• Home
  • »
  • News
  • »
  • state
  • »
  • Deve Gowda: ನನಗೆ ಹೋರಾಡುವ ಶಕ್ತಿ ಇದೆ ಎಂದ ದೇವೇಗೌಡರು! ಮುಂದಿನ ಚುನಾವಣೆಗೆ ಜೆಡಿಎಸ್ ರಣಕಹಳೆ

Deve Gowda: ನನಗೆ ಹೋರಾಡುವ ಶಕ್ತಿ ಇದೆ ಎಂದ ದೇವೇಗೌಡರು! ಮುಂದಿನ ಚುನಾವಣೆಗೆ ಜೆಡಿಎಸ್ ರಣಕಹಳೆ

ಎಚ್‌.ಡಿ. ದೇವೇಗೌಡ (ಸಂಗ್ರಹ ಚಿತ್ರ)

ಎಚ್‌.ಡಿ. ದೇವೇಗೌಡ (ಸಂಗ್ರಹ ಚಿತ್ರ)

"ನನಗೆ ಇನ್ನೂ ಹೋರಾಟ ಮಾಡುವ ಶಕ್ತಿ ಇದೆ" ಅಂತ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಹೇಳಿದ್ದಾರೆ. ಜನತಾ ಮಿತ್ರ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಅವರು, "ನೀವು ಬಂದು ನಾಲ್ಕು ಮಾತಾಡಿ ಅಂದ್ರು ಕುಮಾರಸ್ವಾಮಿ. ಆದರೆ ನನಗೆ ಇಲ್ಲಿ ನಿಂತು ಮಾತಾಡಬೇಕು ಅನ್ನೋ ಆಸೆ ಇತ್ತು" ಅಂತ ಹೇಳಿದ್ರು.

ಮುಂದೆ ಓದಿ ...
  • Share this:

ಬೆಂಗಳೂರು: ನನಗೆ ಇನ್ನೂ ಹೋರಾಟ ಮಾಡುವ ಶಕ್ತಿ ಇದೆ ಅಂತ ಮಾಜಿ ಪ್ರಧಾನಿ (Former Prime Minister) ಎಚ್‌ಡಿ ದೇವೇಗೌಡ (HD Deve Gowda) ಹೇಳಿದ್ದಾರೆ. ಬೆಂಗಳೂರಿನ (Bengaluru) ಬಸವನಗುಡಿಯ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ (Basavanagudi National College Ground) ನಡೆದ ಜನತಾ ಮಿತ್ರ (Janata Mitra) ಸಮಾರೋಪ ಸಮಾರಂಭದಲ್ಲಿ ಭಾಗಿಯಾದ ಅವರು, ಆರೋಗ್ಯ (Health) ಚೇತರಿಕೆ ಕಂಡ ಬಳಿಕ ಮತ್ತೆ ರಾಜ್ಯ ಪ್ರವಾಸ (State Tour) ಮಾಡುವುದಾಗಿ ಭರವಸೆ ನೀಡಿದ್ದಾರೆ. ಅನಾರೋಗ್ಯದ ಬಳಿಕ ಇದೇ ಮೊದಲ ಬಾರಿಗೆ ಇಂದು ಎಚ್‌ಡಿ ದೇವೇಗೌಡ ಅವರು ಸಾರ್ವಜನಿಕ ಸಮಾರಂಭವೊಂದರಲ್ಲಿ ಭಾಗಿಯಾಗಿದ್ದರು. ಇನ್ನು ನೀವೆಲ್ಲರೂ ಸೇರಿ ಈ ಪಕ್ಷವನ್ನು ಉಳಿಸಬೇಕಿದೆ. ದಯವಿಟ್ಟು ಜೆಡಿಎಸ್‌ ಪಕ್ಷ (JDS Party) ಉಳಿಸಲು ಸಹಕರಿಸಿ ಅಂತ ಕಾರ್ಯಕರ್ತರಲ್ಲಿ (Party Workers) ಮನವಿ ಮಾಡಿದ್ರು.


“ನನಗೆ ಇನ್ನೂ ಹೋರಾಟ ಮಾಡುವ ಶಕ್ತಿ ಇದೆ”


ನನಗೆ ಇನ್ನೂ ಹೋರಾಟ ಮಾಡುವ ಶಕ್ತಿ ಇದೆ ಅಂತ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಹೇಳಿದ್ದಾರೆ. ಜನತಾ ಮಿತ್ರ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನೀವು ಬಂದು ನಾಲ್ಕು ಮಾತಾಡಿ ಅಂದ್ರು ಕುಮಾರಸ್ವಾಮಿ. ಆದರೆ ನನಗೆ ಇಲ್ಲಿ ನಿಂತು ಮಾತಾಡಬೇಕು ಅನ್ನೋ ಆಸೆ ಇತ್ತು ಅಂತ ಹೇಳಿದ್ರು. ನನ್ನ ಆರೋಗ್ಯ ಇನ್ನೂ ಚೇತರಿಕೆ ಕಾಣಬೇಕು. ನಾನು ಒಂದು ಕಡೆನೇ ಇರ್ತೀನಿ ಎಂದು ಭಾವಿಸಬೇಡಿ, ಆರೋಗ್ಯ ಚೇತರಿಕೆ ಆದ ನಂತರ ರಾಜ್ಯ ಪ್ರವಾಸ ಮಾಡ್ತೀನಿ ಅಂತ ಭರವಸೆ ನೀಡಿದ್ರು.


“ಅಭಿಮಾನಿಗಳೇ ಸ್ವಯಂ ಪ್ರೇರಣೆಯಿಂದ ಬಂದಿದ್ದಾರೆ”


ಕುಮಾರಸ್ವಾಮಿ ಈ ಪಕ್ಷ ಉಳಿಸಲು ಸಾಕಷ್ಟು ಕಾರ್ಯಕ್ರಮ ಮಾಡಿದ್ದಾರೆ ಅಂತ ಎಚ್‌ಡಿ ದೇವೇಗೌಡ ಹೇಳಿದ್ರು. ಈ ಹಿಂದೆ ಆಗಿದ್ದರ ಬಗ್ಗೆ ನಾನು ಮಾತಾಡಲ್ಲ ಎಂದ ಅವರು, ಮೊದಲನೇ ಬಾರಿ ಬೆಂಗಳೂರು ಹಾಗೂ ಇದರ ಸುತ್ತ ಇರುವ ಅಭಿಮಾನಿಗಳು ಬಂದಿದ್ದಾರೆ. ಈ ಸಭೆ ತಾವೇ ಸ್ವಯಂ ಪ್ರೇರಣೆಯಿಂದ ಈ‌ ಕಾರ್ಯಕ್ರಮ ಯಶಸ್ವಿ ಮಾಡ್ತಾ ಇದ್ದೀರ ಅಂತ ಸಂತಸ ವ್ಯಕ್ತಪಡಿಸಿದರು.


ಇದನ್ನೂ ಓದಿ: Mysuru Dasara: ಚಾಮುಂಡೇಶ್ವರಿಗೆ ನಮೋ ಎಂದ ಪ್ರಧಾನಿ, ಮೈಸೂರು ದಸರಾ ಬಗ್ಗೆ ಮೋದಿ ಮೆಚ್ಚುಗೆ


ರಾಜಕೀಯ ಜೀವನದ ಮೆಲುಕು


ನಾನು ಸಿಎಂ ಸ್ಥಾನಕ್ಕೆ ಹೋರಾಟ ಆಯ್ತು, ನಿನ್ನನ್ನೇ ಸಿಎಂ ಮಾಡ್ತೀನಿ ಅಂತ ನಿಮ್ಮ ಪಕ್ಷ ಮುಖಂಡರು ಹೇಳಿದ್ರು. ನಾನು 90 ರಲ್ಲಿ ಹೊರಗೆ ಹೋದೆ. ಏಕಾಂಗಿಯಾಗಿ ನನ್ನ ಸನ್ಮಿತ್ರರ ಜೊತೆ ಹೋದೆ, 16 ಲೋಕಸಭಾ ಸ್ಥಾನ ಗೆದ್ದೆ. ಈ ಹಿಂದೆ ಕುಮಾರಸ್ವಾಮಿ ಹಠ ಮಾಡಿ ನೀವು ಲೋಕಸಭೆಗೆ ಹೋಗಿ ಅಂದ್ರು. ಮುಸ್ಲಿಂ ಸಮುದಾಯಕ್ಕೆ ಶಕ್ತಿ ತುಂಬಿದ್ದು ಯಾರು, ರೆಸಿಡೆನ್ಸಿ ಶಾಲೆ ಕೊಟ್ಟವರು ಯಾರು ಅಂತ ಪ್ರಶ್ನಿಸಿದರು.


“ಕನ್ನಡಿಗರಿಗೆ ಸ್ವಾಭಿಮಾನ ತಂದುಕೊಟ್ಟವರು ದೇವೇಗೌಡರು”


ಸಮಾರಂಭದಲ್ಲಿ ಮಾತನಾಡಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಕನ್ನಡ, ಕನ್ನಡಿಗರಿಗೆ ಸ್ವಾಭಿಮಾನ‌ ತಂದುಕೊಟ್ಟವರು ಹೆಚ್. ಡಿ.ದೇವೆಗೌಡ್ರು. ಹಲವು ತಿಂಗಳ ಬಳಿಕ ಮೊದಲ ಬಾರಿಗೆ ಈ ಸಮಾವೇಶಕ್ಕೆ ಮೂಲಕ ಹೋರಾಟಕ್ಕೆ ಸ್ಪೂರ್ತಿ ತಂದುಕೊಟ್ಟಿದ್ದಾರೆ ಎಂದರು.


ಇದನ್ನೂ ಓದಿ: SC, ST ಮೀಸಲಾತಿ ಹೆಚ್ಚಳ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ; ಬೊಮ್ಮಾಯಿ ಸರ್ಕಾರದಿಂದ ಗುಡ್​ ನ್ಯೂಸ್


ಕಾಂಗ್ರೆಸ್, ಬಿಜೆಪಿ ವಿರುದ್ಧ ಎಚ್‌ಡಿಕೆ ಆಕ್ರೋಶ


ಬೆಂಗಳೂರಿನ ಹಲವಾರು ಸಮಸ್ಯೆಗಳಿಗೆ ಪರಿಹಾರ ತರಲು ಜೆಡಿಎಸ್ ಅಧಿಕಾರಕ್ಕೆ ಬರಬೇಕಿದೆ. ನಾಡಿನ ಆರೂವರೆ ಕೋಟಿ ಜನರ ಆಶೀರ್ವಾದದೊಂದಿಗೆ ಅಧಿಕಾರಕ್ಕೆ ಬರಬೇಕೆಂಬುದು ನಮ್ಮ ಅಪೇಕ್ಷೆ. ಅದರಂತೆ ಜನತಾ ಜಲಧಾರೆ, ಜನತಾಮಿತ್ರ ಕಾರ್ಯಕ್ರಮ ರೂಪಿಸಿದ್ವಿ. ಜನತಾ ಮಿತ್ರ ಕಾರ್ಯಕ್ರಮಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಒಂದು‌ ಲಕ್ಷ ಮಂದಿ ಪತ್ರಗಳು, ಆನ್‌ಲೈನ್ ಮೂಲಕ ಸಮಸ್ಯೆಗಳು, ಪರಿಹಾರಗಳ ಬಗ್ಗೆ ಅಭಿಪ್ರಾಯ ಕಳುಹಿಸಿದ್ದಾರೆ. ಜೆಡಿಎಸ್‌ ಅಧಿಕಾರದಲ್ಲಿದ್ದಾಗ ಮಾತ್ರ ಬೆಂಗಳೂರಿಗೆ ಶಾಶ್ವತ ಯೋಜನೆಗಳು ಆಗಿದ್ದವು. ದೇವೆಗೌಡರು ಅಧಿಕಾರದಲ್ಲಿದ್ದಾಗ ಕೆರೆ ಕಟ್ಟೆಗಳ ರಕ್ಷಣೆಗೆ ಕ್ರಮ ಕೈಗೊಂಡಿದ್ರು. ಆದರೆ ಇಂದು ಅಭಿವೃದ್ಧಿ ನೆಪದಲ್ಲಿ ಕೆರೆಕಟ್ಟೆಗಳನ್ನ ಮುಚ್ಚಿದ್ದಾರೆ. ಪರಿಣಾಮ ಇಂದು ಅನೇಕ ಬಡಾವಣೆಗಳು ಜಲಾವೃತವಾಗಿ ಜನ ಪರಿತಪಿಸಿದ್ರು ಅಂತ ಆಕ್ರೋಶ ವ್ಯಕ್ತಪಡಿಸಿದ್ರು.

Published by:Annappa Achari
First published: