• Home
  • »
  • News
  • »
  • state
  • »
  • Deve Gowda: ದೇವೇಗೌಡರಿಗೆ ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುವ ಆಸೆಯಿದೆ! ಹೀಗೆ ಹೇಳಿದ್ದೇಕೆ ಪ್ರಜ್ವಲ್ ರೇವಣ್ಣ?

Deve Gowda: ದೇವೇಗೌಡರಿಗೆ ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುವ ಆಸೆಯಿದೆ! ಹೀಗೆ ಹೇಳಿದ್ದೇಕೆ ಪ್ರಜ್ವಲ್ ರೇವಣ್ಣ?

ಪ್ರಜ್ವಲ್ ರೇವಣ್ಣ

ಪ್ರಜ್ವಲ್ ರೇವಣ್ಣ

"ಕೋಲಾರ ಜಿಲ್ಲೆಗೂ ನಮ್ಮ ಕುಟುಂಬದವರಿಗೂ ಅವಿನಾಭಾವ ಸಂಬಂಧವಿದೆ. ಇದು ತಲೆತಲಾಂತರಗಳಿಂದ ನಡೆದುಕೊಂಡು ಬಂದಿರುವ ಬೆಸುಗೆಯಾಗಿದೆ. ಮುಸ್ಲಿಂ ಸಮುದಾಯ ಕೂಡ ಎಂದೆಂದಿಗೂ ನಮ್ಮ ಪಕ್ಷದ ಜೊತೆಗಿದೆ. ಮುಂದೆಯೂ ನಾವು ಮುಸಲ್ಮಾನರ ಜೊತೆಗೆ ಇರುತ್ತೇವೆ. ಅದೇ ಭರವಸೆ ಮೇಲೆ ಸಿಎಂ ಇಬ್ರಾಹಿಂ ಅವರು ನಮ್ಮೊಂದಿಗೆ ಬಂದಿದ್ದಾರೆ" ಎಂದು ಪ್ರಜ್ವಲ್ ಹೇಳಿದ್ದಾರೆ.

ಮುಂದೆ ಓದಿ ...
  • Share this:

 ಕೋಲಾರ: ಮುಂದಿನ ಜನ್ಮದಲ್ಲಿ ಎಚ್.​ಡಿ. ದೇವೇಗೌಡರಿಗೆ (H.D Devegowda) ಮುಸಲ್ಮಾನ ಧರ್ಮದಲ್ಲಿ  (Muslim community) ಹುಟ್ಟುವ ಆಸೆಯಿದೆ ಎಂದು ಹಾಸನ ಸಂಸದ ಹಾಗೂ ಎಚ್​.ಡಿ. ದೇವೇಗೌಡರ ಮೊಮ್ಮಗ ಪ್ರಜ್ವಲ್​ ರೇವಣ್ಣ (Prajwal Revanna) ಹೇಳಿದ್ದಾರೆ. ಕೋಲಾರದಲ್ಲಿ (Kolar) ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಈ ಹೇಳಿಕೆ ನೀಡಿದ್ದಾರೆ. ಜೆಡಿಎಸ್ ಪಕ್ಷದ ವತಿಯಿಂದ ಈ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಬಂದರೆ ಮುಸಲ್ಮಾನರಿಗೆ ನೆಮ್ಮದಿಯ ಆಡಳಿತ ನೀಡುತ್ತೇವೆ ಎಂದು ಜೆಡಿಎಸ್​ ಯುವ ನಾಯಕ ಪ್ರಜ್ವಲ್ ರೇವಣ್ಣ ಭರವಸೆ ನೀಡಿದ್ದಾರೆ.


ಕೋಲಾರ ಜಿಲ್ಲೆಗೂ ನಮ್ಮ ಕುಟುಂಬದವರಿಗೂ ಅವಿನಾಭಾವ ಸಂಬಂಧವಿದೆ. ಇದು ತಲ ತಲಾಂತರಗಳಿಂದ ನಡೆದುಕೊಂಡು ಬಂದಿರುವ ಬೆಸುಗೆಯಾಗಿದೆ. ಮುಸ್ಲಿಂ ಸಮುದಾಯ ಕೂಡ ಎಂದೆಂದಿಗೂ ನಮ್ಮ ಪಕ್ಷದ ಜೊತೆಗಿದ್ದಾರೆ. ಮುಂದೆಯೂ ನಾವು ಮುಸಲ್ಮಾನರ ಜೊತೆಗೆ ಇರುತ್ತೇವೆ. ಅದೇ ಭರವಸೆ ಮೇಲೆ ಸಿಎಂ ಇಬ್ರಾಹಿಂ ಅವರು ನಮ್ಮೊಂದಿಗೆ ಬಂದಿದ್ದಾರೆ ಎಂದು ಪ್ರಜ್ವಲ್ ಹೇಳಿದ್ದಾರೆ.


ಅಲ್ಪಸಂಖ್ಯಾತರ ಬೆಂಬಲ


ಜೆಡಿಎಸ್​ ಪಕ್ಷಕ್ಕೆ ಸಿಎಂ ಇಬ್ರಾಹಿಂ ಅಧ್ಯಕ್ಷರಾದ ಮೇಲೆ ರಾಜ್ಯದ ನಾನಾ ಭಾಗಗಳ ಅಲ್ಪಸಂಖ್ಯಾತರು ಜೆಡಿಎಸ್​ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ. ಕೋಲಾರ ಜೆಡಿಎಸ್​ ಭದ್ರಕೋಟೆಯಾಗಿದೆ, ಅವಿಭಜಿತ ಕೋಲಾರ ಜಿಲ್ಲೆಗೆ ಮತ್ತು ನಮ್ಮ ಕುಟುಂಬಕ್ಕೆ ನೆಂಟಸ್ತನವಿದೆ. ಒಂದು ಸಂದರ್ಭದಲ್ಲಿ ಎಚ್​ಡಿ ಕುಮಾರಸ್ವಾಮಿ ಕೂಡ ಇಲ್ಲಿಂದಲೇ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: JDS Future: ಮಾಡು ಇಲ್ಲವೇ ಮಡಿ ಕಾದಾಟಕ್ಕೆ ಸಿದ್ಧವಾಗಿರುವ ಜೆಡಿಎಸ್!


ಮುಸ್ಲಿಂ ಸಿಎಂ ಭರವಸೆ ನೀಡಿದ್ದ ಎಚ್​ಡಿಕೆ


ಜೆಡಿಎಸ್ ನಾಯಕಲ್ಲಿ ಮುಸ್ಲಿಂ ಸಮುದಾಯದ ಓಲೈಕೆ ಕುರಿತು ಈ ರೀತಿಯ ಹೇಳಿಕೆ ನೀಡುತ್ತಿರುವವರಲ್ಲಿ ಪ್ರಜ್ವಲ್ ರೇವಣ್ಣ ಮೊದಲಿಗರಲ್ಲ. ಎರಡು ತಿಂಗಳ ಹಿಂದೆ ಕೋಲಾರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಜೆಡಿಎಸ್​ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೆ ಮುಸ್ಲಿಂ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನವನ್ನು ನೀಡುತ್ತೇವೆ. ಮುಸ್ಲಿಮರು ನಮ್ಮವರೇ , ಅವರೂ ಕನ್ನಡಿಗರೇ. ಆ ಸಮುದಾಯವರನ್ನ ಮುಖ್ಯಮಂತ್ರಿ ಮಾಡಬಾರದು ಎಂದೇನಿಲ್ಲ ಎಂದು ತಿಳಿಸಿದ್ದಾರೆ.
ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸುತ್ತಿರುವ ಜೆಡಿಎಸ್


ಇನ್ನು ಮುಂಬರುವ 2023ರ ವಿಧಾನಸಭಾ ಚುನಾವಣೆ ಸಿದ್ಧವಾಗುತ್ತಿರುವ ಜೆಡಿಎಸ್​ ರಾಜ್ಯಾದ್ಯಂತ ಪಂಚರತ್ನ ರಥಯಾತ್ರೆ ನಡೆಸುತ್ತಿದೆ. ಇಂದೂ ಕೂಡ ವಿಜಯಪುರದ ಸಿಂಧಗಿ ಪಟ್ಟಣದಲ್ಲಿ ಬಹಿರಂಗ ಸಭೆ ನಡೆಯುತ್ತಿದ್ದು ಕುಮಾರಸ್ವ ಸ್ವಾಮಿ ಪಾಲ್ಗಂಡಿದ್ದಾರೆ. ಒಂದುವೇಳೆ ರಾಜ್ಯದಲ್ಲಿ ಸಂಪೂರ್ಣ ಬಹುಮತ ಬಂದು ಅಧಿಕಾರಕ್ಕೆ ಬಂದರೆ ರೈತರಿಗೆ ಮಧ್ಯಮ ಕ್ರಮಾಂಕಕ್ಕೆ ಹಲವು ಯೋಜನೆಗಳನ್ನು ನೀಡುವುದಾಗಿ ಭರವಸೆ ನೀಡುತ್ತಿದ್ದಾರೆ.


HD Kumaraswamy
ಎಚ್​.ಡಿ ಕುಮಾರಸ್ವಾಮಿ


ಪಕ್ಷ ವಿಸರ್ಜನೆ


ಒಂದು ವೇಳೆ ಜೆಡಿಎಸ್​ ಪಕ್ಷ ಕೊಟ್ಟ ಮಾತಿನಂತರ ರೈತರನ್ನು ಸಾಲ ಮುಕ್ತರನ್ನಾಗಿ ಮಾಡುವಲ್ಲಿ ಹಾಗೂ ಉತ್ತಮ ಕಾರ್ಯಕ್ರಮಗಳನ್ನು ಕೊಡಲು ವಿಫಲರಾದರೆ 2028ಕ್ಕೆ ಜೆಡಿಎಸ್ ಪಕ್ಷವನ್ನೇ ವಿಸರ್ಜನೆ ಮಾಡುತ್ತೇನೆ. ಮತ್ತೆ ನಿಮ್ಮ ಬಳಿ ಮತ ಕೇಳಲು ಬರುವುದಿಲ್ಲ ಎಂದು ಕುಮಾರಸ್ವಾಮಿ ಭಾವುಕರಾದರು. ಸಿಂದಗಿಯಲ್ಲಿ ಜನರು ದೇವೇಗೌಡರು ನೀಡಿದ ನೀರಾವರಿ ಯೋಜನೆ ನೆನಪಿಟ್ಟುಕೊಂಡಿದ್ದಾರೆ. ನಮ್ಮ ತಪ್ಪಿನಿಂದ ಕಳೆದ ಚುನಾವಣೆಯಲ್ಲಿ ಸೋಲುಂಡಿದ್ದೇವೆ. ಅಂದು ದೇವೇಗೌಡರನ್ನು ಬಹಳ ಪ್ರೀತಿಯಿಂದ ಸ್ವಾಗತಿಸಿದ್ದೀರಿ. ದೇವೇಗೌಡರ ಮೇಲೆ ನೀವು ಇಟ್ಟಿರುವ ಪ್ರೀತಿಯನ್ನು ನಾನು ಮರೆತಿಲ್ಲ ಎಂದರು.


ಮಾದರಿ ರಾಜ್ಯದ ಭರವಸೆ


ದೇವೇಗೌಡರು ಕೆಲವೇ ತಿಂಗಳುಕಾಲ ಮಿಖ್ಯಮಂತ್ರಿಯಾಗಿದ್ದರು. ಆದರೂ ಈ ಭಾಗಕ್ಕೆ 18 ಸಾವಿರ ಕೋಟಿ ಹಣವನ್ನು ನೀರಾವರಿ ಕ್ಷೇತ್ರಕ್ಕೆ ನೀಡಿದ್ದಾರೆ. ಪಂಚರತ್ನ ಯೋಜನೆಗಳಿಗೆ ಯಾವುದೇ ರೀತಿಯ ಜಾತಿ, ಧರ್ಮ, ಕುಲ ಯಾವುದು ಇಲ್ಲ. ಕರ್ನಾಟಕ ರಾಜ್ಯದ 6.5 ಕೋಟಿ ಜನತೆಯ ಕಲ್ಯಾಣಕ್ಕಾಗಿ ನಿರ್ಮಾಣಗೊಂಡ ಯೋಜನೆಗಳಾಗಿವೆ. ಒಂದು ಬಾರಿ 5 ವರ್ಷ ಸಂಪೂರ್ಣವಾಗಿ ಜೆಡಿಎಸ್‌ಗೆ ಅಧಿಕಾರ ನೀಡಿ, ಈ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಮಾಡಿಯೇ ತೀರುತ್ತೇವೆ ಎಂದು ಭರವಸೆ ನೀಡಿದರು.

Published by:Rajesha B
First published: