ರಾಜ್ಯಗಳಿಗೆ ಉಂಟಾದ ಜಿಎಸ್​ಟಿ ಪರಿಹಾರ ಹಣವನ್ನು ಕೇಂದ್ರವೇ ಭರಿಸಬೇಕು: ದೇವೇಗೌಡ

ಜಿಎಸ್​ಟಿಗೋಸ್ಕರ ರಾಜ್ಯ ಸರ್ಕಾರಗಳು ತಮ್ಮ ತೆರಿಗೆ ಹಕ್ಕನ್ನು ಬಿಟ್ಟುಕೊಟ್ಟಿದ್ದವು. ಈಗ ರಾಜ್ಯಗಳ ಪಾಲಿನ ತೆರಿಗೆ ಹಣವ ಕೊಡುವುದಿಲ್ಲವೆನ್ನುವುದು ನ್ಯಾಯವಲ್ಲ. ಕೇಂದ್ರ ಸರ್ಕಾರವೇ ಜಿಎಸ್​ಟಿ ಪರಿಹಾರ ಹಣವನ್ನು ಭರಿಸಬೇಕು ಎಂಬ ವಾದಕ್ಕೆ ನನ್ನ ಸಹಮತ ಇದೆ ಎಂದು ದೇವೇಗೌಡರು ಹೇಳಿದ್ದಾರೆ.

ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ

ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ

  • Share this:
ಬೆಂಗಳೂರು(ಆ. 30): ಕೇಂದ್ರ ಸರ್ಕಾರ ರಾಜ್ಯಕ್ಕೆ  ಜಿಎಸ್​ಟಿ ಹಣ ನೀಡದಿರುವುದನ್ನ ಖಂಡಿಸಿ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಅವರು ಪತ್ರಿಕಾ ಪ್ರಕಟಣೆ ಮಾಡಿದ್ದಾರೆ. ಕೇಂದ್ರದ ವಿರುದ್ದ ಕೋಪ ವ್ಯಕ್ತಪಡಿಸಿ ಪತ್ರ ಬರೆದಿರುವ ದೇವೇಗೌಡರು, ಕೇಂದ್ರದ ನಡೆಯಿಂದ ಕೇಂದ್ರ ಮತ್ತು ರಾಜ್ಯಗಳ ಮಧ್ಯೆ ಮೊದಲೇ ಇದ್ದ ಸೂಕ್ಷ್ಯಗೊಂಡಿದ್ದ ಸಂಬಂಧ ಈಗ ಇನ್ನಷ್ಟು ಕೆಡುವಂತಾಗಿದೆ ಎಂದು ಟೀಕಿಸಿದ್ದಾರೆ.

ಜಿಎಸ್​ಟಿ ಪರಿಹಾರ ಹಣದಲ್ಲಿ 2.35 ಲಕ್ಷ ಕೋಟಿ ರೂ ಕೊರತೆಯಿದೆ ಎಂದು ಕೇಂದ್ರ ಹೇಳಿದೆ. ಈ ಹಣವನ್ನು ರಾಜ್ಯಗಳು ಆರ್​ಬಿಐನಿಂದ ಸಾಲದ ರೂಪದಲ್ಲಿ ಪಡೆದುಕೊಳ್ಳಿ ಎಂದಿದೆ. ಇದು ತಪ್ಪು. ಈ ಜಿಎಸ್​ಟಿ ಪರಿಹಾರ ವಿಚಾರದಲ್ಲಿ  ರಾಜ್ಯಕ್ಕೆ ಕೇಂದ್ರ  ಸರ್ಕಾರ ದ್ರೋಹ ಮಾಡುತ್ತಿದೆ. ಕೇಂದ್ರ ಸರ್ಕಾರದ ಈ ನಿಲುವು ಸರಿಯಲ್ಲ. ಜಿಎಸ್​ಟಿ ಪರಿಹಾರವನ್ನು ರಾಜ್ಯಗಳಿಗೆ ಕೇಂದ್ರ ಸರ್ಕಾರವೇ ನೀಡಬೇಕು ಎಂದು ದೇವೇಗೌಡರು ಒತ್ತಾಯ ಮಾಡಿದ್ದಾರೆ.

“ಜಿಎಸ್​ಟಿ ಹಣದ ಮೊತ್ತವನ್ನು ಸಾಲದ ರೂಪದ ಪಡೆದುಕೊಳ್ಳಿ ಎಂದು ರಾಜ್ಯ ಸರ್ಕಾರಗಳಿಗೆ ಹೇಳುವುದು ನ್ಯಾಯವಲ್ಲ. ಜಿಎಸ್​ಟಿಗೋಸ್ಕರ ರಾಜ್ಯ ಸರ್ಕಾರಗಳು ತಮ್ಮ ತೆರಿಗೆ ಹಕ್ಕನ್ನು ಕಳೆದುಕೊಂಡಿವೆ. ಸರಿಯಾದ ತೆರಿಗೆ ಪಾಲನ್ನು ಕೊಡುವುದಾಗಿ ಕೇಂದ್ರ ಸರ್ಕಾರ ನೀಡಿದ್ದ ಭರವಸೆಯನ್ನು ನಂಬಿಕೊಂಡು ರಾಜ್ಯಗಳು ತಮ್ಮ ತೆರಿಗೆ ಹಕ್ಕು ಬಿಟ್ಟುಕೊಟ್ಟಿದ್ದವು. ಕೇಂದ್ರ ಸರ್ಕಾರವೇ ರಾಜ್ಯಗಳ ಪಾಲಿಗೆ ಜಿಎಸ್​ಟಿ ಪರಿಹಾರ ಹಣವನ್ನು ಭರಿಸಬೇಕು ಎಂಬ ವಾದಕ್ಕೆ ನನ್ನ ಸಹಮತ ಇದೆ.

ಇದನ್ನೂ ಓದಿ: ‘ಕೊಟ್ಟವ ಕೋಡಂಗಿ, ಇಸ್ಕೊಂಡವ ಈರಭದ್ರ’ – ಜಿಎಸ್​ಟಿ ವಿಚಾರದಲ್ಲಿ ಕೇಂದ್ರದ ವಿರುದ್ಧ ಹೆಚ್​ಡಿಕೆ ಆಕ್ರೋಶ

“ರಾಜ್ಯಗಳು ಈಗಾಗಲೇ ಹಣಕಾಸು ಸಂಕಟದಲ್ಲಿರುವುದು ಹೌದು. ಕೊರೋನಾ ವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ಎಲ್ಲಾ ಶ್ರಮ ಹಾಕಿದ್ದು ರಾಜ್ಯಗಳೇ” ಎಂದು ದೇವೇಗೌಡರು ತಮ್ಮ ಪತ್ರದಲ್ಲಿ ಬರೆದಿದ್ದಾರೆ.

“ಜಿಎಸ್​ಟಿ ಜೊತೆಗೆ ತೆರಿಗೆ ಹಂಚಿಕೆ ವಿಚಾರದಲ್ಲೂ ರಾಜ್ಯ ಸರ್ಕಾರಗಳಿಗೆ ಅಸಮಾಧಾನ ಇದೆ. ಪ್ರಗತಿಪರ ರಾಜ್ಯಗಳು ತಮ್ಮಿಂದ ಹೆಚ್ಚು ಕೇಂದ್ರ ತೆರಿಗೆ ಸಂಗ್ರಹವಾಗುತ್ತದೆಯಾದರೂ ಹಂಚಿಕೆಯಲ್ಲಿ ತಮಗೆ ಕಡಿಮೆ ಮೊತ್ತ ಸಿಗುತ್ತದೆ ಎಂದು ಆರೋಪಿಸುತ್ತಿವೆ. ಸಹಕಾರ ಒಕ್ಕೂಟ ವ್ಯವಸ್ಥೆ ಬಗ್ಗೆ ಮಾತನಾಡುವ ಕೇಂದ್ರ ಸರ್ಕಾರ ರಾಜ್ಯಗಳ ಜೊತೆ ಸಕ್ರಿಯವಾಗಿ ತೊಡಗಿಸಿಕೊಂಡು ಕಠಿಣ ವಿಚಾರಗಳಲ್ಲಿ ಸಹಮತ ಮೂಡಿಸಬೇಕು” ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರು ಹೇಳಿದ್ದಾರೆ.

ಇದನ್ನೂ ಓದಿ: Reliance Retail-Future Group Deal - ಫ್ಯೂಚರ್ ಗ್ರೂಪ್​ನ ವ್ಯವಹಾರಗಳನ್ನ 24,713 ಕೋಟಿಗೆ ಖರೀದಿಸಿದ ರಿಲಾಯನ್ಸ್ ಇಂಡಸ್ಟ್ರೀಸ್

ಹಾಗೆಯೇ, ಕೇಂದ್ರ ಮತ್ತು ರಾಜ್ಯ ಸರಕಾರಗಳು ನಿರಂತರವಾಗಿ ಘರ್ಷಣೆಯಲ್ಲಿ ತೊಡಗಿರುವುದು ದೇಶಕ್ಕೆ ಒಳಿತಲ್ಲ ಎಂದೂ ಗೌಡರು ಆತಂಕ ವ್ಯಕ್ತಪಡಿಸಿದ್ಧಾರೆ.

ಅಂತಿಮವಾಗಿ ದೇವೇಗೌಡರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ‘ದೇವರ ಕೆಲಸ’ ಎಂಬ ಹೇಳಿಕೆಯನ್ನ ಪ್ರಸ್ತಾಪಿಸಿ ವ್ಯಂಗ್ಯ ಮಾಡಿದ್ದಾರೆ. “ಸಚಿವರು ಹೇಳಿದ್ದನ್ನ ಒಪ್ಪಿಕೊಳ್ಳುತ್ತೇನೆ. ಆದರೆ, ನಾವೇ ನಿರ್ಮಿಸಿದ ಗೊಂದಲವನ್ನು ಸರಿ ಮಾಡಲು ದೇವರಿಗಾಗಿ ಕಾಯುತ್ತಾ ಇರಲು ಸಾಧ್ಯವಿಲ್ಲ…” ಎಂದು ರಾಜ್ಯ ಸಭಾ ಸದಸ್ಯರೂ ಆದ ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
Published by:Vijayasarthy SN
First published: