ಹೀನಾಯ ಸೋಲಿನಿಂದ ಕಂಗೆಟ್ಟ ಜೆಡಿಎಸ್ ಹೊಸ ತಂತ್ರ; ಪ್ರಜ್ವಲ್ ರೇವಣ್ಣ ಹೆಗಲಿಗೆ ಪಕ್ಷ ಸಂಘಟನೆಯ ಹೊಣೆ

ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್​ ಪ್ರಾಬಲ್ಯ ಇಲ್ಲದ ಕಾರಣ ಆ ಕಡೆ ಹೆಚ್ಚು ಗಮನ ಹರಿಸಿರುವ ಪಕ್ಷದ ನಾಯಕರು ಸಂಕಷ್ಟ ಸ್ಥಿತಿಯಲ್ಲಿರುವ ಪಕ್ಷವನ್ನು ಮೇಲಕ್ಕೆ ತರಲು ಪ್ರಯತ್ನ ಮಾಡುತ್ತಿದ್ದಾರೆ.

news18-kannada
Updated:December 14, 2019, 11:40 AM IST
ಹೀನಾಯ ಸೋಲಿನಿಂದ ಕಂಗೆಟ್ಟ ಜೆಡಿಎಸ್ ಹೊಸ ತಂತ್ರ; ಪ್ರಜ್ವಲ್ ರೇವಣ್ಣ ಹೆಗಲಿಗೆ ಪಕ್ಷ ಸಂಘಟನೆಯ ಹೊಣೆ
ಪ್ರಜ್ವಲ್​ ರೇವಣ್ಣ
  • Share this:
ಬೆಂಗಳೂರು (ಡಿ. 14): ಕರ್ನಾಟಕದ 15 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಒಂದು ಕ್ಷೇತ್ರದಲ್ಲೂ ಗೆಲ್ಲದೆ ಹೀನಾಯವಾಗಿ ಸೋಲನ್ನಪ್ಪಿದ ಜೆಡಿಎಸ್​ ಪಕ್ಷವನ್ನು ಮೇಲಕ್ಕೆತ್ತಲು ಸಂಸದ ಪ್ರಜ್ವಲ್ ರೇವಣ್ಣ ಮುಂದಾಗಿದ್ದಾರೆ. 

ಅನರ್ಹ ಶಾಸಕರಿಂದ ತೆರವಾಗಿದ್ದ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಮಣಿಸಲೇಬೇಕೆಂದು ಹಠ ತೊಟ್ಟಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಪ್ರಬಲ ಅಭ್ಯರ್ಥಿಗಳನ್ನೇ ಕಣಕ್ಕೆ ಇಳಿಸಿದ್ದರು. ಆದರೆ, ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 2 ಕ್ಷೇತ್ರಗಳಲ್ಲಿ ಜಯ ಗಳಿಸಿತ್ತು. ಜೆಡಿಎಸ್​ ಶೂನ್ಯ ಸಂಪಾದನೆ ಮಾಡಿತ್ತು. ಈ ಹೀನಾಯ ಸೋಲಿನಿಂದ ಕಂಗೆಟ್ಟಿರುವ ಜೆಡಿಎಸ್​ ನಾಯಕರು ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ.

ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್​ ಪ್ರಾಬಲ್ಯ ಇಲ್ಲದ ಕಾರಣ ಆ ಕಡೆ ಹೆಚ್ಚು ಗಮನ ಹರಿಸಿರುವ ಪಕ್ಷದ ನಾಯಕರು ಸಂಕಷ್ಟ ಸ್ಥಿತಿಯಲ್ಲಿರುವ ಪಕ್ಷವನ್ನು ಮೇಲಕ್ಕೆ ತರಲು ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕಾಗಿ ಜೆಡಿಎಸ್ ಯೂಥ್ ಐಕಾನ್ ಎಂದೇ ಪರಿಗಣಿಸಲ್ಪಡುವ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಮುಂದಕ್ಕೆ ಬಿಡಲು ಪಕ್ಷದ ನಾಯಕರು ನಿರ್ಧರಿಸಿದ್ದಾರೆ.

Bangalore Crime: ಹೆಂಡತಿ ಇಲ್ಲದಿದ್ದಾಗ ಕೆಲಸದ ಹುಡುಗಿ ಮೇಲೆ ಅತ್ಯಾಚಾರ; ಮೈಕೈ ಸುಟ್ಟು ವಿಕೃತಿ ಮೆರೆದ ಬೆಂಗಳೂರು ಮೌಲ್ವಿಯ ಬಂಧನ

ಈ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷದ ಸಂಘಟನೆಗಾಗಿ ಸಂಸದ ಪ್ರಜ್ವಲ್ ರೇವಣ್ಣ ಸಂಕ್ರಾಂತಿ ಬಳಿಕ ಉತ್ತರ ಕರ್ನಾಟಕ ಜಿಲ್ಲೆಗಳಿಗೆ ಪ್ರವಾಸ ಮಾಡಲಿದ್ದಾರೆ. ಉತ್ತರ ಕರ್ನಾಟಕದಲ್ಲಿ 1 ತಿಂಗಳ ಕಾಲ ಉಳಿದುಕೊಂಡು ಕಾರ್ಯಕರ್ತರ ನೋಂದಣಿಗೆ ಪ್ರಜ್ವಲ್ ಚಾಲನೆ ನೀಡಲಿದ್ದಾರೆ. ಪ್ರತಿ ಜಿಲ್ಲೆಗೂ ಹೋಗಿ ಕಾರ್ಯಕರ್ತರು ಹಾಗೂ ಜೆಡಿಎಸ್ ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಲಿರುವ ಪ್ರಜ್ವಲ್ ರೇವಣ್ಣ ಪಕ್ಷ ಸಂಘಟನೆಯ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ.

ಪಕ್ಷದ ಉಳಿವಿಗಾಗಿ ಎರಡನೇ ಅಸ್ತ್ರ ಪ್ರಯೋಗಿಸುತ್ತಿರುವ ದೇವೇಗೌಡರು ತಮ್ಮ ಪಕ್ಷದ ಯುವ ನಾಯಕ ಪ್ರಜ್ವಲ್ ರೇವಣ್ಣ ಅವರನ್ನು ಉತ್ತರ ಕರ್ನಾಟಕಕ್ಕೆ ಕಳುಹಿಸಲಿದ್ದಾರೆ.  ಸೋಲಿನ ನಂತರ ಪಕ್ಷ ಬಲಪಡಿಸಲು ಪಣ ತೊಡಲು ಸೂಚನೆ ನೀಡಿರುವ ದೇವೇಗೌಡರು ಉತ್ತರ ಕರ್ನಾಟಕದಲ್ಲಿ ಜೆಡಿಎಸ್​ ಸಂಘಟನೆಯ ಜವಾಬ್ದಾರಿಯನ್ನು ತಮ್ಮ ಮೊಮ್ಮಗನಿಗೆ ವಹಿಸಿದ್ದಾರೆ. ಈ ಮೂಲಕ ಉತ್ತರ ಕರ್ನಾಟಕದಲ್ಲೂ ಜೆಡಿಎಸ್​ ಹೆಗ್ಗುರುತು ಮೂಡಿಸಲು ತಂತ್ರ ರೂಪಿಸಿದ್ದಾರೆ.
Published by: Sushma Chakre
First published: December 14, 2019, 11:35 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading