HD Devegowda: ಕಲಬುರಗಿ ಪಾಲಿಕೆ ಮೈತ್ರಿಗೆ ಖರ್ಗೆ ನಮ್ಮ ಜೊತೆ ಮಾತನಾಡಿದ್ದಾರೆ; ಎಚ್​ಡಿ ದೇವೇಗೌಡ

ಜಿಟಿ ದೇವೇಗೌಡ ಇನ್ನು ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ. ಸಿದ್ದರಾಮಯ್ಯ ಅವರನ್ನು ಜಿಟಿಡಿ ಭೇಟಿ ಮಾಡಿದ್ದಾರೆ ಅದು ಸತ್ಯ. ಅದರ ಬಗ್ಗೆ ನಾವು ಕ್ರಮ ತೆಗೆದುಕೊಂಡಿಲ್ಲ

ಹೆಚ್.ಡಿ. ದೇವೇಗೌಡ

ಹೆಚ್.ಡಿ. ದೇವೇಗೌಡ

 • Share this:
  ಬೆಂಗಳೂರು (ಸೆ. 7): ಮಹಾನಗರ ಪಾಲಿಕೆ ಚುನಾವಣೆಗಳನ್ನು (Corporation Election) ನಮ್ಮ ರಾಜ್ಯಧ್ಯಕ್ಷರು, ನಗರ ಅಧ್ಯಕ್ಷರು ಮತ್ತು ಕುಮಾರಸ್ವಾಮಿ ಗಂಭೀರವಾಗಿ ಗಭೀರವಾಗಿ ಪರಿಗಣಿಸಿ ಕೆಲಸ ನಿರ್ವಹಿಸಿದರು. ಕಲಬುರಗಿಯಲ್ಲಿ ನಾವು 15 ಸೀಟನ್ನು ಗೆಲ್ಲುತ್ತೇವೆ ಎಂದು ನಿರೀಕ್ಷೆ ಮಾಡಿದ್ದೇವು. ಆದರೆ, ನಾಲ್ಕು ಸೀಟು ಬಂದಿದೆ. ಒಳ್ಳೆಯ ಫೈಟ್​ ನೀಡಿದ್ದೇವೆ. ಕಲಬುರಗಿದಲ್ಲಿ (Gulbarga corporation) ಅಂತಂತ್ರ ಸ್ಥಿತಿ ನಿರ್ಮಾಣವಾಗಿರುವ ಹಿನ್ನಲೆ ಪಾಲಿಕೆ ಅಧಿಕಾರ ಹಿಡಿಯಲು ಮಲ್ಲಿಕಾರ್ಜುನ ಖರ್ಗೆ (mallikarjuna Kharge) ಕೂಡ ನಮ್ಮ ಜೊತೆ ಮಾತನಾಡಿದ್ದಾರೆ. ಬಿಜೆಪಿಯವರು ಕೂಡ ಟ್ರೈ ಮಾಡುತ್ತಿದ್ದಾರೆ. ಅದಕ್ಕೆ ನಾನು ಹೇಳಿದೆ ಸ್ಥಳೀಯ ಮುಖಂಡರನ್ನು ಕರೆಸಿ ಮಾತನಾಡುವ ತೀರ್ಮಾನ ನಡೆಸಿದ್ದೇನೆ ಎಂದು ಜೆಡಿಎಸ್​ ವರಿಷ್ಠ ದೇವೇಗೌಡ (HD Devegowda) ತಿಳಿಸಿದರು.

  ನಗರದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿ ಪಾಲಿಕೆಯಲ್ಲಿ ನಮ್ಮ ಜೊತೆ ಮೈತ್ರಿ ನಡೆಸಲು ಇವತ್ತು ಕಾಂಗ್ರೆಸ್ ಅವರು ಸಮಾಲೋಚನೆ ಮಾಡುತ್ತಿದ್ದಾರಂತೆ. ಖರ್ಗೆಯವರು ಮಾತನಾಡಿದ್ದಾರೆ ಪಕ್ಷದ ಪರವಾಗಿಯೇ ಮಾತನಾಡಿದ್ದಾರೆಇನ್ನು ಬಿಜೆಪಿ ನಮ್ಮಗೆ ಯಾವುದೇ ಸಂಪರ್ಕ ನಡೆಸಿಲ್ಲ. ಈ ಹಿನ್ನಲೆ ಅಲ್ಲಿ ಯಾರು ಗೆದ್ದಿದ್ದಾರೋ ಆ ಮುಖಂಡರು ಬಳಿ ಚರ್ಚೆ ಮಾಡಿ ಈ ಬಗ್ಗೆ ನಾವು ತೀರ್ಮಾನ ಮಾಡುತ್ತೇವೆ. ಅಧ್ಯಕ್ಷರು ಹಾಗೂ ಅವರ ಮುಖಂಡರ ಅಭಿಪ್ರಾಯ ಏನಿದೆ ಗೊತ್ತಿಲ್ಲ ಎಂದರು.

  ಯಡಿಯೂರಪ್ಪ 106 ಸೀಟು ಗೆದ್ದರು. 8 ಸೀಟ್​ಗಾಗಿ ಏನಾಯ್ತು ಎನ್ನುವುದು ಗೊತ್ತಿದೆ. ಇಂತಹ ಸಂದರ್ಭದಲ್ಲಿ ಮರು ಚುನಾವಣೆಗೆ ಜನ ಅಪೇಕ್ಷೆ ಪಡುವುದಿಲ್ಲ. ಹಾಗಾಗಿ ಮೈತ್ರಿ ಸರ್ಕಾರಗಳು ಬರುತ್ತವೆ. ಕಾರ್ಪೊರೇಷನ್ ಚುನಾವಣೆಗಳು ಅಷ್ಟೆನೇ. ಮೈಸೂರಲ್ಲಿ ನಾವು ಸಪರೇಟ್ ಆಗಿ ಸ್ಪರ್ಧೆ ಮಾಡಿದೇವು. ನಮ್ಮ ಇಬ್ಬರ ಬಿಗಿಯಾದ ನಿಲುವು ಬಿಜೆಪಿಗೆ ಪ್ಲಸ್ ಆಯ್ತು.

  ಇದನ್ನು ಓದಿ: ಎಡಬಿಡದೇ ಮಳೆ; ಉಕ್ಕೇರುತ್ತಿದೆ ಭೀಮೆ; ಬೀದರ್, ಯಾದಗಿರಿ, ಕಲಬುರ್ಗಿಯಲ್ಲಿ ಪ್ರವಾಹ ಪರಿಸ್ಥಿತಿ

  ನಮ್ಮ ಶಕ್ತಿ ಹೆಚ್ಚು ಮಾಡಿಕೊಳ್ಳಬೇಕು
  ಬೆಳಗಾಂ ನಲ್ಲಿ ನಮ್ಮ ಸ್ಥಿತಿ ಗೊತ್ತಿತ್ತು. ಜಿಲ್ಲಾ ಘಟಕದವರು ಸೇರಿ ಹಾಕಲೇ ಬೇಕು ಎಂದ ಕಾರಣ ಅಲ್ಲಿ ಅಭ್ಯರ್ಥಿ ನಿಲ್ಲಿಸಲಾಗಿತ್ತು. ಹು-ಧಾ ದಲ್ಲಿ ಮೂರರಿಂದ ನಾಲ್ಕು ಗೆಲ್ಲುತ್ತೇವೆ ಅಂದುಕೊಂಡಿದ್ದೆ. ಆದರೆ ಒಂದು ಸ್ಥಾನ ಗೆದ್ದಿದ್ದೇವೆ. ರಾಮನಗರ-ಮೈಸೂರಿನಲ್ಲಿ ಎರಡನೇ ಸ್ಥಾನದಲ್ಲಿ ಇದ್ದೇವೆ. ನಮ್ಮ ಶಕ್ತಿ ಇನ್ನು ಹೆಚ್ಚು ಮಾಡಿಕೊಳ್ಳಬೇಕು ಎಂದರು.
  ಸೋತ ಮಾತ್ರಕ್ಕೆ ನಾವು ನಿರಾಶಾವಾದಿಗಳಾಗಿಲ್ಲ. ಎಲ್ಲಾ ಕಡೆ ಪಕ್ಷಕ್ಕೆ ಸದಸ್ಯತ್ವ ಮಾಡಿಸಲೇ ಬೇಕು ಎಂಬ ಹುರುಪಿನಲ್ಲಿ ನಮ್ಮವರು ಇದ್ದಾರೆ. ಹಿಂದೆ ಈ ರೀತಿಯ ಮೆಂಬರ್ ಶಿಪ್ ಆಗಿರಲಿಲ್ಲ. ಆದರೆ ಇದೀಗ ಒದೊಂದು ಕ್ಷೇತ್ರದಲ್ಲಿಯೂ ಹೆಚ್ಚು ಮೆಂಬರ್ ಶಿಪ್ ಆಗುತ್ತಿದೆ. ಇದು ನಮ್ಮ ಹೋರಾಟಕ್ಕೆ ಒಳ್ಳೆಯ ಸಂಕೇತ.

  ನೀರಾವರಿ ಯೋಜನೆ ಕುರಿತು ಗಮನ ಸೆಳೆಯುವ ಪ್ರಯತ್ನ
  ಮೇಕೆದಾಟು ಯೋಜನೆ ಕುರಿತು ಸಿಎಂಗೆ ಮನವಿ ಮಾಡಿದ್ದು, ಅವರು ಕೇಂದ್ರದ ಜೊತೆ ಮಾತನಾಡುತ್ತೇವೆ ಎಂಬ ಭರವಸೆ ನೀಡಿದ್ದಾರೆ. ಕೃಷ್ಣಾದು ಅಷ್ಟೇ ಸುಪ್ರೀಂ ಕೋರ್ಟ್ ನಲ್ಲಿ ಇದೆ. ನಾನು ಹೆಚ್ ಡಿಕೆ ಸೇರಿದಂತೆ ಎಲ್ಲರು ಪಕ್ಷದ ಕಡೆ ಹೆಚ್ಚು ಗಮನ ಕೊಡುತ್ತಿದ್ದೇವೆ. ನಿಖಿಲ್ ಕುಮಾರಸ್ವಾಮಿ, ಶರಣುಗೌಡ್ರು ಇದಾರೆ ಅವರು ಪಕ್ಷಕ್ಕೆ ಶ್ರಮಿಸುತ್ತಿದ್ದಾರೆ. ಐಕ್ಯತೆಯಿಂದ ಹೋಗಲು ಪ್ರಯತ್ನ ಮಾಡುತ್ತೇವೆ

  ಜಿಟಿಡಿ ಇನ್ನು ರಾಜಿನಾಮೆ ಕೊಟ್ಟಿಲ್ಲ.
  ಕಾಂಗ್ರೆಸ್​ ಸೇರುವ ನಿರ್ಧಾರ ಕೈಗೊಂಡಿರುವ ಜಿಟಿ ದೇವೇಗೌಡ ಇನ್ನು ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ. ಸಿದ್ದರಾಮಯ್ಯ ಅವರನ್ನು ಜಿಟಿಡಿ ಭೇಟಿ ಮಾಡಿದ್ದಾರೆ ಅದು ಸತ್ಯ. ಅದರ ಬಗ್ಗೆ ನಾವು ಕ್ರಮ ತೆಗೆದುಕೊಂಡಿಲ್ಲ. ಶ್ರೀನಿವಾಸಪುರದಲ್ಲಿ ಕಾಂಗ್ರೆಸ್ ಜೊತೆ ಹೋಗಿ ಏನು ಮಾತನಾಡಿದ್ದಾರೋ ಅದರ ಬಗ್ಗೆ ನಮ್ಮ ಅಧ್ಯಕ್ಷರು ನೋಡಿ ಕ್ರಮ ತೆಗೆದುಕೊಳ್ಳುತ್ತಾರೆ. ನಾನು ಸ್ವಲ್ಪ ಭಿನ್ನಾಭಿಪ್ರಾಯ ಇರೋದರಿಂದದ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದೇನೆ. ಪಕ್ಷಕ್ಕೆ ಹಾನಿ ಆಗುವಂತೆ ಮಾತಾಡಿಲ್ಲ. ಪಕ್ಷಕ್ಕೆ ಹಾನಿ ಆಗುವಂತೆ ಮಾತನಾಡಿರುವವರ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು
  Published by:Seema R
  First published: