ಕೌಟುಂಬಿಕ ರಾಜಕಾರಣದಿಂದ ಯಾರೂ ಹೊರತಾಗಿಲ್ಲ; ಟೀಕೆಗಳಿಗೆ ಕಿವಿಗೊಡಬೇಡಿ ನಿಖಿಲ್, ಪ್ರಜ್ವಲ್ಗೆ ಎಚ್ಡಿಕೆ ಕಿವಿಮಾತು
ಜೆಡಿಎಸ್ ಕುಟುಂಬ ರಾಜಕಾರಣ ಮಾಡುತ್ತಿದೆ ಎಂಬ ಟೀಕೆ ಮಾಡುತ್ತಾರೆ. ಆದರೆ, ಕೌಟುಂಬಿಕ ರಾಜಕಾರಣದಿಂದ ಯಾರೂ ಹೊರತಾಗಿಲ್ಲ. ಈ ರೀತಿಯ ಟೀಕೆಗಳಿಗೆ ಕಿವಿಗೊಡದಂತೆ ನಿಖಿಲ್ ಮತ್ತು ಪ್ರಜ್ವಲ್ ರಾಜ್ಯಾದ್ಯಂತ ಪಕ್ಷ ಸಂಘಟನೆ ಮಾಡಬೇಕು
news18-kannada Updated:November 28, 2020, 6:36 PM IST

ಮಾಜಿ ಮುಖ್ಯಮಂತ್ರಿ ಹೆಚ್. ಡಿ.ಕುಮಾರಸ್ವಾಮಿ
- News18 Kannada
- Last Updated: November 28, 2020, 6:36 PM IST
ಬೆಂಗಳೂರು (ನ.28): ನಾನು ಮುಖ್ಯಮಂತ್ರಿಯಾಗಿದ್ದಾಗ ನಿಖಿಲ್ ವಿಧಾನಸೌಧಕ್ಕೆ ಬಂದಿದ್ನಾ? ವರ್ಗಾವಣೆ ಹೆಸರಲ್ಲಿ ಹಣ ಲೂಟಿ ಹೊಡೆದಿದ್ದಾನಾ? ಆದರೆ ಇವತ್ತು ರಾಜ್ಯದಲ್ಲಿ ಏನು ನಡೆಯುತ್ತಿದೆ? ಎಂದು ಮುಖ್ಯಮಂತ್ರಿಗಳ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಪರೋಕ್ಷ ವಾಗ್ದಾಳಿ ನಡೆಸಿದರು. ಗ್ರಾಮ ಪಂಚಾಯತಿ ಚುನಾವಣೆಗಾಗಿ ಪಕ್ಷ ಬಲವರ್ಧನೆ ಕುರಿತು ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಆಯೋಜಿಸಲಾಗಿದ್ದ ತಾಲೂಕು ಜಿಲ್ಲಾ ಮತ್ತು ರಾಜ್ಯಮಟ್ಟದ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಕುಟುಂಬ ರಾಜಕಾರಣ ಮಾಡುತ್ತಿದೆ ಎಂಬ ಟೀಕೆ ಮಾಡುತ್ತಾರೆ. ಆದರೆ, ಕೌಟುಂಬಿಕ ರಾಜಕಾರಣದಿಂದ ಯಾರೂ ಹೊರತಾಗಿಲ್ಲ. ಈ ರೀತಿಯ ಟೀಕೆಗಳಿಗೆ ಕಿವಿಗೊಡದಂತೆ ನಿಖಿಲ್ ಮತ್ತು ಪ್ರಜ್ವಲ್ ರಾಜ್ಯಾದ್ಯಂತ ಪಕ್ಷ ಸಂಘಟನೆ ಮಾಡಬೇಕು ಎಂದು ಸಲಹೆ ನೀಡಿದರು.
ಅಧಿಕಾರಕ್ಕಾಗಿ ನೀವು ರಾಜಕಾರಣ ಮಾಡಬೇಡಿ. ಜನರ ನೋವು ನಲಿವಿನ ಪಾಲುದಾರರಾಗಿ. ಜೆಡಿಎಸ್ ಯುವಕರಿಗೆ ಶಕ್ತಿ ನೀಡಲು ಸಿದ್ಧವಿದೆ. ಎಲ್ಲ ಜಿಲ್ಲೆಗಳ ಯುವ ಜೆಡಿಎಸ್ ಅಧ್ಯಕ್ಷರ ಸಭೆ ಕರೆಯಿರಿ. ನಂತರ ಎಲ್ಲ ಜಿಲ್ಲೆಗಳ ಪ್ರವಾಸ ಮಾಡಿ. ಯುವ ಅಧ್ಯಕ್ಷರು ಕೆಲಸ ಮಾಡಲು ಟಾರ್ಗೆಟ್ ನೀಡಿ. ಪಕ್ಷದ ಹೊಸ ಕಾರ್ಯದ ರೂಪುರೇಷೆ ಮಾಡಿ ಎಂದು ಕರೆ ನೀಡಿದರು. ಉಪ ಚುನಾವಣೆಗಳಲ್ಲಿ ನಾವು ಸೋತಿರಬಹುದು. ಸೋತ ನಂತರ ಸಿದ್ದರಾಮಯ್ಯ ಹೇಳಿದ್ದು ಗಮನಿಸಿದ್ದೇನೆ. ನಾವು ಸೋಲಲು ಜೆಡಿಎಸ್ ಕಾರಣ ಎಂದಿದ್ದಾರೆ. ಅಂದರೆ ಯಾವುದೇ ಪಕ್ಷವನ್ನು ಸೋಲಿಸುವ ಶಕ್ತಿ ನಮಗೆ ಇದೆ ಅಂತಾ ಇದರ ಅರ್ಥ. ಹೀಗಾಗಿ ಕಾರ್ಯಕರ್ತರು ಮುಂದಿನ ಚುನಾವಣೆಗಳಲ್ಲಿ ನಾವು ನಮ್ಮ ಶಕ್ತಿ ತೋರಿಸಬೇಕಿದೆ ಎಂದು ಕಾರ್ಯಕರ್ತರ ಹುರಿದುಂಬಿಸಿದರು.
ಬಹಳಷ್ಟು ಜನರಲ್ಲಿ ಜೆಡಿಎಸ್ ಪಕ್ಷ ಇನ್ನಿಲ್ಲ ಎಂಬ ಭಾವನೆ ಇದೆ. ಅದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಹಲವಾರು ಜನ ಈ ಸಭೆಯಲ್ಲಿ ಉತ್ತಮ ಸಲಹೆ ನೀಡಿದ್ದೀರಾ. ಪಕ್ಷದ ಸಂಘಟನೆ ಯಲ್ಲಿ ನಾವಿನ್ನೂ ನಿಮ್ಮ ಜೊತೆ ಇದ್ದೀವಿ ಅಂತಾ ತೋರಿಸಿದ್ದೀರಿ.
ಒಂದು ಕಡೆ ನೆರೆ, ಮತ್ತೊಂದು ಕಡೆ ಕೋವಿಡ್, ಇದರ ನಡುವೆ ನಿಗಮ ಗಳ ನೇಮಕಾತಿ. ಕೆಲವು ನಿಗಮಗಳಲ್ಲಿ ಹಣವೇ ಇಲ್ಲ. ಯಡಿಯೂರಪ್ಪ ಮಾಡಿದ್ದು ಸರಿ ಅಂತಾ ಅವರ ಕಾರ್ಯಕರ್ತರು ಹೇಳುತ್ತಾರೆ. ಕುಮಾರಸ್ವಾಮಿ ಕೂಡಾ ಹೀಗೆ ನೇಮಕಾತಿ ಮಾಡಬಹುದಿತ್ತು ಅಂತಾರೆ. ನಾನು ಎರಡು ಬಾರಿ ಕೂಡಾ ಪರಿಸ್ಥಿತಿ ಕೈಗೊಂಬೆ ಆಗಿ ಸಿಎಂ ಆದವನು. ಕಾಂಗ್ರೆಸ್ ನಾಯಕರ ಅನುಮತಿ ಇಲ್ಲದೇ ನಾನು ಏನೂ ಮಾಡುವ ಪರಿಸ್ಥಿತಿ ಇರಲಿಲ್ಲ ಎಂದರು.
ಇದನ್ನು ಓದಿ: ನನ್ನ ವಿರುದ್ಧ ಪಿತೂರಿ ಮಾಡುತ್ತಿರುವ ಡಿಕೆಶಿ, ಎಚ್ಡಿಕೆ ಮುಂದೆ ಸಾಕಷ್ಟು ಅನುಭವಿಸುತ್ತಾರೆ; ಸಿಪಿ ಯೋಗೇಶ್ವರ್
ನಿಖಿಲ್ ಕುಮಾರಸ್ವಾಮಿ ಮಾತನಾಡಿ, ನಾವು ಗೆದ್ದರೂ ಸೋತರೂ ಜನರ ನಡುವೆ ಇರಬೇಕು. ಬಿಹಾರದಲ್ಲಿ ಒಬ್ಬ ಯುವಕ ಜನರ ವಿಶ್ವಾಸ ಗಳಿಸಿದ್ದಾನೆ. ಅದೇ ರೀತಿ ನಾವೂ ಕೂಡಾ ಜನರ ವಿಶ್ವಾಸ ಗಳಿಸುವಲ್ಲಿ ಕೆಲಸ ಮಾಡಬೇಕು. ಕೇವಲ ನಮ್ಮಿಬ್ಬರಿಂದ ಇದು ಸಾದ್ಯವಿಲ್ಲ, ನೀವೆಲ್ಲ ಕೈ ಜೋಡಿಸಬೇಕು. ಉಪ ಚುನಾವಣೆಯಲ್ಲಿ ನಮಗೆ ಹಿನ್ನಡೆ ಆಗಿರಬಹುದು. ಆದರೆ ಕಾರ್ಯಕರ್ತರ ಉತ್ಸಾಹ ಕಡಿಮೆ ಆಗಿಲ್ಲ. ಕಳೆದ ಬಾರಿ ನಮಗೆ ಬಹುಮತ ಸಿಗದೇ ಇದ್ದರೂ ಕುಮಾರಸ್ವಾಮಿ ಕೊಟ್ಟ ಮಾತು ಉಳಿಸಿಕೊಂಡಿದ್ದರು. ನಾನು ಯಾವ ಸ್ಥಾನಕ್ಕೂ ಆಪೇಕ್ಷೆ ಪಟ್ಟವನಲ್ಲ. ಆದರೆ ಪಕ್ಷ ನನಗೆ ಒಂದು ಜವಾಬ್ದಾರಿ ನೀಡಿದೆ. ನನ್ನ ವೈಯಕ್ತಿಕ ಕಾರಣಗಳು, ಮದುವೆ ಇತ್ಯಾದಿಗಳಿಂದ ನಾನುಪಕ್ಷದ ಕಡೆ ಸ್ವಲ್ಪ ಗಮನ ಕೊಡಲು ಸಾಧ್ಯ ಆಗಲಿಲ್ಲ. ಇನ್ನು ಮುಂದೆ ಯಾವ ರೀತಿಯ ಸಂಘಟನೆ ಮಾಡಬೇಕು ಅಂತಾ ಯೋಜನೆ ಮಾಡುತ್ತೇನೆ. ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡುತ್ತೇನೆ ಎಂದರುಇನ್ನು ಪ್ರಜ್ವಲ್ ರೇವಣ್ಣ ಮಾತನಾಡಿ, ಜೆಡಿಎಸ್ ಪಕ್ಷದಲ್ಲಿ ಯುವಕರಿಗೆ ಅವಕಾಶ ನೀಡಲು ಕಾಯಕಲ್ಪ. ರಾಜಕೀಯವಾಗಿ ಯುವಕರಿಗೆ 15% ಮೀಸಲಾತಿ ನೀಡಬೇಕು. ಹೀಗಾದಾಗ ಮಾತ್ರ ಯುವಕರು ಜೆಡಿಎಸ್ಗೆ ಬರುತ್ತಾರೆ. ಯುವಕರಿಗೆ ಮೀಸಲಾತಿ ಸಿಕ್ಕರೆ ದೊಡ್ಡ ಶಕ್ತಿ ಬರುತ್ತದೆ. ನಾನು ಮತ್ತು ನಿಖಿಲ್ಗೆ ಯುವಕರನ್ನು ಸೆಳೆಯಲು ಶಕ್ತಿ ಬರುತ್ತದೆ. ಯುವಕರು ಪಕ್ಷಕ್ಕೆ ಬಂದರೆ ಗ್ರಾಮಮಟ್ಟದಿಂದ ಬೆಳೆಸಬಹುದು. ನಾಯಕನ ಶಕ್ತಿಗಿಂತ ನಿಷ್ಠೆ ಹುಡುಕಬೇಕಿದೆ ಎಂದರು.
ಅಧಿಕಾರಕ್ಕಾಗಿ ನೀವು ರಾಜಕಾರಣ ಮಾಡಬೇಡಿ. ಜನರ ನೋವು ನಲಿವಿನ ಪಾಲುದಾರರಾಗಿ. ಜೆಡಿಎಸ್ ಯುವಕರಿಗೆ ಶಕ್ತಿ ನೀಡಲು ಸಿದ್ಧವಿದೆ. ಎಲ್ಲ ಜಿಲ್ಲೆಗಳ ಯುವ ಜೆಡಿಎಸ್ ಅಧ್ಯಕ್ಷರ ಸಭೆ ಕರೆಯಿರಿ. ನಂತರ ಎಲ್ಲ ಜಿಲ್ಲೆಗಳ ಪ್ರವಾಸ ಮಾಡಿ. ಯುವ ಅಧ್ಯಕ್ಷರು ಕೆಲಸ ಮಾಡಲು ಟಾರ್ಗೆಟ್ ನೀಡಿ. ಪಕ್ಷದ ಹೊಸ ಕಾರ್ಯದ ರೂಪುರೇಷೆ ಮಾಡಿ ಎಂದು ಕರೆ ನೀಡಿದರು.