ಕೊರೋನಾದಿಂದ ಗುಣಮುಖರಾದ ದೇವೇಗೌಡ ದಂಪತಿ; ಎಲ್ಲರಿಗೂ ಧನ್ಯವಾದ ಅರ್ಪಿಸಿದ ಮಾಜಿ ಪ್ರಧಾನಿ

ದೇವೇಗೌಡ ದಂಪತಿ ಕೊರೋನಾ ಸೋಂಕಿಗೆ ತುತ್ತಾದ ಬಳಿಕ ಅವರು ಶೀಘ್ರ ಗುಣಮುಖರಾಗಲಿ ಎಂದು ಪ್ರಧಾನಿ ಮೋದಿ ಅವರಿಂದ ಹಿಡಿದು, ರಾಜಕೀಯ ನಾಯಕರು ಹಾಗೂ ಎಲ್ಲ ಪಕ್ಷಗಳ ಮುಖಂಡರು ಮತ್ತು ಪಕ್ಷದ ಕಾರ್ಯಕರ್ತರು ಹಾರೈಸಿದ್ದರು.

ಕೊರೋನಾದಿಂದ ಗುಣಮುಖರಾದ ಎಚ್.ಡಿ.ದೇವೇಗೌಡರಿಗೆ ಹೂಗುಚ್ಛ ನೀಡಿದ ವೈದ್ಯರು.

ಕೊರೋನಾದಿಂದ ಗುಣಮುಖರಾದ ಎಚ್.ಡಿ.ದೇವೇಗೌಡರಿಗೆ ಹೂಗುಚ್ಛ ನೀಡಿದ ವೈದ್ಯರು.

  • Share this:
    ಬೆಂಗಳೂರು: ಕಳೆದ ನಾಲ್ಕು ದಿನಗಳ ಹಿಂದೆ ಕೊರೋನಾ ಪಾಸಿಟಿವ್​ಗೆ ತುತ್ತಾಗಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಅವರ ಹೆಂಡತಿ ಚೆನ್ನಮ್ಮ ಅವರು ಇಂದು ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್​ಚಾರ್ಜ್ ಆಗಿದ್ದಾರೆ. ಆಸ್ಪತ್ರೆಗೆ ಸೇರಿದ ಬಳಿಕ ಶೀಘ್ರ ಗುಣಮುಖರಾಗುವಂತೆ ಹಾರೈಸಿದ ಪ್ರತಿಯೊಬ್ಬರಿಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಧನ್ಯವಾದ ಅರ್ಪಿಸಿದ್ದಾರೆ.

    ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ದೇವೇಗೌಡರು ಕೃತಜ್ಞತಾ ಪತ್ರ ಬರೆದಿದ್ದಾರೆ.  ನಾನು ಮತ್ತು ನನ್ನ ಧರ್ಮಪತ್ನಿ ಕೊರೋನಾ ರೋಗ ಲಕ್ಷಣಗಳನ್ನು ಹೊಂದಿದ್ದೇವೆಂಬ ಸುದ್ದಿ ತಿಳಿದೊಡನೆಯೇ ನೀವು ವ್ಯಕ್ತಪಡಿಸಿದ ಆತಂಕ, ವಿಚಾರಿಸಿಕೊಂಡ ಕಾಳಜಿ, ತೋರಿದ ಕಳಕಳಿ, ಬೇಗ ಗುಣಮುಖವಾಗಿ ಬನ್ನಿ ಎಂದು ಹಾರೈಸಿದ ಬಗೆ ನಮ್ಮನ್ನು ಮೂಕವಿಸ್ಮಿತರನ್ನಾಗಿಸಿತು. ನಿಮ್ಮ ಅಭಿಮಾನದ ಶ್ರೀರಕ್ಷೆ ನನ್ನ ಪಾಲಿಗಿರುವುದು ನಮ್ಮ ಸುದೈವವೆಂದೇ ಭಾವಿಸಿದ್ದೇನೆ. ಇದಕ್ಕಾಗಿ ನಿಮಗೆಲ್ಲಾ ನಮ್ಮ ಧನ್ಯವಾದಗಳು. ಆ ನಿಮ್ಮ ಹರಕೆ, ಆರೈಕೆಯ ಫಲವಾಗಿ ನಾವೀಗ ಗುಣಮುಖರಾಗಿದ್ದೇವೆ. ಆತಂಕ ಬೇಡ. ನಿಮ್ಮ ಎಂದಿನ ಅಭಿಮಾನ ಹೀಗೆ ಇರಲಿ. ನಾನು ಮತ್ತೆ ಕ್ರಿಯಾಶೀಲ ಸಾರ್ವಜನಿಕ ಬದುಕಿಗೆ ಮರುಳುವವನಿದ್ದೇನೆ. ದೇವರ ದಯೆ ಎಲ್ಲರ ಪಾಲಿಗಿರಲಿ ಎಂದು ಕೃತಜ್ಞತೆ ಅರ್ಪಿಸಿದ್ದಾರೆ.

    ಇದನ್ನು ಓದಿ: ಚುನಾವಣಾ ಆಯೋಗ ಅನುಮತಿ ನೀಡಿದರೆ ಸಂಬಳ ಹೆಚ್ಚಿಸುತ್ತೇವೆ, ಮುಷ್ಕರ ಮಾಡಬೇಡಿ; ಸಾರಿಗೆ ನೌಕರರಿಗೆ ಸವದಿ ಮನವಿ

    ಕಳೆದ ಬುಧವಾರ ದೇವೇಗೌಡರು ಹಾಗೂ ಅವರ ಹೆಂಡತಿ ಚೆನ್ನಮ್ಮ ಅವರಿಗೆ ಜ್ವರದ ಲಕ್ಷಣಗಳು ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರ ಮನೆಯಲ್ಲಿ ಕೊರೋನಾ ಟೆಸ್ಟ್ ಮಾಡಲಾಗಿತ್ತು. ಟೆಸ್ಟ್​ನಲ್ಲಿ ಪಾಸಿಟಿವ್ ವರದಿ ಬಂದ ಬಳಿಕ ಅವರು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಇದೀಗ ಇಬ್ಬರೂ ಗುಣಮುಖರಾಗಿ ಮನೆಗೆ ಮರಳಿದ್ದಾರೆ.

    ದೇವೇಗೌಡ ದಂಪತಿ ಕೊರೋನಾ ಸೋಂಕಿಗೆ ತುತ್ತಾದ ಬಳಿಕ ಅವರು ಶೀಘ್ರ ಗುಣಮುಖರಾಗಲಿ ಎಂದು ಪ್ರಧಾನಿ ಮೋದಿ ಅವರಿಂದ ಹಿಡಿದು, ರಾಜಕೀಯ ನಾಯಕರು ಹಾಗೂ ಎಲ್ಲ ಪಕ್ಷಗಳ ಮುಖಂಡರು ಮತ್ತು ಪಕ್ಷದ ಕಾರ್ಯಕರ್ತರು ಹಾರೈಸಿದ್ದರು.
    Published by:HR Ramesh
    First published: