ಮಹಾರಾಷ್ಟ್ರ ರಾಜಕಾರಣ​ ಕರ್ನಾಟಕಕ್ಕೂ ಅನ್ವಯಿಸುತ್ತೆ; ಫಲಿತಾಂಶದ ಬಳಿಕ ಏನು ಬೇಕಾದರೂ ಆಗಬಹುದು; ದೇವೇಗೌಡ

ವಿಶ್ವನಾಥ್ ಒಬ್ಬ ಸೀಸನ್ ಪಾಲಿಟಿಷಿಯನ್. ನನ್ನ ಬಗ್ಗೆಯೂ ವಿಶ್ವನಾಥ್​ ಹೊಗಳಿದ್ದಾರೆ. ಸಿದ್ದರಾಮಯ್ಯ ಬಗ್ಗೆಯೂ ಹೊಗಳಿದ್ದಾರೆ.  ಜನ ಇದೆಲ್ಲವನ್ನೂ ಅರ್ಥ ಮಾಡಿಕೊಂಡಿದ್ದಾರೆ. ಜನ ಇದನ್ನು ಅರ್ಥ ಮಾಡಿಕೊಳ್ಳದ ಸ್ಥಿತಿಯಲ್ಲಿದ್ದಾರೆ ಅಂದುಕೊಳ್ಳುದು ತಪ್ಪು ಎಂದು ವ್ಯಂಗ್ಯ ಮಾಡಿದರು.

Latha CG | news18-kannada
Updated:November 27, 2019, 12:18 PM IST
ಮಹಾರಾಷ್ಟ್ರ ರಾಜಕಾರಣ​ ಕರ್ನಾಟಕಕ್ಕೂ ಅನ್ವಯಿಸುತ್ತೆ; ಫಲಿತಾಂಶದ ಬಳಿಕ ಏನು ಬೇಕಾದರೂ ಆಗಬಹುದು; ದೇವೇಗೌಡ
ಹೆಚ್.ಡಿ. ದೇವೇಗೌಡ
  • Share this:
ಮೈಸೂರು(ನ.27): ಮಹಾರಾಷ್ಟ್ರ ರಾಜಕಾರಣ ಕರ್ನಾಟಕಕ್ಕೂ ಅನ್ವಯವಾಗುತ್ತದೆ. ಕರ್ನಾಟಕದಲ್ಲೂ ಏನೂ ಬೇಕಾದರೂ ಆಗಬಹುದು. ಉಪಚುನಾವಣೆ ಬಳಿಕ ಏನಾಗುತ್ತೆಂದು ಕಾದು ನೋಡಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ರಾಜಕೀಯ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿದರು. "ದೇಶದ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಕರ್ನಾಟಕದ ರಾಜಕಾರಣಕ್ಕೂ ಇದು ಅನ್ವಯವಾಗುತ್ತದೆ. ಉಪಚುನಾವಣೆ ಫಲಿತಾಂಶ ನಂತರ ಕರ್ನಾಟಕದಲ್ಲೂ ಏನೇನು ಬದಲಾವಣೆ ಆಗುತ್ತೆ ನೋಡೋಣ. ಫಲಿತಾಂಶ ಬಂದ ಮೇಲೆ ಸೋನಿಯಾಗಾಂಧಿ ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವುದನ್ನೂ ನೋಡೋಣ," ಎಂದರು.

ಬಿಜೆಪಿ 15 ಕ್ಷೇತ್ರಗಳಲ್ಲಿ ಒಂದನ್ನೂ ಗೆಲ್ಲುವುದು ಕಷ್ಟ; ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​

ಇದೇ ವೇಳೆ, ಹುಣಸೂರು ಬಿಜೆಪಿ ಅಭ್ಯೃರ್ಥಿ ಹೆಚ್​.ವಿಶ್ವನಾಥ್​ ವಿರುದ್ಧ ದೇವೇಗೌಡರು ವಾಗ್ದಾಳಿ ನಡೆಸಿದರು. ವಿಶ್ವನಾಥ್ ಒಬ್ಬ ಸೀಸನ್ ಪಾಲಿಟಿಷಿಯನ್. ನನ್ನ ಬಗ್ಗೆಯೂ ವಿಶ್ವನಾಥ್​ ಹೊಗಳಿದ್ದಾರೆ. ಸಿದ್ದರಾಮಯ್ಯ ಬಗ್ಗೆಯೂ ಹೊಗಳಿದ್ದಾರೆ.  ಜನ ಇದೆಲ್ಲವನ್ನೂ ಅರ್ಥ ಮಾಡಿಕೊಂಡಿದ್ದಾರೆ. ಜನ ಇದನ್ನು ಅರ್ಥ ಮಾಡಿಕೊಳ್ಳದ ಸ್ಥಿತಿಯಲ್ಲಿದ್ದಾರೆ ಅಂದುಕೊಳ್ಳುದು ತಪ್ಪು ಎಂದು ವ್ಯಂಗ್ಯ ಮಾಡಿದರು.

ಮತಕ್ಕಾಗಿ ಈ ರೀತಿ ಮಾತನಾಡುತ್ತಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತು. ಈಗ ನಮ್ಮಂತ ನಾಯಕರನ್ನು ಟೀಕೆ ಮಾಡಿದರೆ ಅದು ಚುನಾವಣೆ ಮೇಲೆ ಪರಿಣಾಮ ಬಿರುತ್ತೆ ಎನ್ನುವುದು ವಿಶ್ವನಾಥ್‌ಗೆ ಗೊತ್ತಿದೆ. ಹೀಗಾಗಿ ಈ ರೀತಿ ಮಾತನಾಡುತ್ತಿದ್ದಾರೆ.  ಆದರೆ ಅವರ ಹೃದಯದಲ್ಲಿರೋದೇ ಬೇರೆ.  ವಿಶ್ವನಾಥ್​ ಜನರ ಮುಂದೆ ಹೇಳೋದೇ ಬೇರೆ," ಎಂದು ಕಿಡಿಕಾರಿದರು.

ಮಹಾರಾಷ್ಟ್ರದಲ್ಲಿ ಶಿವಸೇನಾ ಜೊತೆ ಮೈತ್ರಿಗೆ ರಾಹುಲ್ ಗಾಂಧಿ ಅಸಮಾಧಾನ? ಪ್ರಮಾಣವಚನ ಸಮಾರಂಭಕ್ಕೆ ಗೈರು ಸಾಧ್ಯತೆ

First published: November 27, 2019, 12:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading