Kumaraswamy: ದೇವೇಗೌಡರು ಭೀಷ್ಮಾಚಾರ್ಯರಿದ್ದಂತೆ; ಯಾರೋ ಹೇಳಿದ ಮಾತ್ರಕ್ಕೆ ಸಾವು ಬರೋದಿಲ್ಲ

ರಾಜ್ಯದಲ್ಲಿ ಜೆಡಿಎಸ್​​ನನ್ನು ಅಧಿಕಾರಕ್ಕೆ ತರಲೇಬೇಕೆಂದು ದೇವೇಗೌಡರು ಶಪಥ ಮಾಡಿದ್ದಾರೆ. ಭೀಷ್ಮಾಚಾರ್ಯರ ಗುಣ ಅವರಿಗೆ ಇದೆ. ಅವರು ಬಯಸಿದಾಗ ಸಾವು ಬರುತ್ತದೆ. ಭಗವಂತ ಅವರಿಗೆ ಇನ್ನೂ ಶಕ್ತಿ ಕೊಟ್ಟಿದ್ದಾನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಕುಮಾರಸ್ವಾಮಿ, ಹೆಚ್​.ಡಿ ದೇವೇಗೌಡ

ಕುಮಾರಸ್ವಾಮಿ, ಹೆಚ್​.ಡಿ ದೇವೇಗೌಡ

  • Share this:
ಬೆಂಗಳೂರು (ಜು 7): ಕಾಂಗ್ರೆಸ್​ ಮಾಜಿ ಶಾಸಕ ಕೆ.ಎನ್​ ರಾಜಣ್ಣ (K.N Rajanna) ದೇವೇಗೌಡರ ಬಗ್ಗೆ ಆಡಿದ ಮಾತಿಗೆ ಭಾರೀ ವಿರೋಧ ವ್ಯಕ್ತವಾಗಿದೆ. ಕೆ.ಎನ್ ರಾಜಣ್ಣ ವಿರುದ್ಧ ಪ್ರತಿಭಟನೆ (Protest) ಕೂಡ ನಡೆದಿದೆ. ಇತ್ತ ರಾಜಣ್ಣ ವಿರುದ್ಧ ಕುಮಾರಸ್ವಾಮಿ (Kumaraswamy) ಕೂಡ ಕಿಡಿಕಾರಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು (Deve Gowda) ಭೀಷ್ಮಾಚಾರ್ಯ ಇದ್ದಂತೆ. ಅವರಿಗೆ ಸಾವು ಅನ್ನೋದು ಅವರು ಬಯಸಿದಾಗಲೇ ಬರುತ್ತದೆಯೇ ಹೊರತು, ಯಾರೋ ಏನೋ ಹೇಳಿದಾಗ ಬರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ದೇವೇಗೌಡರಿಗೆ ಭೀಷ್ಮಾಚಾರ್ಯರ ಗುಣವಿದೆ

ಜೆಡಿಎಸ್​ ರಾಜ್ಯ ಕಚೇರಿ ಜೆಪಿ ಭವನದಲ್ಲಿಂದು ಮಾತನಾಡಿದ ಅವರು, ರಾಜ್ಯದಲ್ಲಿ ಜೆಡಿಎಸ್​​ನ್ನು ಅಧಿಕಾರಕ್ಕೆ ತರಲೇಬೇಕೆಂದು ದೇವೇಗೌಡರು ಶಪಥ ಮಾಡಿದ್ದಾರೆ. ಭೀಷ್ಮಾಚಾರ್ಯರ ಗುಣ ಅವರಿಗೆ ಇದೆ. ಅವರು ಬಯಸಿದಾಗ ಸಾವು ಬರುತ್ತದೆ. ಭಗವಂತ ಅವರಿಗೆ ಇನ್ನೂ ಶಕ್ತಿ ಕೊಟ್ಟಿದ್ದಾನೆ. ನಾನು ಅವರ ಭಾವನೆಗಳನ್ನು ಗಮನಿಸಿದ್ದೇನೆ. ಯಾವುದೇ ಕಾರಣಕ್ಕೂ ಅವರ ಆಯಸ್ಸಿನ ಮೇಲೆ ದುಷ್ಪರಿಣಾಮ ಬೀರುವುದಿಲ್ಲ. ಈ ಬಗ್ಗೆ ಚರ್ಚೆ ಮಾಡಿರುವ ವ್ಯಕ್ತಿಗಳ ಬಯಕೆ ಈಡೇರುವುದಿಲ್ಲ ಎಂದು ಟಾಂಗ್​ ಕೊಟ್ಟರು.

ಅದು ಸಿದ್ದರಾಮಯ್ಯ ಅವರ ಅಭಿಪ್ರಾಯ

ದೇವೇಗೌಡರು ಇನ್ನೂ ಎಷ್ಟು ದಿನ ಇರ್ತಾರೆ, ಅವರಿಂದ ಇನ್ನೇನು ಸಾಧ್ಯ ಎಂದು ಸಿದ್ದರಾಮಯ್ಯ ಟೀಮ್ ನಲ್ಲಿ ಚರ್ಚೆ ಆಗಿರೋದು. ಕೆಲವು ಬಾರಿ ಸೇರಿದಾಗ ಇದನ್ನೆಲ್ಲ ಚರ್ಚೆ ಮಾಡಿದ್ದಾರೆ. ಆದರೆ ಇದನ್ನು ಬಾಯ್ತಪ್ಪಿ ಇವರು ಇಲ್ಲಿ ಹೇಳಿದ್ದಾರೆ. ಅವರು ಏನೋ ಕಾರ್ಯಕ್ರಮ ನಮಗೇನು ಸಂಬಂಧ. ಇದು ಸಿದ್ದರಾಮಯ್ಯ ಅವರ ಅಭಿಪ್ರಾಯ, ಆದರೆ ಇದು ರಾಜಣ್ಣನಿಂದ ಹೊರಗಡೆ ಬಂದಿದೆ ಅಷ್ಟೇ ಎಂದು ಆರೋಪಿಸಿದರು .

ಇದನ್ನೂ ಓದಿ: Siddaramaiah: ನನ್ನನ್ನು ಕಂಡ್ರೆ ಬಿಜೆಪಿ ಅವ್ರಿಗೆ ಹೊಟ್ಟೆ ಕಿಚ್ಚು, ನನ್ನ ಬರ್ತ್ ಡೇ ಕಾರ್ಯಕ್ರಮಕ್ಕೆ ಅವ್ರನ್ನ ಕರೆಯೋದಿಲ್ಲ

ಕಾಂಗ್ರೆಸ್ ನಲ್ಲಿ ಅವರದ್ದೇ ಆದ ಟೀಮ್ ಇದೆ. ಕಾಂಗ್ರೆಸ್ ನಲ್ಲಿ ಒಂದು ಎರಡು ಮೂರು ಟೀಮ್ ಗಳಿವೆ. ಆದರೆ ಈ ಮಾತು ಸಿದ್ದರಾಮಯ್ಯ ಟೀಮ್ ನಿಂದ ಹೊರಗೆ ಬಂದಿರೋದು ಎಂದು ಹೇಳುವ ಮೂಲಕ ರಾಜಣ್ಣ ಹೇಳಿಕೆ ಸಿದ್ದರಾಮಯ್ಯ ಅವರದ್ದೇ ಎಂದರು.

ಕಾಂಗ್ರೆಸ್ ಪಕ್ಷ 70 ದಾಟಲ್ಲ

ಆಂತರಿಕ ಸಮೀಕ್ಷೆಗಳಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಸೀಟ್ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ನವರ ಸಮೀಕ್ಷೆ ಪ್ಲ್ಯಾಂಟೆಡ್ ಎಂದರು. ಕಾಂಗ್ರೆಸ್‌ನವರ ಶಕ್ತಿ 60-65 ಅಷ್ಟೇ. ಹಿಂದೆ ಯಡಿಯೂರಪ್ಪನವರು ಇನ್ನೊಂದು ಪಕ್ಷ ಮಾಡದಿದ್ದರೆ ಸಿದ್ದರಾಮಯ್ಯ ಅಂದು ಸಿಎಂ ಆಗ್ತಿರಲಿಲ್ಲ. ಅಧಿಕಾರದಲ್ಲಿದ್ದ ಪಕ್ಷ 78 ಕ್ಕೆ ಇಳಿದಿದ್ದಾರೆ. ಇವತ್ತು ಹೇಳ್ತಿದ್ದೀನಿ ಬರೆದಿಟ್ಡುಕೊಳ್ಳಿ ಕಾಂಗ್ರೆಸ್ ಪಕ್ಷ 70 ದಾಟಲ್ಲ ಎಂದು ಭವಿಷ್ಯ ನುಡಿದರು .

ಇದನ್ನೂ ಓದಿ:  Karnataka Assembly Election: ರಾಜ್ಯದಲ್ಲಿ ಇದೇ ಡಿಸೆಂಬರ್‌ನಲ್ಲಿ ಎಲೆಕ್ಷನ್! ತಯಾರಿ ಮಾಡಿಕೊಳ್ಳುವಂತೆ ಕಾರ್ಯಕರ್ತರಿಗೆ ಎಚ್‌ಡಿಕೆ ಕರೆ

ಸಿದ್ದರಾಮಯ್ಯ ಜನ್ಮದಿನಕ್ಕೆ ನಮ್ಮ ಆಕ್ಷೇಪ ಇಲ್ಲ

ದೇವೇಗೌಡರ ಕೊಡುಗೆ ಏನೆಂಬುದರ ಬಗ್ಗೆ ಅನೇಕ ಪುಸ್ತಕಗಳಲ್ಲಿ ಬರೆದಿದ್ದಾರೆ. ರಾಜಣ್ಣ ಹೇಳಿಕೆ ತಿರುಚಲಾಗಿದೆ ಎಂದು ಹೇಳುತ್ತಿದ್ದಾರೆ. ನನಗೆ ಸಿದ್ದರಾಮಯ್ಯನವರ ಮೇಲೆ ದ್ವೇಷ ಇಲ್ಲ. ನಾನು ಕಳೆದ ಒಂದು ತಿಂಗಳಲ್ಲಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಬಗ್ಗೆ ಪ್ರಸ್ತಾಪಿಸಿ ಮಾತನಾಡಿಲ್ಲ. ಸಿದ್ದರಾಮಯ್ಯನವರ ಜನ್ಮದಿನ ಕಾರ್ಯಕ್ರಮಕ್ಕೆ ನಾವ್ಯಾಕೆ ಆಕ್ಷೇಪ ಮಾಡೋಣ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.


ಇದಕ್ಕೆಲ್ಲಾ ಮುಖ್ಯಮಂತ್ರಿಗಳು ಉತ್ತರ ಕೊಡ್ತಾರಾ?

ನಾನು 14 ತಿಂಗಳು ಮೈತ್ರಿ ಸರ್ಕಾರದಲ್ಲಿದ್ದೆ. ಹಿಂದಿನ ಸರ್ಕಾರಗಳ ಬೆಂಗಳೂರು ಅಭಿವೃದ್ಧಿ ಕುರಿತ ಸಿಎಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬೆಂಗಳೂರಿಗೆ ನಮ್ಮ ಕೊಡುಗೆ ಬಹಳ ದೊಡ್ಡದಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿಯೇ ಮಾಡಿಲ್ಲ. ಅಭಿವೃದ್ಧಿ ಹೆಸರಲ್ಲಿ ರಾಜ್ಯದಲ್ಲಿ ಲೂಟಿ ಆಗ್ತಿದೆ. ನಾವು ಸ್ಯಾಟಲೈಟ್ ಟೌನ್ ಮಾಡಲು ಮುಂದಾಗಿದ್ದೇವು. ಆದರೆ ಇವರು ಅಧಿಕಾರಕ್ಕೆ ಬಂದ ಮೇಲೆ ಬಿಬಿಎಂಪಿ ಕಚೇರಿಗೆ ಬೆಂಕಿ ಹಾಕಿದರು.ಇದಕ್ಕೆಲ್ಲಾ ಮುಖ್ಯಮಂತ್ರಿಗಳು ಉತ್ತರ ಕೊಡ್ತಾರಾ ಎಂದು ಪ್ರಶ್ನೆ ಮಾಡಿದರು.
Published by:Pavana HS
First published: