HOME » NEWS » State » HD KUMARASWAMY ANGRY ON CONGRESS LEADER SIDDARAMAIAH AND CHALLENGES HIM IN KOLAR SCT

ಅಧಿಕಾರ ನೀಡುವುದು ಜನರೇ ವಿನಃ ಸಿದ್ದರಾಮಯ್ಯ ಅಲ್ಲ; ಎಚ್​.ಡಿ. ಕುಮಾರಸ್ವಾಮಿ ತಿರುಗೇಟು

ನಾನು ಯಾರ ಮನೆ ಬಾಗಿಲಿಗೂ ಹೋಗಿ ಅಧಿಕಾರ ಕೊಡಿ ಎಂದು ಕೇಳಿಲ್ಲ. ಯಡಿಯೂರಪ್ಪ ಬಿಜೆಪಿ ಪಕ್ಷ ಬಿಡದಿದ್ದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿರಲಿಲ್ಲ. ಸಿದ್ದರಾಮಯ್ಯ ಹಿಂದಿನದ್ದೆಲ್ಲ ನೆನಪಿಸಿಕೊಳ್ಳಲಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

Sushma Chakre | news18-kannada
Updated:February 7, 2020, 12:49 PM IST
ಅಧಿಕಾರ ನೀಡುವುದು ಜನರೇ ವಿನಃ ಸಿದ್ದರಾಮಯ್ಯ ಅಲ್ಲ; ಎಚ್​.ಡಿ. ಕುಮಾರಸ್ವಾಮಿ ತಿರುಗೇಟು
ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಎಚ್​​.ಡಿ ಕುಮಾರಸ್ವಾಮಿ
  • Share this:
ಕೋಲಾರ (ಫೆ. 7): ನನಗೆ ಮತ್ತೆ ಅಧಿಕಾರ ನೀಡಿ ಎಂದು ಕೇಳಿದ ಕೂಡಲೇ ಜನ ಕೊಡಬೇಕಲ್ಲ, ಅದೆಲ್ಲ ಸಾಧ್ಯವಾಗದ ಮಾತು ಎಂದು ಎಚ್​.ಡಿ. ಕುಮಾರಸ್ವಾಮಿ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದರು. ಅದಕ್ಕೆ ಪ್ರತಿದಾಳಿ ನಡೆಸಿರುವ ಎಚ್​ಡಿಕೆ, ಸಿಎಂ ಸ್ಥಾನ ನೀಡುವುದು ಜನರೇ ಹೊರತು ಸಿದ್ದರಾಮಯ್ಯ ಅಲ್ಲ ಎಂದು ಟೀಕಿಸಿದ್ದಾರೆ.

ಮತ್ತೊಮ್ಮೆ ನನಗೆ ಅಧಿಕಾರ ನೀಡಿ ಎಂದಿದ್ದ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಹೇಳಿಕೆಗೆ ಲೇವಡಿ ಮಾಡಿದ್ದ ಸಿದ್ದರಾಮಯ್ಯ, ಅವರು ಕೇಳಬಹುದು, ಆದರೆ ಜನರು ಕೊಡಬೇಕಲ್ಲ. 14 ತಿಂಗಳು ಸರ್ಕಾರ‌ ಇದ್ದಾಗ ಏನು ಮಾಡಿದರು? ಮತ್ತೆ ಸಿಎಂ ಆಗೋದೆಲ್ಲ ಆಗದ ವಿಷಯ ಬಿಡಿ ಎಂದಿದ್ದರು.

ಅದಕ್ಕೆ ಕೋಲಾರದಲ್ಲಿ ತಿರುಗೇಟು ನೀಡಿರುವ ಎಚ್​.ಡಿ. ಕುಮಾರಸ್ವಾಮಿ, ನನಗೆ ಅಧಿಕಾರ ನೀಡುವುದು ಜನರೇ ವಿನಃ ಸಿದ್ದರಾಮಯ್ಯ ಅಲ್ಲ. ನಾನು ಯಾರ ಮನೆ ಬಾಗಿಲಿಗೂ ಹೋಗಿಲ್ಲ. ಯಾರ ಬಳಿಯೂ ಅಧಿಕಾರ ಕೊಡಿ ಎಂದು ಕೇಳಿಲ್ಲ. ನಾನು ಸಿದ್ದರಾಮಯ್ಯನವರಿಂದ ಸರ್ಟಿಫಿಕೇಟ್ ತೆಗೆದುಕೊಳ್ಳಬೇಕಾಗಿಲ್ಲ. ನಾನು ಸಿಎಂ ಆಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಯಡಿಯೂರಪ್ಪ ಬಿಜೆಪಿ ಪಕ್ಷ ಬಿಡದಿದ್ದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿರಲಿಲ್ಲ. ಸಿದ್ದರಾಮಯ್ಯ ಹಿಂದಿನದ್ದೆಲ್ಲ ನೆನಪಿಸಿಕೊಳ್ಳಲಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಮಂತ್ರಿಗಳನ್ನು ಅನರ್ಹರೆನ್ನುವ ಸಿದ್ದರಾಮಯ್ಯ ಗೆದ್ದಿದ್ದು ಹೇಗೆಂದು ಗೊತ್ತಿದೆ; ಎಚ್. ವಿಶ್ವನಾಥ್ ವಾಗ್ದಾಳಿ

5 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಒಳ್ಳೆ ಕೆಲಸ ಮಾಡಿದ್ದರೆ 78 ಸ್ಥಾನಕ್ಕೆ ಹೇಗೆ ಕುಸಿಯುತ್ತಿತ್ತು? ಯಡಿಯೂರಪ್ಪ ಪಕ್ಷ ಬಿಟ್ಟು ಕೆಜೆಪಿ ಕಟ್ಟಿದ್ದರಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. ರಾಜ್ಯಾದ್ಯಂತ ಆಶ್ರಯ ಮನೆ ಯೋಜನೆ ಕಾಮಗಾರಿ ನಿಲ್ಲಲು ಯಾರು ಕಾರಣ? ಅಭಿವೃದ್ಧಿ ವಿಚಾರವಾಗಿ ನಾನು ಬಹಿರಂಗ ಚರ್ಚೆಗೆ ಸಿದ್ದನಿದ್ದೇನೆ. ಆಶ್ರಯ ಯೋಜನೆಯಡಿ ಲಕ್ಷಾಂತರ ಜನರಿಗೆ ನೀಡುವ ಮನೆಗಳು ಇಂದಿಗೂ ಅಡಿಪಾಯದಲ್ಲೆ ನಿಂತಿದೆ. ಈ ಬಗ್ಗೆ ಸಿದ್ದರಾಮಯ್ಯ ಉತ್ತರ ನೀಡಬೇಕಿದೆ ಎಂದು ಎಚ್​ಡಿಕೆ ಸವಾಲು ಹಾಕಿದ್ದಾರೆ.

(ವರದಿ: ರಘುರಾಜ್)
First published: February 7, 2020, 12:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories