• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • News 18 Impact: ಲಂಚಕ್ಕೆ ಎತ್ತು ಕೊಡಲು ತಂದಿದ್ದ ರೈತನ ಪ್ರಕರಣ; ಭ್ರಷ್ಟ ಅಧಿಕಾರಿಗಳಿಗೆ ನೋಟಿಸ್

News 18 Impact: ಲಂಚಕ್ಕೆ ಎತ್ತು ಕೊಡಲು ತಂದಿದ್ದ ರೈತನ ಪ್ರಕರಣ; ಭ್ರಷ್ಟ ಅಧಿಕಾರಿಗಳಿಗೆ ನೋಟಿಸ್

ರೈತ ಯಲ್ಲಪ್ಪ

ರೈತ ಯಲ್ಲಪ್ಪ

ಸುದ್ದಿ ಪ್ರಸಾರವಾದ ಎರಡು ಗಂಟೆಯಲ್ಲೇ ಪ್ರಕರಣಕ್ಕೆ ಸಂಬಂಧಿಸಿದ ಐವರ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಪುರಸಭೆಯ ಮುಖ್ಯ ಇಂಜಿನಿಯರ್ ರೇಖಾ ದೇಸಾಯಿ ಅವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

  • Share this:

ಹಾವೇರಿ: ಸರ್ಕಾರಿ ಕೆಲಸಗಳು (Government Work) ಆಗಬೇಕು ಅಂದ್ರೆ ಟೇಬಲ್ ಕೆಳಗೆ ಹಣದ (Money) ನೋಟು ಪಾಸ್​ ಆದ್ರೆ ಮಾತ್ರ ಆಗುತ್ತೆ ಅನ್ನೋ ಮಾತಿದೆ. ಈ ಮಾತುಗಳಿಗೆ ಪೂರಕ ಎಂಬಂತೆ ಹಲವು ಘಟನೆಗಳು ಬೆಳಕಿಗೆ ಬುರತ್ತಲೇ ಇರುತ್ತವೆ. ನಿಮ್ಮ ನ್ಯೂಸ್ 18 ಕನ್ನಡ ಇಂತಹ ಭ್ರಷ್ಟ ಅಧಿಕಾರಿಗಳ (Corrupt Officers) ಮುಖವಾಡ ಕಳಚುತ್ತಿರುತ್ತದೆ. ಈ ಹಿಂದೆ ಹಲವು ಅಧಿಕಾರಿಗಳ ಲಂಚತನದ ಮುಖವನ್ನು ಅನಾವರಣ ಮಾಡಿದೆ. ಇಂದು ಸಹ ಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ನ್ಯೂಸ್​ 18 ಕನ್ನಡ (News 18 Kannada) ಬಿಸಿ ಮುಟ್ಟಿಸಿದೆ. ನ್ಯೂಸ್ 18 ಕನ್ನಡದ ವರದಿ ಬಳಿಕ ಎಚ್ಚೆತ್ತ ಹಾವೇರಿ (Haveri) ಜಿಲ್ಲಾಡಳಿತ ಲಂಚಕ್ಕೆ ಬೇಡಿಕೆ ಇರಿಸಿದ್ದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ (Notice) ಮುಂದಾಗಿದೆ.


ಹಾವೇರಿಯ ಪುರಸಭೆಗೆ ಬಂದಿದ್ದ ರೈತನಿಗೆ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇರಿಸಿದ್ದರು. ರೈತ ಯಲ್ಲಪ್ಪ ರಾಣೋಜಿ ಅವರಿಗೆ ಮನೆ ಖಾತಾ ಮಾಡಿಕೊಡಲು ಅಧಿಕಾರಿಗಳು 25 ಸಾವಿರ ರೂಪಾಯಿ ಲಂಚ ಕೇಳಿದ್ದರು. ಹಣ ನೀಡಲು ಅಸಹಾಯಕರಾದ ರೈತ ಯಲ್ಲಪ್ಪ ಲಂಚ ಕೊಡಲು ನನ್ನ ಬಳಿ ದುಡ್ಡು ಇಲ್ಲ. ಹಾಗಾಗಿ ನನ್ನ ಬಳಿಯಲ್ಲಿರುವ ಎತ್ತು ತೆಗೆದುಕೊಳ್ಳಿ ಎಂದು ಪುರಸಭೆಗೆ ಬಂದಿದ್ದರು.


ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದ ಪುರಸಭೆಯ ಮುಖ್ಯ ಇಂಜಿನಿಯರ್


ರೈತ ಯಲ್ಲಪ್ಪ ಅವರ ಅಸಹಾಯಕತೆ ಕುರಿತು ಇಂದು ಬೆಳಗ್ಗೆ ನಿಮ್ಮ ನ್ಯೂಸ್ 18 ಕನ್ನಡ ವರದಿ ಮಾಡಿತ್ತು. ಸುದ್ದಿ ಪ್ರಸಾರವಾದ ಎರಡು ಗಂಟೆಯಲ್ಲೇ ಪ್ರಕರಣಕ್ಕೆ ಸಂಬಂಧಿಸಿದ ಐವರ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಪುರಸಭೆಯ ಮುಖ್ಯ ಇಂಜಿನಿಯರ್ ರೇಖಾ ದೇಸಾಯಿ ಅವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.


ಮೂವರ ವಿರುದ್ಧ ಕ್ರಮಕ್ಕೆ ಪತ್ರ


ಓರ್ವ RI, ಓರ್ವ RO ಹಾಗೂ ಮೂವರು ಬಿಲ್ ಕಲೆಕ್ಟರ್ ಮೇಲೆ ಶಿಸ್ತು ಕ್ರಮಕ್ಕಾಗಿ ಪತ್ರ ಬರೆಯಲಾಗಿದೆ ಎಂದು ನ್ಯೂಸ್ 18 ಕನ್ನಡಕ್ಕೆ ರೇಖಾ ದೇಸಾಯಿ ಮಾಹಿತಿ ನೀಡಿದ್ದಾರೆ. ಮುಖ್ಯ ಇಂಜಿನಿಯರ್ ಪತ್ರ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಹೇಳಿದ್ದಾರೆ.


ಅಪಘಾತದಲ್ಲಿ ಇಬ್ಬರು ಸಾವು


ರಸ್ತೆ ಬದಿಯ ತಡೆಗೋಡೆಗೆ ಬೈಕ್​ ಗುದ್ದಿದ ಪರಿಣಾಮ ತಾಯಿ ಹಾಗೂ ಮಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆ ಧಾರವಾಡ ರಾಷ್ಟ್ರೀಯ ಹೆದ್ದಾರಿ ನಂಬರ್​ 4ರಲ್ಲಿ ನಡೆದಿದೆ. 20 ವರ್ಷದ ಸಂಗವ್ವ, ಒಂದು ವರ್ಷದ ಮಾಯಕ್ಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಗರಗ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.




ಬಿಲ್ಡಿಂಗ್​ ಮೇಲಿಂದ ಬಿದ್ದು ತಲೆಗೆ ಗಾಯ


ಆಟವಾಡುತ್ತಾ ಅಪಾರ್ಟ್‌ಮೆಂಟ್ ಮೇಲಿಂದ ಮಗು ಬಿದ್ದಿರುವ ಘಟನೆ ಬೆಂಗಳೂರಿನ ಕೆಂಗೇರಿ ಸಮೀಪದ ಬಿಡಿಎ ಅಪಾರ್ಟ್ಮೆಂಟ್​​ನಲ್ಲಿ ನಡೆದಿದೆ. ಘಟನೆಯಲ್ಲಿ ಮಗುವಿನ ತಲೆಗೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆಗಾಗಿ ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಲಾಗಿದೆ.


ಆಟವಾಡುತ್ತಾ ರಾಹುಲ್ ಎಂಬ ಬಾಲಕ ಮೇಲಿಂದ ಬೀಳುವ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಗು ತಂದೆ ಶಿವಪ್ಪ ಮೇಸ್ತ್ರಿ ಕೆಲಸ ಮಾಡ್ತಿದ್ರು. ತಂದೆ- ತಾಯಿ ಮನೆಯಲ್ಲಿದ್ದಾಗಲೇ ಘಟನೆ ನಡೆದಿದೆ. ತಾಯಿ ಮತ್ತೊಂದು ಮಗುವಿಗೆ ಊಟ ಮಾಡಿಸುತ್ತಿದ್ದಾಗ ಮನೆಯ ಮುಂದೆ ಹಾಕಿದ್ದ ಚೇರ್ ಹತ್ತಿ ಮಗು ಆಯತಪ್ಪಿ ಬಿದ್ದಿದೆ.


ಇದನ್ನೂ ಓದಿ:  R Dhruvanarayan: ಕಾಂಗ್ರೆಸ್‌ನ ಮುಂಚೂಣಿ ನಾಯಕ ಆರ್ ಧ್ರುವ ನಾರಾಯಣ್ ಅವರ ಬಗ್ಗೆ ನಿಮಗೆಷ್ಟು ಗೊತ್ತು?


11 ಮಂದಿ ಗಡಿಪಾರು


ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರಿಂದ ಅಪರಾಧ ಹಿನ್ನೆಲೆ ಇರೋ 11 ಜನರ ಗಡಿಪಾರು ಮಾಡಲಾಗಿದೆ. ಪೊಲೀಸ್ ವರಿಷ್ಠಾಧಿಕಾರಿ ವರದಿ ಮೇರೆಗೆ 06 ಮಾರ್ಚ್​ 2023 ರಿಂದ ಸೆಪ್ಟೆಂಬರ್​ 06, 2023ರವರೆಗೆ ಗಡಿಪಾರು ಎಂದು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.




ಈ ಹಿನ್ನೆಲೆ ಬಂಟ್ವಾಳದ ನಜೀರ್, ಜಯರಾಜ್ ರೈ, ಪುತ್ತೂರಿನ ಇಬ್ರಾಹಿಂ, ಹಕೀಂ ಕೂರ್ನಡ್ಕ, ಅಬೂಬಕ್ಕರ್ ಸಿದ್ದಿಕಿ, ಉಬೈದ್ ಬಿ.ಎಸ್, ಕಡಬದ ರೋಷನ್, ಪ್ರಸಾದ್, ಬೆಳ್ತಂಗಡಿಯ ತಸ್ಲೀಂ ಮತ್ತು ಕಿರಣ್ ಕುಮಾರ್​ನನ್ನ ಗಡಿಪಾರು ಮಾಡಲಾಗಿದೆ.

Published by:Mahmadrafik K
First published: