HOME » NEWS » State » HAVERI RAIN HEAVY RAIN DESTROYS HAVERI FARMERS CROPS KARNATAKA RAINS KARNATAKA WEATHER SCT

Haveri Rain | ಹಾವೇರಿಯಲ್ಲಿ ಬಿರುಗಾಳಿ ಸಹಿತ ಮಳೆಯಿಂದ ಲಕ್ಷಾಂತರ ಮೌಲ್ಯದ ಬೆಳೆ ನಷ್ಟ; ಕಂಗೆಟ್ಟ ರೈತ

Karnataka Weather: ಹಾವೇರಿ ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಗುಡುಗು, ಸಿಡಿಲು, ಬಿರುಗಾಳಿಯೊಂದಿಗೆ ಮಳೆರಾಯನ ಆಗಮನ ಆಗುತ್ತಿದೆ. ರಟ್ಟೀಹಳ್ಳಿ ತಾಲೂಕಿನ ಬುಳ್ಳಾಪುರ ಗ್ರಾಮದ ರೈತ ರಾಜಪ್ಪ ನಂದೀಹಳ್ಳಿ ಎಂಬುವವರು ಎರಡು ಎಕರೆ ಜಮೀನಿನಲ್ಲಿ ಅಡಿಕೆ ಮತ್ತು ಬಾಳೆ ಬೆಳೆದಿದ್ದರು. ಆದರೆ, ಬಿರುಗಾಳಿ ಸಮೇತ ಬಂದ ಮಳೆ ಸಂಪೂರ್ಣವಾಗಿ ಬಾಳೆ ಬೆಳೆಯನ್ನು ನೆಲ ಕಚ್ಚುವಂತೆ ಮಾಡಿದೆ.

news18-kannada
Updated:May 4, 2021, 7:54 AM IST
Haveri Rain | ಹಾವೇರಿಯಲ್ಲಿ ಬಿರುಗಾಳಿ ಸಹಿತ ಮಳೆಯಿಂದ ಲಕ್ಷಾಂತರ ಮೌಲ್ಯದ ಬೆಳೆ ನಷ್ಟ; ಕಂಗೆಟ್ಟ ರೈತ
ಹಾವೇರಿಯಲ್ಲಿ ಸುರಿದ ಮಳೆ
  • Share this:
ಹಾವೇರಿ: ಇತ್ತೀಚೆಗೆ ರೈತರು ಎಂದರೆ ಸಮಸ್ಯೆ, ಸಮಸ್ಯೆ ಎಂದರೆ ರೈತರು ಎಂಬ ವಾತಾವರಣ ಸೃಷ್ಟಿಯಾಗಿದೆ. ಕೆಲವೊಮ್ಮೆ ಸರ್ಕಾರದ ನಿಲುವುಗಳು ರೈತರಿಗೆ ಸಮಸ್ಯೆಯಾದರೆ ಕೆಲವೊಮ್ಮೆ ಪ್ರಕೃತಿಯ ಮುನಿಸು ರೈತರ ಬದುಕನ್ನ ಸಂಕಷ್ಟಕ್ಕೆ ಸಿಲುಕಿಸುತ್ತವೆ. ಹಾವೇರಿ ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಗುಡುಗು, ಸಿಡಿಲು, ಬಿರುಗಾಳಿಯೊಂದಿಗೆ ಮಳೆರಾಯನ ಆಗಮನ ಆಗುತ್ತಿದೆ. ಸಂಜೆಯಾಗುತ್ತಿದ್ದಂತೆ ಎಂಟ್ರಿ ಕೊಡುವ ಬಿರುಗಾಳಿ ಸಮೇತ ಮಳೆ ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಬುಳ್ಳಾಪುರ ಗ್ರಾಮದ ರೈತರೊಬ್ಬರ ಬಾಳನ್ನೆ ಹಾಳು ಮಾಡಿದೆ. ರೈತ ರಾಜಪ್ಪ ನಂದೀಹಳ್ಳಿ ಎಂಬುವವರು  ಎರಡು ಎಕರೆ ಜಮೀನಿನಲ್ಲಿ ಅಡಿಕೆ ಮತ್ತು ಬಾಳೆ ಬೆಳೆದಿದ್ದರು. ಆದರೆ, ಬಿರುಗಾಳಿ ಸಮೇತ ಬಂದ ಮಳೆ ಸಂಪೂರ್ಣವಾಗಿ ಬಾಳೆ ಬೆಳೆಯನ್ನು ನೆಲ ಕಚ್ಚುವಂತೆ ಮಾಡಿದೆ.

ರೈತ ರಾಜಪ್ಪ ಎರಡು ಎಕರೆ ಜಮೀನಿನಲ್ಲಿ ಅಡಿಕೆ ಮತ್ತು ಬಾಳೆ ಬೆಳೆಯನ್ನು ಬೆಳೆದಿದ್ದರು. ಅಡಿಕೆ ಮತ್ತು ಬಾಳೆ ಬೆಳೆಯಲು ಎರಡು ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿದ್ದರು. ರೈತ ರಾಜಪ್ಪನ‌ ನಿರೀಕ್ಷೆಗೂ ಮೀರಿ ಬಾಳೆ ಮತ್ತು ಅಡಿಕೆ ಬೆಳೆ ಬೆಳೆದಿತ್ತು. ಬಿರುಗಾಳಿ ಸಮೇತ ಬಂದ ಮಳೆರಾಯ ಬಾಳೆ ಮತ್ತು ಅಡಿಕೆ ಬೆಳೆಯನ್ನು ಮಕಾಡೆ ಮಲಗುವಂತೆ ಮಾಡಿದ್ದಾನೆ.

ರೈತ ರಾಜಪ್ಪನ‌ ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಬಂಪರ್ ಫಸಲು ಹೊತ್ತು ನಿಂತಿತ್ತು. ಭರ್ಜರಿಯಾಗಿ ಬೆಳೆದಿದ್ದ ಬಾಳೆ ಫಸಲು ನೋಡಿ ಹೋಗಿದ್ದ ವ್ಯಾಪಾರಸ್ಥರು ಒಂದು ತಿಂಗಳೊಳಗೆ ಬಾಳೆಯನ್ನು ಖರೀದಿ ಮಾಡಿ, ಕಟಾವು ಮಾಡಿಕೊಂಡು ಹೋಗುವವರಿದ್ದರು. ಆದರೆ ಬಿರುಗಾಳಿಯೊಂದಿಗೆ ಬಂದ ಮಳೆ ಬಾಳೆ ಗೊನೆಗಳು ಸಂಪೂರ್ಣ‌ ನೆಲಕ್ಕುರುಳುವಂತೆ ಮಾಡಿದೆ. ತೆನೆ ಹೊತ್ತು ನಿಂತಿದ್ದ ಬಾಳೆ ಗಿಡಗಳಂತೂ ಸಂಪೂರ್ಣವಾಗಿ ಬಾಗಿ, ನೆಲಕ್ಕೆ ಬಿದ್ದು ಹಾಳಾಗಿ ಹೋಗಿವೆ. ರೈತ ರಾಜಪ್ಪ ಅಂದುಕೊಂಡಂತೆ ಆಗಿದ್ದರೆ ಒಂದು ತಿಂಗಳೊಳಗೆ ಬಾಳೆ ಮತ್ತು ಅಡಿಕೆ ಬೆಳೆ ಕೈ ತುಂಬ ಆದಾಯ ತಂದು ಕೊಡುತ್ತಿದ್ದವು.

ಇದನ್ನೂ ಓದಿ: ಕೊಡಗು ಜಿಲ್ಲೆ ವಾರದಲ್ಲಿ ಐದು ದಿನ ಸಂಪೂರ್ಣ ಲಾಕ್ ಡೌನ್; ಜಿಲ್ಲಾಡಳಿತ ಆದೇಶ

ಎರಡು ಎಕರೆ ಜಮೀನಿನಲ್ಲಿ ಅಡಿಕೆ ಮತ್ತು ಬಾಳೆ ಬೆಳೆದಿದ್ದರು. ಬಿರುಗಾಳಿಯೊಂದಿಗೆ ಬಂದ ಮಳೆರಾಯ ನಮ್ಮ ಬದುಕನ್ನೆ ಹೊತ್ತುಕೊಂಡು ಹೋಗಿದ್ದಾನೆ. ಕಷ್ಟಪಟ್ಟು ಬೆಳೆಸಿದ್ದ ಬಾಳೆ ಮತ್ತು ಅಡಿಕೆ ಸಂಪೂರ್ಣ ಹಾಳಾಗಿ ಹೋಗಿದೆ. ಎರಡು ಲಕ್ಷಕ್ಕೂ ಅಧಿಕ ಹಾನಿ ಸಂಭವಿಸಿದೆ. ಸರಕಾರ ಹಾನಿಗೆ ಸೂಕ್ತ ಪರಿಹಾರ ಕೊಡಬೇಕು‌. ಇಲ್ಲದಿದ್ದರೆ ನಮ್ಮ ಜೀವನ ಕಷ್ಟವಾಗಲಿದೆ ಎನ್ನುತ್ತಾರೆ ಬಾಳೆ ಬೆಳೆ ಹಾನಿಯಾದ ರೈತ ರಾಜಪ್ಪ ನಂದೀಹಳ್ಳಿ.

ಒಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ರೈತರಿಗೆ ಕೃಷಿ ಅನ್ನೊದು ಕಬ್ಬಿಣದ ಕಡಲೆ ಆಗುತ್ತಿದೆ. ಪ್ರಕೃತಿ ಮುನಿಸು, ಸರ್ಕಾರದ ಅಂತಂತ್ರ ನಿಲುವುಗಳು ನುಂಗಲಾರದ ತುತ್ತಾಗಿದೆ. ರಸಗೊಬ್ಬರಗಳ ಬೆಲೆ ಏರಿಕೆ, ಪರಿಹಾರ ತಾರತಮ್ಯ ಹೀಗೆ ಹತ್ತು ಹಲವು ಸಮಸ್ಯೆಗಳಿಂದ  ಸಣ್ಣಾಗುತ್ತಿರುವುದು ಮಾತ್ರ ಸುಳ್ಳಲ್ಲ .(ವರದಿ: ಮಂಜುನಾಥ ತಳವಾರ)
Published by: Sushma Chakre
First published: May 4, 2021, 7:54 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories