ಕದ್ದುಮುಚ್ಚಿ 2ನೇ ಮದುವೆಗೆ ಸಿದ್ಧತೆ: ಮೊದಲ ಹೆಂಡತಿ, ಎಂಗೇಜ್​​ಮೆಂಟ್​​ ಆದ ಹುಡುಗಿ ಒಂದಾಗಿ ಕೊಟ್ರು ಶಾಕ್!

ದಕ್ಷಿಣ ಕನ್ನಡ ಮೂಲದ ಯುವತಿ ಜೊತೆಗೆ ಎಂಗೇಜ್ಮೆಂಟ್ ಮಾಡಿದ್ದರು. ಈ ವಿಷಯ ಅಕ್ಷಾತಾಗೆ ತಿಳಿಯುತ್ತಿದ್ದಂತೆ ಎಂಗ್ಮೇಂಟ್ ಆಗಿದ್ದ ಯುವತಿಗೆ ಫೋನ್ ಮಾಡಿ ಸತ್ಯಾಂಶ ತಿಳಿಸಿದ್ದಾಳೆ. ಕೂಡಲೇ ಆಕೆಯೂ ಕೂಡ ಲೋಹಿತ್ ವಿರುದ್ಧ ಸೂರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ಆರೋಪಿ ಲೋಹಿತ್

ಆರೋಪಿ ಲೋಹಿತ್

  • Share this:
ಹಾಸನ : ಪರಸ್ಪರ ಪ್ರೀತಿಸಿ ಮದುವೆಯಾಗಿ (Love Marriage) 9 ವರ್ಷ ಸಂಸಾರ ಮಾಡಿ ನಂತರ ಪೋಷಕರ (Parents) ಒತ್ತಾಯದ ಮೇರೆಗೆ ಕೈಹಿಡಿದ ಪತ್ನಿಗೆ ಕೈಕೊಟ್ಟ ಬೇರೆ ಮದುವೆಯಾಗಲು ಮುಂದಾಗಿದ್ದ ಕಿರಾತಕ ಪತಿ ವಿರುದ್ಧ ಪತ್ನಿ ಪೊಲೀಸ್ ಠಾಣೆ (Wife Files Complaint )ಮೆಟ್ಟಿಲೇರಿದ್ದಾಳೆ. ಚನ್ನರಾಯಪಟ್ಟಣ ತಾಲ್ಲೂಕಿನ ಕುಂದೂರು ಗ್ರಾಮದ ಅಕ್ಷತಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಾಗ ಲೋಹಿತ್ ಪರಿಚಯವಾಗಿತ್ತು. ನಂತರ ಆತನೊಂದಿಗೆ ಪ್ರೇಮಾಂಕುರವಾಗಿ ಪೋಷಕರ ವಿರೋಧದ ನಡುವೆ ಮದುವೆಯಾಗಿದ್ದರು. ಅನ್ಯ ಜಾತಿಯ ಹುಡುಗಿ ಎನ್ನುವ ಕಾರಣಕ್ಕೆ ಲೋಹಿತ್ ತಂದೆ ಮಲ್ಲಿಕಾರ್ಜುನ, ತಾಯಿ ಜಯಶೀಲಾ ಅಕ್ಷತಾಳಿಗೆ ಇನ್ನಿಲ್ಲದ ಕಿರುಕುಳ ನೀಡಿ ನವಜೋಡಿಯನ್ನು ಮನೆಯಿಂದ ಹೊರಹಾಕಿದ್ದರು. ಆನಂತರ ಇಬ್ಬರು ಅನ್ಯೋನ್ಯವಾಗಿದ್ದರು.

ಹೆಂಡತಿಯನ್ನು ಬಿಡಲು ಆಸ್ತಿಯ ಆಮಿಷ 

ಆದರೆ ಅನ್ಯಜಾತಿ ಅನ್ನುವ ಕಾರಣಕ್ಕೆ ಲೋಹಿತ್ ಪೋಷಕರು ಆತನನ್ನು ಮನೆಗೆ ಕರೆಸಿಕೊಂಡು ಹಕ್ಕುಖುಲಾಸೆ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದಲ್ಲದೆ ಪತ್ನಿಯನ್ನು ಬಿಟ್ಟು ಬರುವಂತೆ ಒತ್ತಾಯಿಸುತ್ತಿದ್ದರು. ಇದರಿಂದ ಮನನೊಂದ ಅಕ್ಷತಾ ಪೊಲೀಸರಿಗೆ ದೂರು ನೀಡಿದ್ದಳು. ಅತ್ತ ಪೋಷಕರು ಇತ್ತ ಕೈಹಿಡಿದ ಪತ್ನಿಯನ್ನೂ ಬಿಡಲಾಗದೆ ಲೋಹಿತ್ ಕುಡಿತದ ದಾಸನಾಗಿದ್ದ. ಲೋಹಿತ್ ಪೋಷಕರಿಗೆ ಕೋಟಿಗಟ್ಟಲೆ ಆಸ್ತಿಯಿತ್ತು. ಇದನ್ನೇ ಮುಂದಿಟ್ಟುಕೊಂಡು ನೀನು ಅಕ್ಷಾತಳನ್ನು ಬಿಟ್ಟುಬಂದರೆ ಆಸ್ತಿ ಕೊಡುವುದರ ಜೊತೆಗೆ ಮತ್ತೊಂದು ಮದುವೆ ಮಾಡುವುದಾಗಿ ಹೇಳಿದ್ದರು.

2ನೇ ಮದುವೆಗೆ ತಯಾರಿಯಿಂದ ಹೈಡ್ರಾಮಾ 

ಯಾವಾಗಲೂ ಮದ್ಯದ ನಶೆಯಲ್ಲಿ ತೇಲುತ್ತಿದ್ದ ಲೋಹಿತ್ ಆಸ್ತಿ ಆಸೆಗಾಗಿ ಒಪ್ಪಿ ಪ್ರೀತಿಸಿ ಕೈಹಿಡಿದಿದ್ದ ಪತ್ನಿ ಬಿಟ್ಟು ಅಪ್ಪ ಅಮ್ಮ ಹೇಳಿದಂತೆ ನಡೆದುಕೊಳ್ಳಲಾರಂಭಿಸಿದ‌. ಅಕ್ಷತಾ ಪೋಷಕರು ಎಷ್ಟೇ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಲಿಲ್ಲ.  ಲೋಹಿತ್ ಪೋಷಕರು‌ ಮದುವೆ ವಿಚಾರವನ್ನೇ ಮುಚ್ಚಿಟ್ಟು ಮತ್ತೊಂದು ಮದುವೆಗೆ ಪ್ಲಾನ್ ಮಾಡಿದ್ದರು. ದಕ್ಷಿಣ ಕನ್ನಡ ಮೂಲದ ಯುವತಿ ಜೊತೆಗೆ ಎಂಗೇಜ್ಮೆಂಟ್ ಮಾಡಿದ್ದರು. ಈ ವಿಷಯ ಅಕ್ಷಾತಾಗೆ ತಿಳಿಯುತ್ತಿದ್ದಂತೆ ಎಂಗ್ಮೇಂಟ್ ಆಗಿದ್ದ ಯುವತಿಗೆ ಫೋನ್ ಮಾಡಿ ಸತ್ಯಾಂಶ ತಿಳಿಸಿದ್ದಾಳೆ. ಕೂಡಲೇ ಆಕೆಯೂ ಕೂಡ ಲೋಹಿತ್ ವಿರುದ್ಧ ಸೂರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಇದರಿಂದ ಕೋಪಗೊಂಡ ಲೋಹಿತ್ ಅಕ್ಷತಾ ಕೆಲಸ ಮಾಡುತ್ತಿರುವ ಫ್ಯಾಕ್ಟರಿ ಮುಂದೆ ಕುಡಿದು ಬಂದು ಗಲಾಟೆ ಮಾಡುತ್ತಿದ್ದಾನೆ ಎಂದು ಆರೋಪಿಸಿದ್ದಾಳೆ.

ಗಂಡ, ಆತನ ಮನೆಯವರ ವಿರುದ್ಧ ದೂರು

ಅಲ್ಲದೇ ಲೋಹಿತ್ ಹಾಗೂ ಆತನ ಪೋಷಕರ ವಿರುದ್ಧ ಎರಡನೇ ಮದುವೆಯಾಗಲು ನಂಬಿಸಿರುವ ಬಗ್ಗೆ ಆಡಿಯೋ ಸಾಕ್ಷಿ ಇಟ್ಟುಕೊಂಡು ಕಾನೂನು ಹೋರಾಟಕ್ಕೆ ಇಳಿದಿದ್ದಾಳೆ. ವಂಚಕ ಪತಿಯಿಂದ ನನಗೆ ಹಾಗೂ ನನ್ನ ಎಂಟು ವರ್ಷದ ಮಗನಿಗೆ ನ್ಯಾಯಕೊಡಿಸಿ,  ಅಲ್ಲದೇ ಇಷ್ಟಕ್ಕೆಲ್ಲಾ ಮಾವ ಮಲ್ಲಿಕಾರ್ಜುನ, ಅತ್ತೆ ಜಯಶೀಲ, ಮೈದುನ ದರ್ಶನ್ ಕಾರಣ ಅವರ ವಿರುದ್ಧ ಕಠಿಣ ಕ್ರಮ‌ ಕೈಗೊಳ್ಳುವಂತೆ ಚನ್ನರಾಯಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ಇದನ್ನೂ ಓದಿ: ಬೆಂಗಳೂರಲ್ಲಿ ನಿಶ್ಚಿತಾರ್ಥ ಆಗಿರೋ ಯುವತಿಯ ಬೆತ್ತಲೆ ಫೋಟೋಗಳನ್ನು ಹರಿಬಿಟ್ಟ ಹಳೆ ಲವರ್!

ಇತ್ತ ಬೆಂಗಳೂರಿನಲ್ಲೂ ಗಂಡ ಕಟ್ಟಿಕೊಂಡ ಹೆಂಡತಿಗೆ ಮೋಸ ಮಾಡಿದ್ದಾನೆ. ಆನ್​​​ ಲೈನ್​​ ನಲ್ಲಿ ಸೈಯದ್ ತಸ್ಕೀನ್ ಅಹ್ಮದ್ ಎಂಬಾತನ ಪರಿಚಯವಾಗಿತ್ತು. 2ನೇ ಮದುವೆಗೆ ಒಪ್ಪಿ ನಿಖಾ ಮಾಡಿಕೊಂಡವನು ಉಂಡೂ ಹೋದ ಕೊಂಡೂ ಹೋದ ಎನ್ನುವಂತೆ ವಂಚಿಸಿದ್ದಾನೆ. ಶಾದಿ ಡಾಟ್ ಕಾಮ್ ನಲ್ಲಿ ಪರಿಚಯವಾಗಿ ನಂಬಿಸಿ ಮದುವೆಯಾಗಿ ವಂಚನೆ ಮಾಡಿದ್ದಾನೆ. ಸೈಯದ್ ತಸ್ಕೀನ್ ಅಹ್ಮದ್ ವಿರುದ್ಧ ಪತ್ನಿ ರಿಹಾನಾ ಬೇಗಂ ಇಂದು ಪೊಲೀಸ್​​ ಕಮಿಷನರ್​ ಗೆ ದೂರು ನೀಡಿದ್ದಾಳೆ. ನಂಬಿಸಿ ಮದುವೆಯಾದ ವಂಚಕ ಪತಿ, ತನ್ನ ಮನೆಯ ಕಾಮಗಾರಿ ನಡೆಯುತ್ತಿದೆ ಅಂತೇಳಿ ಪತ್ನಿ ಮನೆಯಲ್ಲೇ ವಾಸವಿದ್ದನಂತೆ. ಮದುವೆಯಾದ ಒಂದೇ ತಿಂಗಳಿಗೆ ಬ್ಯುಸಿನೆಸ್ ಗೆ ಹಣ ಬೇಕು ಅಂತ ಲಕ್ಷ ಲಕ್ಷ ಪೀಕಿದ್ದಾನಂತೆ.
Published by:Kavya V
First published: