ಕರ್ನಾಟಕ ಪ್ರಾತಿನಿಧ್ಯವಿಲ್ಲದೆ ಕಾವೇರಿ ನೀರು ನಿಯಂತ್ರಣ ಸಮಿತಿ ರಚನೆ: ಕೇಂದ್ರದ ವಿರುದ್ಧ ಹೆಚ್​ಡಿಡಿ ಗರಂ


Updated:June 24, 2018, 8:37 PM IST
ಕರ್ನಾಟಕ ಪ್ರಾತಿನಿಧ್ಯವಿಲ್ಲದೆ ಕಾವೇರಿ ನೀರು ನಿಯಂತ್ರಣ ಸಮಿತಿ ರಚನೆ: ಕೇಂದ್ರದ ವಿರುದ್ಧ ಹೆಚ್​ಡಿಡಿ ಗರಂ
ಮಾಜಿ ಸಿಎಂ ಎಚ್​​ಡಿಡಿ, ಸಿಎಂ ಎಚ್​ಡಿಕೆ
  • Share this:
-ಅಶೋಕ್​ ಗೌಡ, ನ್ಯೂಸ್​-18 ಕನ್ನಡ


ಹಾಸನ(ಜೂನ್​.24): ಕರ್ನಾಟಕದ ಪ್ರತಿನಿಧಿ ಇಲ್ಲದೆ 9 ಸದಸ್ಯರನ್ನೊಳಗೊಂಡ ಕಾವೇರಿ ನೀರು ನಿಯಂತ್ರಣ ಸಮಿತಿಯನ್ನು ಕೇಂದ್ರ ಜಲಸಂಪನ್ನೂಲ ಇಲಾಖೆ ರಚಸಿದ್ದ ವಿರುದ್ಧ ಮಾಜಿ ಪ್ರಧಾನಿ, ಜೆಡಿಎಸ್​ ವರಿಷ್ಠ ಹೆಚ್​.ಡಿ ದೇವೆಗೌಡ ಅವರು ಕಿಡಿಕಾರಿದ್ಧಾರೆ. ಈ ವಿಚಾರಕ್ಕೆ ಶ್ರವಣಬೆಳಗೊಳದಲ್ಲಿ ಪ್ರತಿಕ್ರಿಯೆ ನೀಡಿದ ಹೆಚ್,ಡಿ ದೇವೇಗೌಡ ಅವರು ಕರ್ನಾಟಕದಿಂದ ಇಬ್ಬರು ಪ್ರತಿನಿಧಿಗಳನ್ನು ಕಳಿಸಿಕೊಡುತ್ತೇವೆ ಎಂದರು.



ಪ್ರತಿ‌ ೧೦ ದಿನಕ್ಕೊಮ್ಮೆ ನೀರು ಅಳತೆ ಮಾಡುತ್ತಾರೆ. ಬೆಳೆ ಸೇರಿದಂತೆ ಎಷ್ಟು‌ ನೀರು ಬಳಕೆ ಮಾಡಬೇಕೆಂದು ಅವರೇ ಹೇಳುತ್ತಾರೆ. ಅಂತಹ ಷರತ್ತುಗಳನ್ನು ನೋಡಿಲ್ಲ, ಆ‌ಕಾರಣಕ್ಕೆ ನಾನು ವಿರೋಧ ವ್ಯಕ್ತಪಡಿಸಿದ್ದೇನೆ. ಮುಂದೆ ಏನು ಮಾಡಬೇಕು ಎಂಬುದನ್ನು ಸರಕಾರಕ್ಕೆ ಹೇಳಿದ್ದೇನೆ ಎಂದು ನ್ಯೂಸ್​-18 ಗೆ ತಿಳಿಸಿದರು.


ನಾವೂ ಷರತ್ತಿನ ಮೇಲೆಯೇ ಶೀಘ್ರ ಇಬ್ಬರು ಪ್ರತಿನಿಧಿಗಳನ್ನು ಕಳಿಸುತ್ತೇವೆ. ಹೆಚ್ಚುವರಿ ನೀರನ್ನು ನಾವು ಹಿಡಿದಿಟ್ಟುಕೊಳ್ಳಲು ಆಗಲ್ಲ. ಈ ಎಲ್ಲಾ ಆಕ್ಷೇಪಣೆಗಳನ್ನು ಈಗಾಗಲೇ ಕೇಂದ್ರದ ಮುಂದೆ ಸಿಎಂ‌ ಕುಮಾರಸ್ವಾಮಿ ಅವರು ಮನವರಿಕೆ ಮಾಡಿದ್ದಾರೆ.

ಶೀಘ್ರ ಷರತ್ತುಬದ್ಧ ಪತ್ರ ಸಿದ್ಧ ಪಡಿಸಲಾಗುವುದು. ಷರತ್ತು ಸಹಿತ ನಮ್ಮ ಪ್ರತಿನಿಧಿಗಳನ್ನು ಕಳಿಸುತ್ತೇವೆ. ಈ ವಿಚಾರದಲ್ಲಿ ಮುಂದಿನ ಹೋರಾಟ ಇದ್ದೇ ಇರಲಿದೆ ಎಂದರು. ಇನ್ನು ರೈತರ ಸಾಲ ಮನ್ನಾ, ಮಂಡ್ಯ ದಿಂದ ಸ್ಪರ್ಧೆ ಮಾಡುವ ಬಗ್ಗೆ ಮಾತನಾಡಲು ಹೆಚ್​ಡಿಡಿ ನಿರಾಕರಿಸಿದ್ದಾರೆ.
First published:June 24, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading