HOME » NEWS » State » HAVERI AFTER UNEXPECTED RAIN IN HAVERI POOR FAMILIES LOST THEIR HOUSE KARNATAKA RAIN SCT

Haveri Rain | ಹಾವೇರಿಯಲ್ಲಿ ಅಕಾಲಿಕ ಮಳೆ ತಂದ ಅವಾಂತರ; ಬಡ ಕುಟುಂಬಗಳ ಬದುಕು ಬೀದಿ ಮೇಲೆ!

Haveri Rain: ಮೇಲ್ಮುರಿ ಗ್ರಾಮದಲ್ಲಿ 2019ರಲ್ಲಿ ಬಂದ ವರದಾ ನದಿ ಪ್ರವಾಹದಿಂದ ಜನರು ಮನೆ ಕಳೆದುಕೊಂಡು ಅಕ್ಷರಶಃ ತೊಂದರೆಗೆ ಒಳಗಾಗಿದ್ದಾರೆ.

news18-kannada
Updated:April 17, 2021, 8:29 AM IST
Haveri Rain | ಹಾವೇರಿಯಲ್ಲಿ ಅಕಾಲಿಕ ಮಳೆ ತಂದ ಅವಾಂತರ; ಬಡ ಕುಟುಂಬಗಳ ಬದುಕು ಬೀದಿ ಮೇಲೆ!
ಹಾವೇರಿಯಲ್ಲಿ ಮುರಿದ ಮನೆ
  • Share this:
ಹಾವೇರಿ: ಹಾವೇರಿ ಜಿಲ್ಲೆಯಲ್ಲಿ ಕಳೆದ ಎರಡ್ಮೂರು ವರ್ಷಗಳಲ್ಲಿ ಸಂಭವಿಸಿದ ಅತಿವೃಷ್ಟಿ ಮತ್ತು ನೆರೆಯಿಂದ ಜನರು ಸಾಕಷ್ಟು ತೊಂದರೆಗೆ ಒಳಗಾಗಿದ್ದಾರೆ. ಅದೆಷ್ಟೋ ಜನರು ಮನೆಗಳನ್ನು ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಕೆಲವರಿಗೆ ಪರಿಹಾರ ಬಂದು ಮನೆ ಕಟ್ಟಿಕೊಂಡಿದ್ದರೆ ಇನ್ನೂ ಅದೆಷ್ಟೋ ಜನರಿಗೆ ನ್ಯಾಯಯುತವಾಗಿ ಸಿಗಬೇಕಾದ ಪರಿಹಾರ, ಸ್ಥಳಾಂತರ ಕಾರ್ಯ ಆಗಿಲ್ಲ. ಕಳೆದೆರಡು ದಿನಗಳಿಂದ ಸಂಜೆ ಆಗುತ್ತಿದ್ದಂತೆ ಬರುತ್ತಿರುವ ಗಾಳಿ ಮತ್ತು ಮಳೆಗೆ ನೆರೆ ಮತ್ತು ಅತಿವೃಷ್ಟಿಯಿಂದ ತತ್ತರಿಸಿದ್ದ ಜನರ ಬದುಕು ಈಗ ಮತ್ತೆ ಬೀದಿಗೆ ಬಿದ್ದಿದೆ.

ತಾಲೂಕಿನ ಮೇಲ್ಮುರಿ ಗ್ರಾಮದಲ್ಲಿ 2019ರಲ್ಲಿ ಬಂದ ವರದಾ ನದಿ ಪ್ರವಾಹದಿಂದ ಜನರು ಮನೆ ಕಳೆದುಕೊಂಡು ಅಕ್ಷರಶಃ ತೊಂದರೆಗೆ ಒಳಗಾಗಿದ್ದಾರೆ. ಇಂದಿಗೂ ಮೂವತ್ತಕ್ಕೂ ಅಧಿಕ ಕುಟುಂಬಗಳು ಶಾಶ್ವತ ಸೂರು ಇಲ್ಲದೆ ತಗಡಿನ ಶೆಡ್ಗಳಲ್ಲಿ ವಾಸ ಮಾಡುತ್ತಿದ್ದಾರೆ. ಕುಟುಂಬಸಮೇತ ತಗಡಿನ ಶೆಡ್ಗಳಲ್ಲೇ ವಾಸ ಮಾಡುತ್ತಿದ್ದಾರೆ‌. ಇನ್ನು ಸುಮಾರು ವರ್ಷಗಳಿಂದ ಶಾಂತಿನಗರದಲ್ಲಿ ವಾಸವಾಗಿರೋ ಸುಡುಗಾಡು ಸಿದ್ದರ ಮೂವತ್ತಕ್ಕೂ ಅಧಿಕ ಕುಟುಂಬಗಳು ಶಾಶ್ವತ ಸೂರು ಇಲ್ಲದೆ ತಗಡಿನ ಶೆಡ್ಗಳಲ್ಲಿ ವಾಸ ಮಾಡುತ್ತಿದ್ದಾರೆ. ಆದರೆ ಕಳೆದೆರಡು ದಿನಗಳಿಂದ ಬೀಸುತ್ತಿರುವ ಗಾಳಿಗೆ ತಗಡಿನ ಶೆಡ್ಗಳು ಹಾರಿ ಹೋಗಿವೆ. ಶೆಡ್ಗಳು ಹಾರಿ ಹೋಗಿದ್ದಕ್ಕೆ ಮೇಲ್ಮುರಿ ಗ್ರಾಮದ ಮೂವತ್ತಕ್ಕೂ ಅಧಿಕ ಕುಟುಂಬಗಳು ಹಾಗೂ ಸುಡುಗಾಡು ಸಿದ್ದರ ಮೂವತ್ತಕ್ಕೂ ಅಧಿಕ ಕುಟುಂಬಗಳ ಜನರು ಬೀದಿಗೆ ಬಿದ್ದಂತಾಗಿದೆ.

ಕಳೆದೆರಡು ದಿನಗಳಿಂದ ಸಂಜೆ ವೇಳೆಯಲ್ಲಿ ಬರುತ್ತಿರುವ ಗಾಳಿ ಮತ್ತು ಮಳೆಗೆ ಮೇಲ್ಮುರಿ ಗ್ರಾಮ ಹಾಗೂ ಶಾಂತಿನಗರದ ಸುಡುಗಾಡು ಸಿದ್ದರು ಸೇರಿ ಅರವತ್ತಕ್ಕೂ ಅಧಿಕ ಕುಟುಂಬಗಳು ಸಾಕಷ್ಟು ತೊಂದರೆಗೆ ಸಿಲುಕಿವೆ. ತಗಡಿನ ಶೆಡ್ಗಳು ಗಾಳಿಗೆ ಹಾರಿ ಹೋಗಿದ್ದರಿಂದ ವಾಸಕ್ಕೆ ಯೋಗ್ಯ ಸ್ಥಳ ಇಲ್ಲದಾಗಿದೆ. ಇದರ ಜೊತೆಗೆ ಮನೆಯಲ್ಲಿದ್ದ ದವಸಧಾನ್ಯಗಳು ಸೇರಿದಂತೆ ಅಪಾರ ಪ್ರಮಾಣದ ವಸ್ತುಗಳು ಹಾಳಾಗಿ ಹೋಗಿವೆ. ತಗಡಿನ ಶೆಡ್ಗಳು ಹಾರಿ ಹೋಗಿದ್ದರಿಂದ ಶೆಡ್ಡಿನ ಒಳಗಡೆಯಿದ್ದ ವಸ್ತುಗಳೆಲ್ಲ ಸಂಪೂರ್ಣ ಹಾಳಾಗಿವೆ.

ಇದನ್ನೂ ಓದಿ: ಸಿಎಂಗೆ ಕೊರೋನಾ ಸೋಂಕು; ಸಂಪರ್ಕದಲ್ಲಿದ್ದ ಸಚಿವ ಸುಧಾಕರ್ ಕ್ವಾರಂಟೈನ್ ಆಗಬೇಕೇ?

ಕಳೆದೆರಡು ದಿನಗಳಿಂದ ಸಂಜೆ ಆಗುತ್ತಿದ್ದಂತೆ ಮಳೆರಾಯ ಆಗಮಿಸುತ್ತಿದ್ದಾನೆ. ಮಳೆರಾಯ ಜೊತೆಗೆ ಗಾಳಿಯೂ ಬೀಸುತ್ತಿದೆ. ಗಾಳಿಗೆ ತಗಡಿನ ಶೆಡ್​ಗಳು ಹಾರಿ ಹೋಗಿವೆ. ಗಾಳಿ ಬೀಸುತ್ತಿದ್ದಂತೆ ತಗಡಿನ ಶೆಡ್​ನಲ್ಲಿ ವಾಸವಾಗಿರುವ ಜನರು ಶೆಡ್​ನಿಂದ ಹೊರಗೆ ಓಡಿ ಬಂದು ಸಮೀಪದ‌ ಮನೆಗಳು ಸೇರಿದಂತೆ ಅಲ್ಲಿ ಇಲ್ಲಿ ವಾಸ ಮಾಡುತ್ತಿದ್ದಾರೆ‌‌. ಹೀಗಾಗಿ ಗಾಳಿ ಬೀಸುವ ವೇಳೆ ಶೆಡ್ನಲ್ಲಿ ವಾಸ ಮಾಡುವ ಜನರು ಶೆಡ್ ಖಾಲಿ ಮಾಡಿರುವುದರಿಂದ ಶೆಡ್ನಲ್ಲಿ ವಾಸವಾಗಿರುವ ಜನರಿಗೆ ಯಾವುದೇ ರೀತಿಯ ತೊಂದರೆ ಆಗಿಲ್ಲ. ಬದುಕಿದೆಯಾ ಬಡ ಜೀವವೆ ಎನ್ನುತ್ತಾ ಶೆಡ್​ನಲ್ಲಿ ವಾಸಿಸುವ ಜನರು ಬದುಕು ಸಾಗಿಸುತ್ತಿದ್ದಾರೆ‌.

ನನಸಾಗದ ಶಾಶ್ವತ ಸೂರು :

ವರದಾ ನದಿಯಿಂದ ತೊಂದರೆಗೆ ಒಳಗಾಗಿ ಸೂರು ಕಳೆದುಕೊಂಡು ಶೆಡ್​ಗಳಲ್ಲಿ ವಾಸ ಮಾಡುತ್ತಿರುವ ಮೇಲ್ಮುರಿ ಗ್ರಾಮದ ಮೂವತ್ತಕ್ಕೂ ಅಧಿಕ ಕುಟುಂಬಗಳ ಜನರಿಗೆ ಈವರೆಗೂ ಶಾಶ್ವತ ಸೂರು ದೊರೆತಿಲ್ಲ. ಹೀಗಾಗಿ ಈಗಲೂ ಜನರು ಶೆಡ್​ಗಳಲ್ಲೆ ವಾಸ ಮಾಡುತ್ತಿದ್ದಾರೆ. ಇನ್ನು ಹಾವೇರಿ ನಗರದ ಹೊರವಲಯದಲ್ಲಿ ತಗಡಿನ ಶೆಡ್ಗಳಲ್ಲಿ ವಾಸ ಮಾಡುತ್ತಿರುವ ಸುಡುಗಾಡು ಸಿದ್ದರ ಕುಟುಂಬಗಳಿಗೂ ಶಾಶ್ವತ ಸೂರು ಕಲ್ಪಿಸಿಕೊಡುವುದಾಗಿ ಸರಕಾರ ತಿಳಿಸಿತ್ತು. ಆದರೆ ಈವರೆಗೂ ಶಾಶ್ವತ ಸೂರು ಮಾತ್ರ ದೊರೆತಿಲ್ಲ. ಈಗಲೂ ಗಾಳಿ ಬಿಟ್ಟಾಗ ಹಾರಿ ಹೋಗುವ ತಗಡಿನ ಶೆಡ್ಗಳಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಬದುಕಬೇಕಾದ ಪರಿಸ್ಥಿತಿ ಇದೆ ಎನ್ನುತ್ತಾರೆ ಸುಡುಗಾಡು ಸಿದ್ದರ ಮುಖಂಡ ಶೆಟ್ಟಿ ವಿಭೂತಿ.

ಮೇಲ್ಮುರಿ ಗ್ರಾಮದಲ್ಲಿ ಮೂವತ್ತಕ್ಕೂ ಅಧಿಕ ಕುಟುಂಬಗಳ ಜನರು ಈಗಲೂ ತಗಡಿನ ಶೆಡ್ಗಳಲ್ಲಿ ವಾಸ ಮಾಡುತ್ತಿದ್ದಾರೆ. ಎರಡು ದಿನಗಳಿಂದ ಬರುತ್ತಿರುವ ಗಾಳಿ ಮತ್ತು ಮಳೆಯಿಂದ ಶೆಡ್ನಲ್ಲಿ ವಾಸ ಮಾಡುವ ಜನರಿಗೆ ಸಾಕಷ್ಟು ತೊಂದರೆ ಆಗಿದೆ. ತಗಡಿನ ಶೆಡ್ಗಳು ಗಾಳಿಗೆ ಹಾರಿ ಹೋಗಿವೆ. ಗಾಳಿ ಬಿಟ್ಟಾಗೊಮ್ಮೆ ಇಲ್ಲಿನ ಜನರು ಶೆಡ್ಗಳನ್ನು ಖಾಲಿ ಮಾಡಿ ಸಮೀಪದ‌ ಪರಿಚಯಸ್ಥರ ಮನೆಗಳಿಗೆ ಹೋಗಿ ವಾಸ ಮಾಡುತ್ತಿದ್ದಾರೆ. ಆದಷ್ಟು ಬೇಗ ಜಿಲ್ಲಾಡಳಿತ ಹಾಗೂ ಸರಕಾರ ಶೆಡ್ನಲ್ಲಿ ವಾಸ ಮಾಡುತ್ತಿರುವ ಜನರಿಗೆ ಶಾಶ್ವತ ಸೂರಿನ ವ್ಯವಸ್ಥೆ ಕಲ್ಪಿಸಿಕೊಡಬೇಕಾಗಿದೆ ಎನ್ನುತ್ತಾರೆ ಚನ್ನಬಸಪ್ಪ ಅರಳಿ.

ವರದಿ :ಮಂಜುನಾಥ ತಳವಾರ
Published by: Sushma Chakre
First published: April 17, 2021, 8:29 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories