ಬಿಜೆಪಿ ಪ್ರಣಾಳಿಕೆ ಸುಳ್ಳಿನ ಕಂತೆ; ಅವರು ನೀಡಿರುವ ಶೇ. 80ರಷ್ಟು ಭರವಸೆ ಈಡೇರಲ್ಲ: ಡಿಸಿಎಂ ಪರಮೇಶ್ವರ್​​

ಹೆಚ್.ಡಿ. ದೇವೇಗೌಡರು ತುಮಕೂರಿನಲ್ಲಿ ಗೆದ್ದ ಬಳಿಕ ನೀರಾವರಿಗೆ ಹೆಚ್ಚಿನ ಒತ್ತು ನೀಡ್ತೇವೆ. ತುಮಕೂರಿಗೆ ಹೆಚ್ಚು ಕೈಗಾರಿಗಳು ಬರೋದಕ್ಕೆ ಪ್ರಯತ್ನ ಮಾಡ್ತೇವೆ. ಮೈತ್ರಿ ಅಭ್ಯರ್ಥಿಗಳು 28 ಕ್ಷೇತ್ರದಲ್ಲೂ ಗೆಲ್ಲಬೇಕೆಂಬ ಗುರಿ ಇದೆ. ಆದರೆ ಅಂತಿಮವಾಗಿ ಗೆಲ್ಲುವ ಸಂಖ್ಯೆ ಎಷ್ಟೆಂದು ಹೇಳಲು ಸಾಧ್ಯವಿಲ್ಲ ಎಂದು ಪರಮೇಶ್ವರ್​ ಹೇಳಿದರು.

G Hareeshkumar | news18
Updated:April 16, 2019, 7:43 PM IST
ಬಿಜೆಪಿ ಪ್ರಣಾಳಿಕೆ ಸುಳ್ಳಿನ ಕಂತೆ; ಅವರು ನೀಡಿರುವ ಶೇ. 80ರಷ್ಟು ಭರವಸೆ ಈಡೇರಲ್ಲ: ಡಿಸಿಎಂ ಪರಮೇಶ್ವರ್​​
ಪತ್ರಿಕಾಗೋಷ್ಠಿ
G Hareeshkumar | news18
Updated: April 16, 2019, 7:43 PM IST
- ರಮೇಶ್ ಹಿರೇಜಂಬೂರು

ತುಮಕೂರು (ಏ.16) : ಬಿಜೆಪಿ ಸುಳ್ಳಿನ ಕಂತೆ ಪೋಣಿಸಿದ್ದು, ಅವರ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆ ಶೇ 80 ರಷ್ಟು ನಡೆಯಲ್ಲ. ರಾಮ ಮಂದಿರ ನಿರ್ಮಾಣ ಮೊದಲಾದವು ಹಿಂದಿನಿಂದಲೂ ಇವೆ. ಬಿಜೆಪಿಯ ಈ ಪ್ರಣಾಳಿಕೆಯಲ್ಲಿ ಹೊಸತೇನೂ ಇಲ್ಲ ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್​​ ಹೇಳಿದ್ದಾರೆ.

ತುಮಕೂರಿನ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದ್ದೇವೆ. ಉತ್ತಮವಾದ ಪ್ರತಿಕ್ರಿಯೆ ಬಂದಿದ್ದು. ಪ್ರಚಾರದಲ್ಲಿ ಸಣ್ಣಪುಟ್ಟ ಘಟನೆಗಳು ನಡೆದಿದ್ದು ನಿಜ. ಅದನ್ನು ಮುಚ್ಚಿಡುವುದಿಲ್ಲ. ನಾವು ಈ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತ್ರ ಚರ್ಚೆ ಮಾಡ್ತೇವೆ. ನೀರಾವರಿ ವಿಚಾರದಲ್ಲಿ ಇಲ್ಲಿ ಮಾತುಗಳು ಕೇಳಿ ಬಂದಿದೆ. ಶಿರಾ ,ಕೊರಟಗೆರೆ, ಮಧುಗಿರಿಯಲ್ಲಿ ನೀರಾವರಿಗೆ ಅವಕಾಶ ಇಲ್ಲ. ಇವೆಲ್ಲಾ ಒಣಭೂಮಿ ಪ್ರದೇಶಗಳು. ಭದ್ರಾ ಮತ್ತು ಎತ್ತಿನಹೊಳೆ ನೀರು ಬರಬೇಕಿದ್ದು, ಅದರ ಕೆಲಸ ನಡೆಯುತ್ತಿದೆ. ಹೇಮಾವತಿಯಿಂದ 24 ಟಿಎಂಸಿ ನೀರು ಬರ್ತಾ ಇದೆ ಎಂದು ಉಪಮುಖ್ಯಮಂತ್ರಿಗಳು ತಿಳಿಸಿದರು.

ಹೆಚ್.ಡಿ. ದೇವೇಗೌಡರು ತುಮಕೂರಿನಲ್ಲಿ ಗೆದ್ದ ಬಳಿಕ ನೀರಾವರಿಗೆ ಹೆಚ್ಚಿನ ಒತ್ತು ನೀಡ್ತೇವೆ. ತುಮಕೂರಿಗೆ ಹೆಚ್ಚು ಕೈಗಾರಿಗಳು ಬರೋದಕ್ಕೆ ಪ್ರಯತ್ನ ಮಾಡ್ತೇವೆ. ಮೈತ್ರಿ ಅಭ್ಯರ್ಥಿಗಳು 28 ಕ್ಷೇತ್ರದಲ್ಲೂ ಗೆಲ್ಲಬೇಕೆಂಬ ಗುರಿ ಇದೆ. ಆದರೆ ಅಂತಿಮವಾಗಿ ಗೆಲ್ಲುವ ಸಂಖ್ಯೆ ಎಷ್ಟೆಂದು ಹೇಳಲು ಸಾಧ್ಯವಿಲ್ಲ ಎಂದು ಪರಮೇಶ್ವರ್​ ಹೇಳಿದರು.

ಕ್ಷೇತ್ರದ ಜನರು ನನ್ನನ್ನಲೋಕಸಭೆಗೆ ಕಳುಹಿಸುತ್ತಾರೆ ಎಂಬ ವಿಶ್ವಾಸ ಇದೆ- ದೇವೇಗೌಡ

ತುಮಕೂರಿನಲ್ಲಿ ಬಹಿರಂಗ ಪ್ರಚಾರಕ್ಕೆ ಅಂತಿಮ ದಿನವಾದ ಇಂದು ಮೈತ್ರಿ ಅಭ್ಯರ್ಥಿ ದೇವೇಗೌಡರು ಭಾಷಣ ಮಾಡಿ, ತನ್ನನ್ನು ಈ ಕ್ಷೇತ್ರದ ಜನರು ಕೈಬಿಡುವುದಿಲ್ಲವೆಂದು ವಿಶ್ವಾಸ ವ್ಯಕ್ತಪಡಿಸಿದರು.ಅವರವರ ಫೀಡ್ ಬ್ಯಾಕ್ ನಿಂದ ಎಲ್ಲರೂ ಮಾತನಾಡುತ್ತಾರೆ. ಸಾಕಷ್ಟು ಸಮೀಕ್ಷೆಗಳಾಗಿವೆ. ಮುಂದೇನಾಗುತ್ತೆ ಎಂಬುದರ ಬಗ್ಗೆ ಹೇಳೊಲ್ಲ. ನಾಡಿದ್ದಿನಿಂದ ಕರ್ನಾಟಕದ ಎರಡನೇ ಹಂತದ ಚುನಾವಣೆ ‌ಕಡೆ ಗಮನಹರಿಸೋಣ. ನಾನು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತೇನೆ. ಎಲ್ಲದಕ್ಕೂ ಉತ್ತರ ಕೊಡೊಲ್ಲ. ತುಮಕೂರು ಜನತೆ ನನ್ನನ್ನ ಲೋಕಸಭೆಗೆ ಕಳಿಸ್ತಾರೆ ಎಂಬ ವಿಶ್ವಾಸ ಇದೆ. ಆದರೆ ಲೋಕಸಭೆಯಲ್ಲಿ ಎಡಗಡೆಗೆ ಕೂರ್ತೇನೋ, ಬಲಗಡೆಗೆ ಕೂರ್ತೇನೋ ಹೇಳೊಲ್ಲ. ರಾಜ್ಯದಲ್ಲಿ ನಾನು ಎರಡು ಗೆಲ್ತೇನೋ ಆರು ಗೆಲ್ತೇನೋ ಈಗ ಹೇಳೊಲ್ಲ ಎಂದು ದೇವೇಗೌಡರು ಅಭಿಪ್ರಾಯಪಟ್ಟರು.

ಈ ಕ್ಷೇತ್ರದಲ್ಲಿ ಬಡತನ ಇದೆ. ಇದು ಜಾತಿ ಪ್ರಶ್ನೆಯಲ್ಲ. ತುಮಕೂರಿನಲ್ಲಿ‌ ಹೇಮಾವತಿ ನೀರಾವರಿ ಪ್ರದೇಶ ಬಿಟ್ಟು ಎಲ್ಲ ಕಡೆ ನೀರಿನ ಬವಣೆ ಇದೆ. ಇದಕ್ಕೆ ನಾನು ಯಾರನ್ನೂ ಉದಾಹರಣೆ ಮಾಡೊಲ್ಲ. ಪರಮೇಶ್ವರ್ ಜೊತೆ ನಾನೂ ಕೈ ಜೋಡಿಸುತ್ತೇನೆ. ಒಟ್ಟಾಗಿ ಶ್ರಮಿಸ್ತೇನೆ ಎಂದು ಜೆಡಿಎಸ್ ಅಭ್ಯರ್ಥಿ ಹೆಚ್.ಡಿ.ದೇವೇಗೌಡ ಹೇಳಿದರು.

ಇದನ್ನೂ ಓದಿ : ನಾಲ್ಕು ವಾರದಲ್ಲಿ ಮಂಡ್ಯ ಜನರಲ್ಲಿ ದೇವರ ಕಂಡೆ, ಜೊತೆ ನಿಂತ ಕೈ ಕಾರ್ಯಕರ್ತರಿಗೆ ಥ್ಯಾಂಕ್ಸ್​ ಹೇಳಿದ ಸುಮಲತಾ

ನನ್ನ ಮನಸ್ಸಿನಲ್ಲಿ ಸಂಕಲ್ಪ ಮಾಡಿದ್ದೇನೆ. ಮೂರು ಜನ ಮಂತ್ರಿಗಳ ಜೊತೆಗೂ ಮಾತಾಡಿದ್ದೇನೆ. ಇದೇ ಏ. 19 ಕ್ಕೆ ಉತ್ತರ ಕನ್ನಡದಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ಮಾಡುತ್ತೇವೆ. ಈ ಬಗ್ಗೆ ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜೊತೆ ಮಾತಾಡಿದ್ದೇನೆ. ಕಾಂಗ್ರೆಸ್ ಬೇರೆ, ನಾನು ಬೇರೆ ಅಂತ ಮಾತಾಡೊಲ್ಲ. ಶಿವಮೊಗ್ಗದಲ್ಲಿ ಕೂಡ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಪೂರ್ಣ ಜವಾಬ್ದಾರಿಯಿಂದ ಕೆಲಸ ಮಾಡ್ತಿದ್ದಾರೆ. ಸಿಎಂ ಕುಮಾರಸ್ವಾಮಿ ಕೂಡ ಶಿವಮೊಗ್ಗ ಹೋಗಿ ಪ್ರಚಾರ ಮಾಡ್ತಾರೆ ಎಂದು ದೇವೇಗೌಡರು ಪಕ್ಷದ ಕಾರ್ಯತಂತ್ರವನ್ನು ವಿವರಿಸಿದರು.

ಕಲಬುರ್ಗಿಯಲ್ಲಿ ಮಲ್ಲಿಕಾರ್ಜುನ್​​ ಖರ್ಗೆ ಸೋಲ್ತಾರೆ ಎಂಬ ಬಿಜೆಪಿಯ ಮುರುಳೀಧರ್ ರಾವ್  ಹೇಳಿಕೆ ವಿಚಾರವಾಗಿ ಮಾತನಾಡಿದ ಗೌಡರು, ಜವಾಬ್ದಾರಿ ಸ್ಥಾನದಲ್ಲಿ‌ ಇದ್ದು ಸರಿಯಾಗಿ ಮಾತಾಡಬೇಕು. ಮೋದಿಯವರ ಹೆಸರನ್ನೇ ಯಾಕೆ ಹೇಳ್ತಾರೆ? ಬೇರೆ ಕ್ಷೇತ್ರಗಳ ಅಭ್ಯರ್ಥಿಗಳು ಇಲ್ವಾ? ಯಾಕೆ ಆಯಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಹೆಸರು ಹೇಳ್ತಿಲ್ಲ? ಮೋದಿಯವರು ಎಷ್ಟು ಹಣ ದುಂದುವೆಚ್ಚ ಮಾಡಿದ್ದಾರೆ ಗೊತ್ತಿದೆ. ಯಾರೂ ಇದೂವರೆಗೆ ಪ್ರಧಾನಿಯಾದವರು ಈ ಮಟ್ಟದಲ್ಲಿ ದುಂದುವೆಚ್ಚ ಮಾಡಿಲ್ಲ ಎಂದು ಗಂಭೀರ ಆರೋಪ ಮಾಡಿದರು.

First published:April 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ