HOME » NEWS » State » HD KUMARASWAMY ACCUSEDCONGRESS ALLOCATES MONEY IN RR NAGAR SESR SHM

ಆರ್​ಆರ್​ನಗರದಲ್ಲಿ ಬಿಜೆಪಿಗಿಂತ ಕಾಂಗ್ರೆಸ್​​ನಿಂದ ಹಣ ಹಂಚಿಕೆ ಜೋರು; ಕುಮಾರಸ್ವಾಮಿ ಆರೋಪ

ಮಾಗಡಿ, ಕನಕಪುರದಿಂದ ಬಂದ ಜನರು ಕ್ಷೇತ್ರದ ಮತದಾರರಿಗೆ ದುಡ್ಡು ನೀಡುತ್ತಿದ್ದಾರೆ. ಬಿಜೆಪಿಗಿಂತ ಕಾಂಗ್ರೆಸ್​ನಿಂದ ಹಣ ಹಂಚಿಕೆ ಜೋರಾಗಿ ನಡೆಯುತ್ತಿದೆ.  

news18-kannada
Updated:October 31, 2020, 10:40 PM IST
ಆರ್​ಆರ್​ನಗರದಲ್ಲಿ ಬಿಜೆಪಿಗಿಂತ ಕಾಂಗ್ರೆಸ್​​ನಿಂದ ಹಣ ಹಂಚಿಕೆ ಜೋರು; ಕುಮಾರಸ್ವಾಮಿ ಆರೋಪ
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ
  • Share this:
ಬೆಂಗಳೂರು (ಅ.31): ಆರ್​ಆರ್​ನಗರ ಉಪಚುನಾವಣೆಯಲ್ಲಿ ಕಾಂಗ್ರೆಸ್​ ಮುಖಂಡರು ಹಣದ ಹೊಳೆ ಹರಿಸಲು ಮುಂದಾಗಿದ್ದಾರೆ. ಬಿಜೆಪಿಗಿಂತ ಹೆಚ್ಚಾಗಿ ಅವರು ಕ್ಷೇತ್ರದಲ್ಲಿ ಹಣ ಹಂಚಿಕೆ ಮಾಡುತ್ತಿದ್ದಾರೆ ಎಂದು ಜೆಡಿಎಸ್​ ನಾಯಕ, ಮಾಜಿ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಪ್ರಚಾರದ ಬಳಿಕ ಮಾತನಾಡಿದ ಅವರು, 2000ರಲ್ಲಿ ಕನಕಪುರದಲ್ಲಿ ಅಂದು ಕಳ್ಳ ಮತದಾನವನ್ನು ಅಕ್ರಮ ಮಾಡಲಾಗಿತ್ತು. ಈಗ ಹಣ ಹಂಚುವ ಮೂಲಕ ಆರ್​.ಆರ್​ ನಗರದಲ್ಲಿ ಅಕ್ರಮ ಮಾಡಲು ಹೊರಟಿದ್ದಾರೆ ಎಂದು ಪರೋಕ್ಷವಾಗಿ ಡಿಕೆ ಶಿವಕುಮಾರ್​ ವಿರುದ್ಧ ಆರೋಪಿಸಿದ್ದಾರೆ. 

ಕ್ಷೇತ್ರದಲ್ಲಿ ಹಣ ಹಂಚಲು ಜನರನ್ನು ಕರೆತಂದಿದ್ದಾರೆ. ಮಾಗಡಿ, ಕನಕಪುರದಿಂದ ಬಂದ ಜನರು ಕ್ಷೇತ್ರದ ಮತದಾರರಿಗೆ ದುಡ್ಡು ನೀಡುತ್ತಿದ್ದಾರೆ. ಬಿಜೆಪಿಗಿಂತ ಕಾಂಗ್ರೆಸ್​ನಿಂದ ಹಣ ಹಂಚಿಕೆ ಜೋರಾಗಿ ನಡೆಯುತ್ತಿದೆ.  ಪಾಪದ ಹಣ ಹಂಚಲು ಕಾಂಗ್ರೆಸ್​ ಮುಂದಾಗಿದೆ. ಈ ಚುನಾವಣೆಯಲ್ಲಿ ಜನರು ಬುದ್ಧಿ ಕಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಬಿಜೆಪಿ ನಾಯಕರು ಹಣ ಹಂಚುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಇವರು ಕೂಡ ಬಿಜೆಪಿಯಿಂದ ಹಣ ಹಂಚೋದನ್ನ ಕಲಿತ್ತಾರೆ. ಇಲ್ಲಾ ಕಾಂಗ್ರೆಸ್​ನಿಂದ ಬಿಜೆಪಿಯವರು ಕಲಿತಾರಾ ಎಂದು ಪ್ರಶ್ನಿಸಿದರು.

ಕನಕಪುರದ ಅರುಣ್ ಎಂಬುವವನು ಹಣ ಹಂಚುತಿದ್ದು ಈ ವೇಳೆ ಆತನನ್ನು ಬಂಧಿಸಿದ್ದಾರೆ. ಆತನಿಂದ ಈ ವೇಳೆ ದಾಖಲೆಗಳನ್ನ ವಶಕ್ಕೆ ಪಡೆಯಲಾಗಿದೆ ಎಂದರು.

 ಇದನ್ನು ಓದಿ: ಶಿರಾದಲ್ಲಿ ಅಭಿವೃದ್ಧಿ ಮಂತ್ರ; ಅಭ್ಯರ್ಥಿ ಗೆದ್ದರೆ ಕ್ಷೇತ್ರವನ್ನು ದತ್ತು ಪಡೆಯುತ್ತೇನೆಂದ ಜೆಡಿಎಸ್​ ವರಿಷ್ಠ ದೇವೇಗೌಡ

ಇದಕ್ಕೂ ಮುನ್ನ ಪ್ರಚಾರದಲ್ಲಿ ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸಿದ್ದರಾಮಯ್ಯ ಹೇಳುತ್ತಾರೆ 5 ಕೆಜಿ ಉಚಿತ ಅಕ್ಕಿ ನೀಡಿದೆ ಎಂದು. ಅವರು ಮೂರು ರೂಪಾಯಿನಂತೆ 5 ಕೆಜಿ ಅಕ್ಕಿ ನೀಡಿದರು. ಇದರಿಂದ ಜನರಿಗೆ ಉಳಿದಿದ್ದು ಕೇವಲ 15 ರೂಪಾಯಿ. ಆದರೆ, ನಾನು ಮಾಸಾಶನವನ್ನು 200 ರೂಪಾಯಿನಿಂದ 500 ರೂಪಾಯಿಗೆ ಏರಿಕೆ ಮಾಡಿದೆ. ಇದರಿಂದ ಸಾಕಷ್ಟು ಬಡ ಕುಟುಂಬಗಳಿಗೆ ಸಹಾಯ ಆಯಿತು

ಬಡವರ ಬಂಧು ಕಾರ್ಯಕ್ರಮದ ಮೂಲಕ ಏನು ಇಲ್ಲದವರಿಗೆ 10 ಸಾವಿರದ ತನಕ ಸಾಲ‌ ಸಿಗುವ ಹಾಗೆ ಮಾಡಿದೆ. ಇದರಿಂದ ಬೀದಿ ವ್ಯಾಪರಿಗಳಿಗೆ  ಸಹಾಯ ಆಯಿತು. ಜಮೀನು ಇರುವವರ ರೈತರ ಸಾಲಾ ಮನ್ನಾ ಮಾಡಿದೆ. ಜಮೀನು ಇಲ್ಲದಿರೋರು ಬಡ್ಡಿಗೆ ತಗೊಂಡಿರುವ ಸಾಲ ಮನ್ನಾ ಮಾಡುವ ಋಣ‌ ಮುಕ್ತ ಕಾಯಿದೆ ತಂದೆ. ಇದಕ್ಕೆ ರಾಷ್ಟ್ರಪತಿಗಳೇ ಅಂಕಿತ ಹಾಕಿದರು.  ಆದರೆ ಬಿಜೆಪಿ ಸರ್ಕಾರ, ಲೇವಾದೇವಿದಾರರಿಗೆ ಹೇಳಿಸಿ ಕೋರ್ಟ್ ನಲ್ಲಿ ಕೇಸ್ ಹಾಕಿಸಿ, ಕಾಯಿದೆ ಸ್ಟಾಪ್ ಆಗುವಂತೆ ಮಾಡಿದರು ಎಂದು ಆರೋಪಿಸಿದರು.
Published by: Seema R
First published: October 31, 2020, 10:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading