HD Devegowda ತಮ್ಮ ಜೀವನದ ಯಶೋಗಾಥೆ, ಅನುಭವಿಸಿದ ಕಷ್ಟ ಬಿಚ್ಚಿಟ್ಟ ದೇವೇಗೌಡರು

ಅಪಪ್ರಚಾರ ಮಾಡಿದೋರಲ್ಲಿ ಕೆಲವರು ಹೋದ್ರು, ಕೆಲವರು ಬದುಕಿದ್ದಾರೆ, ನಾನು ಅವರ ಬಗ್ಗೆ ಮಾತಾಡೋದಿಲ್ಲ, ಯಾರ ಬಗ್ಗೆ ಚರ್ಚೆಯೂ ಮಾಡಲ್ಲ ಎಂದರು. ಎಂಡಿಂಗ್ ಆಫ್ ಲೈಫ್, ಐ ವಿಲ್ ಗೋ ಆಲ್ ಕ್ಲೀನ್, ಐ ವಿಲ್ ಆನ್ಸರ್, ವಾಟ್ ಐ ಡನ್ ಎಂದು ರಾಜಕೀಯ ಜೀವನವನ್ನು ಕೆಲ ಪದಗಳಲ್ಲಿಯೇ ವಿವರಿಸಿದರು.

ಹೆಚ್.ಡಿ.ದೇವೇಗೌಡ

ಹೆಚ್.ಡಿ.ದೇವೇಗೌಡ

  • Share this:
ವಿಜಯಪುರ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು (Former Prime Minister HD Devegowda) ತಾವು ಅನುಭವಿಸಿದ ಕಷ್ಟದ ದಿನಗಳನ್ನು ಮಾಧ್ಯಮಗಳ ಜೊತೆ ಹಂಚಿಕೊಂಡರು. ಜೀವನದಲ್ಲಿ ಹಂತಹಂತವಾಗಿ ಕಷ್ಟಪಟ್ಟು ಮೇಲೆ ಬಂದಿದ್ದೇನೆ. ಜೀವನದಲ್ಲಿ ಯಾರಿಗೂ ನಾನು ದ್ರೋಹ ಮಾಡಿಲ್ಲ. ನನಗೆ ದೇವರ ಮೇಲೆ ಭಕ್ತಿ ಇದೆ, ಅದಕ್ಕೆ ಅನುಗುಣವಾಗಿ ನಡೆದುಕೊಂಡು ಬಂದಿದ್ದೇನೆ. ನನ್ನ ಜೊತೆ ಬಹಳ‌ ಸ್ನೇಹಿತರಿದ್ದರು, ಅವರೆಲ್ಲ ಬಿಟ್ಟು ಹೋಗಿದ್ದಾರೆ. ನಾನು ಅವರ ಬಗ್ಗೆ ಮಾತಾಡೋದಿಲ್ಲ. ನಾನು ಲಿಂಗಾಯತರ (Lingayat) ವಿರೋಧಿ, ಉತ್ತರ ಕರ್ನಾಟಕದ (North Karnataka) ವಿರೋಧಿ ಎಂದೆಲ್ಲ ಅಪಪ್ರಚಾರ ಮಾಡಿದ್ದಾರೆ. ಅಪಪ್ರಚಾರ ಮಾಡಿದೋರಲ್ಲಿ ಕೆಲವರು ಹೋದ್ರು, ಕೆಲವರು ಬದುಕಿದ್ದಾರೆ, ನಾನು ಅವರ ಬಗ್ಗೆ ಮಾತಾಡೋದಿಲ್ಲ, ಯಾರ ಬಗ್ಗೆ ಚರ್ಚೆಯೂ ಮಾಡಲ್ಲ ಎಂದರು. ಎಂಡಿಂಗ್ ಆಫ್ ಲೈಫ್, ಐ ವಿಲ್ ಗೋ ಆಲ್ ಕ್ಲೀನ್, ಐ ವಿಲ್ ಆನ್ಸರ್, ವಾಟ್ ಐ ಡನ್ ಎಂದು ರಾಜಕೀಯ ಜೀವನವನ್ನು ಕೆಲ ಪದಗಳಲ್ಲಿಯೇ ವಿವರಿಸಿದರು.

ಈ ಭಾಗ ಐವತ್ತು ವರ್ಷದ ಹಿಂದೆ ಹೇಗಿತ್ತು ಎಂಬುದು ನನಗೆ ಗೊತ್ತು. ಯಾರ್ಯಾರು ಏನು ಮಾಡಿದ್ರು ಎಂಬುದು ನನಗೆ ಗೊತ್ತಿದೆ. ನಾನು ಎರಡು ಬಾರಿ ಮಂತ್ರಿಯಾಗಿ ರಾಜೀನಾಮೆ ಕೊಟ್ಟೆ. ನನ್ನ ಹೊರಗೆ ಹಾಕಿದ್ರು, ಯಾರು ಏನೂ ಮಾಡೋಕಾಗಿಲ್ಲ, ಮತ್ತೆ ಅವರೇ ನನ್ನ ಬಳಿ ಬಂದ್ರು. ಅದೆಲ್ಲ ವಿಷಯ ಭಗವಂತನ ಆಟದ ಮೇಲೆ ಇದೆ, ಅದು ಭಗವಂತನ ಆಟ‌. ಅವನು ಆಡಿಸ್ತಾನೆ, ಅವನು ಎಷ್ಟು ಕಾಡಿಸ್ತಾನೋ ಅಷ್ಟು ಓಡ್ತಿರ್ತೇವೆ ಅಷ್ಟೆ ಎಂದರು.

ವಿರೋಧಿಗಳಿಗೆ ದೇವೇಗೌಡರ ಗುದ್ದು

ಈ ಭಾಗಕ್ಕೆ ಬೆಳಗಾವಿಯಿಂದ ಹಿಡಿದು ಬೀದರ್ ವರೆಗೆ ಕಾರಂಜಾ ಡ್ಯಾಂ, ಲೋಯರ್ ಮಲ್ಲಾಬಾರಿ, ಅಪ್ಪರ ಮಲ್ಲಾಬಾರಿ, ಮಾರ್ಖಂಡೇಯ, ಗುತ್ತಿ ಬಸವಣ್ಣ ಸೇರಿದಂತೆ ಅನೇಕ ಯೋಜನೆಗಳನ್ನು ಮಾಡಿದ್ದೇನೆ. ನನ್ನ ತಲೆಯಲ್ಲಿ ಎನ್ ಸೈಕ್ಲೋಪಿಡಿಯಾ ಇದೆ, ಅದರಿಂದ ನಾನು ಮಾಡಿದ್ದೇನೆ. ಎಲ್ಲವನ್ನೂ ಭಗವಂಥ ನೋಡ್ತಾನೆ, ಹೊಟ್ಟೆಗೆ ಅನ್ನವಿಲ್ಲದೆ ಜನರು ಕೂಲಿ ಹೋಗ್ತಿದ್ರು. ವಾರಕ್ಕೊಮ್ಮೆ ಸ್ನಾನ ಮಾಡ್ತಿದ್ರೋ ಇಲ್ಲೊ ಗೊತ್ತಿಲ್ಲಾ. ಅಂತಹ ಕೆಟ್ಟ ಸ್ಥಿತಿ ಇತ್ತು, ಹಾಗಾಗಿ ಈ ಭಾಗ, ಆ ಭಾಗ ಎಂದು ಪಾಪದ ಹೊರೆ ಹೊತ್ಕೊಂಡು ಹೋಗೋಕೆ ನಾನು ತಯಾರಿಲ್ಲ ಎಂದು ವಿರೋಧಿಗಳ ಹೇಳಿಕೆಗೆ ತಿರುಗೇಟು ನೀಡಿದರು.

ಇದನ್ನೂ ಓದಿ:  HD Devegowda: ಮಾಜಿ ಪ್ರಧಾನಿಗೆ ಅನಾರೋಗ್ಯ; ವಿಜಯಪುರದಲ್ಲಿ ದೇವೇಗೌಡರಿಗೆ ಪಿಜಿಯೋಥೆರಪಿ, ಮಸಾಜ್ ಟ್ರೀಟ್ಮೆಂಟ್

ಜಮೀರ್ ವಿರುದ್ಧ ಮಾತಿನ ಚಾಟಿ

ಯಾರು ಏನು ಬೇಕಾದ್ರೂ ಮಾತಾಡಿಕೊಳ್ಳಿ, ನಾನು ಯಾವ ಸಮಾಜಕ್ಕೆ ಅನ್ಯಾಯ ಮಾಡಿದ್ದೇನೆ?. ಕುರುಬರಿಗಾ, ಮುಸ್ಲಿಮರಿಗಾ, ಹರಿಜನರಿಗಾ, ಗಿರಿಜನರಿಗಾ, ನಾಯಕ‌ ಸಮುದಾಯಕ್ಕಾ? ಯಾರಿಗೆ ಅನ್ಯಾಯ ಮಾಡಿದ್ದೇನೆ?. ನಾನು ಮುಸ್ಲಿಮರನ್ನು ಎರಡು ಬಾರಿ ಅಧ್ಯಕ್ಷರನ್ನಾಗಿಸಿದ್ದೇನೆ. ಏಳು ಜನರಿಗೆ ಅಧಿಕಾರ ಕೊಟ್ಟಿದ್ದೇನೆ. ದಯಮಾಡಿ ಯಾರೂ ತಪ್ಪು ತಿಳಿದುಕೊಳ್ಳೋ ಅವಶ್ಯಕತೆ ಇಲ್ಲ ಎಂದು ಮಾತಿನಲ್ಲೇ ಮಾಜಿ ಸಚಿವ ಜಮೀರ್ ಅಹ್ಮದ್ ಗೆ ಟಾಂಗ್ ಕೊಟ್ಟರು

ಇದನ್ನೂ ಓದಿ:  HDK ವಿರುದ್ಧ ವೈಯುಕ್ತಿಕ ನಿಂದನೆ: ಯಾರೂ ಈ ಮಟ್ಟಕ್ಕೆ ಇಳಿಯಬಾರದು ಎಂದು ವಿನಂತಿಸಿಕೊಂಡ ದೇವೇಗೌಡರು

ಈ ಭಾಗದಿಂದಲೇ ಪ್ರವಾಸ ಆರಂಭ

ಅವರವರಿಗೆ ಏನೋ ಆಸೆ ಬಂದಿರುತ್ತೆ, ಮಂತ್ರಿಯೋ, ಮುಖ್ಯಮಂತ್ರಿಯೋ ಅದು ಇದು ಅಂತ ಆಸೆ ಇರುತ್ತೆ. ಅವರು ಏನೇನು ಆಗಬೇಕು ಅನ್ಕೊಂಡಿದಾರೋ ಅದು ಆಗಲಪ್ಪಾ. ನನ್ನದು ಸೆಟಿಸ್ಫೈಡ್ ಟೈಮ್ ಇದೆ, ಪಕ್ಷ ಉಳಿಸಬೇಕು ಅಷ್ಟೆ, ಎಲ್ಲರ ಹತ್ತಿರ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಚುನಾವಣಾ ಫಲಿತಾಂಶ ಏನೇ ಬರಲಿ, ನಾನು ಮತ್ತೆ ಈ‌ ಭಾಗದಿಂದಲೇ ಪ್ರವಾಸ ಶುರು ಮಾಡುತ್ತೇನೆ. ಈ ಆರೇಳು ಜಿಲ್ಲೆಗಳಿಗೆ ನಾನು ಏನು ಮಾಡಿದ್ದೇನೆ ಎಂಬುದನ್ನು ಜನಗಳ ಮುಂದೆ ಹೇಳಿ, ಅವರ ಮನಸಲ್ಲಿರುವ ತಪ್ಪು ತಿಳುವಳಿಕೆ ಹೋಗಲಾಡಿಸುತ್ತೇನೆ ಎಂದು ತಿಳಿಸಿದರು.

ನನ್ನ ಮೇಲೆ ತಪ್ಪು ತಿಳುವಳಿಕೆ ಬರುವಂತೆ ಮಾಡಿದವರ ಹೆಸರನ್ನೂ ಹೇಳುತ್ತೇನೆ. ಈ ಭಾಗದಲ್ಲಿ ನಾನು ಸುತ್ತುತ್ತೇನೆ, ಈ ಭಾಗಕ್ಕೆ ಏನು ಮಾಡಿದ್ದೇನೆ ಎಂದು ಗೊತ್ತಿದೆ. ಕಾವೇರಿಗೆ ನಾನು ಏನು ಕೊಟ್ಟಿದ್ದೇನೆ? ಈ ಭಾಗಕ್ಕೆ ೨೩ ಸಾವಿರ ಹಣ ಕೊಟ್ಟಿದ್ದೇನೆ ಎಂದರು.
Published by:Mahmadrafik K
First published: