• Home
  • »
  • News
  • »
  • state
  • »
  • ಸೆಲ್ಫಿ ವಿತ್​ ಪಿಡಿಒ; ಸಾರ್ವಜನಿಕರ ಅಹವಾಲು ಸ್ವೀಕರಿಸಲು ಸಿಇಒ ಮಾಡಿದ ಈ ಐಡಿಯಾಗೆ ಜನರಿಂದ ಶಹಬ್ಬಾಸ್​ಗಿರಿ

ಸೆಲ್ಫಿ ವಿತ್​ ಪಿಡಿಒ; ಸಾರ್ವಜನಿಕರ ಅಹವಾಲು ಸ್ವೀಕರಿಸಲು ಸಿಇಒ ಮಾಡಿದ ಈ ಐಡಿಯಾಗೆ ಜನರಿಂದ ಶಹಬ್ಬಾಸ್​ಗಿರಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪ್ರತಿನಿತ್ಯ ಕಛೇರಿಗೆ ಆಗಮಿಸುವ ಪಿಡಿಓಗಳು ಈ ಆ್ಯಪ್ ಮೂಲಕ ಸೆಲ್ಪಿ ಪೋಟೋ ಕಳಿಸಬೇಕು ಆಗ ಪೋಟೋ ಜೊತೆಗೆ ಸಮಯ ಹಾಗೂ ಸ್ಥಳದ ನಿಖರವಾದ ಮಾಹಿತಿ ಈ ಆ್ಯಪ್​ನಲ್ಲಿ ನಮೂದಾಗುತ್ತದೆ. ಇದರಿಂದ ಅಧಿಕಾರಿ ಎಲ್ಲಿದ್ದಾರೆ ಎಂಬ ಬಗ್ಗೆ ನಿಖರ ಮಾಹಿತಿ ತಿಳಿಯುವುದಲ್ಲದೇ, ಅವರ ಕಾರ್ಯವೈಖರಿ ಪತ್ತೆ ಕೂಡ ತಿಳಿಯಬಹುದು.

ಮುಂದೆ ಓದಿ ...
  • Share this:

    ಹಾವೇರಿ(ಮಾ. 06): ಸ್ಮಾರ್ಟ್​ಫೋನ್​ ಬಂದ ಬಳಿಕ ಜನರು ಸೆಲ್ಫಿಗೆ ಮರುಳಾಗಿದ್ದಾರೆ. ಎಲ್ಲೆಂದರಲ್ಲಿ ಸೆಲ್ಫಿಗೆ ಫೋಸ್​ ನೀಡುವುದು ಇತ್ತೀಚಿನ ದಿನಗಳಲ್ಲಿ ಕಾಮನ್​. ಇದನ್ನೇ ಅಸ್ತ್ರವಾಗಿ ಬಳಸಿಕೊಂಡ ಸಿಇಒ ಜನರ ಸಮಸ್ಯೆ ನಿವಾರಣೆಗೆ ಪಿಡಿಒ ಜೊತೆ ಸೆಲ್ಫಿ ಎಂಬ ಹೊಸ ಕಾರ್ಯಕ್ರಮ ಆರಂಭಿಸಿದ್ದಾರೆ. ಅಚ್ಚರಿಯಾದರೂ ಹೌದು. ತಂತ್ರಜ್ಞಾನವನ್ನು ಹೇಗೆಲ್ಲ ಸದುಪಯೋಗ ಪಡಿಸಿಕೊಳ್ಳಬಹುದು ಎಂಬುದಕ್ಕೆ ಹಾವೇರಿ ಸಿಇಒ ಮಾದರಿಯಾಗಿದ್ದಾರೆ.


    ಕಳೆದ ನಾಲ್ಕು ತಿಂಗಳ ಹಿಂದೆ ಜಿಲ್ಲೆಗೆ ಸಿಇಒ ಆಗಿ ರಮೇಶ್​ ದೇಸಾಯಿ ವರ್ಗಾವಣೆಗೊಂಡಿದ್ದರು. ಈ ವೇಳೆ ಜಿಲ್ಲೆಯ ಗ್ರಾಮೀಣ ಜನರಿಂದ ಕೇಳಿ ಹಲವಾರು ದೂರುಗಳು ಕೇಳಿಬಂದವು. ತಮ್ಮ ಕೆಲಗಳನ್ನು ಮಾಡಿಕೊಡಲು ಪಿಡಿಒಗಳೇ ಕೈಗೆ ಸಿಗುತ್ತಿಲ್ಲಎಂಬುದು ಸಾಮಾನ್ಯ ದೂರಾಗಿತ್ತು.


    ಕಚೇರಿಗೆ ಹಾಜರಾದರೂ ಕೆಲಸ ಮಾಡಿಕೊಡಲು ಪಿಡಿಒ ಅಧಿಕಾರಿಗಳು ಮಾತ್ರ ಕಚೇರಿಯಲ್ಲಿ ಇರುತ್ತಿರಲಿಲ್ಲ. ಆದರೆ, ಈ ಬಗ್ಗೆ ವಿಚಾರಿಸಿದರೆ, ಅಧಿಕಾರಿಗಳು ಮಾತ್ರ ತಾವು ಕಚೇರಿಯಲ್ಲಿಯೇ ಇರುವುದಾಗಿ ತಿಳಿಸುತ್ತಿದ್ದರು.


    ಈ ಹಿನ್ನೆಲೆಯಲ್ಲಿ, ಸಮಸ್ಯೆ ನಿವಾರಣೆಗೆ ತಂತ್ರಜ್ಞಾನದ ಮೊರೆ ಹೋದ ಸಿಇಒ ಅಧಿಕಾರಿ  'ಸೆಲ್ಪಿ ವಿತ್ ಪಿಡಿಓ' ಅನ್ನೊ ಆ್ಯಪ್ ರಚನೆ ಮಾಡಿದ್ದಾರೆ. ಇದರ ಮೂಲಕ ಅಧಿಕಾರಿಗಳು ಎಲ್ಲಿ ಕಾರ್ಯನಿವಹಿಸುತ್ತಾರೋ  ಅದೇ ಸ್ಥಳದಿಂದ ಸೆಲ್ಪಿ ತಗೆದು ಕಳಿಸಬೇಕು ಎನ್ನುವ ಆದೇಶ ಮಾಡಿದ್ದಾರೆ.


    ಪ್ರತಿನಿತ್ಯ ಕಛೇರಿಗೆ ಆಗಮಿಸುವ ಪಿಡಿಓಗಳು ಈ ಆ್ಯಪ್ ಮೂಲಕ ಸೆಲ್ಪಿ ಪೋಟೋ ಕಳಿಸಬೇಕು ಆಗ ಪೋಟೋ ಜೊತೆಗೆ ಸಮಯ ಹಾಗೂ ಸ್ಥಳದ ನಿಖರವಾದ ಮಾಹಿತಿ ಈ ಆ್ಯಪ್​ನಲ್ಲಿ ನಮೂದಾಗುತ್ತದೆ. ಇದರಿಂದ ಅಧಿಕಾರಿ ಎಲ್ಲಿದ್ದಾರೆ ಎಂಬ ಬಗ್ಗೆ ನಿಖರ ಮಾಹಿತಿ ತಿಳಿಯುವುದಲ್ಲದೇ, ಅವರ ಕಾರ್ಯವೈಖರಿ ಪತ್ತೆ ಕೂಡ ತಿಳಿಯಬಹುದು.


    ಇದನ್ನು ಓದಿ: ಕೊರೋನಾ ಭೀತಿ: ಮಕ್ಕಳಿಗೆ ಆಟ, ಶಿಕ್ಷಕರಿಗೆ ಪ್ರಾಣ ಸಂಕಟ; ರಜೆಗಾಗಿ ನಾಟಕವಾಡಿದ ವಿದ್ಯಾರ್ಥಿಗಳು


    ಈ ಆ್ಯಪ್​ನಿಂದಾಗಿ ಈಗ ಜನರಿಗೆ ಪಿಡಿಒ ಅಧಿಕಾರಿಗಳು ಲಭ್ಯವಾಗುತ್ತಿದ್ದು, ತಮ್ಮ ಕೆಲಸ ಕೂಡ ನಡೆಯುತ್ತಿದೆ ಎಂದು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


    (ವರದಿ:  ಸಂಕನಗೌಡ ಎಮ್ ದೇವಿಕೊಪ್ಪ)

    Published by:Seema R
    First published: