• Home
  • »
  • News
  • »
  • state
  • »
  • Karnika: ಯುವಕನಿಗೆ ಸಿಗಲಿದೆ ಕರ್ನಾಟಕದ ಮುಖ್ಯಮಂತ್ರಿ ಸ್ಥಾನ; ಕಾರ್ಣಿಕ ಭವಿಷ್ಯವಾಣಿ

Karnika: ಯುವಕನಿಗೆ ಸಿಗಲಿದೆ ಕರ್ನಾಟಕದ ಮುಖ್ಯಮಂತ್ರಿ ಸ್ಥಾನ; ಕಾರ್ಣಿಕ ಭವಿಷ್ಯವಾಣಿ

ಬಿಲ್ಲನ್ನೇರಿ ಕಾರ್ಣಿಕ ನುಡಿದ ಗೊರವಪ್ಪ

ಬಿಲ್ಲನ್ನೇರಿ ಕಾರ್ಣಿಕ ನುಡಿದ ಗೊರವಪ್ಪ

ಈ ವರ್ಷದ ಭವಿಷ್ಯವಾಣಿಯಲ್ಲಿ ರಾಜ್ಯದ ಸಣ್ಣ ಸಣ್ಣ ರೈತರಿಗೂ ಉತ್ತಮ ಬೆಳೆ ಹಾಗೂ ಆದಾಯ ಪ್ರಪ್ತಿಯಾಗಲಿದ್ದು, ಯುವ ರಾಜಕಾರಣಿಗಳಿಗೆ ಹೆಚ್ಚಿನ ಅವಕಾಶ ದೊರೆಯಲಿದೆ ಎಂದು ನುಡಿದಿದ್ದಾರೆ.

  • Share this:

ದಸರಾ ಹಬ್ಬದ (Dussehra Festival) ಸಮಯದಲ್ಲಿ ಹಾವೇರಿಯ ರಾಣೆಬೆನ್ನೂರಿನಲ್ಲಿ ನಡೆಯುವ ಮಾಲತೇಶ ದೇವರ ಕಾರ್ಣಿಕೋತ್ಸವದಲ್ಲಿ (Karkanika) ಆಕಾಶದ ಗುಡ್ಡಕ್ಕಲೆ ಶಿಶು ಏರಿತಲೆ ಪರಾಕ್ ಅಂತಾ ಹೇಳುತ್ತಾ  ದೇವರಗುಡ್ಡದ ಕಾರ್ಣಿಕವನ್ನ ಗೊರವಪ್ಪ ನಾಗಪ್ಪ ಉರ್ಮಿ‌ ಬಿಲ್ಲನ್ನೇರಿ ಇಂದು ನುಡಿದರು. ರಾಣೆಬೆನ್ನೂರು (Ranebennur) ತಾಲೂಕಿನ ದೇವರಗುಡ್ಡದಲ್ಲಿ ನಡೆದ ಕಾರ್ಣಿಕೋತ್ಸವದಲ್ಲಿ ಲಕ್ಷಾಂತರ ಭಕ್ತರು (Devotees) ಕಾರ್ಣಿಕವನ್ನು ಕೇಳಲು ಭಾಗಿಯಾಗಿದ್ದರು. 


ಕಾರ್ಣಿಕೋತ್ಸವ ವರ್ಷದ ಭವಿಷ್ಯವಾಣಿ


ಇಲ್ಲಿ ನಡೆಯುವ ಕಾರ್ಣಿಕೋತ್ಸವ ವರ್ಷದ ಭವಿಷ್ಯವಾಣಿ ಅಂತಲೆ ನಂಬಲಾಗುತ್ತದೆ ಎಂದು ಕಾರ್ಣಿಕ ವಿಶ್ಲೇಷಿಸಿದ ಕುರಿತು ದೇವರಗುಡ್ಡ ದೇವಸ್ಥಾನದ ಪ್ರಧಾನ ಅರ್ಚಕರು ಗುರೂಜಿ ಸಂತೋಷ ಭಟ್ ಹೇಳಿದರು.


ಯುವ ರಾಜಕಾರಣಿಗಳಿಗೆ ಅವಕಾಶ


ಈ ವರ್ಷದ ಭವಿಷ್ಯವಾಣಿಯಲ್ಲಿ ರಾಜ್ಯದ ಸಣ್ಣ ಸಣ್ಣ ರೈತರಿಗೂ ಉತ್ತಮ ಬೆಳೆ ಹಾಗೂ ಆದಾಯ ಪ್ರಪ್ತಿಯಾಗಲಿದ್ದು, ಯುವ ರಾಜಕಾರಣಿಗಳಿಗೆ ಹೆಚ್ಚಿನ ಅವಕಾಶ ದೊರೆಯಲಿದೆ ಎಂದು ನುಡಿದಿದ್ದಾರೆ. ಮುಂದುವರೆದು ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಯುವಕನಿಗೆ ದೊರೆಯುವ ಸಾಧ್ಯತೆ ಇದೆ ಎಂದು ಕಾರ್ಣಿಕ ವಿಶ್ಲೇಷಿಸಿದ ಕುರಿತು ದೇವರಗುಡ್ಡ ದೇವಸ್ಥಾನದ ಪ್ರಧಾನ ಅರ್ಚಕರು ಗೂರುಜಿ ಸಂತೋಷ ಭಟ್ ಹೇಳಿದರು.


ಅದ್ಧೂರಿಯಾಗಿ ನಡೆದ ಕಾರ್ಣಿಕೋತ್ಸವ  


ಕಳೆದೆರಡು ವರ್ಷಗಳಿಂದ ಕೋವಿಡ್ ಕಾರಾಣದಿಂದ ಕಾರ್ಣಿಕೋತ್ಸವಕ್ಕೆ ಹೆಚ್ಚಿನ ಜನ ಸೇರಲು ಜಿಲ್ಲಾಡಳಿತವು ಕಠಿಣ ಕ್ರಮ ಕೈಗೊಂಡಿತ್ತು. ಈ ಬಾರಿ ಕೋವಿಡ್ ನಿರ್ಬಂಧಗಳು ಇಲ್ಲದೇ ಇದ್ದ ಕಾರಣ ಕಾರ್ಣಿಕೋತ್ಸವವು ಲಕ್ಷಾಂತರ ಜನರ ನಡುವೆ ಅದ್ದೂರಿಯಾಗಿ ಜರುಗಿತು.


ಇದನ್ನೂ ಓದಿ: HDK-KCR: ನಾಳೆ ರಾಷ್ಟ್ರೀಯ ಪಕ್ಷ ಘೋಷಿಸಲಿದ್ದಾರೆ ಕೆಸಿಆರ್​; ಶಾಸಕರ ಜೊತೆ ಹೈದ್ರಾಬಾದ್​ನಲ್ಲಿ ಕುಮಾರಸ್ವಾಮಿ


ಸಮ್ಮಿಶ್ರ ಸರ್ಕಾರದ ಪತನಕ್ಕೆ ಮುನ್ಸೂಚನೆ ನೀಡಿದ್ದ ಕಾರ್ಣಿಕ..!


ರಾಜ್ಯದಲ್ಲಿ ಪದೇ ಪದೇ ನಾಯಕತ್ವ ಬದಲಾವಣೆ ವಿಚಾರ ಪ್ರಸ್ತಾಪ ಆಗ್ತಿದೆ. ಸಿಎಂ ಯಡಿಯೂರಪ್ಪ ಸರಕಾರದ ಭಾಗವಾಗಿರೋ ಬಿಜೆಪಿ ಶಾಸಕರೇ ಸಿಎಂ ವಿರುದ್ಧ ಮಾತನಾಡ್ತಿರೋದು ಕಾರ್ಣಿಕವಾಣಿಯ ವಿಶ್ಲೇಷಣೆಗೆ ಪುಷ್ಟಿ ನೀಡುವಂತಿದೆ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಅಧಿಕಾರದಲ್ಲಿ ಸಂದರ್ಭದಲ್ಲಿ ನಡೆದ ಕಾರ್ಣಿಕದ ವೇಳೆ ಕಬ್ಬಿಣದ ಸರಪಳಿ ತುಂಡಾಯಿತಲೆ ಪರಾಕ್ ಅಂದಾಗ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಪತನವಾಗಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಿತ್ತು.


ಹೀಗಾಗಿ ಮೈಲಾರಲಿಂಗೇಶ್ವರನ ಕಾರ್ಣಿಕವಾಣಿ ರಾಜಕೀಯದ ಮೇಲೂ ಪರಿಣಾಮ ಬೀರುತ್ತೆ ಅಂತಲೆ ನಂಬಲಾಗಿದೆ. ಈಗ ಪ್ರಸ್ತುತ ರಾಜ್ಯ ಬಿಜೆಪಿ ಸರಕಾರದಲ್ಲಿ ಸಿಎಂ ಯಡಿಯೂರಪ್ಪ ವಿರುದ್ಧ ಎದ್ದಿರೋ ಅಪಸ್ವರಗಳು ಇದಕ್ಕೆ ಪುಷ್ಠಿ ನೀಡುತ್ತಿವೆ. ಯಡಿಯೂರಪ್ಪ ಒಂದು ಭಾಗವಾದ್ರೆ, ಶಾಸಕ ಯತ್ನಾಳರದು ಒಂದು ಭಾಗವಾಗಿದೆ.


ಇದನ್ನೂ ಓದಿ: Siddaramaiah: ಪರೇಶ್‌ ಮೇಸ್ತ ಕೇಸ್‌ನಲ್ಲಿ ಬಿಜೆಪಿ ವಿರುದ್ಧ ಗುಡುಗು! ನ್ಯೂಸ್ 18 ಕನ್ನಡ ವರದಿ ಟ್ವೀಟ್ ಮಾಡಿದ ಸಿದ್ದರಾಮಯ್ಯ


ಮತ್ತೊಂದು ಒಳಗಡೆ ಸಂಚು ನಡೆಸುತ್ತಿದೆ ಇದೆ. ಅದು ಅಂತಾ ರಾಜಕೀಯವಾಗಿ ವಿಶ್ಲೇಷಣೆ ಮಾಡಲಾಗಿದೆ. ಹೀಗಾಗಿ ರಾಜ್ಯದಲ್ಲಿನ ಬಿಜೆಪಿ ಸರಕಾರದ‌ ಮೇಲೆ‌ ಮೈಲಾರಲಿಂಗೇಶ್ವರನ ಕಾರ್ಣಿಕ ವಾಣಿಯ ಪರಿಣಾಮ ಆಗುತ್ತೆ ಅಂತಾ ನಂಬಲಾಗಿದೆ. ಆದ್ರೆ ಕೇಂದ್ರ ಸರಕಾರದ ಮೇಲೂ ಕಾರ್ಣಿಕವಾಣಿಯ ವಿಶ್ಲೇಷಣೆ ಮಾಡಲಾಗಿದೆ. ಇಲ್ಲಿ ಆಗಿರೋ ರಾಜಕೀಯ ವಿಶ್ಲೇಷಣೆಗಳು ಸತ್ಯವಾಗಿರೋ ನಿದರ್ಶನಗಳು ಇವೆ.


ಈ ಹಿಂದೆ ಡಿಕೆಶಿ ಕಾರ್ಣಿಕ ಕೇಳಲು ಬಂದು ಎಡವಟ್ಟು!


ಮೈಲಾರಲಿಂಗೇಶ್ವರನ ಕಾರ್ಣಿಕ ವಾಣಿಯ ಸಮಯದಲ್ಲಿ ಯಡವಟ್ಟು ಮಾಡಿಕೊಂಡ ರಾಜಕೀಯ ನಾಯಕರು ಪಶ್ಚಾತ್ತಾಪ ಅನುಭವಿಸಿದ ಘಟನೆಗಳು ನಡೆದಿವೆ. ಸಧ್ಯ ಕೆಪಿಸಿಸಿ ಅಧ್ಯಕ್ಷರಾಗಿರೋ ಡಿ.ಕೆ.ಶಿವಕುಮಾರ ಕೆಲವು ವರ್ಷಗಳ ಹಿಂದೆ ಕಾರ್ಣಿಕ ಕೇಳಲು ಹೆಲಿಕ್ಯಾಪ್ಟರ್​ನಲ್ಲಿ ಬಂದಿದ್ರು. ಅದು ಮೈಲಾರಲಿಂಗೇಶ್ವರ ದೇವಸ್ಥಾನದ ಮೇಲೆ ಹಾದು ಹೋಗಿತ್ತು. ಅದಾದಮೇಲೆ ಡಿ.ಕೆ. ಶಿವಕುಮಾರಗೆ ಸಂಕಷ್ಟ ಎದುರಾಗಿತ್ತು.  ನಂತರ ಶಿವಕುಮಾರ ದೇವಸ್ಥಾನಕ್ಕೆ ಬಂದು ಸಂಕಷ್ಟ ಪರಿಹಾರಕ್ಕೆ ವಿಶೇಷ ಪೂಜೆ ಸಲ್ಲಿಸಿ ಹೆಲಿಕ್ಯಾಪ್ಟರ್ ಕಾಣಿಕೆ ನೀಡಿ ಹೋಗಿದ್ರು.

Published by:ಪಾವನ ಎಚ್ ಎಸ್
First published: