ನನ್ನ ರಾಜ್ಯದ ಅಭಿವೃದ್ಧಿ ಫಿಟ್ನೆಸ್​ಗೆ ಸಹಕರಿಸಿ: ಮೋದಿ ಫಿಟ್ನೆಸ್ ಚಾಲೆಂಜ್ಗೆ ಎಚ್​ಡಿಕೆ ಉತ್ತರ


Updated:June 13, 2018, 11:05 AM IST
ನನ್ನ ರಾಜ್ಯದ ಅಭಿವೃದ್ಧಿ ಫಿಟ್ನೆಸ್​ಗೆ ಸಹಕರಿಸಿ: ಮೋದಿ ಫಿಟ್ನೆಸ್ ಚಾಲೆಂಜ್ಗೆ ಎಚ್​ಡಿಕೆ ಉತ್ತರ

Updated: June 13, 2018, 11:05 AM IST
ನ್ಯೂಸ್ 18 ಕನ್ನಡ

ನವದೆಹಲಿ(ಜೂ.13): ರಾಜಕೀಯ ವೈರಿಗಳಂತಿದ್ದ ಪ್ರಧಾನಿ ಮೋದಿ ಹಾಗೂ ಹೆಚ್​ಡಿಕೆ ಇದೀಗ #FitnessChallenge ನಿಂದ ಸುದ್ದಿಯಲ್ಲಿದ್ದಾರೆ.  ಕ್ಯಾಪ್ಟನ್​ ಕೊಹ್ಲಿ ತಮಗೆ ನೀಡಿದ್ದ ಫಿಟ್ನೆಸ್ ಚಾಲೆಂಜ್​ ಸ್ವೀಕರಿಸಿದ್ದ ಪ್ರಧಾನಿ ಮೋದಿ, ಇದನ್ನು ಕರ್ನಾಟಕದ ಮುಖ್ಯಮಂತ್ರಿಗೆ ಪಾಸ್​ ಮಾಡಿದ್ದರು. ಇದೀಗ ಹೆಚ್​ಡಿಕೆ ಪ್ರಧಾನಿ ಮೋದಿಯ ಸವಾಲು ಸ್ವೀಕರಿಸುವುದರೊಂದಿಗೆ ನನಗೆ ನನ್ನ ರಾಜ್ಯದ ಅಭಿವೃದ್ಧಿ ಹಾಗೂ ಫಿಟ್ನೆಸ್​ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದೇನೆ ಇದಕ್ಕೆ ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತೇನೆ ಎಂದು ಉತ್ತರಿಸಿದ್ದಾರೆ ​

ಕ್ರೀಡಾ ಸಚಿವ ಹಾಗೂ ಪ್ರಖ್ಯಾತ ಶೂಟರ್​ ರಾಜ್ಯವರ್ಧನ್​ ರಾಥೋಡ್​ ಆರಂಭಿಸಿದ್ದ #FitnessChallenge ದಿನ ಕಳೆದಂತೆ ಬಹಳಷ್ಟು ಫೇಮಸ್​ ಆಗುತ್ತಿದೆ. ರಾಥೋಡ್​ ನೀಡಿದ್ದ ಚಾಲೆಂಜ್​ ಸ್ವೀಕರಿಸಿದ್ದ ವಿರಾಟ್​ ಕೊಹ್ಲಿ, ಪ್ರಧಾನಿ ಮೋದಿಗೆ ಚಾಲೆಂಜ್​ ಹಾಕಿದ್ದರು. ಇದೀಗ ಕ್ಯಾಪ್ಟನ್​ ಕೊಹ್ಲಿಯ ಫಿಟ್ನೆಸ್​ ಸವಾಲು ಸ್ವೀಕರಿಸಿರುವ ಪ್ರಧಾನಿ ಮೋದಿ ತನ್ನ ವಿಡಿಯೋ ಪೋಸ್ಟ್​ ಮಾಡಿ, ಕರ್ನಾಟಕದ ನೂತನ ಮುಖ್ಯಮಂತ್ರಿ ಹೆಚ್​. ಡಿ ಕುಮಾರಸ್ವಾಮಿಗೆ ಈ ಚಾಲೆಂಜ್​ ಪಾಸ್​ ಮಾಡಿದ್ದಾರೆ.

ಪ್ರಧಾನಿ ಮೋದಿಯ ಸವಾಲು ಸ್ವೀಕರಿಸಿದ ಹೆಚ್​ಡಿಕೆ "ಮೋದೀಜೀ, ನನ್ನ ಆರೋಗ್ಯದ ಕುರಿತಾಗಿ ಕಾಳಜಿ ಹೊಂದಿರುವುದಕ್ಕಾಗಿ ಧನ್ಯವಾದಗಳು. ಫಿಟ್ನೆಸ್​ ಕಾಪಾಡುವುದು ಆರೋಗ್ಯದ ದೃಷ್ಟಿಯಿಂದ ಬಹಳ ಮುಖ್ಯ ಎಂಬುವುದು ನನ್ನ ಅಭಿಪ್ರಾಯ ಇದೇ ಕಾರಣದಿಂದ ಯೋಗ ಹಾಗೂ ಥ್ರೆಡ್​ಮಿಲ್​ ನಾನು ಪ್ರತಿನಿತ್ಯದ ವ್ಯಾಯಾಮದಲ್ಲಿ ಪಾಲಿಸುತ್ತೇನೆ. ಇದರೊಂದಿಗೆ ನಾನು ನನ್ನ ರಾಜ್ಯದ ಅಭಿವೃದ್ಧಿ ಹಾಗೂ ಫಿಟ್ನೆಸ್​ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದೇನೆ ಇದಕ್ಕೆ ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತೇನೆ ಎಂದು ಉತ್ತರಿಸಿದ್ದಾರೆ. ​ಹೌದು ಮೇ 22 ರಂದು ಟ್ವಿಟರ್​ನಲ್ಲಿ ಆರಂಭವಾಗಿದ್ದ ಈ #FitnessChallengeನ್ನು ಸ್ವೀಕರಿಸಿದ್ದ ಕ್ಯಾಪ್ಟನ್​ ವಿರಾಟ್​ ಕೊಹ್ಲಿ, ಮೇ 24 ರಂದು ಪ್ರಧಾನಿ ಮೋದಿಗೆ ಪಾಸ್​ ಮಾಡಿದ್ದರು. ಈ ಸಂದರ್ಭದಲ್ಲಿ ಫಿಟ್ನೆಸ್​ ವಿಚಾರ ಭಾರೀ ಸುದ್ದಿ ಮಾಡಿತ್ತು. ಪ್ರಧಾನಿ ಈ ಸವಾಲು ಸ್ವೀಕರಿಸುತ್ತಾರಾ? ಕೊಹ್ಲಿಗೆ ಏನೆಂದು ಉತ್ತರ ನೀಡುತ್ತಾರೆ ಎಂಬ ಕುತೂಹಲ ಮನೆ ಮಾಡಿತ್ತು. ಇದರ ಬೆನ್ನಲ್ಲೇ ಸವಾಲು ಸ್ವೀಕರಿಸಿರುವ ಮೋದಿ ತಮ್ಮ ವಿಡಿಯೋ ಒಂದನ್ನು ಪೋಸ್ಟ್​ ಮಾಡಿದ್ದಾರೆ. ಇದರೊಂದಿಗೆ ಕರ್ನಾಟಕದ ಮುಖ್ಯಮಂತ್ರಿ ಕುಮಾರಸ್ವಾಮಿ, ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಭಾರತಕ್ಕೆ ಅತಿ ಹೆಚ್ಚು ಪದಕ ತಂದುಕೊಟ್ಟ ಮಾಣಿಕಾ ಭಟ್ರ ಸೇರಿದಂತೆ 40 ವರ್ಷಕ್ಕೂ ಮೇಲ್ಪಟ್ಟ IPS ಅಧಿಕಾರಿಗಳಿಗೆ #FitnessChallenge ನ್ನು ಪಾಸ್​ ಮಾಡಿದ್ದರು.


"ನನ್ನ ಬೆಳಗ್ಗಿನ ವ್ಯಾಯಾಮದ ಕೆಲ ದೃಶ್ಯಗಳು ಇಲ್ಲಿವೆ. ಯೋಗವನ್ನು ಹೊರತುಪಡಿಸಿ, ಪಂಚಭೂತಗಳು ಅಥವಾ ಪ್ರಕೃತಿಯ 5 ಅಂಶಗಳು- ಪೃಥ್ವಿ, ಜಲ, ಅಗ್ನಿ, ವಾಯು ಹಾಗೂ ಆಕಾಶವನ್ನೊಳಗೊಂಡ ಟ್ರ್ಯಾಕ್​ ಮೇಲೆ ನಡೆಯುತ್ತೇನೆ. ಇದು ಮನಸ್ಸಿಗೆ ಉಲ್ಲಾಸ ನೀಡುತ್ತದೆ. ಅಲ್ಲದೇ ಪ್ರಾಣಾಯಾಮ ಮಾಡುತ್ತೇನೆ" ಎಂದು ವಿಡಿಯೋವನ್ನು ಪೋಸ್ಟ್​ ಮಾಡಿದ್ದಾರೆ.


ಇಬ್ಬರೂ ನಾಯಕರೂ ರಾಜಕೀಯ ವೈರಿಗಳಂತಿದ್ದಾರೆ ಹೀಗಿರುವಾಗ ಮೋದಿ ನೀಡಿರುವ ಸವಾಲನ್ನು ಹೆಚ್​. ಡಿ ಕುಮಾರಸ್ವಾಮಿಯವರಿಗೆ ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲ ಪ್ರತಿಯೊಬ್ಬರನ್ನೂ ಕೆರಳಿಸಿತ್ತು. ಇದೀಗ ಪ್ರಧಾನಿ ನೀಡಿದ ಸವಾಲನ್ನು ಹೆಚ್​ಡಿಕೆ ಸ್ವೀಕರಿಸಿದ್ದಾರೆ. ಇದರೊಂದಿಗೆ ಪ್ರಧಾನಿ ಮೋದಿಗೆ ರಾಜ್ಯದ ಅಭಿವೃದ್ಧಿಗೆ ಸಹಕಾರ ನಿಡುವಂತೆಯೂ ಮನವಿ ಮಾಡಿಕೊಂಡಿದ್ದಾರೆ

 
First published:June 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ