ಬೆಂಗಳೂರು: ದೀಪಾವಳಿ (Deepavali 2021) ಹಿನ್ನೆಲೆ ಜೆಪಿ ಭವನದ ಕಚೇರಿಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು (HD Devegowda)ಪೂಜೆ ಸಲ್ಲಿಸಿ, ದೇಶದ ಜನತೆ ಹಬ್ಬದ ಶುಭಾಶಯ ತಿಳಿಸಿದರು. ಪ್ರತಿ ವರ್ಷ ಮನೆಯಲ್ಲಿ ದೀಪಾವಳಿ ಆಚರಣೆ ಮಾಡುತ್ತೇವೆ. 3 ದಿನಗಳ ಕಾಲ ಹಬ್ಬ ಮಾಡೋದು ನಮ್ಮ ಸಂಪ್ರದಾಯ. ಇದನ್ನ ಪ್ರತಿ ವರ್ಷ ಮಾಡಿಕೊಂಡು ಬರುತ್ತಿದ್ದೇವೆ. ಈ ಕಚೇರಿ ಕಟ್ಟಲು ತುಂಬಾ ಕಷ್ಟ ಪಟ್ಟಿದ್ದೇನೆ. ಹಳೆ ಕಟ್ಟಡ ಕೋರ್ಟ್ ಆದೇಶದ ಮೇಲೆ ಬಿಡಬೇಕಾಯ್ತು. ಅ ಬಳಿಕ ಅನೇಕ ಜನರ ಸಹಕಾರದಿಂದ ಈ ಕಟ್ಟಡ ಕಟ್ಟಿದ್ದೇವೆ. ಈ ಕಟ್ಟಡ ಕಟ್ಟಲು ತುಂಬಾ ಕಷ್ಟ ಅನುಭವಿಸಿದ್ದೇನೆ. ನಮ್ಮ ಪಕ್ಷದ ಶಾಸಕರು, ಪರಿಷತ್ ಸದಸ್ಯರು ಸೇರಿದಂತೆ ಅನೇಕ ಜನ ಹಣ ಕೊಟ್ಟಿದ್ದಾರೆ. 1.75 ಕೋಟಿ ಹಣ ಸಂಗ್ರಹ ಆಗಿ ಕಟ್ಟಡ ಕಟ್ಟಲಾಯ್ತು. ಸಂಗ್ರಹವಾದ ಹಣದಲ್ಲಿ ಸುಸಜ್ಜಿತವಾದ ಕಟ್ಟಡ ಕಟ್ಟಿದ್ದೇವೆ. ಹೀಗಾಗಿ ಇಲ್ಲಿ ಇವತ್ತು ಲಕ್ಷ್ಮಿ ಪೂಜೆ ಮಾಡಿದ್ದೇವೆ. ಇಂದು ಪಕ್ಷಕ್ಕೆ 10 ಲಕ್ಷ ಹಣ ಶರವಣ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ನಮ್ಮ ಶಾಸಕರು ಪಕ್ಷ ಸಂಘಟನೆಗೆ ಹಣ ಕೊಡ್ತಾರೆ. ಬಿಜೆಪಿ- ಕಾಂಗ್ರೆಸ್ ಪಕ್ಷದ ಬಳಿ ಎಷ್ಟು ಇದೆ ಅಂತ ನಾನು ಮಾತಾಡೊಲ್ಲ. ಇದು ಪ್ರಾದೇಶಿಕ ಪಕ್ಷ. ಇದನ್ನ ಉಳಿಸೋ ಜವಾಬ್ದಾರಿ ಇದೆ. ಈ ಜವಾಬ್ದಾರಿ ಎಲ್ಲರೂ ಹೊತ್ತಿಕೊಳ್ಳಬೇಕು. ಬಿಡದಿಯಲ್ಲಿ ಎಲ್ಲಾ ವರ್ಗಗಳ ಸಭೆ ಕುಮಾರಸ್ವಾಮಿ ಮಾಡಿದ್ರು. ಉಪ ಚುನಾವಣೆಗೂ ಹಣಕ್ಕೆ ಎಷ್ಟು ಕಷ್ಟ ಪಟ್ಟರು ಗೊತ್ತಿದೆ. ಸೋಲು-ಗೆಲುವಿನ ಸಾಮಾನ್ಯ. ಆದ್ರೆ ಪಕ್ಷದ ಬೆಳವಣಿಗೆ ಆರ್ಥಿಕ ಶಕ್ತಿ ಮುಖ್ಯ. ಹೀಗಾಗಿ ಪಕ್ಷದ ಶಾಸಕರು ಸೇರಿದಂತೆ ಎಲ್ಲಾ ಮುಖಂಡರು ಸಹಾಯ ಮಾಡಬೇಕು ಎಂದರು.
ಇದನ್ನೂ ಓದಿ: Karnataka By Election Result 2021: ಸಿಎಂ ತವರು ಜಿಲ್ಲೆಯಲ್ಲೇ ಸೋಲು; ಬಿಜೆಪಿ ನಾಯಕರ ಮಹತ್ವದ ನಿರ್ಧಾರ
2023 ರ ಚುನಾವಣೆ ನಾನು ಆಕ್ಟೀವ್ ಆಗಿ ಕೆಲಸ ಮಾಡ್ತೀನಿ. 2023 ರ ಚುನಾವಣೆಗೆ ಅನೇಕ ಕಾರ್ಯಕ್ರಮ ರೂಪಿಸಿದ್ದೇವೆ. ಅದನ್ನ ಹಂತ ಹಂತವಾಗಿ ಅನುಷ್ಠಾನ ಮಾಡ್ತೀವಿ. ನವೆಂಬರ್ 8 ರಿಂದ ಪಕ್ಷ ಸಂಘಟನೆಯ ಸಭೆಗಳನ್ನ ಪ್ರಾರಂಭ ಮಾಡ್ತೀವಿ. ನಾವು ಯಾವುದೇ ಕಾರಣಕ್ಕೂ ಕುಳಿತುಕೊಳ್ಳೋದಿಲ್ಲ. ಉಪ ಚುನಾವಣೆ ಬಗ್ಗೆ ನಾನು ಮಾತಾಡೊಲ್ಲ. ಫಲಿತಾಂಶ ನಾನು ಸ್ವೀಕಾರ ಮಾಡ್ತೀನಿ. ಅದರ ವಿಶ್ಲೇಷಣೆ ನಾನು ಮಾಡಲ್ಲ. ಜನತೆ ತೀರ್ಪು ಒಪ್ಪುತ್ತೇವೆ ಆದ್ರೂ ಪಕ್ಷ ಉಳಿಸಲು ನಾವು ಕೆಲಸ ಮುಂದುವರಿಸುತ್ತೇವೆ ಎಂದು ಹೇಳಿದರು.
ಅಲ್ಪಸಂಖ್ಯಾತರ ಮತಗಳು ಯಾರಿಗೆ ಹೋಯ್ತು?
ಸಿಂದಗಿಯಲ್ಲಿ 38 ಸಾವಿರ ಮುಸ್ಲಿಂ ಮತ ಇದೆ. ಅಲ್ಲಿ ಅ ಮತಗಳು ಯಾರಿಗೆ ಹೋಯ್ತು. ಅ ಮತಗಳು ಬಿಜೆಪಿಗೆ ಹೋಯ್ತಾ? ಕಾಂಗ್ರೆಸ್ ಅವರು ಜೆಡಿಎಸ್ ಗೆ ಮತ ಹಾಕಬೇಡಿ ಅದು ಬಿಜೆಪಿ ಗೆ ಹೋಗುತ್ತೆ ಅಂದ್ರು ನಮ್ಮ ಅಭ್ಯರ್ಥಿಗೆ 4 ಸಾವಿರ ವೋಟ್ ಬಂತು. ಉಳಿದ ಮತ ಯಾರಿಗೆ ಹೋಯ್ತು ಅಂತ ಜನರೇ ತೀರ್ಮಾನ ಮಾಡಲಿ.
ಇದನ್ನೂ ಓದಿ: BJP Ex MLA; ಪೊಲೀಸ್ ಪೇದೆಗೆ ಕಪಾಳಮೋಕ್ಷ ಮಾಡಿದ ಬಿಜೆಪಿ ಮಾಜಿ ಶಾಸಕ ಪಾಪರೆಡ್ಡಿ: ಕ್ಷಮೆ ಕೇಳಲ್ಲ ಅಂದಿದ್ಯಾಕೆ?
ಕಾಂಗ್ರೆಸ್ ಅಭ್ಯರ್ಥಿ 32 ಸಾವಿರ ಮತದಿಂದ ಸೋತ್ರು. ಹಾಗಾದ್ರೆ ಮುಸ್ಲಿಂ ಮತ ಯಾರಿಗೆ ಹೋಯ್ತು. ಬಸವ ಕಲ್ಯಾಣದಿಂದಲೂ ನಮ್ಮ ಮೇಲೆ ಕಾಂಗ್ರೆಸ್ ಆರೋಪ ಮಾಡ್ತಿದೆ. ನಾನು ಯಾವುದೇ ಉಪ ಚುನಾವಣೆಗೆ ಪ್ರಚಾರಕ್ಕೆ ಹೋಗಿಲ್ಲ. ಆದ್ರೆ ಸಿಂದಗಿಯಲ್ಲಿ ನಾನು ಕೆಲಸ ಮಾಡಿದೆ. ಅದಕ್ಕೆ ಹೋಗಿದ್ದೆ. ಇದನ್ನ ಕಾಂಗ್ರೆಸ್, ಬಿಜೆಪಿ ಅಲ್ಲಗೆಳೆಯಲು ಸಾಧ್ಯವಿಲ್ಲ. ನಾನು ಹೋದ ಕಡೆ ಜನ ನೀರಾವರಿ ಕೊಟ್ಟಿದ್ದೀರಾ ಅಂದ್ರು. ಆದ್ರೆ ಜನ 4 ಸಾವಿರ ಮತ ಕೊಟ್ರು. ಇದನ್ನ ನಾನು ಒಪ್ಪಿಕೊಳ್ತೀನಿ ಎಂದರು.
ಎಲ್ಲರಿಗೂ ನರಕ ಚತುರ್ದಶಿ, ದೀಪಾವಳಿ ಹಬ್ಬದ ಶುಭಾಶಯಗಳು.
ನರಕಾಸುರನನ್ನು ಭಗವಾನ್ ಶ್ರೀಕೃಷ್ಣನು ವಧೆ ಮಾಡಿ ಲೋಕದಲ್ಲಿ ಶಾಂತಿನೆಲೆಸುವಂತೆ ಮಾಡಿದ ದಿನವಿಂದು.ಈ ನರಕ ಚತುರ್ದಶಿಯು ಬದುಕಿನ ಎಲ್ಲಾ ಸಂಕಷ್ಟ, ಅಂಧಾಕಾರವನ್ನು ನಿವಾರಿಸಿ ಸುಖ, ಶಾಂತಿ, ಸಂತೋಷ ಮತ್ತು ಸಮೃದ್ಧಿಯನ್ನು ತರಲಿ. ದೀಪಗಳ ಹಬ್ಬ ಎಲ್ಲರಿಗೂ ಸಂತಸ ತರಲಿ.#HappyDeepavali
— H D Devegowda (@H_D_Devegowda) November 3, 2021
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಚುನಾವಣೆ ವೇಳೆ RSS ಬಗ್ಗೆ ಟೀಕಿಸಿದ್ದಕ್ಕೆ ಸೋಲಾಯ್ತಾ ಎಂದು ಪ್ರಶ್ನೆ ಕೇಳಲಾಗಿತ್ತು. ಪ್ರಶ್ನೆ ಕೇಳುತ್ತಲೇ ಗರಂ ಆದ ದೇವೇಗೌಡರು. ಅದೆಲ್ಲ ಮುಗಿದ ಅಧ್ಯಾಯ. ಈಗ ಅದನ್ನ ಯಾಕೆ ನೆನಪು ಮಾಡ್ತೀರಾ? ಹಾಗೆ ಮಾತಾಡಿದ್ದಕ್ಕೆ ಸೋಲಾಯ್ತು, ಇದನ್ನ ಮಾಡಿದ್ದಕ್ಕೆ ಸೋಲಾಯ್ತು ಅನ್ನೋ ಚರ್ಚೆ ಬೇಡ. ಇವತ್ತು ಹಬ್ಬದ ದಿನ ಈಗ ಅದೆಲ್ಲ ಚರ್ಚೆ ಬೇಡ. ನಾನು ಹೇಳಬೇಕಾದ್ದನ್ನ ಹೇಳಿದ್ದೇನೆ ಎಂದು ಸಿಟ್ಟಾದರು.
ಟಿಕೆಟ್ ಘೋಷಣೆಯಲ್ಲಿ ಎಲ್ಲ ಭಾಗಕ್ಕೂ ಆದ್ಯತೆ
ಕಾಂಂಗ್ರೆಸ್ ನಮ್ಮ ಅಭ್ಯರ್ಥಿಯನ್ನು ಕರೆದುಕೊಂಡು ಹೋಗಿದ್ದರಿಂದ ಅಂಗಡಿ ಕುಟುಂಬಕ್ಕೆ ಟಿಕೆಟ್ ನೀಡಲಾಯ್ತು. 2023 ರ ಚುನಾವಣೆ ನಾನು ಪ್ರವಾಸ ಮಾಡ್ತೀನಿ. ಪ್ರತಿ ತಿಂಗಳು 2-3 ಜಿಲ್ಲೆ ಪ್ರವಾಸ ಮಾಡ್ತೀನಿ. ಅಭ್ಯರ್ಥಿ ಆಯ್ಕೆಗೂ ಒಂದು ಕಮಿಟಿ ಮಾಡಿ ಅ ಕಮಿಟಿಯಲ್ಲಿ ಅಭ್ಯರ್ಥಿ ಘೋಷಣೆ ಮಾಡ್ತೀವಿ. ಟಿಕೆಟ್ ಘೋಷಣೆಯಲ್ಲಿ ಎಲ್ಲಾ ಭಾಗಕ್ಕೂ ಆದ್ಯತೆ ಕೊಡ್ತೀವಿ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ