HOME » NEWS » State » HAVERI LADY TORTURED BY HUSBAND AND IN LAWS FOR GIVING BIRTH TO GIRL CHILD SESR

ಆರು ತಿಂಗಳಿನಿಂದ ಸೊಸೆಯನ್ನು ಗೃಹ ಬಂಧನದಲ್ಲಿಟ್ಟು ಚಿತ್ರಹಿಂಸೆ: ಜೈಲು ಸೇರಿದ ಗಂಡ,ಅತ್ತೆ, ಮಾವ

ಮಗು ಜನಿಸಿದ ಮೂರೇ ತಿಂಗಳಿಗೆ ಜ್ಯೋತಿಯನ್ನು ಆಕೆಯ ಪತಿ, ಅತ್ತೆ ಮತ್ತು ಮಾವ ಸೇರಿಕೊಂಡು ಆಕೆಯನ್ನ ಗೃಹಬಂಧನದಲ್ಲಿ ಇರಿಸಿದ್ದಾರೆ. ಸರಿಯಾಗಿ ಊಟ, ನೀರು ಕೊಡದೆ ಇನ್ನಿಲ್ಲದ ಚಿತ್ರಹಿಂಸೆ ನೀಡಿದ್ದಾರೆ‌.

news18-kannada
Updated:April 7, 2021, 10:14 PM IST
ಆರು ತಿಂಗಳಿನಿಂದ ಸೊಸೆಯನ್ನು ಗೃಹ ಬಂಧನದಲ್ಲಿಟ್ಟು ಚಿತ್ರಹಿಂಸೆ: ಜೈಲು ಸೇರಿದ ಗಂಡ,ಅತ್ತೆ, ಮಾವ
ಸಂತ್ರಸ್ತ ಮಹಿಳೆ
  • Share this:
ಹಾವೇರಿ (ಏ. 7):  ಹೆಣ್ಣು ಮಗುವಿಗೆ ಜನ್ಮ ನೀಡಿದಳು ಎಂಬ ಕಾರಣಕ್ಕೆ ಸೊಸೆಗೆ ಅತ್ತೆ, ಮಾವ ಚಿತ್ರ ಹಿಂಸೆ ನೀಡಿದ್ದು, ಆರು ತಿಂಗಳ ಕಾಲ ಗೃಹ ಬಂಧನದಲ್ಲಿರಿಸಿರುವ ಘಟನೆ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರದಲ್ಲಿ ನಡೆದಿದೆ. ಈ ಕೃತ್ಯಕ್ಕೆ ಈಕೆಯ ಗಂಡನೂ ಕೂಡ ಬೆಂಬಲ ನೀಡಿದ್ದು, ಆರು ತಿಂಗಳ ಕಾಲ ಅರೆ ಹೊಟ್ಟೆಯಲ್ಲಿ ಮಗುವಿನೊಂದಿಗೆ ಜೀವನ ಕಳೆದಿದ್ದಾಳೆ ಮಹಿಳೆ. ಜ್ಯೋತಿ ಶಡಗರವಳ್ಳಿ ಸಂತ್ರಸ್ತ ಮಹಿಳೆ.  ಶಂಭಾಜಿ ಶಡಗರವಳ್ಳಿ ಎಂಬಾಂತನ ಜೊತೆ ಕಳೆದ ನಾಲ್ಕು ವರ್ಷಗಳ ಹಿಂದೆ ಜ್ಯೋತಿ ಮದುವೆಯಾಗಿದೆ. ಆರಂಭದ ಕೆಲ ದಿನ ಚೆನ್ನಾಗಿಯೇ ನೋಡಿಕೊಂಡ ಗಂಡ ಬಳಿಕ ಪೋಷಕರೊಂದಿಗೆ ಸೇರಿಕೊಂಡು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದ.  ಜ್ಯೋತಿ ಮೊದಲ ಬಾರಿ ಜ್ಯೋತಿ ಗರ್ಭೀಣಿ ಆಗಿದ್ದಾಗ ಪತಿ ಮತ್ತು ಆತನ ಮನೆಯವರ ಚಿತ್ರಹಿಂಸೆಯಿಂದ ಮಗು ಬದುಕಿ ಉಳಿಯಲಿಲ್ಲವಂತೆ. 

ಕಳೆ ಒಂಬತ್ತು ತಿಂಗಳ ಹಿಂದೆ ಜ್ಯೋತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳು. ಮಗು ಜನಿಸಿದ ಮೂರೇ ತಿಂಗಳಿಗೆ ಜ್ಯೋತಿಯನ್ನು ಆಕೆಯ ಪತಿ, ಅತ್ತೆ ಮತ್ತು ಮಾವ ಸೇರಿಕೊಂಡು ಆಕೆಯನ್ನ ಗೃಹಬಂಧನದಲ್ಲಿ ಇರಿಸಿದ್ದಾರೆ. ಸರಿಯಾಗಿ ಊಟ, ನೀರು ಕೊಡದೆ ಇನ್ನಿಲ್ಲದ ಚಿತ್ರಹಿಂಸೆ ನೀಡಿದ್ದಾರೆ‌. ಹೆಣ್ಣು ಮಗು ಜನಿಸಿದೆ ಎನ್ನುವುದರ ಜೊತೆಗೆ ತವರು ಮನೆಯಿಂದ ವರದಕ್ಷಿಣೆ ತರುವಂತೆ ಸಾಕಷ್ಟು ಕಿರುಕುಳ ನೀಡಿದ್ದಾರೆ‌. ತಡರಾತ್ರಿ ಆಗುತ್ತಿದ್ದಂತೆ ಜ್ಯೋತಿಯನ್ನು ನೀರು ತರಲು ಕಳಿಸುತ್ತಿದ್ದರಂತೆ. ಮಾನಸಿಕ ಮತ್ತು ದೈಹಿಕ ಹಿಂಸೆಯಿಂದ ಜರ್ಜರಿತಗೊಂಡಿದ್ದ ಜ್ಯೋತಿ ಕಳೆದ‌ ಕೆಲವು ದಿನಗಳ ಹಿಂದೆ ತಡರಾತ್ರಿ ನೀರು ತರುತ್ತಿದ್ದನ್ನು ಸ್ಥಳೀಯರು ಗಮನಿಸಿದ್ದಾರೆ.

ಸ್ಥಳೀಯರು ಜ್ಯೋತಿಯನ್ನ ಗಮನಿಸಿದ್ದಾರೆ ಅನ್ನೋದು ಗೊತ್ತಾಗ್ತಿದ್ದಂತೆ ಜ್ಯೋತಿಯ ಪತಿ ಶಂಭಾಜಿ, ಅತ್ತೆ ತಾರಾಬಾಯಿ ಮತ್ತು ಮಾವ ದುರಗಪ್ಪ ಆಕೆಯನ್ನ ಮನೆಗೆ ಕರೆತಂದು ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಜ್ಯೋತಿಯನ್ನ ಕೊಲೆ ಮಾಡೋಕೆ ಯತ್ನ ಮಾಡಿದ್ದಾರೆ. ಆಗ ಕೂಗಾಟ, ಚೀರಾಟದ ಮೂಲಕ ಜ್ಯೋತಿ ಮನೆಯಿಂದ‌ ಹೊರಗೆ ಓಡಿ ಬಂದಿದ್ದಾಳೆ. ತಕ್ಷಣವೇ ಸ್ಥಳೀಯರು ಆಕೆಯ ಸಹಾಯಕ್ಕೆ ಧಾವಿಸಿದ್ದು, ಹಾವೇರಿಯ ಸ್ವಧಾರ‌ ಮಹಿಳಾ ಸಾಂತ್ವನ ಕೇಂದ್ರದವರು ಹಾಗೂ ಬಂಕಾಪುರ‌‌ ಪೊಲೀಸರ ಗಮನಕ್ಕೆ ತಂದಿದ್ದಾರೆ. ತಕ್ಷಣವೇ ಅಲ್ಲಿಗೆ ಧಾವಿಸಿದ ಸ್ವಧಾರ ಕೇಂದ್ರದವರು ಹಾಗೂ ಪೊಲೀಸರು ಜ್ಯೋತಿಗೆ ಗೃಹಬಂಧನದಿಂದ ಮುಕ್ತಿ‌ ಕೊಡಿಸಿ ರಕ್ಷಣೆ ಮಾಡಿದ್ದಾರೆ.

ನಂತರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಸ್ವಧಾರ ಮಹಿಳಾ‌ ಸಾಂತ್ವನ ಕೇಂದ್ರದಲ್ಲಿ ಆಶ್ರಯ ಕಲ್ಪಿಸಿದ್ದಾರೆ‌. ಇನ್ನು ಜ್ಯೋತಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ‌ ನೀಡಿ‌ ಗೃಹಬಂಧನದಲ್ಲಿಟ್ಟ ಜ್ಯೋತಿಯ ಪತಿ ಶಂಭಾಜಿ, ಅತ್ತೆ ತಾರಾಬಾಯಿ ಮತ್ತು ಮಾವ ದುರಗಪ್ಪನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

(ವರದಿ:ಮಂಜುನಾಥ್ ತಳವಾರ)
Published by: Seema R
First published: April 7, 2021, 10:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories