Muslim Marriage: 2ನೇ ಮದುವೆಯ ಆರ್ಥಿಕ ಹೊರೆ ಇದ್ದರೂ ವಿಚ್ಛೇದಿತ ಪತ್ನಿಗೆ ಜೀವನಾಂಶ ನೀಡಬೇಕು: ಹೈಕೋರ್ಟ್​​ ಮಹತ್ವದ ಆದೇಶ

ಸಾಮಾನ್ಯವಾಗಿ ಮಹಿಳೆಯರು ವಿಚ್ಛೇದನದ ಬಳಿಕ ಅನೇಕ ಕಷ್ಟಗಳನ್ನುಎದುರಿಸುತ್ತಾರೆ. ಅದರಲ್ಲಿಯೂ ಮುಸ್ಲಿಂ ಮಹಿಳೆಯರು ಜೀವನ ಹಲವು ಬದಲಾವಣೆಗಳನ್ನು ಕಾಣುತ್ತದೆ. ಮಹಿಳೆಯರ ಕಣ್ಣೀರು ಅವರ ಸೆರಗಿನಲ್ಲಿಯೇ ಇಂಗುತ್ತದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು: ವಿವಾಹವನ್ನು ರದ್ದುಗೊಳಿಸುವ ಅಥವಾ ವಿಚ್ಚೇದನ (Muslim marriage) ನೀಡುವ ಮೂಲಕ ಮಹಿಳೆಯ ಹಕ್ಕುಗಳನ್ನು ಕಿತ್ತುಕೊಳ್ಳಲು ಆಗಲ್ಲ ಎಂದು ಕರ್ನಾಟಕ ಹೈಕೋರ್ಟ್ (Karnataka Highcourt) ಹೇಳಿ ಮಾಜಿ ಪತ್ನಿಗೆ ಜೀವನಾಂಶ ನೀಡಲು ಆಗಲ್ಲ ಎಂದು ಸಲ್ಲಿಸಿದ್ದ ವ್ಯಕ್ತಿಯ ಅರ್ಜಿಯನ್ನು (Reject Plea) ವಜಾಗೊಳಿಸಿದೆ. ಜೀವನಾಂಶ ನೀಡುವ ಕುರಿತು ವ್ಯಕ್ತಿಯ ಪ್ರಕರಣ ದಶಕಗಳಿಂದಲೂ ನ್ಯಾಯಾಲಯದಲ್ಲಿತ್ತು. ಇದೀಗ ನ್ಯಾಯಾಲಯ ವ್ಯಕ್ತಿಯ ಅರ್ಜಿ ವಜಾಗೊಳಿಸಿ ಆದೇಶಿಸಿದೆ. ತಲಾಖ್ (Talaq) ನೀಡಿದ ನಂತರ ಹೊಸ ಪತ್ನಿ (Wife) ಮತ್ತು ಮಕ್ಕಳು (Children) ತನ್ನ ಮೇಲೆ ಅವಲಂಬಿತರಾಗಿರೋದರಿಂದ ಮೊದಲ ಪತ್ನಿಗೆ ಜೀವಾನಂಶ ನೀಡಲು ಸಾಧ್ಯವಿಲ್ಲ ಎಂದು ಹೇಳುವಂತಿಲ್ಲ ಎಂದು ನ್ಯಾಯಾಧೀಶ ಕಷ್ಣ ದೀಕ್ಷಿತ್ (Justice Krishna S Dixit) ಹೇಳಿದ್ದಾರೆ.

ಮೂರು ಪ್ರಕಾರಗಳಲ್ಲಿ ವಿಚ್ಛೇದಿತ ಮಹಿಳೆಗೆ ಜೀವನಾಂಶ ನೀಡಬೇಕು

ಎಜಾಜುರ್ ರೆಹಮಾನ್  (Ezazur Rehman)ಎಂಬಾತ ಮಾಜಿ ಪತ್ನಿ(Ex Wife)ಗೆ ಜೀವನಾಂಶ ನೀಡಲು ಆಗಲ್ಲ ಎಂದು ನ್ಯಾಯಾಲಯದ ಮೊರೆ ಹೋಗಿದ್ದನು. ತಾನು ಮತ್ತೊಂದು ಮದುವೆಯಾಗಿದ್ದು, ತನಗೆ ಪತ್ನಿ ಮತ್ತು ಮಕ್ಕಳು ಇದ್ದಾರೆ. ಹಾಗಾಗಿ ಅವರ ಜವಾಬ್ದಾರಿ ನನ್ನ ಮೇಲಿರುವ ಕಾರಣ ಮೊದಲ ಪತ್ನಿ ಸೈರಾ ಬಾನು(Saira Banu)ಗೆ ಜೀವನಾಂಶ ನೀಡಲು ಆಗಲ್ಲ ಎಂದು ಅರ್ಜಿ ಸಲ್ಲಿಸಿದ್ದನು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಎರಡನೇ ಮದುವೆಯಾದ್ರೂ ಮೊದಲ ಪತ್ನಿಗೆ ಜೀವನಾಂಶ ನೀಡಬೇಕು ಎಂದು ಹೇಳಿದೆ. ಖುರಾನ್ ಮತ್ತು ಹದೀಸ್ ಪ್ರಕಾರ ಮೂರು ಪ್ರಕಾರಗಳಲ್ಲಿ ವಿಚ್ಛೇದಿತ ಮಹಿಳೆಗೆ ಜೀವನಾಂಶ ನೀಡಬೇಕು ಎಂದು ನ್ಯಾಯಾಧೀಶರು ತಮ್ಮ ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ಅತ್ಯಲ್ಪ ಮೆಹರ್ (Mehr) (ಮದುವೆ ವೇಳೆ ವಧುವಿಗೆ ವರ ನೀಡುವ ಮೊತ್ತ) ನೀಡಿದ್ದರೆ ಅಥವಾ ಮಹಿಳೆ ಜೀವನ ನಡೆಸಲು ಅಶಕ್ತಳಾಗಿದ್ರೆ ಮತ್ತು ಆಕೆ ಮತ್ತೆ ಯಾರನ್ನೂ ಮದುವೆ ಆಗದಿದ್ದರೆ ಜೀವನಾಂಶ ನೀಡುವ ಕುರಿತು ಖುರಾನ್ ಮತ್ತು ಹದೀಸ್ ನಲ್ಲಿ ಹೇಳಲಾಗಿದೆ. ವಿಚ್ಛೇದನ ನೀಡಿದ ಬಳಿಕ ಪತಿಯ ಎಲ್ಲ ಕರ್ತವ್ಯ ಮತ್ತು ಜವಾಬ್ದಾರಿಗಳು ಮುಗಿಯೋದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ:  ಜೀನ್ಸ್​ ಪ್ಯಾಂಟ್ ಹಾಕಲ್ಲ, ಡ್ಯಾನ್ಸ್​ ಮಾಡಲ್ಲ ಎಂದ ಹೆಂಡತಿಗೆ ತಲಾಖ್ ನೀಡಿದ ಗಂಡ!

ಎಲ್ಲರ ಹಕ್ಕುಗಳು ಕಾನೂನುಗಳಿಗೆ ಬದ್ಧ

ಅಕ್ಟೋಬರ್ ಏಳರಂದು ನ್ಯಾಯಾಧೀಶರು ಹೊರಡಿಸಿರುವ ಆದೇಶದಲ್ಲಿ ಕೆಲವೊಮ್ಮೆ ಕಾನೂನಿನಲ್ಲಿ ಇಲ್ಲದ ಅಥವಾ ಬದ್ಧವಾಗದ ಹೊಸ ಸಮಸ್ಯೆ/ಬಾಧ್ಯತೆಗಳು ಎದುರಾಗಬಹುದು. ವಿಚ್ಛೇದನದಿಂದ ದೂರವಾದ ಪತ್ನಿಗೆ ನಿಗಧಿತ ಮೊತ್ತ ಅಥವಾ  ಆಸ್ತಿ ನೀಡುವುದು ಆತನ ಕರ್ತವ್ಯ ಆಗಿರುತ್ತದೆ. ಇವುಗಳನ್ನು ಸಾಂದರ್ಭಿಕ ಕರ್ತವ್ಯಗಳೆಂದು ಕರೆಯಬಹುದು ಎಂದು ನ್ಯಾಯಾಧೀಶರು ಹೇಳಿದ್ದಾರೆ. ಮುಸ್ಲಿಮರ ಮದುವೆಯೂ ಎರಡು ಕುಟುಂಬ ಅಥವಾ ಇಬ್ಬರ ನಡುವೆ ಒಮ್ಮತದಿಂದ ನಡೆದಿರುತ್ತಾರೆ. ಇನ್ನುಳಿದ ಸಂಪ್ರದಾಯದಂತೆ ಮುಸ್ಲಿಮರ ಮದುವೆಗಳು ನಡೆಯುತ್ತವೆ. ಹಾಗಾಗಿ ಸಮಾಜದಲ್ಲಿ ಎಲ್ಲರ ಹಕ್ಕುಗಳು ಕಾನೂನುಗಳಿಗೆ ಬದ್ಧವಾಗಿರುತ್ತವೆ.

ಮಹಿಳೆಯರ ಕಣ್ಣೀರು ಅವರ ಸೆರಗಿನಲ್ಲಿಯೇ ಇಂಗುತ್ತದೆ

ಅರ್ಜಿದಾರ ರೆಹಮಾನ್ ಪ್ರಕರಣ ಕುರಿತು ನ್ಯಾಯಾಲಯ ಹೀಗೆ ಹೇಳಿದೆ. ಈ ರೀತಿಯ ವಾದಗಳು ಕಾನೂನು ಮತ್ತು ನೈತಿಕತೆಗೆ ದೂರವಾಗಿವೆ, ಇಂತಹ ವಾದಗಳನ್ನು ಮನ್ನಿಸಿದ್ರೆ  ಕಾನೂನು ತಿರಸ್ಕರಿಸುವ ತಲಾಖ್ ಪ್ರೋತ್ಸಾಹ ನೀಡಿದಂತಾಗುತ್ತದೆ. ಈ ವೇಳೆ ನ್ಯಾಯಾಧೀಶರು, ವಿವಿಧ ಸಂಪ್ರದಾಯಗಳಲ್ಲಿ ಮಹಿಳೆಯರ ಹಕ್ಕುಗಳ ಕುರಿತು ಹೇಳಿದರು. ವಿಚ್ಚೇದನ ಪಡೆದ ಮಹಿಳೆಯರಿಗೆ ಇರುವ ಹಕ್ಕುಗಳ ವಿವಿಧ ಸಂಪ್ರದಾಯಲ್ಲಿನ ಕಾನೂನುಗಳನ್ನು ನ್ಯಾಯಾಧೀಶರು ಉದಾಹರಣೆ ರೂಪದಲ್ಲಿ ನೀಡಿದರು. ಸಾಮಾನ್ಯವಾಗಿ ಮಹಿಳೆಯರು ವಿಚ್ಛೇದನದ ಬಳಿಕ ಅನೇಕ ಕಷ್ಟಗಳನ್ನುಎದುರಿಸುತ್ತಾರೆ. ಅದರಲ್ಲಿಯೂ ಮುಸ್ಲಿಂ ಮಹಿಳೆಯರು ಜೀವನ ಹಲವು ಬದಲಾವಣೆಗಳನ್ನು ಕಾಣುತ್ತದೆ. ಮಹಿಳೆಯರ ಕಣ್ಣೀರು ಅವರ ಸೆರಗಿನಲ್ಲಿಯೇ ಇಂಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ:  ನೋಡಲು ಚೆನ್ನಾಗಿಲ್ಲ, ವಯಸ್ಸಾಗಿದೆ ಎಂದು ಹೆಂಡತಿಗೆ ವಾಟ್ಸಾಪ್​ ಮೂಲಕ ತಲಾಖ್​ ನೀಡಿದ ವೈದ್ಯ

ಅಲ್ಪಮೊತ್ತದ ಮೆಹರ್​ ನೀಡುವುದು ಪುರುಷನಿಗೆ ಹೆಚ್ಚು ಹೊರೆ ಆಗಲಾರದು. ಆದ್ರೆ ಈ ಮೊತ್ತ ಜೀವನ ನಿರ್ವಹಣೆಗೆ ಸಾಲಲ್ಲ ಎಂದು ಒತ್ತಿ ಹೇಳಲಾಗಿದೆ. ಅರ್ಜಿದಾರ ರೆಹಮಾನ್ ಮೊದಲ ಪತ್ನಿಗೆ 25 ಸಾವಿರ ರೂಪಾಯಿಗಳನ್ನು ನೀಡಬೇಕು ಎಂದು ನ್ಯಾಯಾಲಯ ಆದೇಶ ನೀಡಿದೆ. ಮೂರು ತಿಂಗಳೊಳಗೆ ಈ ಕುರಿತು ವರದಿ ಸಲ್ಲಿಸಬೇಕೆಂದು ನ್ಯಾಯಾಲಯ ಸೂಚನೆ ನೀಡಿದೆ.
Published by:Mahmadrafik K
First published: