ಸೋನಿಯಾ ಗಾಂಧಿಯವರ ಒತ್ತಾಯದ ಮೇರೆಗೆ ದೇವೇಗೌಡರು ರಾಜ್ಯಸಭೆಗೆ ಹೋಗಲು ಒಪ್ಪಿದ್ದಾರೆ; ಎಚ್​​​​ಡಿ ಕುಮಾರಸ್ವಾಮಿ

ದೇವೇಗೌಡರ ರಾಜಕೀಯ ಇತಿಹಾಸದಲ್ಲಿ ಅವರು ಜನರಿಂದ ಆಯ್ಕೆ ಆಗಿ ಕೆಲಸ ಮಾಡಿದ್ದಾರೆ. ಹಿರಿಯ ರಾಜಕೀಯ ನಾಯಕರು ಅನುಭವ ಇರುವವರು ಕಡಿಮೆ ಇದ್ದಾರೆ. ಆ ಕಾರಣಕ್ಕೆ ದೇವೇಗೌಡರನ್ನು ಆಯ್ಕೆ ಮಾಡುತ್ತಿದ್ದೇವೆ ಎಂದು ಎಚ್​ಡಿಕೆ ಹೇಳಿದರು.

ಹೆಚ್​.ಡಿ. ಕುಮಾರಸ್ವಾಮಿ.

ಹೆಚ್​.ಡಿ. ಕುಮಾರಸ್ವಾಮಿ.

 • Share this:
  ಬೆಂಗಳೂರು(ಜೂ.09): ನಾಮಪತ್ರ ಸೂಚನೆಗೆ ಶಾಸಕರು ಸಹಿ ಹಾಕಿದ್ದಾರೆ. ಇವತ್ತಿನ ಕಾರ್ಯಕ್ರಮದಲ್ಲಿ ಬೇರೆ ಪಕ್ಷದ ನಾಯಕರು ಇರುವುದಿಲ್ಲ. ಜೆಡಿಎಸ್ ಪಕ್ಷದಿಂದ ನಾಮಪತ್ರ ಸಲ್ಲಿಸುತ್ತಿದ್ದೇವೆ. ಸಾಧಕ ಭಾದಕಗಳ ಜೊತೆ ಈಗಾಗಲೇ ಚರ್ಚೆ ಶಾಸಕರ ಜೊತೆ ಚರ್ಚೆ ಮಾಡಿದ್ದೇವೆ ಎಂದು ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ ಹೇಳಿದ್ದಾರೆ.

  ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಮೂರನೇ ಅಭ್ಯರ್ಥಿ ಹಾಕಲು ಸಂಖ್ಯಾಬಲದ ಕೊರತೆ ಇದೆ. ಕಾಂಗ್ರೆಸ್​​ಗೂ ಎರಡನೇ ಅಭ್ಯರ್ಥಿ ಹಾಕಲು ಸಂಖ್ಯಾಬಲದ ಕೊರತೆ ಇತ್ತು. ಯಾರೆಲ್ಲಾ ಬೆಂಬಲ ಸೂಚಿಸಿದ್ದಾರೆ ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಸೋನಿಯಾ ಗಾಂಧಿಯವರು ದೇವೇಗೌಡರಿಗೆ ರಾಜ್ಯಸಭೆಗೆ ನಿಲ್ಲುವಂತೆ ಒತ್ತಡ ಹಾಕಿದ್ದಾರೆ. ಹೀಗಾಗಿ ನಾನು ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

  ದೇವೇಗೌಡರು ಇವತ್ತು 12.30ಕ್ಕೆ ನಾಮಿನೇಷನ್ ಮಾಡುವುದಕ್ಕೆ ಒಪ್ಪಿದ್ದಾರೆ. ಸೋನಿಯಾ ಗಾಂಧಿ ಅವರು ದೇವೇಗೌಡರಿಗೆ ಕರೆ ಮಾಡಿ ಹೇಳಿದ್ದಾರೆ. ನಮ್ಮ ಪಕ್ಷದ ಶಾಸಕರು ನಾಯಕರು ಜೊತೆಗೆ ಚರ್ಚೆ ಮಾಡಿದ್ದೇವೆ. ಇವತ್ತು ನಾಮಿನೇಷನ್ ಮಾಡುವುದಕ್ಕೆ ದೇವೇಗೌಡರು ಒಪ್ಪಿದ್ದಾರೆ ಎಂದು ಹೇಳಿದರು.

  ಕಾಳಿನದಿ ದಂಡೆಯಲ್ಲಿ ಎಗ್ಗಿಲ್ಲದೇ ಸಾಗಿದೆ ಅಕ್ರಮ ಮರಳು ದಂಧೆ; ಅಧಿಕಾರಿಗಳೇ ಕುಮ್ಮಕ್ಕು ನೀಡುತ್ತಿರುವ ಆರೋಪ

  ದೇವೇಗೌಡರ ರಾಜಕೀಯ ಇತಿಹಾಸದಲ್ಲಿ ಅವರು ಜನರಿಂದ ಆಯ್ಕೆ ಆಗಿ ಕೆಲಸ ಮಾಡಿದ್ದಾರೆ. ಹಿರಿಯ ರಾಜಕೀಯ ನಾಯಕರು ಅನುಭವ ಇರುವವರು ಕಡಿಮೆ ಇದ್ದಾರೆ. ಆ ಕಾರಣಕ್ಕೆ ದೇವೇಗೌಡರನ್ನು ಆಯ್ಕೆ ಮಾಡುತ್ತಿದ್ದೇವೆ ಎಂದು ಎಚ್​ಡಿಕೆ ಹೇಳಿದರು.

  ನಾನು ಕಾಂಗ್ರೆಸ್ ನಾಯಕರ ಜೊತೆ ಮಾತನಾಡಿಲ್ಲ. ದೇವೇಗೌಡರು ರಾಜ್ಯಸಭೆಗೆ ಹೋಗುತ್ತಾರೆ ಎಂಬ ನಿರೀಕ್ಷೆ ಇರಲಿಲ್ಲ. ಸೋನಿಯಾ ಗಾಂಧಿ ಅವರು ಕರೆ ಮಾಡಿದ ಮೇಲೆ ಒಪ್ಪಿಕೊಂಡಿದ್ದೇವೆ ಎಂದರು.

  ಕಾಂಗ್ರೆಸ್​​​ಗೆ ಬೆಂಬಲ ನೀಡುವ ವಿಚಾರವಾಗಿ ಮಾಜಿ ಸಿಎಂ ಎಚ್​ಡಿಕೆ ಯಾವುದೇ ಸ್ಪಷ್ಟನೆ ನೀಡಲಿಲ್ಲ. ನಾನು ‌ಯಾವ ಪಕ್ಷದ ನಾಯಕರ ಜೊತೆಯೂ ಚರ್ಚೆ ಮಾಡಿಲ್ಲ. ದೇವೇಗೌಡರು ನಿಲ್ಲಬೇಕೆಂಬ ಚರ್ಚೆ ಇರಲಿಲ್ಲ. ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿದೆ. ಕಾಂಗ್ರೆಸ್ ಪಕ್ಷ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಎರಡೂ ಪಕ್ಷಗಳ ನಾಯಕರ ಹೊಂದಾಣಿಕೆಯಿಲ್ಲ. ಇಲ್ಲಿ ಯಾವುದೇ ರಾಜಕೀಯ ಹೊಂದಾಣಿಕೆಯಿಲ್ಲ ಎಂದರು.

  ದೇವೇಗೌಡರು ರಾಜ್ಯದ ಪರ ಧ್ವನಿ ಎತ್ತುತ್ತಾರೆ ಅಂತ ಭಾವಿಸಿದ್ದಾರೆ.  ಅವರು ಎಲ್ಲಾ ಸ್ಥಾನಮಾನವನ್ನು‌ ನೋಡಿದವರು. ಪ್ರಧಾನಿ ಸ್ಥಾನವನ್ನೂ ಪಡೆದವರು. ಗೆಲುವಿನ ಹಿಂದೆ ಹಲವು ಧ್ವನಿಗಳಿರುತ್ತವೆ. ಸೋಲಿನ ಹಿಂದೆ ಯಾವುದೇ ಧ್ವನಿ ಇರಲ್ಲ. ಯಾರು ಬೇಕಾದರೂ ಅವರನ್ನ ಬೆಂಬಲಿಸಲಿ ಎಂದು ಕಾಂಗ್ರೆಸ್ ಮೈತ್ರಿಯ ಬಗ್ಗೆ ಹೇಳಿದರು.

   
  First published: