ಕಾಂಗ್ರೆಸ್​ ನಾಯಕರ​ ಪ್ರಸ್ತಾಪ ತಳ್ಳಿಹಾಕಿದ ದೇವೇಗೌಡ; ಮೈತ್ರಿ ಆಚೆ ಹೋರಾಡಲು ಮಾಜಿ ಪ್ರಧಾನಿ ನಿರ್ಧಾರ

ನಾನು ಈಗಾಗಲೇ ಮೈತ್ರಿ ಬಿಟ್ಟು ಹೋರಾಟ ಮಾಡಬೇಕೆಂದಿದ್ದೇನೆ. ಮೈತ್ರಿ ವ್ಯಾಪ್ತಿಯಿಂದ ಹೊರಗಿದ್ದು ನನ್ನ ಹೋರಾಟ. ಹೀಗಾಗಿ ಮತ್ತೆ ಮೈತ್ರಿ ಸರ್ಕಾರ ರಚಿಸುವುದು ಇಷ್ಟವಿಲ್ಲ.

Seema.R | news18-kannada
Updated:December 2, 2019, 4:10 PM IST
ಕಾಂಗ್ರೆಸ್​ ನಾಯಕರ​ ಪ್ರಸ್ತಾಪ ತಳ್ಳಿಹಾಕಿದ ದೇವೇಗೌಡ; ಮೈತ್ರಿ ಆಚೆ ಹೋರಾಡಲು ಮಾಜಿ ಪ್ರಧಾನಿ ನಿರ್ಧಾರ
ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ
  • Share this:
ಬೆಳಗಾವಿ (ಡಿ.2): ರಾಜ್ಯದಲ್ಲಿ ಬಿಜೆಪಿ ಅಧಿಕಾರದಿಂದ ದೂರ ಇಡಲು ಎಲ್ಲಾ ಆಯ್ಕೆಗಳು ಮುಕ್ತವಾಗಿದೆ ಎಂದು ಜೆಡಿಎಸ್​ನೊಂದಿಗೆ ಮತ್ತೊಮ್ಮೆ ಮೈತ್ರಿ ಸುಳಿವು ನೀಡಿದ್ದ ಕಾಂಗ್ರೆಸ್​ ಉಸ್ತುವಾರಿ ವೇಣುಗೋಪಾಲ್​ ಸಲಹೆಯನ್ನು ಮಾಜಿ ಪ್ರಧಾನಿ ದೇವೇಗೌಡರು ತಿರಸ್ಕರಿಸಿದ್ದಾರೆ. 

ಗೋಕಾಕ್​ನಲ್ಲಿ ಮಾತನಾಡಿದ ಅವರು, ನಾನು ಈಗಾಗಲೇ ಮೈತ್ರಿ ಬಿಟ್ಟು ಹೋರಾಟ ಮಾಡಬೇಕೆಂದಿದ್ದೇನೆ. ಮೈತ್ರಿ ವ್ಯಾಪ್ತಿಯಿಂದ ಹೊರಗಿದ್ದು ನನ್ನ ಹೋರಾಟ. ಹೀಗಾಗಿ ಮತ್ತೆ ಮೈತ್ರಿ ಸರ್ಕಾರ ರಚಿಸುವುದು ಇಷ್ಟವಿಲ್ಲ. ನಾನು ವೇಣುಗೋಪಾಲರವರ ಬಗ್ಗೆ ಲಘುವಾಗಿ ಮಾತನಾಡಲ್ಲ ಎಂದು ಸೂಚ್ಯವಾಗಿ ಹೇಳಿದರು.

ಕಾಂಗ್ರೆಸ್​ ಜೊತೆಗಿನ ಮೈತ್ರಿ ಸರ್ಕಾರ ಹೇಗೆ ಹೋಯಿತೆಂದು ಗೊತ್ತಿದೆ. ನಾನು ಸದ್ಯ ಎರಡು ಪಕ್ಷಗಳ ವಿರುದ್ಧ ಹೋರಾಡುತ್ತಿದ್ದೇನೆ. ಹಿಂದೆ ನನ್ನನ್ನು ಕೇಳದೇ ಕುಮಾರಸ್ವಾಮಿ ಬಿಜೆಪಿ ಜತೆ ಹೋದರು. ಕಳೆದ ಬಾರಿ ಕೈ ನಾಯಕರು ಮನೆಗೆ ಬಂದರು. ಕುಮಾರಸ್ವಾಮಿಯನ್ನೇ ಸಿಎಂ ಮಾಡಿ ಎಂದರು. ಲೋಕಸಭೆಯಲ್ಲಿ ವಿಪಕ್ಷ ನಾಯಕರಾಗಿದ್ದ ಖರ್ಗೆಯನ್ನು ಸಿಎಂ ಮಾಡಬೇಕೆಂದು ನಾನು ಹೇಳಿದ್ದೆ. ಬಳಿಕ ಪರಮೇಶ್ವರ್​, ಮುನಿಯಪ್ಪರನ್ನು ಮಾಡಿ ಎಂದಿದ್ದೆ. ನನ್ನ ಮಾತಿಗೆ ಖರ್ಗೆಯವರು ಒಪ್ಪಿಕೊಂಡಿದ್ದರು. ಆದರೆ ಆಗ ಕುಮಾರಸ್ವಾಮಿಯೇ ಸಿಎಂ ಆಗಲಿ ಎಂದು ಹೈ ಕಮಾಂಡ್​ ಹೇಳಿತು. ಬಳಿಕ ಸರ್ಕಾರ ಹೇಗೆ ಬಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ ಎಂದರು.

ಯಡಿಯೂರಪ್ಪ ಟೀಕೆ ಮಾಡಲು ನಾನು ಇಲ್ಲಿ ಬಂದಿಲ್ಲ

ಕುದುರೆ ವ್ಯಾಪಾರ ಮಾಡಿದ್ದು ಯಡಿಯೂರಪ್ಪ ರ ಮಹತ್ತರ ಸಾಧನೆ.  ಅವರನ್ನು ನಾನು ಟೀಕಿಸುವುದಿಲ್ಲ. ಆದರೆ, ಮಾಜಿ ಶಾಸಕರುಗಳೇ ಮುಂದಿನ ಮಂತ್ರಿಗಳು ಎಂದು ಭಾಷಣ ಮಾಡುತ್ತಾರೆ. 105 ಜನ ಮೊದಲು ಗೆದ್ದಿದ್ದ ಪೈಕಿ 18 ಜನರನ್ನು ಮಂತ್ರಿ ಮಾಡಿಕೊಂಡಿದ್ದಾರೆ.ಅವರಲ್ಲೇ 80 ಜನ ಕೂಂತಿದ್ದಾರೆ. ಅವರನ್ನು ಬಿಟ್ಟು ಈ 15  ಜನರಿಗೆ ಮಂತ್ರಿ ಮಾಡಿದ್ದಾರೆ. ಅವರಿಗೆ ಹೇಗೆ ಕೊಡ್ತಾರೆ, ಬಿಎಸ್‌ವೈ ಹೇಳಿಕೆ ಎಷ್ಟು ಹಾಸ್ಯಾಸ್ಪದ ಎಂದರು.

ಇದನ್ನು ಓದಿ: ಡಾ.ಸುಧಾಕರ್ ಡೀಲ್ ರಾಜ, ಆತನನ್ನು ನಂಬಿ ಮೋಸ ಹೋದೆ; ಸಿದ್ದರಾಮಯ್ಯ ವಾಗ್ದಾಳಿ

ಸೋತ ಲಕ್ಷ್ಮಣ್ ಸವದಿರನ್ನು ಡಿಸಿಎಂ ಮಾಡಿದ್ದಾರೆ. ಅವರಿಗೆ ಟಿಕೆಟ್ ಕೊಡಲಿಲ್ಲ. ಅವರನ್ನೂ ಮಂತ್ರಿ ಮಾಡುತ್ತೇವೆ. ಸವದಿರನ್ನು ಎಂಎಲ್ ಸಿ ಮಾಡಿ ಡಿಸಿಎಂ ಆಗಿ ಇರುತ್ತಾರೆ ಎನ್ನುತ್ತಾರೆ. ಇವರ ಮಾತನನ್ನು ಜನ ನಂಬಲು ಸಾಧ್ಯವೇ ಎಂದು ಪ್ರಶ್ನಿಸಿದರು.ಜಿಲ್ಲೆ ಬಗ್ಗೆ ವಿಶೇಷ ಗೌರವ

ಬೆಳಗಾವಿ ಮೇಲೆ ನನಗೆ ವಿಶೇಷ ಗೌರವ ಇದೆ. ನಾನು ಸಿಎಂ ಆಗಿದ್ದಾಗ ಬೆಳಗಾವಿ ಜಿಲ್ಲೆಯಿಂದ ಜನತಾದಳಕ್ಕೆ 14 ಸ್ಥಾನ ಕೊಟ್ಟಿತ್ತು. ಈ ಭಾಗಕ್ಕೂ ನನಗೂ‌ ಬಹಳ ಸಂಬಂಧ ಇದೆ. ಎಂಟು ಶುಗರ್ ಫ್ಯಾಕ್ಟರಿ ಗಳನ್ನು ಇಲ್ಲಿ ಕೊಟ್ಟಿದ್ದೇನೆ. ಮಾರ್ಕಂಡೇಯ ನೀರಾವರಿ ಯೋಜನೆ ಈ ಜಿಲ್ಲೆಗೆ ಕೊಟ್ಟಿದ್ದೇನೆ. ಪಿ.ವಿ.ನರಸಿಂಹರಾವ್ ಸರ್ಕಾರದಲ್ಲಿ ಶುಗರ್ ಫ್ಯಾಕ್ಟರಿ ಲೈಸೆನ್ಸ್‌ಗೆ ಕಂಟ್ರೋಲ್ ಇತ್ತು. ನಾನು ರೈತರ ಪರವಾಗಿ ಹೋರಾಟ ಮಾಡಿದ್ದೇನೆ ಎಂದರು.
First published:December 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ