• Home
 • »
 • News
 • »
 • state
 • »
 • ಜೆಡಿಎಸ್​ನವರು ಡಿಕೆಶಿಯನ್ನು ಸಿಎಂ ಮಾಡಲಿ: ಮಾಜಿ ಶಾಸಕ ಹೆಚ್.ಸಿ. ಬಾಲಕೃಷ್ಣ ಆಗ್ರಹ

ಜೆಡಿಎಸ್​ನವರು ಡಿಕೆಶಿಯನ್ನು ಸಿಎಂ ಮಾಡಲಿ: ಮಾಜಿ ಶಾಸಕ ಹೆಚ್.ಸಿ. ಬಾಲಕೃಷ್ಣ ಆಗ್ರಹ

ಜೆಡಿಎಸ್ ಸದಸ್ಯರೊಂದಿಗೆ ಹೆಚ್.ಸಿ. ಬಾಲಕೃಷ್ಣ(ಮೈಕ್ ಹಿಡಿದವರು) ಮತ್ತು ಸಿ.ಎಂ. ಲಿಂಗಪ್ಪ.

ಜೆಡಿಎಸ್ ಸದಸ್ಯರೊಂದಿಗೆ ಹೆಚ್.ಸಿ. ಬಾಲಕೃಷ್ಣ(ಮೈಕ್ ಹಿಡಿದವರು) ಮತ್ತು ಸಿ.ಎಂ. ಲಿಂಗಪ್ಪ.

ಸ್ಥಳೀಯವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯೆ ಹಗ್ಗ ಜಗ್ಗಾಟ ಇರಲಿದೆ ಅಷ್ಟೇ. ಆದರೆ, ಮೇಲ್ಮಟ್ಟದಲ್ಲಿ ಎರಡೂ ಪಕ್ಷಗಳು ಒಂದೇ ಎಂದು ಮಾಜಿ ಮಾಗಡಿ ಶಾಸಕರು ಅಭಿಪ್ರಾಯಪಟ್ಟಿದ್ದಾರೆ.

 • Share this:

  ರಾಮನಗರ(ಮೇ 20): ನಾವೆಲ್ಲರೂ ಸೇರಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದೆವು. ಈಗ ಡಿಕೆ ಶಿವಕುಮಾರ್ ಅವರನ್ನು ಸಿಎಂ ಮಾಡುವ ಮೂಲಕ ಕುಮಾರಸ್ವಾಮಿ ಆ ಋಣ ತೀರಿಸಲಿ ಎಂದು ಮಾಜಿ ಶಾಸಕ ಹೆಚ್.ಸಿ. ಬಾಲಕೃಷ್ಣ ಸಲಹೆ ನೀಡಿದರು. ಇಲ್ಲಿಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮಾಜಿ ಮಾಗಡಿ ಶಾಸಕ ಬಾಲಕೃಷ್ಣ, ಡಿಕೆಶಿಯ ಋಣ ಕುಮಾರಸ್ವಾಮಿ ಮೇಲಿದೆ ಎಂದು ನೆನಪಿಸಿದರು.

  ಕುಮಾರಸ್ವಾಮಿ ಅವರನ್ನು ಸಿಎಂ ಮಾಡಲು ಡಿಕೆ ಶಿವಕುಮಾರ್ ಬಹಳ ಕಷ್ಟಪಟ್ಟಿದ್ದರು. ಎಲ್ಲಾ ಪಕ್ಷ ಪಕ್ಷದ ಶಾಸಕರನ್ನು ಒಗ್ಗೂಡಿಸಿಕೊಂಡು ಹೋರಾಟ ಮಾಡಿದ್ದರು. ತಮ್ಮ ಹಳೇ ವೈರತ್ವ ಮರೆತು ಕುಮಾರಸ್ವಾಮಿಗೆ ಬೆನ್ನೆಲುಬಾಗಿ ನಿಂತಿದ್ದರು. ಅದನ್ನು ಕುಮಾರಸ್ವಾಮಿ ಮರೆಯಬಾರದು ಎಂದು ಮಾಜಿ ಜೆಡಿಎಸ್ ನಾಯಕರೂ ಆಗಿರುವ ಎಚ್.ಸಿ. ಬಾಲಕೃಷ್ಣ ಎಚ್ಚರಿಸಿದರು.

  ಕುಮಾರಸ್ವಾಮಿ ಅವರು ಎಂಥ ಸಂದರ್ಭದಲ್ಲೂ ಡಿಕೆಶಿಯ ಕೈಬಿಡಬಾರದು. ಮುಂದೊಂದು ದಿನ ಡಿಕೆಶಿಯನ್ನು ಮುಖ್ಯಮಂತ್ರಿ ಮಾಡುವ ಕಾರ್ಯಕ್ಕೆ ಕುಮಾರಸ್ವಾಮಿ ಕೈಜೋಡಿಸಬೇಕು ಎಂದು ಬಾಲಕೃಷ್ಣ ಕರೆ ನೀಡಿದರು.

  ಇದನ್ನೂ ಓದಿ: ‘ಮುಸ್ಲಿಮರ ಹಣ ಕೊರೋನಾ ಸೇವೆಗೆ ಬಳಸುವುದು ಬೇಡ ಎಂದ ಜಮೀರ್​ ಹೇಳಿಕೆ ಸಂವಿಧಾನ ವಿರೋಧಿ‘ - ಸಚಿವ ಸಿ.ಟಿ ರವಿ​​

  ಸ್ಥಳೀಯವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯೆ ಹಗ್ಗ ಜಗ್ಗಾಟ ಇರಲಿದೆ ಅಷ್ಟೇ. ಆದರೆ, ಮೇಲ್ಮಟ್ಟದಲ್ಲಿ ಎರಡೂ ಪಕ್ಷಗಳು ಒಂದೇ ಎಂದೂ ಅವರು ಅಭಿಪ್ರಾಯಪಟ್ಟರು.

  ಅವರು ಈ ಮಾತು ಹೇಳಲು ಕಾರಣ ಇವತ್ತು ನಡೆದ ಲೋಕಲ್ ಪೊಲಿಟಿಕ್ಸ್​ನ ಹೈಡ್ರಾಮಾ. ಬಾಲಕೃಷ್ಣ, ವಿ.ಪ. ಸದಸ್ಯ ಸಿ.ಎಂ. ಲಿಂಗಪ್ಪ ಸಮ್ಮುಖದಲ್ಲಿ ನಾಲ್ವರು ಜೆಡಿಎಸ್ ತಾ.ಪಂ. ಸದಸ್ಯರು ಕಾಂಗ್ರೆಸ್ ಸೇರ್ಪಡೆಯಾದರು. ಇದರೊಂದಿಗೆ ರಾಮನಗರ ತಾಲೂಕು ಪಂಚಾಯಿತಿಯು ಕಾಂಗ್ರೆಸ್ ತೆಕ್ಕೆಗೆ ಹೋಗಿದೆ. ಜೆಡಿಎಸ್​ನ ಭದ್ರಯ್ಯ ಅವರು ತಾ.ಪಂ. ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು.

  ಕೆಲ ದಿನಗಳ ಹಿಂದಷ್ಟೇ ಬಾಲಕೃಷ್ಣ ಅವರು ಡಿಕೆ ಸಹೋದರರ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

  ವರದಿ: ಎ.ಟಿ. ವೆಂಕಟೇಶ್

  First published: