ಇಂಥ ಸಮಯದಲ್ಲಿ ನಾನು ಸಂಸತ್ತಿನಲ್ಲಿ ಇಲ್ಲದಿರುವುದಕ್ಕೆ ಮನಸ್ಸು ನೊಂದಿದೆ; ಎಚ್.ಡಿ.ದೇವೇಗೌಡ ಭಾವುಕ ನುಡಿ

ವಿಕಾಸ್ ಆಯ್ತು ಈಗ ವಿಶ್ವಾಸ್ ಅಂತಿದ್ದಾರೆ ಮೋದಿ. ಸಿಎಎ, ಎನ್​ಆರ್​ಸಿ ಕಾನೂನು ತಂದು ಸಬ್ ಕೋ ವಿಶ್ವಾಸ ಅಂತೀರಾ. ದೇಶ ಇಬ್ಬಾಗವಾದಾಗ ಏನೇನಾಯ್ತು? ಎಲ್ಲಿಗೆ ಕಳುಹಿಸುತ್ತೀರಿ ಮುಸ್ಲಿಂಮರನ್ನು. ಜಾತ್ಯತೀತ ಶಕ್ತಿಗಳನ್ನು ಒಂದುಗೂಡಿಸಿಕೊಂಡು ಹೋದರೆ ಈ ಕೆಟ್ಟ ಶಕ್ತಿಯನ್ನು ಹೊಡೆದೋಡಿಸಲು ಸಾಧ್ಯ ಎಂದರು.

news18-kannada
Updated:January 10, 2020, 9:39 PM IST
ಇಂಥ ಸಮಯದಲ್ಲಿ ನಾನು ಸಂಸತ್ತಿನಲ್ಲಿ ಇಲ್ಲದಿರುವುದಕ್ಕೆ ಮನಸ್ಸು ನೊಂದಿದೆ; ಎಚ್.ಡಿ.ದೇವೇಗೌಡ ಭಾವುಕ ನುಡಿ
ಎಚ್.ಡಿ. ದೇವೇಗೌಡ
  • Share this:
ಬೆಂಗಳೂರು: ಕೆಲವರು ದೇವೇಗೌಡ ಮುಸ್ಲಿಮರಿಗೆ ಹುಟ್ಟಿದವನು ಎಂದು ಕರ್ನಾಟಕದಲ್ಲಿ ಭಾಷಣ ಮಾಡಿದ್ದಾರೆ. ಮನೆಯಲ್ಲಿ ಮಲಗಿದ್ರೆ ಕಣ್ಣಲ್ಲಿ ನೀರು ಬರುತ್ತೆ ನನಗೆ. ನಾನು ಇಂಥ ಸಮಯದಲ್ಲಿ ಪಾರ್ಲಿಮೆಂಟ್‌ನಲ್ಲಿ ಇಲ್ಲ ಅಂತಾ ಮನಸ್ಸು ನೊಂದಿದೆ ಎಂದು ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ಅವರು ಭಾವುಕವಾಗಿ ಮಾತನಾಡಿದರು.

ಬೆಂಗಳೂರಿನ ಬಾಗಲಗುಂಟೆ ಎಂಇಐ ಆಟದ ಮೈದಾನದಲ್ಲಿ ಆಯೋಜಿಸಲಾಗಿದ್ದ ಸಿಎಎ ವಿರುದ್ಧ ಕಾರ್ಯಕ್ರಮದಲ್ಲಿ ಮಾತನಾಡಿದ ದೇವೇಗೌಡರು, ಮುಸ್ಲಿಂ ಸಮಾಜದಲ್ಲಿ ನಾನು ಒಬ್ಬ ಪ್ರಾಮಾಣಿಕ ವ್ಯಕ್ತಿಯನ್ನು ಬೆಳಸಲಿಲ್ಲ. ಜಮೀರ್, ಅಜೀದ್ ಎಲ್ಲಿದ್ದಾರೆ ಇವತ್ತು. ಕಾಲ ಬರುತ್ತೆ, ನಿಮ್ಮಂಥವರ ಹೋರಾಟಕ್ಕೆ ನಿಲ್ಲುತ್ತೇನೆ. ಕಾಂಗ್ರೆಸ್ ಮುಕ್ತ ಭಾರತ ಮಾಡ್ತಿನಿ ಅಂತಾ ಮೋದಿಯವರು ಐದು ವರ್ಷ ಪಾರ್ಲಿಮೆಂಟ್‌ನಲ್ಲಿ ಹೇಳಿದ್ರು.  ಸಂದರ್ಭಕ್ಕೆ ತಕ್ಕಂತೆ ಪದ ಪ್ರಯೋಗ ಮಾಡುವ ಜಾಣ್ಮೆ ಮೋದಿ ಅವರಲ್ಲಿದೆ. ವಲ್ಲಭಬಾಯಿ ಪಟೇಲ್ ವಿಷಯವನ್ನು ಯಾವ ರೀತಿ ಬಳಸಿದ್ದಾರೆ ಅನ್ನೋದು ನನಗೆ ಗೊತ್ತಿದೆ. ಕಾಂಗ್ರೆಸ್‌ ವಿಸರ್ಜನೆ ಮಾಡೋವಾಗ ಗಾಂಧಿ ಹೇಳಿದ ಹೇಳಿಕೆಯನ್ನು ತಿರುಚಿದ್ದಾರೆ. 18 ಜನ ಐಪಿಎಸ್ ಅಧಿಕಾರಿಗಳು ಜೈಲಿನಲ್ಲಿದ್ದರು, ಏನಾಯ್ತು? ಎಂದು ರಾಜಕೀಯ ಇತಿಹಾಸ ತೆರೆದಿಟ್ಟರು.

ದೇಶದಲ್ಲಿ ಮುಸ್ಲಿಂ ಒಂದು ಸಮಾಜವನ್ನು ಮಾತ್ರ ಕೈ ಬಿಟ್ಟಿದ್ದಾರೆ. ಮುಸ್ಲಿಮರನ್ನು ಯಾಕೆ ಬಿಟ್ಟರು ಎಂದು ವೇದಿಕೆ ಟೇಬಲ್‌ ಕುಟ್ಟಿ ಕೇಳಿದ ದೇವೇಗೌಡರು, ಸಾವರ್ಕರ್, ಗೋಲ್ವಾಕರ್ ಅಜೆಂಡಾನ ತರುವ ಹಂಬಲ ಇವರಲ್ಲಿದೆ. ಈ ಶರೀರ ಬಿದ್ದು ಹೋಗುವವರೆಗೂ ದೇಶದ ಇಂತಹ ವ್ಯವಸ್ಥೆ ವಿರುದ್ದ ಹೋರಾಟ ಮಾಡ್ತೀನಿ ಎಂದು ಶಪಥ ಮಾಡಿದರು. ಕಾಂಗ್ರೆಸ್ ಮುಕ್ತ ಭಾರತ ಮಾಡ್ತಿನಿ ಅಂದ್ರು. ಕುಮಾರಸ್ವಾಮಿ ಮುಖ್ಯಮಂತ್ರಿ ಮಾಡಿ ಅಂದ್ರು. ನಾನು ಖರ್ಗೆ ಮುಖ್ಯಮಂತ್ರಿ ಮಾಡಿ ಅಂದೆ. ಯಡಿಯೂರಪ್ಪ ನಾವು ಶಾಶ್ವತವಾಗಿ ಇರ್ತಿವಿ ಅಂದುಕೊಂಡಿದ್ದಾರೆ ಎಂದರು.

ಮಂಗಳೂರಿನ ಗಲಭೆ ಬಗ್ಗೆ ಕುಮಾರಸ್ವಾಮಿ‌ ಸಿಡಿ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಪೊಲೀಸರ ದೌರ್ಜನ್ಯ ಹೇಗಿದೆ ಅಂದರೆ ಅಮಾಯಕರನ್ನು ಹೊಡೆಯುವಂಥದ್ದು,  ಪ್ರಚೋದನೆ ಮಾಡುವ ಕೆಲಸ ಪೊಲೀಸರು ಮಾಡಿದ್ದಾರೆ. ಮಂಗಳೂರಿನಲ್ಲಿ ಪೊಲೀಸರು ಅಮಾಯಕರನ್ನು ಹೊಡೆದು ಪ್ರಚೋದನೆ ಮಾಡಿ, ಇನ್ನೂ ಹೆಣ ಬಿದ್ದಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ. ಇವರ ಯೋಗ್ಯತೆಗೆ ಸತ್ತವರಿಗೆ ಪರಿಹಾರ ಕೊಟ್ಟಿಲ್ಲ.  ಮಂಗಳೂರಿಗೂ ಕುಮಾರಸ್ವಾಮಿಗೆ ಏನ್ ಸಂಬಂಧ ಎಂದು ಒಬ್ಬ ಸಂಸದರು ಕೇಳುತ್ತಾರೆ ಎಂದು ಶೋಭಾ ಕರಂದ್ಲಾಜೆ ಹೆಸರೇಳದೆ ವಿಷಯ ಪ್ರಸ್ತಾಪಿಸಿದರು.

ವಿಕಾಸ್ ಆಯ್ತು ಈಗ ವಿಶ್ವಾಸ್ ಅಂತಿದ್ದಾರೆ ಮೋದಿ. ಸಿಎಎ, ಎನ್​ಆರ್​ಸಿ ಕಾನೂನು ತಂದು ಸಬ್ ಕೋ ವಿಶ್ವಾಸ ಅಂತೀರಾ. ದೇಶ ಇಬ್ಬಾಗವಾದಾಗ ಏನೇನಾಯ್ತು? ಎಲ್ಲಿಗೆ ಕಳುಹಿಸುತ್ತೀರಿ ಮುಸ್ಲಿಂಮರನ್ನು. ಜಾತ್ಯತೀತ ಶಕ್ತಿಗಳನ್ನು ಒಂದುಗೂಡಿಸಿಕೊಂಡು ಹೋದರೆ ಈ ಕೆಟ್ಟ ಶಕ್ತಿಯನ್ನು ಹೊಡೆದೋಡಿಸಲು ಸಾಧ್ಯ. ಎರಡು ಸದನದಲ್ಲಿ ಪಾಸ್ ಹಾಗಿರೋದನ್ನು ಹೇಗೆ ಅಳಿಸಲಾಗುತ್ತೆ ಅಂತ ಒಬ್ಬ ಸುಪ್ರಿಂ ಕೋರ್ಟ್ ಜಡ್ಜ್ ಹೇಳುತ್ತಾರೆ.  ಈ ದೇಶದಲ್ಲಿ ಶಾಂತಿಯಿಲ್ಲ ಅಂತಾ ಹೇಳ್ತಾರೆ. ನಾನು ಕಾನೂನಿನ ಬಗ್ಗೆ ಹೆಚ್ಚು ಮಾತಾಡೋಕೆ ಹೋಗಲ್ಲ ಎಂದರು.

ಇದನ್ನು ಓದಿ: ಮಂಗಳೂರು ಗಲಭೆಯಲ್ಲಿ ಪೊಲೀಸರ ದೌರ್ಜನ್ಯದ ಹೊಸ ವಿಡಿಯೋ ಬಿಡುಗಡೆ ಮಾಡಿದ ಮಾಜಿ ಸಿಎಂ ಎಚ್​ಡಿಕೆ

ಮಂಗಳೂರು ಗಲಭೆ ಆಗಿ ಎಷ್ಟು ಅನಾಹುತ ಆಗಿದೆ. ಮ್ಯಾಜಿಸ್ಟ್ರೆತ್ ತನಿಖೆ ಮಾಡುತ್ತೆ, ಡಿಸಿ ತನಿಖೆ ಮಾಡುತ್ತಾರೆ ಅಂತಾ ಹೇಳಿದ್ರು. ಎಸ್‌ಐಟಿ ತನಿಖೆ ಮಾಡಸಬಹುದಿತ್ತು. ಆದರೆ, ಡಿಸಿ ತನಿಖೆ ಮಾಡಿದ್ದಾರೆ. ಸಿಡಿ ಬಿಡುಗಡೆ ವಿಷ್ಯದಲ್ಲಿ ಯಾವುದೇ ರಾಜಿಯಾಗೊದಿಲ್ಲ ಎಂದು ತೀರ್ಮಾನ ಮಾಡಿ ಹೇಳಿದ್ದಾರೆ. ಕುಮಾರಸ್ವಾಮಿ ಸದನದಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೀನಿ ಅಂತ ಹೇಳಿದ್ದಾರೆ. ಆಗ ಕಾಂಗ್ರೆಸ್ ,ಬಿಜೆಪಿಯವರು ಏನ್ ಮಾಡ್ತಾರೆ ಅನ್ನೋದನ್ನು ನೋಡೋಣ. ಅವರು ತಪ್ಪಿತಸ್ಥರೋ ಇಲ್ಲವೋ ಅಂತಾನೂ ತನಿಖೆಯಲ್ಲಿ ಹೇಳಿಲ್ಲ.  ಸತ್ತವರಿಗೆ ಪರಿಹಾರಾನೂ ಕೊಟ್ಟಿಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ದ ದೇವೇಗೌಡರು ಗುಡುಗಿದರು.
First published:January 10, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ