ಮೋದಿಯ ಗರ್ವ ಮುರಿಯಲು ನಾವು ಒಗ್ಗಟ್ಟಾಗಿದ್ದೇವೆ; ವಿಜಯಪುರದಲ್ಲಿ ಗುಡುಗಿದ ಮಾಜಿ ಪ್ರಧಾನಿ ದೇವೇಗೌಡ

ಮೋದಿಯವರು ತಮ್ಮ ಸ್ಥಾನವನ್ನೂ ಮರೆತು ಕೆಟ್ಟದಾಗಿ ಮಾತನಾಡುತ್ತಾರೆ. ಅವರ ಮಟ್ಟಕ್ಕೆ ನಾನು ಇಳಿಯುವುದಿಲ್ಲ ಎಂದು ದೇವೇಗೌಡರು ವಿಜಯಪುರದಲ್ಲಿ ಹೇಳಿದ್ದಾರೆ.

Sushma Chakre | news18
Updated:April 19, 2019, 10:36 PM IST
ಮೋದಿಯ ಗರ್ವ ಮುರಿಯಲು ನಾವು ಒಗ್ಗಟ್ಟಾಗಿದ್ದೇವೆ; ವಿಜಯಪುರದಲ್ಲಿ ಗುಡುಗಿದ ಮಾಜಿ ಪ್ರಧಾನಿ ದೇವೇಗೌಡ
ದೇವೇಗೌಡ- ಮೋದಿ
Sushma Chakre | news18
Updated: April 19, 2019, 10:36 PM IST
ವಿಜಯಪುರ (ಏ. 19): ಕಾಂಗ್ರೆಸ್​ಮುಕ್ತ ಭಾರತ ನಿರ್ಮಾಣ ಮಾಡುತ್ತೇವೆ ಎಂಬ ಪ್ರಧಾನಿ ಮೋದಿಯವರ ಗರ್ವ ಮುರಿಯಲು ನಾವು ಒಗ್ಗಟ್ಟಾಗಿದ್ದೇವೆ ಎಂದು ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಗುಡುಗಿದ್ದಾರೆ.

ವಿಜಯಪುರದಲ್ಲಿ ಇಂದು ಮಾತನಾಡಿರುವ ದೇವೇಗೌಡರು, ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿ ಚುನಾವಣೆ ಎದುರಿಸುತ್ತಿದ್ದೇವೆ. ಮಹಿಳಾ ಮೀಸಲಾತಿ ತರಲು ನಾನು ಪ್ರಯತ್ನಿಸಿದ್ದೇನೆ. ಇದೀಗ ವಿಜಯಪುರ ಮೈತ್ರಿಕೂಟದ ಅಭ್ಯರ್ಥಿಯಾಗಿ ಮಹಿಳೆ ಕಣಕ್ಕಿಳಿದಿದ್ದಾರೆ. ಜಿಲ್ಲೆಯ ಜನರು ಅವರನ್ನು ಗೆಲ್ಲಿಸಬೇಕು ಎಂದಿದ್ದಾರೆ.

ಶ್ರೀರಾಮುಲು ವಿರೋಧಪಕ್ಷದ ಉಪನಾಯಕನಾದರೆ ರಾಜು ಗೌಡ ಹೇಳಿದಂತೆ ಕೇಳುತ್ತೇನೆ; ಮಾಜಿ ಸಚಿವ ಶಿವರಾಜ ತಂಗಡಗಿ ಸವಾಲು

ನಾವು ವಿಜಯಪುರ ಜಿಲ್ಲೆಗೆ ನೀರಾವರಿ ಯೋಜನೆಗಳಿಗೆ ಚಾಲನೆ ನೀಡಿದ್ದೇನೆ. ಕೃಷ್ಣಾ ಕಣಿವೆ ನೀರಾವರಿಗೆ ಕಷ್ಟ ಕಾಲದಲ್ಲಿ ಹಣ ನೀಡಿದ್ದೇನೆ. ವಿಜಯಪುರದಲ್ಲಿ ಎಂ.ಬಿ. ಪಾಟೀಲ ಒಳ್ಳೆ ಕೆಲಸ ಮಾಡಿದ್ದಾರೆ. ಅವರು ನೀರಾವರಿ ಸಚಿವರಾಗಿದ್ದಾಗ ಉತ್ತಮ ಕೆಲಸ ಮಾಡಿದ್ದಾರೆ. ಮೋದಿ ಮಾತಿನಿಂದ ಯುವಕರು ಮೋಸ ಹೋಗಬಾರದು. ಬಿಜೆಪಿಯವರು ಅಂಬೇಡ್ಕರ್ ಬರೆದ ಸಂವಿಧಾನವನ್ನು ನಾಶ ಮಾಡುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.

ಬಿಜೆಪಿಯಲ್ಲಿ ಈಗ ಎಲ್​.ಕೆ. ಅಡ್ವಾಣಿಯವರನ್ನು ಬದಿಗೆ ತಳ್ಳಲಾಗಿದೆ. ಮೋದಿಯವರು ರಾಜಧರ್ಮ ಪಾಲಿಸುತ್ತಿಲ್ಲ ಎಂದು ಮಾಜಿ ಪ್ರಧಾನಿ ವಾಜಪೇಯಿ ಹಿಂದೊಮ್ಮೆ ಹೇಳಿದ್ದರು. ಮೋದಿಯವರು ತಮ್ಮ ಸ್ಥಾನವನ್ನೂ ಮರೆತು ಕೆಟ್ಟದಾಗಿ ಮಾತನಾಡುತ್ತಾರೆ. ಅವರ ಮಟ್ಟಕ್ಕೆ ನಾನು ಇಳಿಯುವುದಿಲ್ಲ ಎಂದು ದೇವೇಗೌಡರು ಹೇಳಿದ್ದಾರೆ.

First published:April 19, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...