ಮಂಡ್ಯ: ಪುತ್ರ ಹೆಚ್ ಡಿ ಕುಮಾರಸ್ವಾಮಿ (Former CM HD Kumaraswamy) ಅವರನ್ನು ಸಿಎಂ ಮಾಡಲು ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರು (Former PM HD Devegowda) ದೈವದ ಮೊರೆ ಹೋಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar) ಬಳಿಕ ಇಂದು ದೇವೇಗೌಡರು ಕಾಲಭೈರವನಿಗೆ ಅಮವಾಸ್ಯೆಯ ಪೂಜೆ ಸಲ್ಲಿಸಲಿದ್ದಾರೆ. ಕಳೆದ ತಿಂಗಳ ಅಮವಾಸ್ಯೆಯಿಂದ ಡಿಕೆ ಶಿವಕುಮಾರ್ ಮಂಡ್ಯದ ನಾಗಮಂಗಲದ (Nagamangala) ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ (Adichunchanagiri) ಅಮವಾಸ್ಯೆ ಪೂಜೆ ನಡೆದಿತ್ತು. ಮೂರು ಎಳ್ಳು ಅಮವಾಸ್ಯೆ ಕಾಲಭೈರವನಿಗೆ ಪೂಜೆಸಿದ್ರೆ ಇಷ್ಟಾರ್ಥ ನೆರವೇರುವ ಪ್ರತೀತಿ ಇದೆ.
ಕಳೆದ ಬಾರಿ ಅಂದ್ರೆ 2018ರ ಚುನಾವಣೆಯಲ್ಲಿ ಹೆಚ್ಡಿಡಿ ಕುಟುಂಬ 9 ಅಮವಾಸ್ಯೆ ಪೂಜೆ ನೆರವೇರಿಸಿತ್ತು. ಇಂದು ಬೆಳಗ್ಗೆ 7 ಗಂಟೆಯಿಂದ ಶ್ರೀ ಮಠದ ನಿರ್ಮಲಾನಂದನಾಥ ಸ್ವಾಮಿ ನೇತೃತ್ವದಲ್ಲಿ ವಿಶೇಷ ಪೂಜೆ ಆರಂಭಗೊಂಡಿದೆ.
ಹಾಸನ ಜಿಲ್ಲೆಯಲ್ಲಿಂದು ಜೆಡಿಎಸ್ ಶಕ್ತಿ ಪ್ರದರ್ಶನ
ಇಂದು ಹಾಸನ (Hassan) ಜಿಲ್ಲೆಗೆ ದೇವೇಗೌಡರು, ಕುಮಾರಸ್ವಾಮಿ ಭೇಟಿ ನೀಡಲಿದ್ದಾರೆ. ಹಾಸನದಲ್ಲಿ ಎರಡನೇ ಬಾರಿ ನಾಮಪತ್ರ ಸಲ್ಲಿಸಲಿರುವ ಹೆಚ್.ಪಿ.ಸ್ವರೂಪ್ ಗೆ (HP Swaroop) ಹೆಚ್ಡಿಡಿ ಕುಟುಂಬ ಸಾಥ್ ನೀಡಲಿದೆ. ನಾಮಪತ್ರ ಸಲ್ಲಿಕೆಗೂ ಮುನ್ನ ನಗರದ ಜಿಲ್ಲಾ ಕ್ರೀಡಾಂಗಣದಿಂದ ಎನ್.ಆರ್.ವೃತ್ತದವರೆಗೂ ಸ್ವರೂಪ್ ಬೃಹತ್ ರೋಡ್ ಶೋ ನಡೆಸಲಿದ್ದಾರೆ.
ಇದನ್ನೂ ಓದಿ: Belur Gopalkrishna: ಮಂತ್ರಿ ಕನಸು ಕಾಣುತ್ತಿರುವ ಅಭ್ಯರ್ಥಿಯ 'ಕೈ' ಹಿಡಿತಾರಾ ಸಾಗರದ ಜನತೆ?
ನಂತರ ಅರಸೀಕೆರೆ ತೆರಳಲಿರುವ ದಳಪತಿಗಳು ಜೆಡಿಎಸ್ ಅಭ್ಯರ್ಥಿ ಎನ್.ಆರ್.ಸಂತೋಷ್ (NR Santosh) ನಾಮಪತ್ರ ಸಲ್ಲಿಕೆ ಹಾಗೂ ರೋಡ್ ಶೋನಲ್ಲಿ ಭಾಗಿಯಾಗಲಿದ್ದಾರೆ. ಹಾಸನದಲ್ಲಿ ಪ್ರೀತಂಗೌಡ (Preetham Gowda) ಹಾಗೂ ಅರಸೀಕೆರೆಯಲ್ಲಿ ಕೆ.ಎಂ.ಶಿವಲಿಂಗೇಗೌಡ (KM Shivalinge gowda) ವಿರುದ್ಧ ರಣಕಹಳೆ ಮೊಳಗಿಸಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ