೇಳಿದ್ದಾರೆ.

ಕೃಷ್ಣಮೂರ್ತಿ ಅವರ ತಂದೆ ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದರು. 2008ರ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತದೆಂದು ಆಸೆ ಪಟ್ಟಿದ್ದರು. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಆ ಶಾಕ್​ನಿಂದ ಅವರು ಹೃದಯಾಘಾತಕ್ಕೊಳಗಾಗಿ ಮೃತರಾದರು. ಆ ಕುಟುಂಬದ ಬಗ್ಗೆ ನನಗೆ ಅನುಕಂಪ ಇದೆ. ಕೃಷ್ಣಮೂರ್ತಿ ಸ್ವಂತ ದುಡಿಮೆಯಿಂದ ಬೆಳೆದಿದ್ದಾರೆ. ಅವರೂ ನಿಷ್ಠಾವಂತ ಜೆಡಿಎಸ್ ಕಾರ್ಯಕರ್ತರಾಗಿದ್ಧಾರೆ. ಹೀಗಾಗಿ ಅವರಿಗೆ ಟಿಕೆಟ್ ಕೊಡುತ್ತಿದ್ದೇವೆ ಎಂದಿದ್ದಾರೆ.

ಆರ್.ಆರ್. ನಗರ ಉಪಕದನದ ಸ್ಪರ್ಧಾಕಣದ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ತಮಗೆ ಎರಡೂ ರಾಷ್ಟ್ರೀಯ ಪಕ್ಷಗಳು ಸಮಾನ ವಿರೋಧಿಗಳು. ಎರಡೂ ಪಕ್ಷಗಳ ವಿರುದ್ಧ ನಮ್ಮ ಹೋರಾಟ ಇರುತ್ತದೆ. ಕಳೆದ ಎರಡು ಚುನಾವಣೆಗಳು ಬೇರೆ ಬೇರೆ ರೀತಿ ಆಗಿದೆ. ಈ ಬಾರಿ ಬೇರೆ ರೀತಿ ಚುನಾವಣೆ ಆಗುತ್ತೆ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಚಾರಣಿಗರ ನೆಚ್ಚಿನ ತಾಣ ಚಿಕ್ಕಬಳ್ಳಾಪುರದ ಗುಡಿಬಂಡೆ; ಈ ಐತಿಹ್ಯ ಸ್ಥಳದ ಉಳಿವಿಗೆ ಮಾಡಬೇಕಿದೆ ಪ್ರಯತ್ನ

ಮುನಿರತ್ನ ಜೊತೆಗಿರುವ ಸ್ನೇಹದ ಬಗ್ಗೆ ಮಾತನಾಡಿದ ಹೆಚ್.ಡಿ.ಕೆ., ತಾವಿಬ್ಬರೂ ಸಿನಿಮಾ ಕ್ಷೇತ್ರದಲ್ಲಿದ್ದವರಾದ್ದರಿಂದ ಇಬ್ಬರ ಮಧ್ಯೆ ಸ್ನೇಹ ಇದೆ. ಆದರೆ, ಸ್ನೇಹವೇ ಬೇರೆ ಚುನಾವಣೆಯೇ ಬೇರೆ. ಚುನಾವಣೆ ಸಂದರ್ಭದಲ್ಲಿ ಸ್ನೇಹ ಅನ್ವಯಿಸಲ್ಲ. ಹೀಗಾಗಿ, ಕಾರ್ಯಕರ್ತರು ಯಾವುದೇ ಗೊಂದಲಕ್ಕೆ ಒಳಗಾಗಬಾರದು. ಚುನಾವಣೆ ವೇಳೆ ಕೆಲವರು ಅಪಪ್ರಚಾರ ಮಾಡುತ್ತಾರೆ. ಕಾರ್ಯಕರ್ತರು ನಮ್ಮ ಪಕ್ಷದ ಅಭ್ಯರ್ಥಿ ಕೃಷ್ಣಮೂರ್ತಿ ಅವರಿಗೆ ಎಲ್ಲಾ ಬೆಂಬಲ ನೀಡಬೇಕು ಎಂದು ಅವರು ಕರೆ ನೀಡಿದ್ಧಾರೆ.

ಆರ್.ಆರ್. ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಾಗಿದ್ದ ಮುನಿರತ್ನ ಅವರು ಬಿಜೆಪಿ ಸೇರಿದ್ದ ಹಿನ್ನೆಲೆಯಲ್ಲಿ ಕ್ಷೇತ್ರ ಖಾಲಿ ಉಳಿದಿತ್ತು. ಹಿಂದಿನ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿದ್ದ ತಳಸಿ ಮುನಿರಾಜು ಗೌಡ ಅವರು ಈ ಚುನಾವಣೆಯಲ್ಲಿ ಮುನಿರತ್ನರಿಂದ ಅಕ್ರಮವಾಗಿದೆ ಎಂದು ಆರೋಪಿಸಿ ದೂರು ಹಾಕಿದ್ದರು. ಹೀಗಾಗಿ, ಕಳೆದ ಬಾರಿಯ ಉಪಚುನಾವಣೆ ವೇಳೆ ಆರ್.ಆರ್. ನಗರದ ಉಪಚುನಾವಣೆಯನ್ನು ನಡೆಸಲಾಗಲಿಲ್ಲ. ಇದೀಗ ಸುಪ್ರೀಂ ಕೋರ್ಟ್ ಈ ದೂರನ್ನು ವಜಾಗೊಳಿಸಿದೆ. ಮುನಿರತ್ನ ಅವರಿಗೆ ನಿಟ್ಟುಸಿರು ಬಿಡುವಂತೆ ಮಾಡಿದೆ. ಮುನಿರತ್ನಗೆ ಬಿಜೆಪಿ ಟಿಕೆಟ್ ಸಿಗುವುದು ನಿಶ್ಚಿತವಾಗಿದೆ.

ಇದನ್ನೂ ಓದಿ: 7ನೇ ಬಾರಿಯೂ ನಡೆಯದ ಮಂಡ್ಯ ಜಿ.ಪಂ.ನ ಸಾಮಾನ್ಯ ಸಭೆ; ಅಧ್ಯಕ್ಷೆ-ಸದಸ್ಯರ ರಾಜಕೀಯ ಜಿದ್ದಿಗೆ ಸಾಮಾನ್ಯ ಸಭೆ ಬಲಿಆರ್.ಆರ್. ನಗರ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಗಡುವು ಮುಗಿಯಲು ಮೂರು ದಿನ ಮಾತ್ರ ಬಾಕಿ ಇದೆ. ಕಾಂಗ್ರೆಸ್​ನಿಂದ ಡಿಕೆ ರವಿ ಹೆಂಡತಿ ಕುಸುಮಾ ಹನುಮಂತರಾಯಪ್ಪ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿದ್ಧಾರೆ. ಬಿಜೆಪಿಯಿಂದ ಮುನಿರತ್ನ ಮತ್ತು ಜೆಡಿಎಸ್​ನಿಂದ ಕೃಷ್ಣಮೂರ್ತಿ ಇಬ್ಬರೂ ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ. ನವೆಂಬರ್ 3ರಂದು ಮತದಾನ ನಡೆಯಲಿದ್ದು 10ನೇ ತಾರೀಖು ಫಲಿತಾಂಶ ಪ್ರಕಟವಾಗುತ್ತದೆ. ಬಿಹಾರ ವಿಧಾನಸಭಾ ಚುನಾವಣೆಯ ಜೊತೆ ದೇಶಾದ್ಯಂತ ನಡೆಯುತ್ತಿರುವ 50ಕ್ಕೂ ಹೆಚ್ಚು ಉಪಚುನಾವಣೆಯಲ್ಲಿ ಆರ್.ಆರ್. ನಗರ ಮತ್ತು ಶಿರಾ ಉಪಕದನವೂ ಒಳಗೊಂಡಿವೆ.

ವರದಿ: ಸಂಜಯ್ ಎಂ ಹುಣಸನಹಳ್ಳಿ
Published by: Vijayasarthy SN
First published: October 13, 2020, 4:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories