• Home
 • »
 • News
 • »
 • state
 • »
 • ‘ಕೊರೋನಾ ನಿಯಂತ್ರಣಕ್ಕೆ ಹೆಚ್ಚು ಹಣ ಬಳಸಿ; ವೈದ್ಯರಿಗೂ ರಕ್ಷಣೆ ನೀಡಿ‘ - ಎಚ್​​.ಡಿ ಕುಮಾರಸ್ವಾಮಿ

‘ಕೊರೋನಾ ನಿಯಂತ್ರಣಕ್ಕೆ ಹೆಚ್ಚು ಹಣ ಬಳಸಿ; ವೈದ್ಯರಿಗೂ ರಕ್ಷಣೆ ನೀಡಿ‘ - ಎಚ್​​.ಡಿ ಕುಮಾರಸ್ವಾಮಿ

ಹೆಚ್​.ಡಿ. ಕುಮಾರಸ್ವಾಮಿ.

ಹೆಚ್​.ಡಿ. ಕುಮಾರಸ್ವಾಮಿ.

ಗ್ರಾಮಗಳ ಮಟ್ಟದಲ್ಲಿ ಸಂಘಟನೆಗಳ ಸಹಾಯ ಪಡೆದು ಪಿಡಿಒಗಳು ಮೂಲಕ ಜನರ ಆರೋಗ್ಯದ ಪರಿಸ್ಥಿತಿಯ ವರದಿ ತರಿಸಿಕೊಳ್ಳಿ. ರಸ್ತೆ ಕೆಲಸ, ಬ್ರಿಡ್ಜ್, ಕಟ್ಟಡಗಳ ಕೆಲಸ ಆರು ತಿಂಗಳು ಮುಂದಕ್ಕೆ ಹಾಕಿ, ಅರ್ಜೆಂಟ್ ಇಲ್ಲ. ಕೊರೋನಾ ನಿಯಂತ್ರಣಕ್ಕೆ ಹೆಚ್ಚಿನ ಹಣ ಬಳಸಿಕೊಳ್ಳಿ. ಆಸ್ಪತ್ರೆಗಳಲ್ಲಿ ಅತ್ಯಾಧುನಿಕ ವ್ಯವಸ್ಥೆ ಮಾಡಿ. ಓಲಾ ಊಬರ್ ಡ್ರೈವರ್​​ಗಳು, ಗಾರ್ಮೆಂಟ್ಸ್ ಮಹಿಳೆಯರು ಪರಿಸ್ಥಿತಿ ಹೇಗೆ? ಎಂದರು ಕುಮಾರಸ್ವಾಮಿ.

ಮುಂದೆ ಓದಿ ...
 • Share this:

  ಬೆಂಗಳೂರು(ಮಾ.29): ರಾಜ್ಯದಲ್ಲಿ ಕೊರೋನಾ ವೈರಸ್​​​ ವ್ಯಾಪಕವಾಗಿ ಹರಡುತ್ತಿದೆ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ಯಾವ ಕ್ರಮಗಳನ್ನು ಎಂಬುದರ ಕುರಿತಾಗಿ ಇಂದು ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ ನಡೆಯಿತು. ವಿಧಾನಸೌಧದಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಭಾಗಿಯಾಗಿದ್ದ ಜೆಡಿಎಸ್ ವರಿಷ್ಠ ಮತ್ತು ಮಾಜಿ ಸಿಎಂ​ ಎಚ್​​.ಡಿ ಕುಮಾರಸ್ವಾಮಿ ಕೊರೊನಾ ವೈರಸ್​​ ತಡೆಗೆ ಹಲವಾರು ಸಲಹೆಗಳನ್ನು ನೀಡಿದರು.

  ನಾನು ಕೇವಲ ರಾಜಕೀಯ ಟೀಕೆಗೋಸ್ಕರ ಇಲ್ಲಿ ಕೆಲವು ವಿಚಾರ ಪ್ರಸ್ತಾಪ ಮಾಡ್ತಿರೋದಲ್ಲ. ಕೊರೋನಾ ನಿಯಂತ್ರಣ ವಿರುದ್ದ ಹೋರಾಟ ನಮ್ಮೆಲ್ಲರ ಜವಾಬ್ದಾರಿ. ಪ್ರಧಾನಿಗಳು 21 ದಿನಗಳ ಲಾಕ್‌ಡೌನ್ ಘೋಷಿಸಿರೋದು ಒಂದು ರೆಮಿಡಿಯಷ್ಟೇ. ಖಾಲಿಯಿರುವ ಸರ್ಕಾರಿ ಕಟ್ಟಡಗಳಲ್ಲಿ ಕ್ವಾರಟೈಂನ್ ಇಡಿ ಎಂದು ಸಲಹೆ ಕೊಟ್ಟಿದ್ದೆ. ಆದರೆ, ಆರಂಭದಲ್ಲಿ ಉಡಾಫೆ ಮಾಡಿದ್ದೀರಿ ಎಂದು ರಾಜ್ಯ ಸರ್ಕಾರಕ್ಕೆ ಕುಮಾರಸ್ವಾಮಿ ತರಾಟೆ ತೆಗೆದುಕೊಂಡರು.

  ಇನ್ನು, ಅಗತ್ಯ ಕಿಟ್‌ಗಳಿಲ್ಲದೇ ಪರೀಕ್ಷೆ ಮಾಡೋದು ಹೇಗೆ? ಎಂದು ಪ್ರಶ್ನಿಸಿದ ಎಚ್​​.ಡಿ ಕುಮಾರಸ್ವಾಮಿ, ಚೈನಾದಿಂದ ಒಂದು ಲಕ್ಷ ಕಿಟ್ ತರಿಸ್ತೇವೆ ಎಂದು ಹೇಳಿದ್ದೀರಿ. ಆದರೆ, ಎಲ್ಲಾ ಏರ್‌ಪೋರ್ಟ್​ಗಳು ಬಂದ್ ಆಗಿವೆ. ಎಷ್ಟು ದಿನದಲ್ಲಿ ಬರುತ್ತೆ ಅನ್ನೋದು ಗೊತ್ತಿಲ್ಲ. 1 ಸಾವಿರ ವೆಂಟಿಲೇಟರ್ ಅಳವಡಿಸಲಾಗುತ್ತೆ ಎಂದು ಹೇಳಿ 15 ದಿನ ಆಯ್ತು. ವೆಂಟಿಲೇಟರ್​​ಗಳನ್ನ ತರಿಸಿಲ್ಲ, ಯಾಕ್ ಇಷ್ಟು ತಡ ಮಾಡ್ತಿದ್ದೀರಾ? ಎಂದು ಮುರುಪ್ರಶ್ನೆ ಮಾಡಿದರು.

  ಇದನ್ನೂ ಓದಿ: ‘ಹೊರ ರಾಜ್ಯಗಳಿಂದ ಕನ್ನಡಿಗರನ್ನು ಕರೆಸಿ; ಪೊಲೀಸರ ಜೀವಕ್ಕೂ ಭದ್ರತೆ ಕೊಡಿ‘ - ಸಿದ್ದರಾಮಯ್ಯ

  ಗ್ರಾಮಗಳ ಮಟ್ಟದಲ್ಲಿ ಸಂಘಟನೆಗಳ ಸಹಾಯ ಪಡೆದು ಪಿಡಿಒಗಳು ಮೂಲಕ ಜನರ ಆರೋಗ್ಯದ ಪರಿಸ್ಥಿತಿಯ ವರದಿ ತರಿಸಿಕೊಳ್ಳಿ. ರಸ್ತೆ ಕೆಲಸ, ಬ್ರಿಡ್ಜ್, ಕಟ್ಟಡಗಳ ಕೆಲಸ ಆರು ತಿಂಗಳು ಮುಂದಕ್ಕೆ ಹಾಕಿ, ಅರ್ಜೆಂಟ್ ಇಲ್ಲ. ಕೊರೋನಾ ನಿಯಂತ್ರಣಕ್ಕೆ ಹೆಚ್ಚಿನ ಹಣ ಬಳಸಿಕೊಳ್ಳಿ. ಆಸ್ಪತ್ರೆಗಳಲ್ಲಿ ಅತ್ಯಾಧುನಿಕ ವ್ಯವಸ್ಥೆ ಮಾಡಿ. ಓಲಾ ಊಬರ್ ಡ್ರೈವರ್​​ಗಳು, ಗಾರ್ಮೆಂಟ್ಸ್ ಮಹಿಳೆಯರು ಪರಿಸ್ಥಿತಿ ಹೇಗೆ? ಎಂದರು.

  ಇನ್ನು, 70ರಿಂದ 80 ಸಾವಿರ ಜನರಿಗೆ ಸರ್ಕಾರದಿಂದ ಊಟ ಕೊಡಲಾಗ್ತಿದೆ ಅನ್ನೋ ಮಾಹಿತಿ ಇದೆ. ಆದರೆ, ಬೆಂಗಳೂರಿನಲ್ಲಿ ನಾಲ್ಕೈದು ಜನರಿಗೆ ಊಟದ ಅವಶ್ಯಕತೆ ಇದೆ. ಅಗತ್ಯವಿರುವ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳದೇ ಕೆ ಆರ್ ಮಾರ್ಕೆಟ್ ಶಿಫ್ಟ್ ಮಾಡಿದ್ರಿ, ಸಾಕಷ್ಟು ಗೊಂದಲ ಆಯ್ತು. ಬೆಂಗಳೂರಿನಲ್ಲಿ 8 ವಲಯ ಇದೆ, ಹೊರವಲಯದಲ್ಲೇ ತರಕಾರಿ ಮಾರಾಟಕ್ಕೆ ಅವಕಾಶ ಮಾಡಿಕೊಡಬೇಕು. ಹಾಪ್‌ಕಾಮ್ಸ್‌ನಿಂದ, ಬೇರೆ ಇಲಾಖೆಯಿಂದಲೇ ತಾತ್ಕಾಲಿಕ ವ್ಯವಸ್ಥೆ ಮಾಡಿ ಎಂದು ಸಲಹೆ ನೀಡಿದರು.

  ವಾರ್ಡ್‌ಗಳ ಮಟ್ಟದಲ್ಲಿ ಕೆಎಂಎಫ್ ಡೈರಿಗಳಿವೆ, ಅವುಗಳ ಮೂಲಕ ಅಗತ್ಯ ವಸ್ತುಗಳ ಪೂರೈಕೆ ಮಾಡಿ. ಇದರಿಂದ ಜನರು ಮಾರ್ಕೆಟ್‌ಗೆ ಬರಲ್ಲ, ಜನಸಂದಣಿ ತಡೆಯೋಕೆ ಸಾಧ್ಯವಾಗುತ್ತೆ. ರಾಮನಗರ ಜಿಲ್ಲೆಗೆ 10 ಸಾವಿರ ಮಾಸ್ಕ್‌ಗಳನ್ನ ಕಳಿಸಿಕೊಡುತ್ತಿದ್ದೇನೆ. ನಾವು ರಾಜಕೀಯ ಟೀಕೆ ಮಾಡಲ್ಲ, ಸರ್ಕಾರಕ್ಕೆ ಎಲ್ಲಾ ರೀತಿಯ ಬೆಂಬಲ ನೀಡುತ್ತೇವೆ. ವೈದ್ಯರ ಪರಿಸ್ಥಿತಿಯನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಸರ್ಕಾರದಿಂದ ಅವರಿಗೆ ನೀಡಬೇಕಾದ ಎಲ್ಲಾ ಸವಲತ್ತುಗಳನ್ನು ನೀಡಿ. ಆರಂಭದಲ್ಲಿ ವಿದೇಶದಿಂದ ಹಲವರನ್ನು ಕರೆದುಕೊಂಡು ಬಂದ್ರಿ, ಬೇಕಾದ ಅಗತ್ಯ ಕ್ರಮ ತೆಗೆದುಕೊಳ್ಳುವಲ್ಲಿ ಎಡವಿದಿರಿ ಎಂದು ತಪರಾಕಿ ಬಾರಿಸಿದರು.

  First published: