HOME » NEWS » State » HAVERI FARMER PUT A TIGER DOLL IN HIS LAND FOR SAVE CROP FROM MONKEYS LG

ಮಂಗಗಳಿಂದ ಬೆಳೆ ಉಳಿಸಿಕೊಳ್ಳಲು ಜಮೀನಿಗೆ ಹುಲಿಯನ್ನೇ ತಂದ ರೈತ..!

ಹುಲಿ ಆಕೃತಿಗೆ ಬೆಚ್ಚಿ ಬಿದ್ದು ಜಮೀನಿನ ಬದಲು ಊರಲ್ಲಿನ ಮರಗಳಲ್ಲಿ ಮಂಗಗಳ‌ ಹಿಂಡು ಬಿಡಾರ ಹೂಡಿವೆ. ಅಷ್ಟೆ ಅಲ್ಲ ಹುಲಿ ಆಕೃತಿ ನೋಡಿ ಆಡು, ಕುರಿಗಳು ಹಾಗೂ ದನಕರುಗಳು ಸಹ ಜಮೀನಿಗೆ ಬರಲು ಭಯಪಡ್ತಿವೆ. ರೈತ ಬಸನಗೌಡರ ಐಡಿಯಾದಿಂದ ಹುಲಿರಾಯ ಬೆಳೆಗಳ ರಕ್ಷಣೆಗೆ ನಿಂತಂತಾಗಿದೆ.

news18-kannada
Updated:March 2, 2021, 11:25 AM IST
ಮಂಗಗಳಿಂದ ಬೆಳೆ ಉಳಿಸಿಕೊಳ್ಳಲು ಜಮೀನಿಗೆ ಹುಲಿಯನ್ನೇ ತಂದ ರೈತ..!
ಜಮೀನಿನಲ್ಲಿ ಇರಿಸಿರುವ ಹುಲಿಯ ಆಕೃತಿ
  • Share this:
ಹಾವೇರಿ(ಮಾ.02): ಜಿಲ್ಲೆಯ ರಟ್ಟಿಹಳ್ಳಿ ತಾಲ್ಲೂಕಿನ ರೈತ ಬಸನಗೌಡ ಮೂರು ಎಕರೆ ಜಮೀನಿನಲ್ಲಿ ತರಕಾರಿ, ಅಡಿಕೆ, ಮೆಣಸಿನಕಾಯಿ ಬೆಳೆದಿದ್ರು. ಜಮೀನು ನದಿಗೆ ಸಮೀಪ‌ ಇರೋದ್ರಿಂದ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿ ನೀರಾವರಿ ಕೃಷಿ ಮಾಡಿಕೊಂಡಿದ್ರು. ತರಕಾರಿ, ಮೆನಸಿಣಕಾಯಿ, ಅಡಿಕೆ ಗಿಡಗಳನ್ನ ಬೆಳೆಸಿದ್ರು. ಆದ್ರೆ ಜಮೀನಿಗೆ ಕಪ್ಪು ಮಂಗಗಳು ಲಗ್ಗೆ ಇಡೋಕೆ ಶುರು ಮಾಡಿದವು. ನೂರಾರು ಸಂಖ್ಯೆಯಲ್ಲಿ ಹಿಂಡು ಹಿಂಡಾಗಿ ಜಮೀನಿಗೆ ಲಗ್ಗೆ ಇಡ್ತಿದ್ದ ಮಂಗಗಳ ಹಿಂಡು ಬೆಳೆಗಳನ್ನ ತಿಂದು, ತುಳಿದಾಡಿ, ಓಡಾಡಿ ಹಾಳು ಮಾಡ್ತಿದ್ದವು. ಇದು ರೈತ ಬಸನಗೌಡನಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಮಂಗಗಳ ಹಾವಳಿಯಿಂದ ದಿಕ್ಕು ತೋಚದಂತಾದ ರೈತ ಜಮೀನಿನಲ್ಲಿ ಹುಲಿ ಆಕೃತಿ ತಂದು ನಿಲ್ಲಿಸೋ ವಿಚಾರಕ್ಕೆ ಬಂದಿದ್ದ.

ಮಾರ್ಕೆಟ್ ನಲ್ಲಿ ಸಣ್ಣ ಸಣ್ಣ ಹುಲಿಯ ಆಕೃತಿಗಳಿಗೆ ನಾಲ್ಕರಿಂದ ಎಂಟು ಸಾವಿರ ರೂಪಾಯಿವರೆಗೆ ದರ ಇತ್ತು. ಹೀಗಾಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರ ಮೂಲಕ ರೈತ ಬಸನಗೌಡ ಹುಲಿ ಆಕೃತಿ ತಯಾರಿಸಿ ಜಮೀನಿನಲ್ಲಿಟ್ಟಿದ್ದಾರೆ. ಹುಲಿ ಆಕೃತಿ ಇಟ್ಮೇಲೆ ಜಮೀನಿಗೆ ಮಂಗಗಳು ಇರ್ಲಿ ದನಕರುಗಳು ಬರೋಕೆ ಭಯಪಡ್ತಿವೆ.

Corona Virus: ಕೊರೋನಾ ಸೋಂಕಿಗೆ ಬಲಿಯಾದ ಬಿಜೆಪಿ ಸಂಸದ ನಂದ ಸಿಂಗ್ ಚೌಹಾಣ್

ಸರಕಾರಿ ಶಾಲಾ ಶಿಕ್ಷಕರ ಕೈಚಳಕದಿಂದ ತಯಾರಾದ ಹುಲಿ..!

ರೈತ ಬಸನಗೌಡರ‌ ಜಮೀನಿಗೆ ಬರ್ತಿದ್ದ ಮಂಗಗಳ ಹಾವಳಿ ತಪ್ಪಿಸಲು ಶಿಕ್ಷಕ ಪರಮೇಶ್ವರ ಹುಲಮನಿ ಹುಲಿ ಆಕೃತಿ ತಯಾರಿಸೋಕೆ ಮುಂದಾದ್ರು. ಭತ್ತದ ಹುಲ್ಲು, ಹಳೆಯ ಬಟ್ಟೆಗಳು, ಹುಲಿ ಚಿತ್ತಾರದ ಮೂರು ಮೀಟರ್ ಬಟ್ಟೆ ಮತ್ತು ನಾಲ್ಕು ಕಟ್ಟಿಗೆಯ ಪೋಲ್ ಗಳನ್ನ ಬಳಸಿಕೊಂಡು ಹುಲಿ ಆಕೃತಿ ತಯಾರಿಸಿದ್ರು. ಶಾಲೆಯ ಶಿಕ್ಷಕರ ಸಹಕಾರದಿಂದ ಮೂರು ದಿನಗಳ ಕಾಲ ಶಾಲೆಯ ಬಿಡುವಿನ ವೇಳೆಯಲ್ಲಿ ಹುಲಿ ಆಕೃತಿ ತಯಾರಿಸಿದ್ರು. ನಂತರ ಹುಲಿಯ ಆಕೃತಿಯನ್ನ ಒಯ್ದು ಅಡಿಕೆ, ಮೆನಸಿಣಕಾಯಿ ಬೆಳೆ ಇರೋ ಜಮೀನಿನಲ್ಲಿ ಒಯ್ದು ನಿಲ್ಲಿಸಿದ್ರು.

ಹುಲಿ ಆಕೃತಿ ಇಡ್ತಿದ್ದಂತೆ ಜಮೀನಿಗೆ ಲಗ್ಗೆ ಇಡ್ತಿದ್ದ ಮಂಗಗಳ ಹಿಂಡು ಜಮೀನಿನಿಂದ ಕಾಲ್ಕಿತ್ತಿವೆ. ಜಮೀನಿನ ಬದಲು ಜಮೀನಿನ ಅಕ್ಕಪಕ್ಕದ ಮರಗಳಲ್ಲಿ ಕುಳಿತು ಮರ ಬಿಟ್ಟು ಕೆಳಗಿಳಿಯದಂತೆ ಹುಲಿ ಆಕೃತಿಗೆ ಭಯ ಬಿದ್ದ ಮಂಗಗಳು, ಈಗ ಜಮೀನು ಹಾಗೂ ಜಮೀನು ಸುತ್ತಮುತ್ತಲಿಂದ ಕಾಲ್ಕಿತ್ತಿವೆ. ಹುಲಿ ಆಕೃತಿಗೆ ಬೆಚ್ಚಿ ಬಿದ್ದು ಜಮೀನಿನ ಬದಲು ಊರಲ್ಲಿನ ಮರಗಳಲ್ಲಿ ಮಂಗಗಳ‌ ಹಿಂಡು ಬಿಡಾರ ಹೂಡಿವೆ. ಅಷ್ಟೆ ಅಲ್ಲ ಹುಲಿ ಆಕೃತಿ ನೋಡಿ ಆಡು, ಕುರಿಗಳು ಹಾಗೂ ದನಕರುಗಳು ಸಹ ಜಮೀನಿಗೆ ಬರಲು ಭಯಪಡ್ತಿವೆ. ರೈತ ಬಸನಗೌಡರ ಐಡಿಯಾದಿಂದ ಹುಲಿರಾಯನ ಬೆಳೆಗಳ ರಕ್ಷಣೆಗೆ ನಿಂತಂತಾಗಿದೆ.
ಕಪ್ಪು ಮಂಗಗಳ ಹಾವಳಿಯಿಂದ ಬೆಳೆ ರಕ್ಷಣೆ ಮಾಡಿಕೊಳ್ಳೋದು ದೊಡ್ಡ ಸಾಹಸದ ಕೆಲಸವಾಗಿತ್ತು. ಲಕ್ಷಾಂತರ ರುಪಾಯಿ ಖರ್ಚು ಮಾಡಿದ ಕೃಷಿ ಮಂಗಗಳ ಮಂಗನಾಟಕ್ಕೆ ಹಾಳಾಗಿ ಹೋಗ್ತಾ ಇತ್ತು. ಆದ್ರೆ ಈಗ ಹುಲಿರಾಯನ ಆಕೃತಿ ನಿಲ್ಲಿಸಿದ ಮೇಲೆ ಬೆಳೆಗಳ ರಕ್ಷಣೆ ಸುಲಭವಾಗಿದೆ. ಒಟ್ನಲ್ಲಿ ರೈತ ಮಾಡಿದ ಐಡಿಯಾದಿಂದ ಬೆಳೆಗಳ ರಕ್ಷಣೆ ಜೊತೆಗೆ ಮಂಗಗಳ ಹಾವಳಿ ತಪ್ಪಿದೆ.

(ವರದಿ: ಮಂಜುನಾಥ್ ತಳವಾರ)
Published by: Latha CG
First published: March 2, 2021, 11:25 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories