ಟಿಕೆಟ್ ರೇಸ್​​ನಲ್ಲಿ ಸೊಸೆ ಭವಾನಿ, ಮೊಮ್ಮೊಗ ಸೂರಜ್ ಹೆಸರು; ನನಗೆ ಕೆಟ್ಟ ಹೆಸರು ಬೇಡ ಎಂದ HD Deve Gowda

ಸಭೆಯಲ್ಲಿ ಕೆಲವರು ಭವಾನಿ ರೇವಣ್ಣ, ಸೂರಜ್ ಹೆಸರು ಹೇಳಿದ್ದಾರೆ. ಅಂತಿಮವಾಗಿ ನಮಗೆ ಯಾವುದೇ ಕೆಟ್ಟ ಹೆಸರು ಬರಬಾರದು. ಪಕ್ಷಕ್ಕೆ ದುಡಿದ ನೂರಾರು ಕಾರ್ಯಕರ್ತರಿದ್ದಾರೆ. ನಮ್ಮ ಮನೆಯಲ್ಲಿ ಯಾರನ್ನೂ ನಿಲ್ಲಿಸಲು ತೀರ್ಮಾನ ಮಾಡಿಲ್ಲ. ಯಾವುದೇ ಮನೆತನಕ್ಕೆ ಜೆಡಿಎಸ್ ಸೀಮಿತವಾದ ಪಕ್ಷವಲ್ಲ ಎಂದರು.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ

  • Share this:
ಹಾಸನ: ವಿಧಾನ ಪರಿಷತ್​​ ಚುನಾವಣೆಗೆ (Council Election) ಅಭ್ಯರ್ಥಿ ಆಯ್ಕೆಯಲ್ಲಿ ನಮಗೆ ಯಾವುದೇ ಕೆಟ್ಟ ಹೆಸರು ಬರಬಾರದು. ನಮ್ಮ ಮನೆಯಲ್ಲಿ ಯಾರನ್ನೂ ನಿಲ್ಲಿಸಲು ತೀರ್ಮಾನ ಮಾಡಿಲ್ಲ ಎಂದು ಜೆಡಿಎಸ್​ ವರಿಷ್ಠ, ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರು (H. D. Deve Gowda) ಸ್ಪಷ್ಟನೆ ನೀಡಿದರು. ಜನವರಿಯಲ್ಲಿ ತೆರವಾಗುತ್ತಿರುವ ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣೆ ಘೋಷಣೆ ಹಿನ್ನೆಲೆ ಜಿಲ್ಲೆಯ ಸಂಸದ ಪ್ರಜ್ವಲ್​​ ರೇವಣ್ಣ(Prajwal Revanna) ಅವರ ಅಧಿಕೃತ ನಿವಾಸದಲ್ಲಿ ಜೆಡಿಎಸ್ ಶಾಸಕರು, ಮುಖಂಡರು, ಕಾರ್ಯಕರ್ತರ ಸಭೆ (JDS Meeting) ನಡೆಸಿದರು. ಅಭ್ಯರ್ಥಿ ಆಯ್ಕೆ ಸಂಬಂಧ ಸಭೆಯಲ್ಲಿ ಎಚ್.ಡಿ.ದೇವೇಗೌಡ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಶಾಸಕರುಗಳಾದ ಎಚ್.ಡಿ.ರೇವಣ್ಣ, ಕೆ.ಎಸ್.ಲಿಂಗೇಶ್, ಮಾಜಿಶಾಸಕರು, ಜಿ.ಪಂ. ಸದಸ್ಯರ ಅಭಿಪ್ರಾಯ ಸಂಗ್ರಹಿಸಲಾಯಿತು. ಟಿಕೆಟ್​​ ಗಾಗಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಪುತ್ರ ಡಾಕ್ಟರ್ ಸೂರಜ್ (Suraj Revanna) ಹೆಸರು ಹಾಗೂ ರೇವಣ್ಣ ಪತ್ನಿ ಭವಾನಿ ರೇವಣ್ಣ (Bhavani Revanna) ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ.

ನಮ್ಮ ಮನೆಯಲ್ಲಿ ಯಾರನ್ನೂ ನಿಲ್ಲಿಸಲು ತೀರ್ಮಾನ ಮಾಡಿಲ್ಲ

ಹಾಸನದ ಜೆಡಿಎಸ್ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರ ಸಭೆ ಬಳಿಕ ಮಾತನಾಡಿದ ಎಚ್.ಡಿ.ದೇವೇಗೌಡ, ಹಾಸನ ಜಿಲ್ಲೆಯ ಪ್ರತಿ ತಾಲ್ಲೂಕಿಗೆ ಹೋಗಿ ಚುನಾಯಿತ ಸದಸ್ಯರೊಂದಿಗೆ ಸಭೆ ಮಾಡುತ್ತೇನೆ. ಜಿ.ಪಂ., ತಾ.ಪಂ.‌ ಮಾಜಿ ಸದಸ್ಯರ ಜೊತೆಯೂ ಚರ್ಚಿಸುತ್ತೇನೆ. ಅನಂತರ ಅಭ್ಯರ್ಥಿ ಯಾರೆಂದು ತೀರ್ಮಾನ ತೆಗೆದುಕೊಳ್ಳುತ್ತೇನೆ. ಇಂದಿನ ಸಭೆಯಲ್ಲಿ ಕೆಲವರು ಭವಾನಿ ರೇವಣ್ಣ, ಸೂರಜ್ ಹೆಸರು ಹೇಳಿದ್ದಾರೆ. ಅಂತಿಮವಾಗಿ ನಮಗೆ ಯಾವುದೇ ಕೆಟ್ಟ ಹೆಸರು ಬರಬಾರದು. ಪಕ್ಷಕ್ಕೆ ದುಡಿದ ನೂರಾರು ಕಾರ್ಯಕರ್ತರಿದ್ದಾರೆ. ನಮ್ಮ ಮನೆಯಲ್ಲಿ ಯಾರನ್ನೂ ನಿಲ್ಲಿಸಲು ತೀರ್ಮಾನ ಮಾಡಿಲ್ಲ. ಯಾವುದೇ ಮನೆತನಕ್ಕೆ ಜೆಡಿಎಸ್ ಸೀಮಿತವಾದ ಪಕ್ಷವಲ್ಲ ಎಂದರು.

ಅವರೇ ನಮ್ಮ ಮನೆ ಬಾಗಿಲಿಗೆ ಬರ್ತಾರೆ

ಜೆಡಿಎಸ್ ನಿಂದ ಬೆಳೆದ ಮುಖಂಡರು ಈಗ ಕಾಂಗ್ರೆಸ್- ಬಿಜೆಪಿಯಲ್ಲಿ ಇದ್ದಾರೆ, ಅವರು 2023 ಕ್ಕೆ ಜೆಡಿಎಸ್ ಇರಲ್ಲ ಅಂಥಾ ಹೇಳ್ತಿದ್ದಾರೆ. 2023ಕ್ಕೆ ಯಾರೂ ಪಕ್ಷ ತೆಗಿತ್ತೀನಿ ಅಂಥಾ ಹೇಳ್ತಾರೋ ಅವರೇ ನಮ್ಮ ಮನೆ ಬಾಗಿಲಿಗೆ ಬರಬಹುದು. ನಾನು ಉತ್ಪ್ರೇಕ್ಷೆಯಿಂದ ಹೇಳುತ್ತಿಲ್ಲ ಹಾಗೇ ಹೇಳುವವರೇ ಜೆಡಿಎಸ್ ಮನೆ ಬಾಗಿಲಿಗೆ ಬರಬಹುದು ಎಂದು ಟೀಕಾಕಾರರಿಗೆ ತಿರುಗೇಟು ನೀಡಿದರು.

ಇದನ್ನೂ ಓದಿ: ದೇವೇಗೌಡ-ಕುಮಾರಸ್ವಾಮಿ ಹೆಸರೇಳಿದ್ದೇ ಓಡಿ ಬಂದು Vote ಹಾಕೋರು ಯಾರು ಇಲ್ಲ; HDD ಎದುರೇ ಅಸಮಾಧಾನ!

ನಮ್ಮ ಕುಟುಂಬಕ್ಕೇ ಟಿಕೆಟ್​ ಕೊಡಬೇಕೆಂದು ಎಲ್ಲೂ ಹೇಳಿಲ್ಲ

ಸಭೆಗೂ ಮುನ್ನ ವಿಧಾನ ಪರಿಷತ್ ಚುನಾವಣೆಗೆ ಸೋದರ ಸೂರಜ್ ರೇವಣ್ಣ, ತಾಯಿ ಭವಾನಿ ರೇವಣ್ಣ ಹೆಸರು ಕೇಳಿ ಬರುತ್ತಿರುವ ಹಿನ್ನೆಲೆ ಅರಸೀಕೆರೆಯಲ್ಲಿ ಮಾತನಾಡಿದ ಸಂಸದ ಪ್ರಜ್ವಲ್ ರೇವಣ್ಣ, ಈ‌ ಬಗ್ಗೆ ಇನ್ನೂ‌ ಚರ್ಚೆ ನಡೆದಿಲ್ಲ. ಜೆಡಿಎಸ್ ಶಾಸಕರು, ಮುಖಂಡರು, ಕಾರ್ಯಕರ್ತರು ಸೇರಿ ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಅದು ಅಂತಿಮವಾಗಿರುತ್ತೆ.  ನಮ್ಮ ಕುಟುಂಬಕ್ಕೆ ಕೊಡಬೇಕೆಂದು ಎಲ್ಲೂ ಹೇಳಿಲ್ಲ, ಎಲ್ಲೂ ಕೇಳಿಲ್ಲ. ಇಂದು ಚರ್ಚೆ ನಡೆಯುತ್ತೆ, ಅದರ ಮೇಲೆ ತೀರ್ಮಾನ ಆಗುತ್ತೆ ಎಂದರು.

ಅವೆಲ್ಲಾ ಕೇವಲ ಊಹಾಪೋಹಗಳು

ಇನ್ನು ಎಂ.ಎಲ್.ಸಿ. ಚುನಾವಣೆಗೆ ಸೂರಜ್ ರೇವಣ್ಣ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಸಚಿವ ಎಚ್.ಡಿ.ರೇವಣ್ಣ, ದೇವೇಗೌಡರು, ಶಾಸಕರು, ಮುಖಂಡರು, ಕಾರ್ಯಕರ್ತರ ಜೊತೆ ಸಭೆ ಬಳಿಕ ಇದಾದ ಬಳಿಕ, ತಾಲ್ಲೂಕುಗಳಲ್ಲಿ ಸಭೆ ನಡೆಸುತ್ತೇವೆ.  ಎಲ್ಲರ ಅಭಿಪ್ರಾಯ ಪಡೆಯುತ್ತೇವೆ. ಸೂರಜ್​​ ಗೆ ಟಿಕೆಟ್​ ಪಕ್ಕಾ ಅನ್ನೋದೆಲ್ಲಾ ಕೇವಲ ಊಹಾಪೋಹಗಳು. ಎಲ್ಲಾ ಶಾಸಕರು ಕುಳಿತು ಚರ್ಚಿಸುತ್ತಾರೆ ಎಂದು ಸ್ಪಷ್ಟನೆ ನೀಡಿದರು.
Published by:Kavya V
First published: