ಅಮ್ಮ ಇಲ್ಲ, ಅಪ್ಪ ಕುಡಿತದ ದಾಸ, ಪಾಳುಬಿದ್ದ ಮನೆಯಲ್ಲೇ ವಾಸ; ಅಕ್ಕ-ತಂಗಿಯ ಮನಕರಗುವ ಕಥೆ ಇದು..!

ಇಷ್ಟೆಲ್ಲಾ ಸಂಕಷ್ಟದ ನಡುವೆಯೇ, ತಂಗಿ ಶೀಲಾ ಹೃದಯ ಸಂಬಂಧಿ ರೋಗದಿಂದ ಬಳಲುತ್ತಿದ್ದಾಳೆ. ತಂಗಿಗೆ ಇನ್ಯಾರು ಆಸರೆ ಎಂದು ರೋಗಪೀಡಿತ ತಂಗಿಯ ಜೊತೆಗೇ ಅಕ್ಕ ರೋಸಿ ನರಕದ ಬದುಕು ನಡೆಸುತ್ತಿದ್ದಾಳೆ.

Latha CG | news18-kannada
Updated:November 26, 2019, 12:21 PM IST
ಅಮ್ಮ ಇಲ್ಲ, ಅಪ್ಪ ಕುಡಿತದ ದಾಸ, ಪಾಳುಬಿದ್ದ ಮನೆಯಲ್ಲೇ ವಾಸ; ಅಕ್ಕ-ತಂಗಿಯ ಮನಕರಗುವ ಕಥೆ ಇದು..!
ಬೀದಿಪಾಲಾಗಿರುವ ತಬ್ಬಲಿ ಮಕ್ಕಳು
  • Share this:
ಹಾಸನ,(ನ.26): ತಾಯಿ ಇಲ್ಲದ ಇಬ್ಬರು ತಬ್ಬಲಿ ಹೆಣ್ಣು ಮಕ್ಕಳು. ತಂದೆ ಇದ್ದರೂ ಇಲ್ಲದಂತೆ ಇದ್ದಾನೆ. ಕಂಠಪೂರ್ತಿ ಕುಡಿದು ಊರೂರು ಸುತ್ತುತ್ತಾನೆ. ತಾಯಿ ಸತ್ತು ವರ್ಷಗಳೇ ಆಗಿವೆ. ಆ ಹೆಣ್ಣು ಮಕ್ಕಳಿಗೆ ಇರಲು ಮನೆಯೇ ಇಲ್ಲ. ಪಾಳು ಬಿದ್ದ ಮನೆಯಲ್ಲೇ ಅವರ ವಾಸ. ನೋಡಿದವರೆಲ್ಲರೂ ಈ ಜೀವನ ಯಾರಿಗೂ ಬೇಡವೆಂದು ಪ್ರಾರ್ಥಿಸುವಂತಹ ದಯನೀಯ ಸ್ಥಿತಿ. ಇಂತಹ ಹೃದಯ ವಿದ್ರಾವಕ ದೃಶ್ಯ ಕಂಡು ಬಂದಿದ್ದು ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆತ್ತೂರು ಗ್ರಾಮದಲ್ಲಿ.  

ರೋಸಿ ಮತ್ತು ಶೀಲಾ ಇಬ್ಬರೂ ತಾಯಿಯನ್ನು ಕಳೆದುಕೊಂಡಿರುವ ತಬ್ಬಲಿ ಹೆಣ್ಣು ಮಕ್ಕಳು. ಗಂಡನ ಕಿರುಕುಳದಿಂದ ಬೇಸತ್ತ ತಾಯಿ ಹತ್ತು ವರ್ಷಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದರು.  ಕುಡಿತಕ್ಕೆ ದಾಸನಾಗಿರುವ ತಂದೆ ಊರೂರು ಅಲೆಯುತ್ತಿದ್ದು,  ಮನೆಗೇ ಬರುವುದಿಲ್ಲ. ತನಗಿಬ್ಬರು ಹೆಣ್ಣು ಮಕ್ಕಳಿದ್ದಾರೆ ಎಂಬ ಜ್ಞಾನವೇ ಇಲ್ಲ ಆತನಿಗೆ. ಹೀಗಾಗಿ ಇಬ್ಬರೂ ಮಕ್ಕಳು ತಂದೆ ಇದ್ದರೂ ತಬ್ಬಲಿಗಳಾಗಿ ಬೀದಿಪಾಲಾಗಿದ್ದಾರೆ.

ಸಿದ್ದರಾಮಯ್ಯ ಓರ್ವ ಬೊಗಳೆ ದಾಸ; ಡಿಸಿಎಂ ಗೋವಿಂದ ಕಾರಜೋಳ ಲೇವಡಿ

ಇಷ್ಟೆಲ್ಲಾ ಸಂಕಷ್ಟದ ನಡುವೆಯೇ, ತಂಗಿ ಶೀಲಾ ಹೃದಯ ಸಂಬಂಧಿ ರೋಗದಿಂದ ಬಳಲುತ್ತಿದ್ದಾಳೆ. ತಂಗಿಗೆ ಇನ್ಯಾರು ಆಸರೆ ಎಂದು ರೋಗಪೀಡಿತ ತಂಗಿಯ ಜೊತೆಗೇ ಅಕ್ಕ ರೋಸಿ ನರಕದ ಬದುಕು ನಡೆಸುತ್ತಿದ್ದಾಳೆ. ರೋಸಿ 10ನೇ ತರಗತಿ ಓದುತ್ತಿದ್ದರೆ, ಶೀಲಾ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.

ಇನ್ನು, ಭಾರೀ ಮಳೆಗೆ ಮನೆ ಭಾಗಶಃ ಬಿದ್ದು ಹಾಳಾಗಿದೆ. ಆ ಪಾಳು ಮನೆಯಲ್ಲೇ ಅಕ್ಕ-ತಂಗಿ ಇಬ್ಬರೂ ಜೀವನ ಸವೆಸುತ್ತಿದ್ದಾರೆ. ಆ ಮನೆಗೆ ಕಿಟಕಿಗಳಿಲ್ಲ. ಸಂಪೂರ್ಣ ಪಾಳು ಬಿದ್ದಿದೆ. ಮನೆಯ ತುಂಬೆಲ್ಲಾ ಕಸದ ರಾಶಿ. ಒಲೆಯಲ್ಲೇ ಇಬ್ಬರೂ ಅಡುಗೆ ಮಾಡಿ ತಿನ್ನುತ್ತಿದ್ದಾರೆ. ಅವರ ಕಷ್ಟ ಕೇಳಲು ಯಾರು ಇಲ್ಲದಂತಾಗಿದೆ.

ಕಣ್ಣಿದ್ದೂ ಕುರುಡಾಗಿರುವ ಜಿಲ್ಲಾಡಳಿತದ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ಅನಾಥ ಹೆಣ್ಣು ಮಕ್ಕಳಿಗೆ ಸೂಕ್ತ ಮನೆ ಒದಗಿಸಿ, ನೆರವಿಗೆ ಧಾವಿಸಿ ಎಂದು ಜನರು ಆಗ್ರಹಿಸಿದ್ದಾರೆ. ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ತಬ್ಬಲಿ ಮಕ್ಕಳ ಸಹಾಯಕ್ಕೆ ಬರಲಿದೆಯೇ ಎಂದು ಕಾದುನೋಡಬೇಕಿದೆ.

ಅಂಗನವಾಡಿಯಲ್ಲಿ ಮೂತ್ರ ಮಾಡಿದ್ದಕ್ಕೆ ಮಗು ಮೇಲೆ ಚಾಕುವಿನಿಂದ ಹಲ್ಲೆ
First published:November 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading