HOME » NEWS » State » HC BALAKRISHNA ALLEGES THAT BIDADI TOWNSHIP PROJECT STALLED BECAUSE OF HDK MISTAKES SNVS

ಹೆಚ್.ಡಿ. ಕುಮಾರಸ್ವಾಮಿಯಿಂದಾಗಿ ನೆರವೇರದ ಬಿಡದಿ ಟೌನ್​ಶಿಪ್ ಯೋಜನೆ: ಹೆಚ್.ಸಿ. ಬಾಲಕೃಷ್ಣ ಆಕ್ರೋಶ

2006 ರಲ್ಲಿ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಈ ಯೋಜನೆಯನ್ನ ರೂಪಿಸಲಾಗಿತ್ತು. ಆದರೆ 14 ವರ್ಷಗಳು ಕಳೆದರು ಈ ಯೋಜನೆಯಿಂದ ಯಾವ ಪ್ರಯೋಜನವೂ ಕಂಡು ಬಂದಿಲ್ಲ.

news18-kannada
Updated:May 7, 2020, 4:04 PM IST
ಹೆಚ್.ಡಿ. ಕುಮಾರಸ್ವಾಮಿಯಿಂದಾಗಿ ನೆರವೇರದ ಬಿಡದಿ ಟೌನ್​ಶಿಪ್ ಯೋಜನೆ: ಹೆಚ್.ಸಿ. ಬಾಲಕೃಷ್ಣ ಆಕ್ರೋಶ
ಸುದ್ದಿಗೋಷ್ಠಿಯಲ್ಲಿ ಹೆಚ್.ಸಿ. ಬಾಲಕೃಷ್ಣ ಮತ್ತಿತರರು
  • Share this:
ರಾಮನಗರ: ಬೆಂಗಳೂರು ಮಹಾನಗರದ ಒತ್ತಡವನ್ನು ತಗ್ಗಿಸುವ ಸಲುವಾಗಿ 2006ರಲ್ಲಿ ಜೆಡಿಎಸ್‌-ಬಿಜೆಪಿ ಸಮ್ಮಿಶ್ರ ಸರ್ಕಾರ ಬಿಡದಿ ಸಮೀಪ ಉಪನಗರವೊಂದನ್ನು ನಿರ್ಮಾಣ ಮಾಡುವ ತೀರ್ಮಾನ ಮಾಡಿತ್ತು. ಈ ಸಂಬಂಧ ಅಂದಿನ ಸಚಿವ ಸಂಪುಟದ ಅನುಮೋದನೆ ದೊರೆತು ಸುತ್ತೋಲೆಯನ್ನು ಹೊರಡಿಸಲಾಗಿತ್ತು. ಆದರೆ ನಂತರ ಈ ಯೋಜನೆ ಪೂರ್ಣವಾಗದೇ ಈ ಭಾಗದ ರೈತರು ಪರಿತಪಿಸುವ ಸ್ಥಿತಿಗೆ ಬಂದಿದ್ದಾರೆ. ಇದಕ್ಕೆ ಹೆಚ್.ಡಿ. ಕುಮಾರಸ್ವಾಮಿ ಅವರೇ ಕಾರಣ ಎಂದು ಅವರ ಒಂದು ಕಾಲದ ಸ್ನೇಹಿತರೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.

9,600 ಎಕರೆ ಪ್ರದೇಶವನ್ನ ಗುರುತಿಸಿ ಅಲ್ಲಿಂದ ಇಲ್ಲಿಯವರೆಗೆ ಯಾವ ಕೆಲಸಕಾರ್ಯಗಳು ಆಗಿರಲಿಲ್ಲ. ಆದರೆ ಈಗ ಬಿಜೆಪಿ ಸರ್ಕಾರ ಬಂದ ನಂತರ 9,600 ಎಕರೆ ಪ್ರದೇಶದ ಭೂಮಿಯನ್ನ ಬಿಟ್ಟು ಅದರಲ್ಲಿ ಕೆಲವರಿಗೆ ಅನುಕೂಲವಾಗಲೆಂದು 884 ಎಕರೆ ಪ್ರದೇಶವನ್ನ ಮಾತ್ರ ಡಿನೋಟಿಫೈ ಮಾಡಿ ಕೆ.ಐ.ಎ.ಡಿ.ಬಿ.ಯವರು ಖರೀದಿ ಮಾಡಿರುವುದು ಎಷ್ಟು ಸರಿ ಎಂದು ಮಾಗಡಿ ಮಾಜಿ ಶಾಸಕ ಹೆಚ್.ಸಿ. ಬಾಲಕೃಷ್ಣ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು. ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಯವರು ಈ ಯೋಜನೆಯನ್ನ ಸರಿಯಾಗಿ ರೂಪಿಸಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ ಎಂದೂ ಅವರು ಕಿಡಿಕಾರಿದರು.

ಇದನ್ನೂ ಓದಿ: ಜಿಮ್ಸ್ ಎಡವಟ್ಟು - ಬಸವೇಶ್ವರ ಆಸ್ಪತ್ರೆಗೆ ಆಪತ್ತು ; 83 ಜನ ಸಿಬ್ಬಂದಿ ಕ್ವಾರಂಟೈನ್​​ಗೆ

ಇನ್ನು, ಈ ಯೋಜನೆಯಿಂದ ಬಿಡದಿ ಹೋಬಳಿಯ ಭೈರ ಮಂಗಲ ಗ್ರಾಪಂ ಸಹರದ್ದಿನ 5 ಹಾಗೂ ಕಂಚುಗಾರನಹಳ್ಳಿ ಗ್ರಾಪಂ ವ್ಯಾಪ್ತಿಯ 7 ಸೇರಿ ಒಟ್ಟು12 ಕಂದಾಯ ಗ್ರಾಮಗಳ ಜೊತೆಗೆ ಇತರೆ ಸಣ್ಣ 6 ಗ್ರಾಮಗಳ ವ್ಯಾಪ್ತಿಯನ್ನು ಒಳೆಗೊಂಡುತೆ ಒಟ್ಟು 30 ಗ್ರಾಮಗಳಿಗೆ ತೊಂದೆತಾಗಿದೆ. ಇಲ್ಲಿನ ಭೂ ಪ್ರದೇಶವನ್ನು ಕೆಂಪು ವಲಯವೆಂದು ಘೋಷಿಸಿ ಆದೇಶವನ್ನು ಹೊರಡಿಸಿತ್ತು. ಈ ಯೋಜನೆಯನ್ನು ಡಿಎಲ್‌ಎಫ್‌ ಹೆಸರಿನ ಖಾಸಗಿ ಕಂಪನಿಯ ಸಹಭಾಗಿತ್ವದಲ್ಲಿ ರಾಜ್ಯ ಸರಕಾರ ಒಪ್ಪಂದವನ್ನೂಮಾಡಿಕೊಂಡಿತ್ತು. ಆದರೆ ಸರ್ಕಾರದ ನಡೆಯಿಂದ ಆ ಕಂಪನಿ ಕೂಡ ಯೋಜನೆಯಿಂದ ಹಿಂದೆಸರಿದಿತ್ತು .9600 ಎಕರೆ ಭೂ ಪ್ರದೇಶವನ್ನು ಅಭಿವೃದ್ಧಿ ಪಡಿಸಲು ಸುಮಾರು 15 ರಿಂದ 20 ಸಾವಿರ ಕೋಟಿ ರೂಗಳ ಬಂಡವಾಳ ಅಗತ್ಯವಿತ್ತು.

ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಖಾಸಗಿ ಕಂಪನಿಗಳ ಸಹಭಾಗಿತ್ವದಡಿಯಲ್ಲಿ ಸುಸಜ್ಜಿತ ಟೌನ್‌ಶಿಪ್ ಯೋಜನೆಯನ್ನು ಅನುಷ್ಠಾನಗೊಳಿಸಬೇಕು. ಇಲ್ಲವಾದ್ರೆ ಯೋಜನೆ ಕೈ ಬಿಡುವುದಾದರೆ ಕೆಂಪು ವಲಯ ಆದೇಶವನ್ನು ತೆರವುಗೊಳಿಸಿ ನಿರಾಳಗೊಳಿಸಬೇಕು ಎಂದು ಈ ಭಾಗದ ರೈತರ ಪರವಾಗಿ ಬಾಲಕೃಷ್ಣ ತಿಳಿಸಿದರು.

ಇದನ್ನೂ ಓದಿ: ಜನರ ಸಂಕಷ್ಟಕ್ಕೆ ಸ್ಪಂದಿಸಿದ ಮಾಲೂರು ಶಾಸಕ ನಂಜೇಗೌಡ; 55 ಸಾವಿರ ಕುಟುಂಬಕ್ಕೆ ದಿನಸಿ, ತರಕಾರಿ ವಿತರಣೆ

ಈ ಭಾಗವನ್ನು ಕೆಂಪುವಲಯ ಎಂದು ಘೋಷಣೆ ಮಾಡಿರುವ ಪರಿಣಾಮ ಇಲ್ಲಿನ ಯಾವುದೇ ಭೂಮಿಯನ್ನ ಮಾರಾಟ ಮಾಡುವಂತಿಲ್ಲ. ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡುವಂತಿಲ್ಲ. ಹಾಗಾಗಿ ಕೂಡಲೇ ಈ ಯೋಜನೆಯನ್ನ ಪೂರ್ಣಪ್ರಮಾಣದಲ್ಲಿ ಪ್ರಾರಂಭ ಮಾಡಬೇಕು. ಇಲ್ಲವಾದರೆ ಕೆಲವರಿಗೆ ಮಾತ್ರ ಅನುಕೂಲ ಮಾಡಿಕೊಡುವುದಾದರೆ ಉಗ್ರ ಹೋರಾಟ ಮಾಡಲಾಗುತ್ತೆ ಎಂದು ಎಚ್ಚರಿಕೆ ಕೊಟ್ಟರು. ಸುದ್ದಿಗೋಷ್ಟಿಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಸಿ.ಎಂ. ಲಿಂಗಪ್ಪ ಸೇರಿ ಹಲವರು ಭಾಗಿಯಾಗಿದ್ದರು.ವರದಿ: ಎ.ಟಿ. ವೆಂಕಟೇಶ್

 
First published: May 7, 2020, 3:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories