Ramanagara: ತುಂಬಿ ಹರಿಯುತ್ತಿರುವ ಇಗ್ಗಲೂರಿನ HDD ಬ್ಯಾರೇಜ್, ಪ್ರವಾಸಿಗರ ಆಗಮನ 

HDD ಬ್ಯಾರೇಜ್

HDD ಬ್ಯಾರೇಜ್

ಇಗ್ಗಲೂರು ಬ್ಯಾರೇಜ್ ಸಂಪೂರ್ಣ ತುಂಬಿದ ಹಿನ್ನೆಲೆ 1 ಗೇಟ್ ಓಪನ್ ಮಾಡಲಾಗಿದೆ. ಈ ಬ್ಯಾರೇಜ್ ನಿಂದ ಕನಕಪುರದ ಸಂಗಮದ ಮೂಲಕ ತಮಿಳುನಾಡಿಗೆ ನೀರು ಸೇರಲಿದೆ.

  • Share this:

ರಾಮನಗರ(ಚನ್ನಪಟ್ಟಣ)(ಮೇ.23): ರಾಮನಗರ ಜಿಲ್ಲೆಯ ಚನ್ನಪಟ್ಟಣದ ಹೆಚ್.ಡಿ.ದೇವೇಗೌಡ ಬ್ಯಾರೇಜ್ (ಇಗ್ಗಲೂರು ಬ್ಯಾರೇಜ್)ತುಂಬಿ ಹರಿಯುತ್ತಿದೆ.‌ಕಳೆದ ಹತ್ತು ದಿನಗಳಿಂದ ಭಾರೀ ಮಳೆ ಹಿನ್ನೆಲೆ ತುಮಕೂರಿನ ಮಾರ್ಕೋನಹಳ್ಳಿ ಡ್ಯಾಂ ಭರ್ತಿಯಾಗಿದೆ. ಅಲ್ಲಿನ ಹೆಚ್ಚುವರಿ ನೀರು ಇಗ್ಗಲೂರು ಜಲಾಶಯಕ್ಕೆ ಬಂದಿದೆ.‌ ( . 1 7 ) TMC ಸಾಮರ್ಥ್ಯ ಹೊಂದಿರುವ ಇಗ್ಗಲೂರು ಬ್ಯಾರೇಜ್ ಸಂಪೂರ್ಣ ತುಂಬಿದ ಹಿನ್ನೆಲೆ 1 ಗೇಟ್ ಓಪನ್ ಮಾಡಲಾಗಿದೆ. ಈ ಬ್ಯಾರೇಜ್ ನಿಂದ ಕನಕಪುರದ ಸಂಗಮದ ಮೂಲಕ ತಮಿಳುನಾಡಿಗೆ ನೀರು ಸೇರಲಿದೆ. ಇನ್ನು ಬ್ಯಾರೇಜ್ ವೀಕ್ಷಣೆ ಮಾಡಲು ಪ್ರವಾಸಿಗರ ದಂಡು ಆಗಮಿಸುತ್ತಿದೆ.‌ ನ್ಯೂಸ್ 18 ಜೊತೆಗೆ ಮಾತನಾಡಿವ ಪ್ರವಾಸಿಗರು ಈ ಬ್ಯಾರೇಜ್ ನ ಪ್ರವಾಸಿತಾಣ ಮಾಡಬೇಕು ಎಂದಿದ್ದಾರೆ. ಜೊತೆಗೆ ತಮಿಳುನಾಡಿಗೆ ಹೋಗುವ ಹೆಚ್ಚುವರಿ ನೀರನ್ನ ನಮ್ಮಲ್ಲೇ ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.


ಹರಿದುಬರುತ್ತಿದೆ ಜನಸಾಗರ, ಅವಶ್ಯಕತೆ ಇದೇ ಮೂಲಭೂತ ಸೌಕರ್ಯ :


ಇಗ್ಗಲೂರು ಬ್ಯಾರೇಜ್ ವೀಕ್ಷಣೆ ಮಾಡಲು ರಾಮನಗರ ಜಿಲ್ಲೆ, ಮಂಡ್ಯ ಜಿಲ್ಲೆಯ ಜನರು ಆಗಮಿಸುತ್ತಿದ್ದಾರೆ.‌ ಆದರೆ ಈ ಬ್ಯಾರೇಜ್ ಇರುವ ಸ್ಥಳದಲ್ಲಿ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳೇ ಇಲ್ಲದಂತಾಗಿದೆ. ಕುಡಿಯುವ ನೀರಿನ‌ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆ ಸಹ ಇಲ್ಲವಾಗಿದ್ದು ಡ್ಯಾಂ ನೋಡಲು ಬರುವ ಜನರು ತಕ್ಷಣವೇ ಹೊರಡುವ ದುಸ್ಥಿತಿ ನಿರ್ಮಾಣ ಆಗಿದೆ. ಹಾಗಾಗಿ ಆದಷ್ಟು ಬೇಗ ಸರ್ಕಾರ ಇತ್ತ ಗಮನಹರಿಸಬೇಕು ಎಂದು ಒತ್ತಾಯ ಕೇಳಿಬಂದಿದೆ.


ಡ್ಯಾಂ ಗೂ ಸಹ ಭದ್ರತೆ ಬೇಕಿದೆ, ಜನಪ್ರತಿನಿಧಿಗಳಿಗೆ ಜನರ ಒತ್ತಾಯ :


ಈ ಬ್ಯಾರೇಜ್ ನಿರ್ಮಾಣವಾಗಿ ಹತ್ತಾರು ವರ್ಷಗಳು ಕಳೆದಿವೆ.‌ ಹಾಗಾಗಿ ಡ್ಯಾಂ ರಸ್ತೆಯಲ್ಲಿ ಕೆಲ ಲೋಪದೊಷ ಇದ್ದು ಇದನ್ನೆಲ್ಲವನ್ನ ಗಮನಿಸಿ ಸಂಬಂಧಿಸಿದ ಅಧಿಕಾರಿಗಳ ವರ್ಗ - ಜನಪ್ರತಿನಿಧಿಗಳು ಗಮನಹರಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ಇದರ ಜೊತೆಗೆ ಡ್ಯಾಂ ನ ಸುತ್ತಲು ವಿದ್ಯುತ್ ದೀಪಗಳ ಅವಶ್ಯಕತೆ ಇದ್ದು ಆದಷ್ಟು ಬೇಗ ಗಮನಹರಿಸಬೇಕು ಎಂದು ಜನ ಒತ್ತಾಯಿಸಿದ್ದಾರೆ.


ಡ್ಯಾಂ ತುಂಬಿದಾಗ ಮಾತ್ರ ಕಾಳಜಿ, ಜನರ ಬೇಸರ :


ಇಗ್ಗಲೂರು ಬ್ಯಾರೇಜ್ ತುಂಬಿ ಹೆಚ್ಚುವರಿ ನೀರನ್ನ ಹೊರಬಿಟ್ಟಾಗ ಮಾತ್ರ ಇದರ ವಿಚಾರ ಪ್ರಸ್ತಾಪ ಅಗಲಿದೆ. ನಂತರ ಇಲ್ಲಿನ ಸಮಸ್ಯೆಗಳನ್ನ ಗಮನಹರಿಸುವವರು ಯಾರು ಇಲ್ಲ. ಜನಪ್ರತಿನಿಧಿಗಳು ಚುನಾವಣಾ ಸಂದರ್ಭದಲ್ಲಿ ಮಾತ್ರ ಇತ್ತ ಕಾಣಿಸಿಕೊಳ್ತಾರೆ.


ಇದನ್ನೂ ಓದಿ: Hubballi Crime News: ಬನ್ರೋ ಹೋಗೋಣ ಅಂದ್ರು: ಹೋದ ಮೂವರು ಗೆಳೆಯರು ಜೈಲು ಪಾಲಾದ್ರು!


ನಂತರ ಅವರನ್ನ ಪತ್ತೆ ಮಾಡಲು ಸಾಧ್ಯವಿಲ್ಲ. ಇನ್ನು ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಲು ಪ್ರಯತ್ನ ಮಾಡಿಲ್ಲ. ಆದರೆ ರಾಜ್ಯ ಸರ್ಕಾರ ಈ ಬ್ಯಾರೇಜ್ ಗೆ ಹೊಸರೂಪ ನೀಡಿದರೆ ಜಿಲ್ಲೆಯಲ್ಲಿ ಪ್ರವಾಸಿತಾಣವಾಗಿ ಹೊರಹೊಮ್ಮಲಿದೆ ಎಂಬ ಅಭಿಪ್ರಾಯ ಸಾರ್ವಜನಿಕವಾಗಿ ಕೇಳಿಬಂದಿದೆ.


ಗದಗದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಕಾರ್ಮಿಕರ ರಕ್ಷಣೆ


ಧಾರವಾಡ (Dharawad) ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದ (Rain) ಬೆಣ್ಣೆ ಮೈದುಂಬಿ ಹರಿಯುತ್ತಿದೆ. ಹೌದು ಬೆಣ್ಣೆ ಹಳ್ಳದ ಪ್ರವಾಹಕ್ಕೆ ಗದಗ (Gadag) ಜಿಲ್ಲೆ ರೋಣ ತಾಲೂಕಿನ ಯಾವಗಲ್ ಬಳಿ ನಾಲ್ವರು ಕಾರ್ಮಿಕರು ಬೆಣ್ಣೆ ಹಳ್ಳದಲ್ಲಿ ಸಿಲುಕಿಕೊಂಡಿದ್ರು. ಬೆಳ್ಳಂ ಬೆಳಗ್ಗೆ ಬಂದ ಅಪಾರ ಪ್ರಮಾಣದ ನೀರು ನೋಡು ಕಾರ್ಮಿಕರು ಕಂಗಾಲಾಗಿ ಬಿಟ್ಟಿದ್ರು. ಸೇತುವೆ ಕಾಮಗಾರಿ ಮಾಡಲು ರಾತ್ರಿ ವೇಳೆ ಹಳ್ಳದ ಪಕ್ಕದಲ್ಲಿರುವ ಸೇತುವೆ (Bridge) ಬಳಿ ಮಲಗಿದ್ರು. ಮುಂಜಾನೆ ಎದ್ದು ನೋಡಿದ್ರೆ ಬೆಣ್ಣೆ ಹಳ್ಳದ ಉಕ್ಕಿ ಹರಿಯುತ್ತಿದೆ.


ಇದನ್ನೂ ಓದಿ: FDI in Karnataka: ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಭಾರತದ ದಾಖಲೆ, ಕರ್ನಾಟಕದ್ದೇ ಸಿಂಹಪಾಲು! ಅಂಕಿ ಅಂಶ ಇಲ್ಲಿದೆ


ಮಾಹಿತಿ ತಿಳಿದು ತಹಶಿಲ್ದಾರ ವಾಣಿ ಉಣಕಿ ಅವರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ರು. ನಂತ್ರ ರೋಣ ದಿಂದ ಅಗ್ನಿಶಾಮಕ ದಳ ಸಿಬ್ಬಂದಿಯನ್ನು ಕರೆ ತಂದ್ರು. ಅಗ್ನಿಶಾಮಕ ದಳದ ಮಂಜುನಾಥ ಮೇಲ್ಮನಿ ನೇತೃತ್ವದಲ್ಲಿ ಸಿಬ್ಬಂದಿಗಳು ಹಗ್ಗದ ಸಹಾಯ ದಿಂದ ಸೇತುವೆ ಮೂಲಕ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ.

Published by:Divya D
First published: