Hatti Gold Mines: ರಾಯಚೂರಿನ ಹಟ್ಟಿ ಚಿನ್ನದ ಗಣಿಯಲ್ಲಿ ಬಂಗಾರ ಉತ್ಪಾದನೆ ಕುಸಿತ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹಟ್ಟಿ ಚಿನ್ನದ ಕಂಪನಿಯಲ್ಲಿ ಸುಮಾರು 4200 ಕಾರ್ಮಿಕರು ದಿನದ 24 ತಾಸು, ಮೂರು ಪಾಳಿಯಲ್ಲಿ ದುಡಿಯುತ್ತಿದ್ದಾರೆ. ನಿತ್ಯ ಕನಿಷ್ಠ 3-5 ಕೆಜಿ ಚಿನ್ನವನ್ನು ಅದಿರಿನಿಂದ ಬೇರ್ಪಡಿಸಿ ಸಂಸ್ಕರಿಸಲಾಗುತ್ತಿದೆ. ಕೆಲವೊಮ್ಮೆ ನಿತ್ಯ 15 ಕೆಜಿಯವರೆಗೂ ಚಿನ್ನ ತೆಗೆದ ಉದಾಹರಣೆಗಳಿವೆ.

  • Share this:

ರಾಯಚೂರು(ಮಾ.04): ದೇಶದಲ್ಲಿ ಈಗ ಚಿನ್ನ ಉತ್ಪಾದಿಸುವ ಏಕೈಕ ಕಂಪನಿ ಎಂಬ ಹೆಗ್ಗಳಿಕೆ ಹೊಂದಿರುವ ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿಯಲ್ಲಿ ಈ ಬಾರಿ ಅತ್ಯಂತ ಕಡಿಮೆ ಉತ್ಪಾದನೆಯಾಗಿದೆ. ಆದರೆ ಇದೇ ವೇಳೆ ಚಿನ್ನದ ದರ ಏರಿಕೆಯಾಗಿದ್ದರಿಂದ ಕಂಪನಿ ಆರ್ಥಿಕತೆ ಅಷ್ಟಾಗಿ ಹೊಡೆತ ನೀಡಿಲ್ಲ. 1914ರಿಂದ ಚಿನ್ನ ಉತ್ಪಾದನೆಯ ಗಣಿ ಹೊಂದಿರುವ ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿಯು ಈಗಲೂ ಸಾಕಷ್ಟು ಪ್ರಮಾಣದಲ್ಲಿ ಚಿನ್ನವನ್ನು ಅದಿರಿನಿಂದ ಬೇರ್ಪಡಿಸಿ ಸಂಸ್ಕರಿಸಿ ಮಾರುಕಟ್ಟೆಗೆ ನೀಡುತ್ತಿದೆ.


ಬೃಹತ್ತಾದ ಹಟ್ಟಿ ಚಿನ್ನದ ಗಣಿಯಲ್ಲಿ ಹಟ್ಟಿಯಲ್ಲಿ ಮೂರು ಶಾಫ್ಟ್ ಗಳಾದ ಮಲ್ಲಪ್ಪ ಶಾಫ್ಟ್, ಸೆಂಟ್ರಲ್ ಶಾಫ್ಟ್ ಹಾಗು ವೀಲೇಜ್ ಶಾಫ್ಟ್ ಗಳಿವೆ. ಇವುಗಳೊಂದಿಗೆ ಹೀರಾ ಬುದ್ದಿನ್ನಿ ಹಾಗೂ ಊಟಿಯಲ್ಲಿಯೂ ಸಹ ಚಿನ್ನವನ್ನು ಹೊರತೆಗೆಯುವ ಗಣಿಗಳಿವೆ. ಕಳೆದ ಸಾಲಿನಲ್ಲಿ ದಾಖಲೆ ಪ್ರಮಾಣದ ಚಿನ್ನವನ್ನು ಹೊರತೆಗೆಯಲಾಗಿತ್ತು. ಆದರೆ ಈ ಬಾರಿ ನಿಗಿದಿತ ಗುರಿಯಷ್ಟು ಚಿನ್ನ ತೆಗೆಯಲು ಆಗಿಲ್ಲ. ಕಾರಣ ಮಾರ್ಚ ತಿಂಗಳಿನಿಂದ ಅಬ್ಬರಿಸಿದ ಕೊರೊನಾ, ಕೊರೊನಾ ಕಾರಣಕ್ಕಾಗಿ ಅದಿರು ತೆಗೆಯುವ ಕಾರ್ಮಿಕರ ಕಡಿಮೆ ಮಾಡಿದ್ದು.


Kolar Crime News: ಅತ್ತೆ ಮನೆಯವರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ತಾಯಿ-ಮಗಳು


ಹಟ್ಟಿ ಚಿನ್ನದ ಕಂಪನಿಯಲ್ಲಿ ಸುಮಾರು 4200 ಕಾರ್ಮಿಕರು ದಿನದ 24 ತಾಸು, ಮೂರು ಪಾಳಿಯಲ್ಲಿ ದುಡಿಯುತ್ತಿದ್ದಾರೆ. ನಿತ್ಯ ಕನಿಷ್ಠ 3-5 ಕೆಜಿ ಚಿನ್ನವನ್ನು ಅದಿರಿನಿಂದ ಬೇರ್ಪಡಿಸಿ ಸಂಸ್ಕರಿಸಲಾಗುತ್ತಿದೆ. ಕೆಲವೊಮ್ಮೆ ನಿತ್ಯ 15 ಕೆಜಿಯವರೆಗೂ ಚಿನ್ನ ತೆಗೆದ ಉದಾಹರಣೆಗಳಿವೆ. ಕಳೆದ ವರ್ಷಗಳಲ್ಲಿ ಚಿನ್ನ ಹೊರತೆಗೆದ ದಾಖಲೆಗಳನ್ನು ನೋಡುವುದಾದರೆ 2015-16 ನೇ ಸಾಲಿನಲ್ಲಿ 1310 ಕೆಜಿ, 2016-17 ನೆಯ ಸಾಲಿನಲ್ಲಿ 1580 ಕೆಜಿ, 2017-18 ನೆಯ ಸಾಲಿನಲ್ಲಿ 1639 ಕೆಜಿ, 2018-19 ನೆಯ ಸಾಲಿನಲ್ಲಿ 1661 ಕೆಜಿ ಹಾಗೂ 2019-20 ನೆಯ ಸಾಲಿನಲ್ಲಿ ಅತಿ ಹೆಚ್ಚು 1724 ಕೆಜಿ ಚಿನ್ನ ಉತ್ಪಾದನೆ ಮಾಡಲಾಗಿತ್ತು.


ಇದೇ ಹುರುಪಿನಲ್ಲಿ ಇನ್ನಷ್ಟು ಚಿನ್ನ ಉತ್ಪಾದಿಸುವ ಗುರಿಯನ್ನು ಕಂಪನಿ ಹೊಂದಿತ್ತು. ಆದರೆ ಕಂಪನಿಯ ಉತ್ಸಾಹಕ್ಕೆ ಕೊರೊನಾ ಲಾಕ್ ಡೌನ್ ತಡೆವೊಡ್ಡಿದೆ. ಮಾರ್ಚ್​​ ತಿಂಗಳಿನಲ್ಲಿ ಕೊರೋನಾ ಲಾಕ್ ಡೌನ್ ಆದ ನಂತರ ಏಪ್ರಿಲ್​ನಲ್ಲಿ ಗಣಿ ಬಂದ್ ಮಾಡಲಾಗಿತ್ತು, ಮೇ ತಿಂಗಳಿನಿಂದ ಗಣಿ ಆರಂಭವಾದರೂ ಕಡಿಮೆ ಪ್ರಮಾಣದ ಕಾರ್ಮಿಕರನ್ನು ದುಡಿಸಿಕೊಳ್ಳಲಾಗಿದೆ. ಇದರಿಂದಾಗಿ ಮೇ ತಿಂಗಳಲ್ಲಿ 76772.15  ಗ್ರಾಂ, ಜೂನ್ ತಿಂಗಳಲ್ಲಿ 139504.81 ಗ್ರಾಂ, ಜುಲೈ ತಿಂಗಳಲ್ಲಿ 127483.19  ಗ್ರಾಂ, ಆಗಸ್ಟ್​​ನಲ್ಲಿ 91417.55 ಗ್ರಾಂ, ಸೆಪ್ಟೆಂಬರ್ ನಲ್ಲಿ 103512.13 ಗ್ರಾಂ, ಅಕ್ಟೋಬರ್ ತಿಂಗಳಲ್ಲಿ 69673.93 ಗ್ರಾಂ, ನವೆಂಬರ್ ತಿಂಗಳಲ್ಲಿ 80917.11, ಡಿಸೆಂಬರ್ ತಿಂಗಳಲ್ಲಿ 60464.90 ಗ್ರಾಂ, ಜನವರಿಯಲ್ಲಿ 92464.90 ಗ್ರಾಂ ಚಿನ್ನ ಉತ್ಪಾದಿಸಲಾಗಿತ್ತು. ಫೆಬ್ರುವರಿ ತಿಂಗಳವರೆಗೆ 975 ಕೆಜಿ ಚಿನ್ನ ಉತ್ಪಾದಿಸಲಾಗಿದೆ.


ಚಿನ್ನದ ಉತ್ಪಾದನೆ ಇಳಿಕೆಯಾಗಿದ್ದು ಒಂದು ಕಡೆಯಾದರೆ ಚಿನ್ನದ ದರ ಕಳೆದ ವರ್ಷ ಏರುಗತಿಯಲ್ಲಿದೆ. 42 ಸಾವಿರ ರೂಪಾಯಿಯಿಂದ 52 ಸಾವಿರ ರೂಪಾಯಿ ದರವು ಪ್ರತಿ 10 ಗ್ರಾಂ ಗೆ ಆಗಿದ್ದರಿಂದ ಕಡಿಮೆ ಚಿನ್ನ ಉತ್ಪಾದಿಸಿದರೂ ಆರ್ಥಿಕ ವರ್ಷಕ್ಕೆ ಅಂಥ ಹೊಡೆತವೇನೂ ಕಂಡು ಬಂದಿಲ್ಲ. ಆದರೆ ಇದೇ ದರದಲ್ಲಿ ಮೊದಲಿನಂತೆ ಚಿನ್ನವನ್ನು ಉತ್ಪಾದಿಸಿದ್ದರೆ ಗಣಿ ಕಂಪನಿಗೆ ಭಾರಿ ಲಾಭವಾಗಲಿತ್ತು. ಈ ಮಧ್ಯೆ ಈಗ ಮಾರುಕಟ್ಟೆಯಲ್ಲಿ ಚಿನ್ನದ ದರ ಇಳಿಕೆಯಾಗುತ್ತಿದೆ, ಈ ಸಂದರ್ಭದಲ್ಲಿ ಗಣಿಯಲ್ಲಿ ಚಿನ್ನವನ್ನು ಉತ್ಪಾದಿಸುವ ಕಾರ್ಯ ಇನ್ನಷ್ಟು ಚುರುಕಾಗಲಿದೆ.

Published by:Latha CG
First published: