HD Kote Tahshildar: ನಡೀರಿ ಆಚೆಗೆ, ಯಾವಾಗ್ಲೂ ಇದೇ ಆಯ್ತು: ದೂರು ನೀಡಲು ಬಂದವರಿಗೆ ತಹಶೀಲ್ದಾರ್ ಫುಲ್ ಆವಾಜ್

ಇವನು ಯಾವಾಗ್ಲು ಹಿಂಸೆ ಕೊಡ್ತಾನೆ. ಯಾವಾಗ್ಲೂ ಇದೇ ಆಯ್ತು. ಮಹಿಳೆಯರಿಗೆ ಗೌರವ ಕೊಡಬೇಕು ಎಂದು ತಹಶೀಲ್ದಾರ್ ಕೂಗಾಡಿದ್ದಾರೆ.

ತಹಶೀಲ್ದಾರ್ ರತ್ನಾಂಬಿಕಾ

ತಹಶೀಲ್ದಾರ್ ರತ್ನಾಂಬಿಕಾ

  • Share this:
    ದೂರು ನೀಡಲು ಬಂದವರಿಗೆ ಮೈಸೂರು (Mysuru) ಜಿಲ್ಲೆಯ ಹೆಚ್.ಡಿ.ಕೋಟೆಯ ತಹಶೀಲ್ದಾರ್ (HD Kote Tahshiladar) ರತ್ನಾಂಬಿಕಾ ಅವಾಜ್ ಹಾಕಿರುವ ಘಟನೆ ವಿನಿ ವಿಧಾನಸೌಧದಲ್ಲಿ ನಡೆದಿದೆ. ಅವಾಜ್ ಹಾಕಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಾರ್ವಜನಿಕರ ಸಮಸ್ಯೆ ಪರಿಹರಿಸಲು ಅಧಿಕಾರಿಗಳು ಇರೋದು. ಅವರೇ ಹೀಗೆ ಮಾಡಿದ್ರೆ ಹೇಗೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ರೈತ ಸಂಘದ ಮುಖಂಡ ಶಿವಕುಮಾರ್ ಎಂಬವರು ದೂರು ಸಲ್ಲಿಸಲು ಹೋದ ವೇಳೆ ಘಟನೆ ನಡೆದಿದೆ. ಸ್ಥಳೀಯ ಕಂದಾಯ ಅಧಿಕಾರಿ (Revenue Inspector) ಮತ್ತು ಗ್ರಾಮ ಲೆಕ್ಕಾಧಿಕಾರಿಗಳು (Village Accountant) ಲಂಚ ಪಡೆಯುತ್ತಿರುವ ಬಗ್ಗೆ ದೂರು ಸಲ್ಲಿಸಲು ಶಿವಕುಮಾರ್ ತೆರಳಿದ್ದರು. ಈ ವೇಳೆ ಗರಂ ಆದ ತಹಶೀಲ್ದಾರ್ ಟೇಬಲ್ ಮೇಲಿದ್ದ ದಾಖಲೆಗಳನ್ನ ಎಸೆದು ಕೂಗಾಡಿದ್ದಾರೆ.

    ನಡೀರಿ ಆಚೆಗೆ, ಇವನು ಯಾವಾಗ್ಲು ಹಿಂಸೆ ಕೊಡ್ತಾನೆ. ಯಾವಾಗ್ಲೂ ಇದೇ ಆಯ್ತು. ಮಹಿಳೆಯರಿಗೆ ಗೌರವ ಕೊಡಬೇಕು ಎಂದು ತಹಶೀಲ್ದಾರ್ ಕೂಗಾಡಿದ್ದಾರೆ.

    ನಿದ್ದೆ ಮಾಡ್ತಿದಿರೇನ್ರಿ? ಎಲ್ರೂ ಕೊಳ್ಳೆ ಹೊಡಿತಿದ್ದಾರೆ ಇಲ್ಲಿ, 30 ಸಾವಿರ, 50 ಸಾವಿರ ಹಣ ತೆಗೆದುಕೊಳ್ಳುತ್ತಿದ್ದೀರಾ? ನಿಮಗಾದ್ರೂ ಗೊತ್ತಾಗಬೇಕಲ್ವಾ? ಸಾರ್ವಜನಿಕರು ಶಾಪ ಹಾಕ್ತಿಲ್ವಾ ನಿಮಗೆ, ಇವರಿಗೆಲ್ಲಾ ನಾಚಿಕೆ ಆಗಬೇಕು, ಕೆಲಸ ಮಾಡೋಕೆ ಅರ್ಹತೆ ಇಲ್ಲ ಅಂದ್ರೆ ತಾಲೂಕು ಬಿಟ್ಟು ಹೋಗಲಿ ಎಂದು ದೂರುದಾರ ಶಿವಕುಮಾರ್ ಹೇಳಿದ್ದಾರೆ.

    ನ್ಯೂಸ್ 18 ಕನ್ನಡ ಜೊತೆ ರತ್ನಾಂಬಿಕಾ

    ಈ ಬಗ್ಗೆ ನ್ಯೂಸ್ 18 ಕನ್ನಡ ಜೊತೆ ಮಾತನಾಡಿದ ತಹಶೀಲ್ದಾರ್ ರತ್ನಾಂಬಿಕಾ, ನನ್ನ ವಿರುದ್ಧ ಕೇಳಿ ಬಂದಿರುವ ಆರೋಪಗಳೆಲ್ಲವೂ ಸುಳ್ಳು. ಆ ವ್ಯಕ್ತಿ ಬರುತ್ತಿರೋದು ಇದೇ ಮೊದಲೇನಲ್ಲ. ಈ ವ್ಯಕ್ತಿ ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸುತ್ತಾರೆ. ಇಲ್ಲಿ ಯಾಕೆ ಇದ್ದೀರಿ ಹೋಗಿ ಎಂದು ಹೇಳುತ್ತಾರೆ.

    ಆರ್​ಐ ಮತ್ತು ವಿಎಗಳು ಕಾನೂನುಬದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ಆರೋಪ ಮಾಡುವ ಮೊದಲು ದಾಖಲೆಗಳನ್ನು ನೀಡಿ ಎಂದು ಕೇಳಿದ್ದೇನೆ. ಆದ್ರೆ ಕೇವಲ ಆರೋಪ ಮಾಡಿದ್ರೆ ಏನು ಮಾಡಲು ಸಾಧ್ಯ.  ನಾನೇ ಮನೆ ಮನೆಗೆ ತೆರಳಿ ಅರ್ಹ ಫಲಾನುಭವಿಗಳಿಗೆ ಸರ್ಕಾರಿ ಯೋಜನೆಗಳು ಸಿಗುವ ಹಾಗೆ ಕೆಲಸ ಮಾಡಿದ್ದೇನೆ ಎಂದು ರತ್ನಾಂಬಿಕಾ ಹೇಳಿದರು.

    ದೂರುದಾರ ಶಿವಕುಮಾರ್ ಹೇಳಿದ್ದೇನು?

    ಒಬ್ಬ ಅಧಿಕಾರಿಯಾಗಿ ಹೀಗೆ ಕೂಗಾಡಿದ್ರೆ ಸಾರ್ವಜನಿಕರಾದ ನಾವು ಯಾರ ಬಳಿ ಹೋಗಬೇಕು. ನನ್ನ ಕೊಠಡಿಗೆ ಯಾಕೆ ಬಂದು ಗರಂ ಆದ್ರು. ಆರ್​​ಐ ಮತ್ತು ವಿಎ ಗಳು ಹಣ ಪಡೆಯುತ್ತಿರುವ ಬಗ್ಗೆ ದೂರು ನೀಡಲು ನಾವು ಹೋಗಿದ್ದೆವು ಎಂದು ಶಿವಕುಮಾರ್ ಹೇಳುತ್ತಾರೆ.
    Published by:Mahmadrafik K
    First published: