ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಹಾವೇರಿಯ ವಿದ್ಯಾರ್ಥಿನಿ ಆಯ್ಕೆ

ಜಿಲ್ಲೆಯ ಬ್ಯಾಡಗಿ ನಗರದ ಪ್ರಕಾಶ ಹನುಮನಹಳ್ಳಿಮಠ ಇವರ ಪುತ್ರಿ ಪಿ.ವೇದಾ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದು. ಈಕೆ ಮೊಟೆಬೆನ್ನೂರಿಲ್ಲಿರುವ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ದ್ವೀತಿಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. 

ವಿದ್ಯಾರ್ಥಿನಿ ಪಿ‌. ವೇದಾ

ವಿದ್ಯಾರ್ಥಿನಿ ಪಿ‌. ವೇದಾ

  • Share this:
ಹಾವೇರಿ(ಜ.18) : ಭಾರತ ಸರ್ಕಾರ ಹಾಗೂ ಸರ್ವ ಶಿಕ್ಷಣ ಕರ್ನಾಟಕ ಸಹಯೋಗದಲ್ಲಿ ನಡೆಯಲಿರುವ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಹಾವೇರಿ ಜಿಲ್ಲೆಯ ಬ್ಯಾಡಗಿಯ ಪಿಯುಸಿ ವಿದ್ಯಾರ್ಥಿನಿ ಪಿ‌. ವೇದಾ ಆಯ್ಕೆಯಾಗಿದ್ದಾಳೆ.

ಸ್ವತ: ಪ್ರಧಾನಿ ನರೇಂದ್ರ ಮೋದಿಯವರೇ ನೇರವಾಗಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಯಸುವ ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕ ಒಂದು ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿ ಜೊತೆ ಜನವರಿ 20 ರಂದು ನವದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಭಾಗವಹಿಸಲಿದ್ದಾಳೆ.

ಜಿಲ್ಲೆಯ ಬ್ಯಾಡಗಿ ನಗರದ ಪ್ರಕಾಶ ಹನುಮನಹಳ್ಳಿಮಠ ಇವರ ಪುತ್ರಿ ಪಿ.ವೇದಾ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದು. ಈಕೆ ಮೊಟೆಬೆನ್ನೂರಿಲ್ಲಿರುವ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ದ್ವೀತಿಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಸಂವಾದದ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿನ್ನೆ ಸಂಜೆ ಬೆಂಗಳೂರು ಮೂಲಕ ದೆಹಲಿಗೆ ಪ್ರಯಾಣ ಬೆಳಸಿದ್ದಾಳೆ.

ಇದನ್ನೂ ಓದಿ : ಅಖಿಲ ಭಾರತ ಸಾಹಿತ್ಯ ಸಮ್ಮೇಳನ ವೇದಿಕೆಗೆ ಭೂಮಿ ಪೂಜೆ - ಶಾಸಕರಿಂದ ಒಂದು ತಿಂಗಳ ವೇತನದ ನೆರವು ಘೋಷಣೆ

ಕರ್ನಾಟಕದಿಂದ 42 ವಿಧ್ಯಾರ್ಥಿಗಳು ಆಯ್ಕೆ ಆಗಿರುವ ಪೈಕಿ ವೇದಾ ಸಹಾ ಒಬ್ಬಳಾಗಿದ್ದು ಇದು ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿ ಜಿಲ್ಲೆಗೆ ಹೆಮ್ಮೆ. ಇನ್ನೂ ತಂದೆ ಪ್ರಕಾಶ ಹನುಮನಹಳ್ಳಿಮಠ ತಾಯಿ ಸುಧಾ ಹಾಗೂ ಕುಟುಂಬದ ಸದಸ್ಯರು ಪಿ.ವೇದಾ ಅವಳ ಸಾಧನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
First published: