HD Kumaraswamy: ಮಹಿಳಾ ಸದಸ್ಯರ ವಿರುದ್ಧ HDK ಗರಂ; ಕಾಂಗ್ರೆಸ್ ಪಾದಯಾತ್ರೆಗೆ 25 ಕೋಟಿ ಖರ್ಚು

ವಿಭಜನೆಯಾಗದೇ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಎಲ್ಲಾ ಇಂದು ನಮ್ಮ ದೇಶದಲ್ಲೇ ಇದ್ದಿದ್ದರೆ ಬಿಜೆಪಿ ದೇಶವನ್ನು ಯಾವ ಹಂತಕ್ಕೆ ತೆಗೆದುಕೊಂಡು ಹೋಗುತ್ತಿದ್ರೋ? ಜನ ಬದುಕಲು ಸಾಧ್ಯವಾಗುತ್ತಿರಲಿಲ್ಲ

ಹೆಚ್ ಡಿ ಕುಮಾರಸ್ವಾಮಿ

ಹೆಚ್ ಡಿ ಕುಮಾರಸ್ವಾಮಿ

  • Share this:
ಬಿಜೆಪಿ ನಗರಸಭಾ ಸದಸ್ಯರ (BJP Members) ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ (Former CM HD Kumaraswamy) ಗರಂ ಆಗಿ ನೀವಿಲ್ಲಿ ಡ್ರಾಮಾ ಮಾಡಲು ಬರಬೇಡಿ ಎಂದು ಕಿಡಿಕಾರಿದ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ (Channaptan, Ramanagara) ನಗರಸಭೆ ಆವರಣದಲ್ಲಿ ನಡೆಯಿತು. ಕುಮಾರಸ್ವಾಮಿಗೆ ಧಿಕ್ಕಾರ ಕೂಗಿದ ಬಿಜೆಪಿ ನಗರಸಭಾ ಸದಸ್ಯರು ಸ್ವಚ್ಚತಾ ವಾಹನಗಳ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಅಗಮಿಸಿದ್ದ ಕುಮಾರಸ್ವಾಮಿ ಅವರಿಗೆ ಚಾಟಿ ಬೀಸಿದರು. ಈ ವೇಳೆ ಬಿಜೆಪಿ ನಗರಸಭಾ ಸದಸ್ಯರು ಕಪ್ಪು ಪಟ್ಟಿ ತೋರಿಸಿ ಆಕ್ರೋಶ ಹೊರಹಾಕಿದರು. ಸ್ವಚ್ಚತಾ ವಾಹನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಬಿಜೆಪಿ ಸದಸ್ಯರನ್ನ ಕಡೆಗಣನೆ ಮಾಡಿದ್ದಾರೆಂದು ನಗರ ಪಾಲಿಕೆ ಅಧ್ಯಕ್ಷರು ಹಾಗೂ ಬಿಜೆಪಿ ಸದಸ್ಯರು ಕಿಡಿಕಾರಿದರು.

ಈ ವೇಳೆ ಬಿಜೆಪಿ ಸದಸ್ಯರ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ನೀವಿಲ್ಲಿ ಡ್ರಾಮಾ ಮಾಡಲು ಬರಬೇಡಿ ಎಂದು ಮಹಿಳಾ ಸದಸ್ಯೆ ವಿರುದ್ಧ ಗರಂ ಆದರು.‌ ಈ ವೇಳೆ ಜೆಡಿಎಸ್ ಸದಸ್ಯರು ಹಾಗೂ ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆಯಿತು.

ದಿಕ್ಕಾರ ವರ್ಸಸ್ ಜೈಕಾರ

ನಗರಸಭಾ ಸದಸ್ಯರನ್ನು ಸಮಾಧಾನಪಡಿಸಲು ಪೊಲೀಸರು ಹರಸಾಹಸಪಟ್ಟರು. ಕುಮಾರಸ್ವಾಮಿ ಸ್ಥಳದಿಂದ ಹೋಗುವವರೆಗೆ ಧಿಕ್ಕಾರ ಕೂಗಿದ ಬಿಜೆಪಿ ಸದಸ್ಯರು ಮತ್ತೊಂದು ಕಡೆ ಜೆಡಿಎಸ್ ಕಾರ್ಯಕರ್ತರ ಜೈಕಾರ ಕೂಗಿಕೊಂಡರು.

ಇದನ್ನೂ ಓದಿ:  Karnataka Politics: ಅತಿಯಾದ ಬುದ್ಧಿವಂತಿಕೆ ಒಳ್ಳೆಯದಲ್ಲ; ಮಾಧುಸ್ವಾಮಿ ವಿರುದ್ಧ ರೇಣುಕಾಚಾರ್ಯ ಕಿಡಿ

ಬೆಂಗಳೂರಿನ ದಾಸರಹಳ್ಳಿಗೆ 800 ಕೋಟಿ ಕೊಟ್ಟೆ, ಬಿಜೆಪಿಯವರು ಲೂಟಿ ಮಾಡಿದ್ದಾರೆ. ಬಿಜೆಪಿ ಸದಸ್ಯರ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಈ ಕ್ಷೇತ್ರದ ಮಾಜಿ ಶಾಸಕರ ಚಿತಾವಣೆಯಿಂದ ಈ ಗದ್ದಲ ಆಗ್ತಿದೆಯೋ, ಇಲ್ಲ ಇವರೇ ಬಂದಿದ್ದಾರೋ ಗೊತ್ತಿಲ್ಲ ಎಂದು ಸಿ.ಪಿ.ಯೋಗೇಶ್ವರ್ ಹೆಸರು ಬಳಸದೇ ಟಾಂಗ್ ನೀಡಿದರು.

ಈ ವೇಳೆ ನಮಗೆ ರಾಜ್ಯ ರಾಜಕಾರಣ ಬೇಡ, ಚನ್ನಪಟ್ಟಣದ್ದು ಮಾತಾಡಿ ಎಂದ ಸದಸ್ಯರು ಕುಮಾರಸ್ವಾಮಿ ಅವರಿಗೆ ತಿಳಿಸಿದರು. ಈ ವೇಳೆ ಸದಸ್ಯರ ವಿರುದ್ಧ ಕುಮಾರಸ್ವಾಮಿ ಗರಂ ಆದರು.

HD Kumaraswamy angry on BJP Woman members atvr mrq
HDK ಗರಂ


HDK ವಿರುದ್ಧ ಬಿಜೆಪಿ ಸದಸ್ಯೆ ಅಸಮಾಧಾನ

ಈ ಬಗ್ಗೆ ಬಿಜೆಪಿಯ ಸದಸ್ಯೆ ಜಯಮಾಲಿನಿ ಮಾತನಾಡಿ, ಕುಮಾರಸ್ವಾಮಿ ಅವರು ಮಹಿಳೆಯರ ಜೊತೆ ಹೀಗೆ ಮಾತನಾಡಬಾರದಿತ್ತು. ನಾವು ಕಣ್ಣೀರು ಸುರಿಸಿ ಡ್ರಾಮಾ ಮಾಡಲು ಬಂದಿಲ್ಲ ಎಂದರು.

ಸಚಿವ ಮಾಧುಸ್ವಾಮಿ ಆಡಿಯೋ ವೈರಲ್ ವಿಚಾರವಾಗಿ ಪ್ರತಿಕ್ರಿಯಿಸಿ, ಅವರು ನಿಜವನ್ನೇ ಹೇಳಿದ್ದಾರೆ. ಸರ್ಕಾರ ಹೇಗೆ ನಡೆಯುತ್ತಿದೆ ಎಂಬುದಕ್ಕೆ ಸಚಿವರ ಹೇಳಿಕೆಯೇ ಸಾಕ್ಷಿ. ಇದು ಸಾರ್ವಜನಿಕವಾಗಿ ಎಲ್ಲರಲ್ಲೂ ಇರುವ ಭಾವನೆ. ಮಂತ್ರಿಮಂಡಲದಲ್ಲಿ ಅವರವರಲ್ಲೇ ವಿಶ್ವಾಸವಿಲ್ಲ.

ಶಿವಮೊಗ್ಗ ಗಲಭೆಗೆ ಬಿಜೆಪಿ, ಕಾಂಗ್ರೆಸ್ ಕಾರಣ

ಇನ್ನು ಶಿವಮೊಗ್ಗ ಗಲಭೆ ವಿಚಾರವಾಗಿ ಮಾತನಾಡಿ, ಪ್ರಾಮಾಣಿಕವಾಗಿ ದುಡಿಮೆ ಮಾಡಿರುವವರ ಬಿಟ್ಟು ಬೇರೆಯವರನ್ನ ಮೆರೆಸುವ ಕೆಲಸ ಮಾಡ್ತಿದ್ದಾರೆ. ಶಿವಮೊಗ್ಗ ಗಲಭೆಗೆ ಇಂದಿನ ಎರಡೂ ರಾಷ್ಟ್ರೀಯ ಪಕ್ಷವೇ ಕಾರಣ. ಇವರಿಬ್ಬರಿಂದ ಅಮಾಯಕರು ಬಲಿಯಾಗ್ತಿದ್ದಾರೆ. ಇದೇನಾ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸುವ ರೀತಿ? ಒಂದುಕಡೆ ಬಾವುಟ ಇಟ್ಕೊಂಡು ದೇಶಕ್ಕೆ ಕೊಡುಗೆ ಕೊಟ್ಟಿದ್ದೇವೆ ಅಂತ ತಿರುಗಾಡುತ್ತಿದ್ದೀರಿ. ಇನ್ನೊಂದ್ಕಂಡೆ ಈ ರೀತಿ ಗಲಭೆ ಆರಂಭಿಸಿದ್ದೀರಿ. ಇದಕ್ಕೆ ಪರಿಹಾರ ಕಂಡುಕೊಳ್ಳುವ ಕೆಲಸವನ್ನ ಯಾರೂ ಮಾಡ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದರು.

HD Kumaraswamy angry on BJP Woman members atvr mrq
ಕಾಂಗ್ರೆಸ್ ಪಾದಯಾತ್ರೆ


ಪಾದಯಾತ್ರೆಗೆ 25 ಕೋಟಿ ಖರ್ಚು

ಸರ್ವ ಜನಾಂಗದ ಶಾಂತಿಯ ತೋಟ ಎಂಬ ಮಾತನ್ನು ಹಾಳು ಮಾಡ್ತಿದ್ದೀರಿ. ಕಾಂಗ್ರೆಸ್ 25 ಕೋಟಿ ಖರ್ಚು ಮಾಡಿ ಪಾದಯಾತ್ರೆ ಮಾಡಿದ್ದಾರೆ. ಅದರ ಬದಲು ಗಾಂಧಿ, ನೆಹರು ಹೆಸರಿನಲ್ಲಿ ಎರಡು ಗ್ರಾಮ ದತ್ತು ಪಡೆಯಬಹುದಿತ್ತು. ಗ್ರಾಮವನ್ನ ಉದ್ಧಾರ ಮಾಡಬಹುದಿತ್ತು, ಅದನ್ನ ಬಿಟ್ಟು ಪಾದಯಾತ್ರೆ ಮಾಡಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ:  Karnataka Politics: ಸಿದ್ದರಾಮೋತ್ಸವ, ಕಾಲ್ನಡಿಗೆ ಬಳಿಕ ಬಿಜೆಪಿಯಲ್ಲಿ ಟೆನ್ಷನ್, ಟೆನ್ಷನ್; RSS ಮುಖಂಡರ ಜೊತೆ ಸಿಎಂ ಚರ್ಚೆ

ದೇಶ ಅಂದೇ ವಿಭಜನೆ ಆಗಿದ್ದರಿಂದ ನಾವು ಬಚಾವ್

ವಿಭಜನೆಯಾಗಲು ನೆಹರು ಕಾರಣ ಅಂತಾರೆ, ಅಂದೇ ದೇಶ ವಿಭಜನೆಯಾಗಿ ಏನೇನು ಅನಾಹುತ ಆಗಬೇಕೋ ಆಯ್ತು. ವಿಭಜನೆಯಾಗದೇ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಎಲ್ಲಾ ಇಂದು ನಮ್ಮ ದೇಶದಲ್ಲೇ ಇದ್ದಿದ್ದರೆ ಬಿಜೆಪಿ ದೇಶವನ್ನು ಯಾವ ಹಂತಕ್ಕೆ ತೆಗೆದುಕೊಂಡು ಹೋಗುತ್ತಿದ್ರೋ? ಜನ ಬದುಕಲು ಸಾಧ್ಯವಾಗುತ್ತಿರಲಿಲ್ಲ ಅಂತಹ ಪರಿಸ್ಥಿತಿಗೆ ದೇಶವನ್ನು ದೂಡುತ್ತಿದ್ದರು. ವಿಭಜನೆಯಾಗಿದ್ದರಿಂದ ನಾವು ಬಚಾವ್ ಆಗಿದ್ದೀವಿ‌ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
Published by:Mahmadrafik K
First published: