RSS ಪ್ರಮುಖರಿಗೆ ಪರ್ಸೆಂಟೇಜ್ ತಲುಪಿಸಬೇಕು, ಅವರಿಂದಲೇ ಹಣ ಸಂಗ್ರಹ: HDK ಗಂಭೀರ ಆರೋಪ

ಶಿವಸೇನೆಯಲ್ಲಿ 50 ಜನ ಬಿಟ್ಟು ಹೋಗ್ತಿದ್ದಾರೆ. ಏನು ಆ ಪಕ್ಷ ಮುಳುಗಿ ಹೋಗ್ತಿದೆಯಾ? ವೈ.ಎಸ್.ವಿ. ದತ್ತ ಅವರಿಗೆ ಪಕ್ಷ ಎಲ್ಲಾ ಕೊಟ್ಟಿದೆ. ಎಲ್ಲಾ ಪಡೆದುಕೊಂಡು ಹೋಗ್ತಿನಿ ಅಂದ್ರೆ ಅವರೇ ಯೋಚನೆ ಮಾಡಬೇಕು. ನಮ್ಮ ಪಕ್ಷದಲ್ಲಿ ಅವರಿಗೆ ಏನೋ ಅಸಮಾಧಾನವಾಗಿದೆ.

ಹೆಚ್ ಡಿ ಕುಮಾರಸ್ವಾಮಿ

ಹೆಚ್ ಡಿ ಕುಮಾರಸ್ವಾಮಿ

  • Share this:
ಮಹಾರಾಷ್ಟ್ರದ ಅಘಾಡಿ ಸರ್ಕಾರದಲ್ಲಿ (Maharashtra Government) ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (Former CM HD Kumaraswamy) ಶಿವಮೊಗ್ಗದಲ್ಲಿ (Shivamogga) ಪ್ರತಿಕ್ರಿಯಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರದ ಆಪರೇಷನ್ ವಿಚಾರದ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Union Minister Amit Shah) ಇದ್ದಾರೆ. ಅದರಲ್ಲಿ ಯಾವುದಾದರೂ ಸಂಶಯ ಇದೆಯಾ ಎಂದು ಪ್ರಶ್ನೆ ಮಾಡಿದರು. ಕರ್ನಾಟಕದಲ್ಲಿ ಅವತ್ತಿನ ಪರಿಸ್ಥಿತಿ ದುರುಪಯೋಗಪಡಿಸಿಕೊಂಡರು. ಕಾಂಗ್ರೆಸ್ ನಾಯಕರ (Congress Leaders) ಸಹಕಾರದಲ್ಲಿ ಅಮಿತ್ ಶಾ ನೇತೃತ್ವದಲ್ಲಿ ಆಪರೇಷನ್ ಕಮಲ (Operation Lotus) ನಡೆಯಿತು. ಅಂದು ಕರ್ನಾಟಕದವರು ಮುಂಬೈಗೆ ಹೋದರು, ಇಂದು ಮುಂಬೈನವರು ಮುಂಬೈನಿಂದ ಗುಹವಾಟಿಗೆ ಹೋಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲೂ ಕೂಡ ಸರ್ಕಾರ ತೆಗೆಯಬೇಕು ಅಂತಾ ಒಂದೂವರೆ ವರ್ಷದಿಂದ ಪ್ರಯತ್ನ ನಡೆಸಿದ್ದರು, ಅದರಲ್ಲಿ ಯಶಸ್ವಿಯಾದರು ಶಿವಸೇನೆಯವರು ಗಲಭೆಗೆ ಪ್ರಾರಂಭ ಮಾಡಿದ್ದಾರೆ. ದೇಶದಲ್ಲಿ ಉಪದೇಶ ಮಾಡುವ ಬಿಜೆಪಿ ನಾಯಕರಾಗಲಿ, ಅಂಗಪಕ್ಷದ ನಾಯಕರಾಗಲಿ ಚುನಾಯಿತ ಸರ್ಕಾರ ಅಸ್ಥಿರಗೊಳಿಸಿ ಅವರೇ ಸರ್ಕಾರ ಹಿಡಿಯಬೇಕು ಎಂಬ ತೀರ್ಮಾನ ಇದೆ ಎಂದು ಆಕ್ರೋಶ ಹೊರ ಹಾಕಿದರು.

ವಿರೋಧ ಪಕ್ಷಗಳೇ ಇರಬಾರದು ಎಂಬುದು ಬಿಜೆಪಿ ಸಿದ್ಧಾಂತ

ಇದು ಸದ್ಯ ರಾಜ್ಯದಲ್ಲಿ ಆರಂಭವಾಗಿದೆ. ಮುಂದೆ ಇಡಿ ದೇಶ ವ್ಯಾಪ್ತಿ ಆವರಿಸುತ್ತಿದೆ. ರಾಜಸ್ಥಾನ, ಜಾರ್ಖಂಡ್ ನಲ್ಲಿ ಸಹ ಇದು ನಡೆಯಲಿದೆ. ವಿರೋಧ ಪಕ್ಷಗಳೇ ಇರಬಾರದು ಎಂಬುದು ಅವರ ಸಿದ್ದಾಂತ. ಬಿಜೆಪಿ ಹೊರತುಪಡಿಸಿ ಯಾವುದೇ ಸರ್ಕಾರ ಈ ದೇಶದಲ್ಲಿ ಇರಬಾರದು.

ಕಾಂಗ್ರೆಸ್ ಮುಕ್ತವಾಯಿತು. ಈಗ ಪ್ರಾದೇಶಿಕ ಪಕ್ಷಗಳನ್ನು ಮುಕ್ತಗೊಳಿಸಲು ಹೊರಟ್ಟಿದ್ದಾರೆ. ದೇಶದ ಜನ ಅಂತಿಮವಾಗಿ ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ ಎಂದು ತಮ್ಮ ಅಸಮಾಧಾನ ಹೊರ ಹಾಕಿದರು.

ಇದನ್ನೂ ಓದಿ:  H D Kumaraswamy: ಅದು ಹೇಗಾದ್ರೂ ಸರಿ ಮುಂದಿನ ಬಾರಿ ನಾನೇ ಸಿಎಂ; ಭಾಷಣದುದ್ದಕ್ಕೂ ಮುಖ್ಯಮಂತ್ರಿ ಕುರ್ಚಿ ಜಪ

ಮಹಾರಾಷ್ಟ್ರದಲ್ಲಿಯ ಬೆಳವಣಿಗೆ ಹಿಂದೆ ಶಾ

ಮಹಾರಾಷ್ಟ್ರ ಸರ್ಕಾರ ಪತನದಲ್ಲಿ ನಮ್ಮ ರಾಜ್ಯದ ಬಿಜೆಪಿ ಮುಖಂಡರ ಪಾತ್ರ ಇಲ್ಲ. ಇದರಲ್ಲಿ ನೇರವಾಗಿ ಅಮಿತ್ ಶಾ ಇದ್ದಾರಲ್ವಾ? ಚುನಾಯಿತ ಸರ್ಕಾರಗಳು ಸ್ಪಷ್ಟ ಬಹುಮತ ಇದ್ದರೂ ಉಳಿಯುತ್ತದಾ ಇಲ್ಲವಾ ಎಂಬ ಅನುಮಾನ ಇದೆ. ಬಿಜೆಪಿಯಲ್ಲಿ ಇದ್ದರೆ ಉಳಿಗಾಲ ಇದೆ ಇಲ್ಲದಿದ್ದರೆ ಇಲ್ಲ ಎಂಬ ಬಿಲ್ ಪಾಸ್ ಮಾಡಿಬಿಡಿ ಎಂದು ವ್ಯಂಗ್ಯವಾಗಿ ಮಾತಿನೇಟು ನೀಡಿದರು.

ನನಗೆ ಮುಖ್ಯಮಂತ್ರಿ ಸ್ಥಾನ ದೊರಕುತ್ತದೆ

ನನಗೆ ನಂಬಿಕೆ ಇದೆ. ನಮ್ಮ ಮನೆ ದೇವರ ಆಶೀರ್ವಾದ ಇದೆ. ನನಗೆ ಮುಖ್ಯಮಂತ್ರಿ ಸ್ಥಾನ ದೊರಕುತ್ತದೆ ಎಂಬ ವಿಶ್ವಾಸ ಇದೆ. ಬಡವರಿಗೋಸ್ಕರ ನಾನು ಮತ್ತೊಂದು ಬಾರಿ ಅಧಿಕಾರ ಹಿಡಿಯುವ ವಿಶ್ವಾಸ ಇದೆ. ಮುಂಬರುವ ಚುನಾವಣೆಯಲ್ಲಿ ಆಪರೇಷನ್ ಕಮಲವಾಗಲು ಬಿಡುವುದಿಲ್ಲ. ಜೆಡಿಎಸ್ ನಿಂದ ಗೆಲ್ಲುವವರಿಗೆ ಆಪರೇಷನ್ ಕಮಲವಾಗಲು ಬಿಡುವುದಿಲ್ಲ. ನಾವೇ ಪೂರ್ಣ ಬಹುಮತ ಸಾಧಿಸಲು ಯೋಜನೆ ತಂತ್ರ ರೂಪಿಸುತ್ತಿದ್ದೇವೆ ಎಂದರು.

ಶಿವಸೇನೆಯಲ್ಲಿ 50 ಜನ ಬಿಟ್ಟು ಹೋಗ್ತಿದ್ದಾರೆ. ಏನು ಆ ಪಕ್ಷ ಮುಳುಗಿ ಹೋಗ್ತಿದೆಯಾ? ವೈ.ಎಸ್.ವಿ. ದತ್ತ ಅವರಿಗೆ ಪಕ್ಷ ಎಲ್ಲಾ ಕೊಟ್ಟಿದೆ. ಎಲ್ಲಾ ಪಡೆದುಕೊಂಡು ಹೋಗ್ತಿನಿ ಅಂದ್ರೆ ಅವರೇ ಯೋಚನೆ ಮಾಡಬೇಕು. ನಮ್ಮ ಪಕ್ಷದಲ್ಲಿ ಅವರಿಗೆ ಏನೋ ಅಸಮಾಧಾನವಾಗಿದೆ.

ಮತ್ತೆ ಗ್ರಾಮ ವಾಸ್ತವ್ಯ

ಆಗಸ್ಟ್ ತಿಂಗಳಿನಿಂದ ಪ್ರತಿದಿನ ಒಂದೊಂದು ಕ್ಷೇತ್ರದಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತೇನೆ. ಪಂಚರತ್ನ ರಥಯಾತ್ರೆ ಮೂಲಕ ರಾಜ್ಯದ ಜನರ ಗಮನ ಸೆಳೆಯುತ್ತೆವೆ. ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಆಗಲು ನನಗೆ ವೈಯಕ್ತಿಕ ಆಸೆ ಇಲ್ಲ. ಜನ ನನ್ನನ್ನು ಆಯ್ಕೆ ಮಾಡಿಕೊಂಡು ಬದುಕು ಕಟ್ಟಿಕೊಳ್ಳಬೇಕು ಅಂದ್ರೆ ತೀರ್ಮಾನ ಮಾಡ್ತಾರೆ. ಮೋದಿ ಅವರು ಚಲಿಸಿದ ರಸ್ತೆಯ ಟಾರೇ ಕಿತ್ತು ಹೋಗಿದೆ.ಇನ್ನು ಬೇರೆ ಜನರ ಪರಿಸ್ಥಿತಿ ಏನು ಎಂದು ಪ್ರಶ್ನೆ ಮಾಡಿದರು.

RSS ಪ್ರಮುಖರಿಗೆ ಪರ್ಸೆಂಟೇಜ್

ನರೇಂದ್ರ ಮೋದಿ‌ ಭೇಟಿಗೆ 50 ಕೋಟಿ ರೂ. ಖರ್ಚಾಗಿದೆ. ಅದನ್ನು ಯಾವುದಾದರೂ ಗ್ರಾಮೀಣ ಅಭಿವೃದ್ಧಿಗೆ ಬಳಸಿಕೊಳ್ಳಬಹುದಿತ್ತು. ಆರ್.ಎಸ್.ಎಸ್. ಪ್ರಮುಖರಿಗೆ ಪರ್ಸಂಟೆಜ್ ತಲುಪಿಸಬೇಕು. ಆರ್.ಎಸ್.ಎಸ್. ನಿಂದಲೇ ಹಣ ಸಂಗ್ರಹವಾಗುತ್ತಿದೆ. ರಾಜ್ಯದ ಜನರ ದುಡ್ಡನ್ನು ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇದೇ ವೇಳೆ ಪಠ್ಯ ಪರಿಷ್ಕರಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಹಿಂದಿನ ಸರ್ಕಾರದಲ್ಲೇ ಬದಲಾವಣೆ ಮಾಡಿದ್ದಾರೆ ಅಂತಾ ಹೇಳ್ತಿದ್ದಾರೆ. ಎರಡು ಸರ್ಕಾರದಲ್ಲಿ ಏನೇನು ಬದಲಾವಣೆ ಮಾಡಿದ್ದಾರೆ ಎಂಬುದನ್ನು ಜನತೆ ಮುಂದಿಡಲಿ ಎಂದು ಆಗ್ರಹಿಸಿದರು.

ಇದನ್ನೂ ಓದಿ:  Supplementary Exam: ನಾಳೆಯಿಂದ SSLC ಪೂರಕ ಪರೀಕ್ಷೆ ಪ್ರಾರಂಭ; ಕೋವಿಡ್ ನಿಯಮ ಪಾಲನೆ ಕಡ್ಡಾಯ

NDA ಅಭ್ಯರ್ಥಿ ಗೆಲ್ತಾರೆ

ರಾಷ್ಟ್ರಪತಿ ಚುನಾವಣೆಯಲ್ಲಿ NDA ಅಭ್ಯರ್ಥಿ ಗೆಲ್ಲಲು ಯಾವುದೇ ಸಮಸ್ಯೆ ಇಲ್ಲ. ರಾಷ್ಟ್ರಪತಿ ಅಭ್ಯರ್ಥಿಯೇ ಫೋನ್ ಮಾಡಿ ಬೆಂಬಲಿಸುವಂತೆ ಮನವಿ‌ ಮಾಡಿದ್ದಾರೆ. ನಮ್ಮ‌ ಶಾಸಕರೆಲ್ಲಾ ಕುಳಿತು ಚರ್ಚೆ ಮಾಡಿ ತೀರ್ಮಾನ ‌ಕೈಗೊಳ್ಳುತ್ತೇವೆ ಆಂತ ಹೇಳಿ ದೇವೇಗೌಡರಿಗೂ ಅಭ್ಯರ್ಥಿಯಾಗಲು ಕೇಳಿದ್ದರು ಎಂಬ ವಿಷಯವನ್ನು ಹೊರ ಹಾಕಿದರು.
Published by:Mahmadrafik K
First published: