• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • HD Devegowda: ಅವರ ಬಗ್ಗೆ ಕೊಂಕು ಮಾತಾಡಿದ್ರೆ ಸಹಿಸಲ್ಲ; ದೇವೇಗೌಡರು ಎಚ್ಚರಿಕೆ ಕೊಟ್ಟಿದ್ದು ಯಾರಿಗೆ?

HD Devegowda: ಅವರ ಬಗ್ಗೆ ಕೊಂಕು ಮಾತಾಡಿದ್ರೆ ಸಹಿಸಲ್ಲ; ದೇವೇಗೌಡರು ಎಚ್ಚರಿಕೆ ಕೊಟ್ಟಿದ್ದು ಯಾರಿಗೆ?

ಎಚ್‌.ಡಿ. ದೇವೇಗೌಡ (ಸಂಗ್ರಹ ಚಿತ್ರ)

ಎಚ್‌.ಡಿ. ದೇವೇಗೌಡ (ಸಂಗ್ರಹ ಚಿತ್ರ)

ತಾಯಿಯ ದರ್ಶನ ಪಡೆದ ಬಳಿಕ ಚಾಮುಂಡಿ ಬೆಟ್ಟದಲ್ಲಿ‌ ಮೈಸೂರು ಭಾಗದ ಕ್ಷೇತ್ರಗಳ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಜಿ.ಟಿ.ದೇವೇಗೌಡರು (Former Minister GT Devegowda) ಘೋಷಿಸಿದರು.

  • News18 Kannada
  • 3-MIN READ
  • Last Updated :
  • , India
  • Share this:

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು (Former PM HD Devegowda) ಅನಾರೋಗ್ಯದ ನಡುವೆಯೂ ಬೆಟ್ಟಕ್ಕೆ (Chamundeshwari Hill) ತೆರಳಿ ಚಾಮುಂಡೇಶ್ವರಿ ತಾಯಿಯ (Goddess Chamundi) ದರ್ಶನ ಪಡೆದರು. ಈ ವೇಳೆ ದೊಡ್ಡಗೌಡರಿಗೆ ಮರಿ ಗೌಡರು (ಮಾಜಿ ಸಚಿವ ಜಿ.ಟಿ.ದೇವೇಗೌಡ) ಸಾಥ್​ ನೀಡಿದರು. ಗುರುವಾರ ಯಶಸ್ವಿ ಸಂಧಾನ ನಂತರ ಹೆಚ್​ಡಿಡಿ ಮತ್ತು ಜಿಟಿಡಿ ಜೊತೆಯಾಗಿ ದರ್ಶನ ಪಡೆದುಕೊಂಡರು. ದೇವೇಗೌಡರ ಜೊತೆಯಲ್ಲಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ (DC Thammanna) ಸೇರಿದಂತೆ ಸ್ಥಳೀಯ ಜೆಡಿಎಸ್​ ಮುಖಂಡರು (JDS Leaders) ಉಪಸ್ಥಿತರಿದ್ದರು. ತಾಯಿಯ ದರ್ಶನ ಪಡೆದ ಬಳಿಕ ಚಾಮುಂಡಿ ಬೆಟ್ಟದಲ್ಲಿ‌ ಮೈಸೂರು ಭಾಗದ ಕ್ಷೇತ್ರಗಳ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಜಿ.ಟಿ.ದೇವೇಗೌಡರು (Former Minister GT Devegowda) ಘೋಷಿಸಿದರು.


ಅಭ್ಯರ್ಥಿಗಳ ಪಟ್ಟಿ ಹೀಗಿದೆ


ಚಾಮುಂಡೇಶ್ವರಿ: ಜಿ.ಟಿ.ದೇವೇಗೌಡ, ಹುಣಸೂರು: ಜಿಟಿಡಿ‌ ಮಗ ಹರೀಶ್ ಗೌಡ, ಕೆ.ಆರ್ ನಗರ: ಸಾ.ರಾ ಮಹೇಶ್, ಪಿರಿಯಾಪಟ್ಟಣ: ಕೆ.ಮಹದೇವ್, ನರಸೀಪುರ: ಅಶ್ಚಿನ್, ಎಚ್.ಡಿ ಕೋಟೆ: ಮಾಜಿ ಶಾಸಕ ಚಿಕ್ಕಣ್ಣ ಪುತ್ರ ಜಯಪ್ರಕಾಶ್


ಪಟ್ಟಿ ಬಿಡುಗಡೆ ಬಳಿಕ ಮಾತನಾಡಿದ ಜಿಟಿಡಿ, ನಾನು ನಿನ್ನೆಯಿಂದಲೇ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ. ಮನಸ್ಸು ಮೂರು ವರ್ಷಗಳ ನಂತರ ಸಮಾಧಾನದಲ್ಲಿದೆ. ನಾನು ನನ್ನ‌ ಮನೆಯವರು ಹೆಚ್ಚು ಖುಷಿಯಲ್ಲಿದ್ದೇವೆ. ಇನ್ನೂ ಯಾವ ಗೊಂದಲಗಳು ಉಳಿದಿಲ್ಲ ಎಂದು ಹೇಳಿದರು.


ಹೆಚ್​​ ಡಿ ದೇವೇಗೌಡ, ಜಿಟಿ ದೇವೇಗೌಡ ಮತ್ತುಕುಮಾರಸ್ವಾಮಿ


ಹೆಚ್​​ಡಿಡಿ ಅವರೇ ಉತ್ಸಾಹವೇ ನಮಗೆ ಅಚ್ಚರಿ


ಚಾಮುಂಡಿ ತಾಯಿಗೆ ಹೆಚ್​​ಡಿ ದೇವೇಗೌಡರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇನ್ನೊಂದು ತಿಂಗಳನಲ್ಲಿ ನಾನು ವಾಕ್ ಮಾಡುವ ಶಕ್ತಿಕೊಡು ಎಂದು ತಾಯಿ ಮುಂದೆ ಬೇಡಿದ್ದಾರೆ. ಜನವರಿ ತಿಂಗಳಿನಲ್ಲಿ ಹೆಚ್.ಡಿ ದೇವೇಗೌಡರು ಚಂಡಿಕ ಹೋಮ ನಡೆಸಲಿದ್ದಾರೆ. ಹೆಚ್.ಡಿ ದೇವೇಗೌಡರ ಉತ್ಸಾಹ ನಾವೇ ಅಚ್ಚರಿಗೆ ಒಳಗಾಗಿದ್ದೇವೆ. ಅವರೇ ನಮಗೆ ಪ್ರೇರಣೆ, ಅವರನ್ನ ಸಂತೋಷವಾಗಿಡುವುದೇ ನಮ್ಮ ಸಂತೋಷ ಎಂದರು.


ಜಿಟಿಡಿ ವಿರೋಧಿಗಳಿಗೆ ಹೆಚ್​​ಡಿಡಿ ಎಚ್ಚರಿಕೆ


ಚಾಮುಂಡಿ ಬೆಟ್ಟದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರು, ಜಿ.ಟಿ ದೇವೇಗೌಡರ ನಾಯಕತ್ವದ ಬಗ್ಗೆ ಒಂದೇ ಒಂದು ಅಪಸ್ವರ ಕೇಳಿದರೂ ನಾನು ಸಹಿಸುವುದಿಲ್ಲ. ಅಪಸ್ವರ ಎತ್ತುವವರು ಹೊರಗೆ ಹೋಗಬಹುದು. ಮೈಸೂರು ಜಿಲ್ಲೆಯ ಎಲ್ಲಾ ಉಸ್ತುವಾರಿ ಜಿಟಿಡಿಗೆ ಕೊಟ್ಟಿದ್ದೇವೆ. ಅವರ ನಾಯಕತ್ವದಲ್ಲೇ ಎಲ್ಲಾ ನಡೆಯುತ್ತದೆ. ಅವರ ತೀರ್ಮಾನವೇ ಅಂತಿಮ. ಅವರ ಬಗ್ಗೆ ಕೊಂಕು ಮಾತನಾಡಿದ್ದಾರೆ ನಾನು ಸಹಿಸುವುದಿಲ್ಲ ಎಂದು ಜಿಟಿಡಿ ವಿರೋಧಿಗಳಿಗೆ ಖಡಕ್ ಎಚ್ಚರಿಕೆ ಕೊಟ್ಟರು.


ಇದನ್ನೂ ಓದಿ:  Bharat Jodo Yatra: ರಾಯಚೂರಿಗೆ ಭಾರತ್ ಜೋಡೋ ಯಾತ್ರೆ; ರಾಗಾ ನೀಡಿದ ಗಿಫ್ಟ್ ತಿರಸ್ಕರಿಸಿದ ಮಂತ್ರಾಲಯ ಶ್ರೀಗಳು


ಚಾಮುಂಡಿ ಬೆಟ್ಟದಲ್ಲಿ ಮತ್ತೆ ಭೂ ಕುಸಿತ.


ಚಾಮುಂಡಿ ಬೆಟ್ಟದ ನಂದಿ ಮಾರ್ಗದಲ್ಲಿ ರಸ್ತೆ ಕುಸಿತವಾಗಿದೆ. ವೀಕ್ಷಣಾ ಗೋಪುರದ ಪಕ್ಕದಲ್ಲೇ ರಸ್ತೆ ಕುಸಿದಿದೆ. ಕಳೆದ ಮೂರು ದಿನದಿಂದ ರಾತ್ರಿ ವೇಳೆ ಮಳೆಯಾಗುತ್ತಿರುವ ಹಿನ್ನೆಲೆ ರಸ್ತೆ ಕುಸಿತವಾಗಿದೆ ಎಂದು ತಿಳಿದು ಬಂದಿದೆ. ಈ ಹಿಂದೆ ಕುಸಿತ ಕಂಡಿದ್ದ ಜಾಗದಿಂದ ನೂರು ಮೀಟರ್ ದೂರದಲ್ಲಿ ಮತ್ತೆ ಭೂಕುಸಿತವಾಗಿದೆ.


ಹೆಚ್​​ ಡಿ ದೇವೇಗೌಡ, ಜಿಟಿ ದೇವೇಗೌಡ ಮತ್ತುಕುಮಾರಸ್ವಾಮಿ


ಜೆಡಿಎಸ್​ ತೊರೆಯುವ ನಿರ್ಧಾರದಿಂದ ಹಿಂದೆ ಸರಿದ ಜಿಟಿಡಿ


ಜಿಟಿಡಿ ನಿವಾಸಕ್ಕೆ ಭೇಟಿ ನೀಡಿದ ಹೆಚ್​​ಡಿಡಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಮುನಿಸಿಕೊಂಡಿದ್ದ ಅರಸಿಕೆರೆ ಶಾಸಕ ಶಿವಲಿಂಗೇಗೌಡರು (MLA Shivalingegowda) ಪಕ್ಷದಲ್ಲಿಯೇ ಉಳಿಯುವ ಬಗ್ಗೆ ತೀರ್ಮಾನ ಮಾಡಿದ್ದಾರೆ.


ಇದನ್ನೂ ಓದಿ:  Murugha Swamy Case: ಮನೆಗೆ ಹೋದ ಕೇವಲ ಅರ್ಧ ಗಂಟೆಯಲ್ಲಿ ಹಿಂದಿರುಗಿದ ಸಂತ್ರಸ್ತ ಬಾಲಕಿ 


ಗಳಗಳನೇ ಕಣ್ಣೀರಿಟ್ಟ ಜಿಟಿಡಿ


ಜೆಡಿಎಸ್​​ ಬಿಟ್ಟು ಹೋಗಲ್ಲ ಅಂತ ಜಿ.ಟಿ.ದೇವೇಗೌಡರು ಗಳಗಳನೆ ಕಣ್ಣೀರಿಟ್ಟಿದ್ದಾರೆ. ಗುರುವಾರ ದೇವೇಗೌಡರನ್ನು ಭೇಟಿಯಾದ ಅವರು, ದೇವೇಗೌಡರಿಗೆ ನನ್ನ ಬಗ್ಗೆ ಪ್ರೀತಿ ಇದೆ. ನನ್ನನ್ನು ಮರಿ ದೇವೇಗೌಡ ಎಂದು ಕರೆಯುತ್ತಿದ್ರು. ಜಿಟಿಡಿ ಜೆಡಿಎಸ್ ಪಕ್ಷದಲ್ಲೆ ಇರುತ್ತಾನೆ ಎಂದು ಹೆಚ್.ಡಿ ದೇವೇಗೌಡರು ಹೇಳಿದ್ರು.


ಆದ್ದರಿಂದ ದೇವೇಗೌಡರು ಕಂಡ ಕನಸು ನನಸು ಮಾಡುತ್ತೇವೆ. ಜೆಡಿಎಸ್ ಪಕ್ಷ ಅಧಿಕಾರಕ್ಕೆ ತರುತ್ತೇನೆ. ಕುಮಾರಸ್ವಾಮಿಯವರನ್ನ ಸಿಎಂ ಮಾಡುತ್ತೇನೆ ಎಂದು ಜಿಟಿ ದೇವೇಗೌಡ ಕಣ್ಣೀರಿಟ್ಟಿದ್ದಾರೆ.

top videos
    First published: