• Home
  • »
  • News
  • »
  • state
  • »
  • ಯಾವುದೇ ಮೈತ್ರಿ ಇಲ್ಲ; ಪಕ್ಷ ಉಳಿಸಲು ಶಕ್ತಿ ಮೀರಿ ಕೆಲಸ ಮಾಡುತ್ತೇನೆ; HD Devegowda

ಯಾವುದೇ ಮೈತ್ರಿ ಇಲ್ಲ; ಪಕ್ಷ ಉಳಿಸಲು ಶಕ್ತಿ ಮೀರಿ ಕೆಲಸ ಮಾಡುತ್ತೇನೆ; HD Devegowda

ಹೆಚ್.ಡಿ.ದೇವೇಗೌಡ

ಹೆಚ್.ಡಿ.ದೇವೇಗೌಡ

ಕರ್ನಾಟಕದ ರಾಜಕಾರಣವೇ ಬೇರೆ. ಈ ಮಾತುಗಳನ್ನು ಬಿಎಸ್ ವೈ ಅವರೇ ಹೇಳಿದ್ದಾರೆ. ಕರ್ನಾಟಕದ ರಾಜಕಾರಣ ಅಷ್ಟು ಸುಲಭವಲ್ಲ.

  • Share this:

    ಪಂಜಾಬ್ (Punjab) ಹೊರತುಪಡಿಸಿ ಬೇರೆಡೆ ಬಿಜೆಪಿ ಬಂದಿದೆ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಪಕ್ಷ ಕಾಂಗ್ರೆಸ್. ಸೋನಿಯಾರನ್ನು (Sonia Gandhi) ಪಿಎಂ ಮಾಡಬೇಕು ಎಂದಾಗಿತ್ತು. ಆದರೆ ಸೋನಿಯಾ ಗಾಂಧಿ ಬೇಡ ಎಂದರು. ಮನಮೋಹನ್ ಸಿಂಗ್ ಹತ್ತು ವರ್ಷ ಪಿಎಂ ಆದರು. ಆಗಿನ ಬೆಳವಣಿಗೆಯಿಂದ ಬಿಜೆಪಿ (BJP) ಅಧಿಕಾರಕ್ಕೆ ಬಂತು ಎಂದು ಮಾಜಿ ಪ್ರಧಾನಿ ಎಚ್​ಡಿ ದೇವೇಗೌಡ (HD Deve Gowda) ಅವರು ತಿಳಿಸಿದ್ದಾರೆ.  ಪಂಚರಾಜ್ಯ ಚುನಾವಣೆ ಫಲಿತಾಂಶದ ಬಳಿಕ ಜೆಡಿಎಸ್ (JDS)​​ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಬ್ಬ ಕನ್ನಡಿಗ ಪ್ರಧಾನಿ ಆಗಿದ್ದನ್ನು ಸಹಿಸಲಿಲ್ಲ. ಈ ಪಕ್ಷ ಉಳಿಸಲು ಶಕ್ತಿ ಮೀರಿ ಕೆಲಸ ಮಾಡ್ತೀನಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.


    10ವರೆ ತಿಂಗಳು ಈ ದೇಶವನ್ನು ಆಳಿದ್ದೇನೆ. ಪಕ್ಷದ ಮುಖಂಡರು, ಶಾಸಕರು ಎಲ್ಲಾ ಸೇರಿ ಕೆಲಸ ಮಾಡಬೇಕು. ಅದಕ್ಕಾಗಿಯೇ 20 ರಂದು ಎಲ್ಲರನ್ನು ಕರೆದು ಸಭೆ ನಡೆಸಲು ನಿರ್ಧಾರಿಸಲಾಗಿದೆ. ಈ ಸಭೆಯಲ್ಲಿ ಹೋರಾಟದ ಕುರಿತು ಕಾರ್ಯಕ್ರಮ ರೂಪಿಸುತ್ತೇವೆ. ಈ ವೇಳೆ ಎಲ್ಲರಿಗೂ ಒಂದಿಷ್ಟು ಜವಬ್ದಾರಿ ಕೊಡಲಾಗುತ್ತದೆ. ಆ ಮೂಲಕ ಮುಂಬರುವ ಚುನಾವಣೆಗಳು ಹಾಗೂ ಪಕ್ಷ ಬಲವರ್ಧನೆಗೆ ಒತ್ತು ನೀಡಲಾಗುತ್ತದೆ. ಡೆರಡು ಜಿಲ್ಲೆಗೆ ಒಂದು ಸಭೆ ಮಾಡುತ್ತೇವೆ. ಈ ಪಕ್ಷ ಉಳಿಸುವ ಕೆಲಸ ಮಾಡುತ್ತೇವೆ ಎಂದರು.


    ಯಾವುದೇ ಮೈತ್ರಿ ಇಲ್ಲ
    ಇನ್ನು ಇದೇ ವೇಳೆ ಚುನಾವಣಾ ಪೂರ್ವ ಮೈತ್ರಿ ಕುರಿತು ಮಾತನಾಡಿದ ಅವರು, ಎರಡು ಪಕ್ಷಗಳ ವಿರುದ್ಧ ನಾವು ನಮ್ಮ ಅಭ್ಯರ್ಥಿಗಳನ್ನ ಕಣಕ್ಕೀಳಿಸುತ್ತೇವೆ. ಯಾವುದೇ ಮೈತ್ರಿ ಇಲ್ಲ. ನಾವು ಏಕಾಂಗಿಯಾಗಿ ಹೋರಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.


    ನಮ್ಮ ಸರ್ಕಾರದ ಸಾಧನೆ ಕುರಿತು ಜನರಿಗೆ ತಿಳಿಸುತ್ತೇವೆ
    ನಮ್ಮ ಸರ್ಕಾರದಲ್ಲಿ 25 ಸಾವಿರ ಕೋಟಿ ಸಾಲ ಮನ್ನಾ ಮಾಡಿ ಬಡವರಿಗೆ ಅನುಕೂಲ ಮಾಡಿದ್ದರು. ಸಭೆಯಲ್ಲಿ ಕುಮಾರಸ್ವಾಮಿ ಅವರು, ಪ್ರತಿಯೊಂದು ವಿಚಾರವನ್ನು ಅಂಕಿ ಅಂಶ ಸಮೇತ ಹೇಳಿದ್ದಾರೆ. ಕುಮಾರಸ್ವಾಮಿಯವರು ಅನಾವಶ್ಯಕ ಕಾಲ ಕಳೆಯಲ್ಲ. ವಿಷಯದ ಮಹತ್ವ ಇದ್ದ ಕಾರಣ ಐದುವರೆ ಗಂಟೆ ಮಾತಾಡಿದ್ದಾರೆ. ಬಿಜೆಪಿ ಜೊತೆ ಹೋದರೆ ನಗೆಪಾಟಲು. ಅವರು ನಮ್ಮ ಹಲವಾರು ಸೀಟು ಗೆದ್ದಿದ್ದಾರೆ. ಬಿಜೆಪಿಯಿಂದ ನಮ್ಮ ಸೀಟುಗಳು ಕೈ ಬಿಟ್ಟು ಹೋಗಿವೆ ಅದಕ್ಕಾಗಿ ಹೋರಾಟ ಮಾಡುತ್ತೇವೆ. ಜನರ ಮುಂದೆ ಹೋಗಿ ನಾನು ಮಾಡಿದ ಕೆಲಸ ಹೇಳುತ್ತೇನೆ. ಯಾರೋ‌ ನಮ್ಮ ಪಕ್ಷದಿಂದ ಓಡಿ ಹೋಗುತ್ತಾರೆ ಎಂದು ಅವರನ್ನು ಕಟ್ಟಿ ಹಿಡಿದುಕೊಳ್ಳಲು ಆಗಲ್ಲ. ಹೋಗುವವರು ಹೋಗಲಿ ಎಂದು ಪಕ್ಷ ತೊರೆಯುವವರಿಗೆ ಎಚ್ಚರಿಕೆ ನೀಡಿದರು.


    ಕನ್ನಡಿಗ ಪ್ರಧಾನಿಯಾಗಿದ್ದನ್ನು ಸಹಿಸಲಿಲ್ಲ


    ನಾನು ಪ್ರಧಾನಿ ಆದಾಗ ನಮ್ಮದೇ ಸರ್ಕಾರ ಇತ್ತು. ಈ ರಾಜ್ಯದಲ್ಲಿ ತುಳಿತಕ್ಕೆ ಒಳಪಟ್ಟ ಒಂದೊಂದು ಸಮಾಜವನ್ನೂ ಗುರುತಿಸಿದ್ದೇವೆ . ಈದ್ಗಾ ಮೈದಾನ, ಮುಸ್ಲಿಂ ಸಮಾಜ ಈಗೆ ಅನೇಕ ಕೆಲಸ ಮಾಡಿದ್ದೇವೆ. ಈ ಶ್ರಮದಿಂದಲೇ 16 ಸೀಟು ಬಂತು. ಒಬ್ಬ ಕನ್ನಡಿಗ ಪ್ರಧಾನಿಯಾಗಿದ್ದನ್ನ ಸಹಿಸಲಿಲ್ಲ. ನಾನು ಮತ್ತೆ ಪ್ರಧಾನಿ ಆಗಬೇಕು ಅಂತೇನಿಲ್ಲ. ಆದರೆ ಪಕ್ಷ ಉಳಿಸಲು ನಾನು ಶಕ್ತಿ‌ಮೀರಿ‌ ಕೆಲಸ ಮಾಡುತ್ತೇನೆ ಎಂದರು.


    ಕರ್ನಾಟಕದ ರಾಜಕಾರಣ ಬೇರೆ
    ಅವಧಿಗೂ ಮುನ್ನ ಚುನಾವಣೆ ಬರಬಹುದಾ ಎಂಬ ಕುರಿತು ಮಾತನಾಡಿದ ಅವರು, ಯಾಕೆ ಅಗಬಾರದು. ಬರಲಿ ನಾವು ಚುನಾವಣಾ ಎದರಿಸಲು ರೆಡಿ. ಆದರೆ ಅಷ್ಟು ಸುಲಭವಲ್ಲ ಜೊತೆ ಯಡಿಯೂರಪ್ಪ ಸಹ ಇದೇ ಮಾತನ್ನ ಹೇಳಿದ್ದಾರೆ. ಜೊತೆಗೆ ಯಶಸ್ವಿಯಾಗೋದು ಸುಲಭವಲ್ಲ . ಯಶಸ್ವಿ ಆಗಿತ್ತೇವೆ ಎಂದು ನಾಳೆಯೇ ಚುನಾವಣೆ ಮಾಡಲು ಸಾಧ್ಯವಿಲ್ಲ. ಕರ್ನಾಟಕದ ರಾಜಕಾರಣವೇ ಬೇರೆ. ಈ ಮಾತುಗಳನ್ನು ಬಿಎಸ್ ವೈ ಅವರೇ ಹೇಳಿದ್ದಾರೆ. ಕರ್ನಾಟಕದ ರಾಜಕಾರಣ ಅಷ್ಟು ಸುಲಭವಲ್ಲ ಎಂದರು.

    Published by:Seema R
    First published: