ಬೆಂಗಳೂರು (ಆ. 22): ಮೇಕೆದಾಟು ಹಾಗೂ ಮಹದಾಯಿ ಯೋಜನೆ ಅನುಷ್ಠಾನಕ್ಕಾಗಿ ಜೆಡಿಎಸ್ ಪಾದಯಾತ್ರೆ ನಡೆಸಲಿದೆ ಎಂದು ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಮಂಡಲ ಅಧಿವೇಶನ ಮುಗಿದ ಬಳಿಕ ಈ ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿದೆ. ಇದರ ಜೊತೆ ಆಲಮಟ್ಟಿ ನದಿ ನೀರು ಹಂಚಿಕೆ ಕುರಿತು ಕೂಡ ಗಮನ ಸೆಳೆಯಲಾಗುವುದು. ನಾಡಿನ ಹಿತರಕ್ಷಣೆಗಾಗಿ ಹೋರಾಟ ಅನಿವಾರ್ಯವಾಗಿದೆ. ಹೀಗಾಗಿ ಈ ಹೋರಾಟಕ್ಕೆ ಪಕ್ಷ ಮುಂದಾಗಿದೆ. ನನಗೆ ಪಾದಯಾತ್ರೆ ಮಾಡಲು ಕಷ್ಟವಾಗುತ್ತದೆ. ಈ ಹಿನ್ನಲೆ ಸಾಕೇಂತಿಕ ಹೋರಾಟಕ್ಕೆ ಚಾಲನೆ ನೀಡುತ್ತೇನೆ. ಈ ಹೋರಾಟ ನಮ್ಮ ಪಕ್ಷದ ವಿಚಾರ ಅಷ್ಟೇ ಅಲ್ಲ, ಪ್ರಾದೇಶಿಕ ಪಕ್ಷವಾಗಿರಾಜ್ಯದ ಈ ಮೂರು ನದಿ ವಿವಾದಗಳ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದರು.
ಮೇಕೆದಾಟು-ಮಹದಾಯಿ ಯೋಜನೆ ಹಾಗೂ ಆಲಮಟ್ಟಿ ಅಣೆಕಟ್ಟೆ ವಿಚಾರಗಳು ನೆರೆ ರಾಜ್ಯಗಳೊಂದಿಗೆ ವಿವಾದಕ್ಕೆ ಕಾರಣವಾಗಿವೆ. ರಾಜ್ಯದ ಹಿತ ದೃಷ್ಟಿಯಿಂದ ಈ ಹೋರಾಟ ಅನಿವಾರ್ಯವಾಗಿದ್ದು, ಪ್ರಾದೇಶಿಕ ಪಕ್ಷವಾಗಿ ಸಮಸ್ಯೆಗಳನ್ನು ಬಗೆಹರಿಸಬೇಕು.
ಜೆಡಿಎಸ್ ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ ಎನ್ನುವವರಿಗೆ ಹೋರಾಟ ಮಾಡುವ ಮೂಲಕ ಜೆಡಿಎಸ್‍ನ್ನು ಅಕಾರಕ್ಕೆ ತರುವ ಸಂಕಲ್ಪವನ್ನು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಆ ಹೋರಾಟದಲ್ಲಿ ನಾನು ಭಾಗಿಯಾಗುತ್ತೇನೆ. ಹೋರಾಟ ಮಾಡುವಾಗ ಸರ್ಕಾರದ ಮೇಲೆ ಆರೋಪ ಮಾಡುವುದಿಲ್ಲ. ನಾವು ಹೋರಾಟ ಮಾಡಿ ಪಕ್ಷ ಉಳಿಸಿ ಅಧಿಕಾರಕ್ಕೆ ತರಲು ತೀರ್ಮಾನ ಮಾಡಿದ್ದೀವಿ. ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತೇನೆ. ನಮಗೆ ಯಾರ ಮೇಲೂ ದ್ವೇಷವಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಬಿಜೆಪಿ ನೆಹರೂ-ವಾಜಪೇಯಿ ಹೆಸರಲ್ಲಿ ಪರಸ್ಪರ ವಾಗ್ದಾಳಿ ನಡೆಸಿದ ಕುರಿತು ಮಾತನಾಡಿದ ಅವರು, ಹಾಗೆಲ್ಲಾ ಮಾತಾಡಬಾರದು. ಹಾಗೆ ಮಾತನಾಡುವುದರಿಂದ ಅವರುಗಳ ಪಕ್ಷದ ಇಮೇಜ್ ಬಿಲ್ಡ್ ಆಗುತ್ತದೆ ಎಂದು ಭಾವಿಸಿದ್ದರೆ ಭ್ರಮನಿರಸನ ಗ್ಯಾರಂಟಿ ಎಂದು ಎರಡು ರಾಷ್ಟ್ರೀಯ ಪಕ್ಷಕ್ಕೆ ಕಿವಿಮಾತು ಹೇಳಿದರು.
ಇದನ್ನು ಓದಿ: ಕಾಬೂಲ್ ಏರ್ಪೋರ್ಟ್ನಲ್ಲಿ ನೂಕುನುಗ್ಗಲು; ಏಳು ಮಂದಿ ಸಾವು
ಸಂಸತ್ ಅಧಿವೇಶನ ಯಾವುದೇ ಚರ್ಚೆ ಇಲ್ಲದೆ ಸಮಯ ವ್ಯರ್ಥವಾಯಿತು. ಆದರೂ ಗದ್ದಲದ ನಡುವೆಯೂ ವಿಧೇಯಕಗಳು ಪಾಸ್ ಆಗಿವೆ. ಮಾತನಾಡಲು ಸಮಯ ಅವಕಾಶವೇ ಸಿಗಲಿಲ್ಲ. ಹಲವು ಗಂಭೀರ, ಭೀಕರ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕಿತ್ತು. ಅದಾಗಲಿಲ್ಲ ಎಂಬ ನೋವು ಇದೆ
ಮೀಟರ್ ಬಡ್ಡಿ ದಂಧೆಯಿಂದ ಬೀದಿಬದಿ ವ್ಯಾಪಾರಿಗಳನ್ನು ರಕ್ಷಿಸಲು ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಬಡವರ ಬಂಧು ಕಾರ್ಯಕ್ರಮ ರೂಪಿಸಿದ್ದರು. ಅದು ಒಳ್ಳೆಯ ಯೋಜನೆಯಲ್ಲವೇ? ಈ ಬಗ್ಗೆ ಕಾಂಗ್ರೆಸ್, ಬಿಜೆಪಿಯವರು ಮಾತನಾಡಲಿಲ್ಲ. ಜನ ಕೂಡ ಕೈ ಹಿಡಯಲಿಲ್ಲ. ಆದರೆ ನಮ್ಮ ಪ್ರಯತ್ನ ಮುಂದುವರೆಸುತ್ತೇವೆ. ಅದಕ್ಕೆ ದೈವದ ಅನುಗ್ರಹವೂ ಬೇಕು ಎಂದರು.
ಸಿಎಂ ಬೊಮ್ಮಯಿ ನಮ್ಮ ಮನೆಗೆ ಬಂದಿದ್ದರು. ಅವರ ತಂದೆ ನಾವು ಸಾಕಷ್ಟು ಹೋರಾಟ ಮಾಡಿದ್ದೇವೆ. ನಿನಗೆನಾದ್ರೂ ಕಷ್ಟ ಬಂದಾಗ ನನ್ನ ಭೇಟಿ ಮಾಡು ಅಂತ ಹೇಳಿದ್ದೇ. ಅವರ ಹೈಕಮಾಂಡ್ ಎಲ್ಲಾರ ವಿಶ್ವಾಸ ಗಳಿಸಿ ರಾಜ್ಯ ನಡೆಸಿ ಎಂದು ಬೊಮ್ಮಾಯಿಗೆ ಹೇಳಿದೆ. ಅಂತಹದರಲ್ಲಿ ನನ್ನ ಪಕ್ಷವನ್ನ ಕಾಂಗ್ರೆಸ್ ಬಿಜೆಪಿಗೆ ಎರವಲು ಕೊಡ್ತಿನಾ| ಸತ್ಯ ವಾಗಿಯೂ ಹೇಳುತ್ತೇನೆ ಕಾಂಗ್ರೆಸ್ ಜೊತೆ ಸರ್ಕಾರ ಮಾಡಲೇ ಬಾರದು ಎನಂದು ಕೊಂಡಿದ್ದೇವೆ. ಆದರೆ. ಈಗ ಆ ಚರ್ಚೆ ಎಲ್ಲಾ ಬೇಡ ಎಂದು ಸುಮ್ಮನಾದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ