HOME » NEWS » State » HASSAN TWO SOLDIERS PARTICIPATED IN KARGIL WAR KARGIL VIJAY DIWAS SCT

ಕಾರ್ಗಿಲ್​ ಯುದ್ಧದಲ್ಲಿ ಭಾಗವಹಿಸಿದ್ದ ಹಾಸನದ ಯೋಧರ ಕಥೆ ರೋಚಕ

ಭಾರತ ಮತ್ತು ಪಾಕಿಸ್ತಾನದ ನಡುವೆ ಕಾರ್ಗಿಲ್ ಯುದ್ದ ನಡೆಯುವಾಗ ಹಾಸನದ ಮಲ್ಲೇಶ್ ಭಾರತೀಯ ಸೈನ್ಯದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಹಾಸನದ ಮತ್ತೋರ್ವ ವೀರಯೋಧ ಪ್ರಸಾದ್ ಎಂಬುವವರು ಕೂಡ ಕಾರ್ಗಿಲ್ ಯುದ್ದದಲ್ಲಿ ಸುಮಾರು 3 ವರ್ಷಗಳ ಕಾಲ ಸಿಪಾಯಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

news18-kannada
Updated:July 23, 2020, 2:33 PM IST
ಕಾರ್ಗಿಲ್​ ಯುದ್ಧದಲ್ಲಿ ಭಾಗವಹಿಸಿದ್ದ ಹಾಸನದ ಯೋಧರ ಕಥೆ ರೋಚಕ
ಸಾಂದರ್ಭಿಕ ಚಿತ್ರ
  • Share this:
ಹಾಸನ: ನಮ್ಮ ದೇಶಕ್ಕಾಗಿ ಹೋರಾಡಿದ ಅನೇಕ ಮಂದಿ ಹುತಾತ್ಮರಾಗಿದ್ದಾರೆ. ದೇಶಕ್ಕಾಗಿ ಭಾರತ ಮಾತೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ. ಜುಲೈ 26ರಂದು ಪ್ರತಿವರ್ಷ ಕಾರ್ಗಿಲ್ ವಿಜಯ್ ದಿವಸ್ ಎಂದು ಆಚರಣೆ ಮಾಡಲಾಗುತ್ತದೆ. ಈ ಕಾರ್ಗಿಲ್ ವಿಜಯ್ ದಿವಸ್ ನಲ್ಲಿ ಹೋರಾಡಿದ ವೀರ ಯೋಧರ ಕಥೆಯ ಒಂದು ವರದಿ ಇಲ್ಲಿದೆ...

ಕಾರ್ಗಿಲ್ ಯುದ್ಧದಲ್ಲಿ ಹಾಸನದ ಇಬ್ಬರು ಸೈನಿಕರು ಭಾಗವಹಿಸಿದ್ದು ಕಾರ್ಗಿಲ್ ನಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಹೋರಾಡಿದ್ದಾರೆ. ಹಾಸನ ನಗರದ ಹವಾಲ್ದಾರ್ ಮಲ್ಲೇಶ್ ಮತ್ತು ಸಿಪಾಯಿ ಪ್ರಸಾದ್ ಎಂಬ ನಮ್ಮ‌ ವೀರ ಯೋಧರು ಕಾರ್ಗಿಲ್ ಯುದ್ದದಲ್ಲಿ ಭಾಗಿಯಾಗಿದ್ದರು. ಮಲ್ಲೇಶ್ ಎಂಬುವವರು ಹವಾಲ್ದಾರ್ ಹುದ್ದೆಯಲ್ಲಿದ್ದು, ಮೂರನೇ ರೆಜಿಮೆಂಟ್ ನಲ್ಲಿ ಗ್ಲೆಷಿಯೋ ಎಂಬ ಸ್ಥಳದಲ್ಲಿ ಆಪರೇಷನ್ ಮೇಘದೂತ್ ನಲ್ಲಿ ಕಾರ್ಯವನಿರ್ವಹಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ನಡುವೆ ಕಾರ್ಗಿಲ್ ಯುದ್ದ ನಡೆಯುವ ಸಂದರ್ಭ ಮಲ್ಲೇಶ್ ಒಂದು‌ ವರ್ಷಗಳ ಕಾಲ ಭಾರತೀಯ ಸೈನ್ಯದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿ ಸೊನ್ನೆ ಡಿಗ್ರಿ ಉಷ್ಣಾಂಶವಿರುವ ಪ್ರದೇಶದಲ್ಲಿ ಇವರು ಹವಾಲ್ದಾರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. 18 ವರ್ಷಗಳ ಕಾಲ ಸೈನ್ಯದಲ್ಲಿ ಕಾರ್ಯ ನಿರ್ವಹಿಸಿದ ಬಳಿಕ ನಿವೃತ್ತರಾಗಿ ಈಗ ಕೆಪಿಟಿಸಿಎಲ್ ನಲ್ಲಿ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: ಸೋದರನ ಸಾವಿನ ಸುದ್ದಿ ಕೇಳಿ ಬೆಳಗಾವಿಯ ಅಕ್ಕ-ತಂಗಿಯರಿಗೆ ಹೃದಯಾಘಾತ; ಮೂವರಿಗೂ ಗ್ರಾಮಸ್ಥರಿಂದ ಒಟ್ಟಾಗಿ ಅಂತ್ಯಕ್ರಿಯೆ!

ಮತ್ತೋರ್ವ ವೀರಯೋಧ ಪ್ರಸಾದ್ ಎಂಬುವವರು ಕೂಡ ಕಾರ್ಗಿಲ್ ಯುದ್ದದಲ್ಲಿ ಸುಮಾರು 3 ವರ್ಷಗಳ ಕಾಲ ಸಿಪಾಯಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರು ಇಂಡಿಯಾ ಪಾಕಿಸ್ತಾನದ ಗಡಿ ಪ್ರದೇಶ ಲೇಹ್ ನಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಕಾರ್ಗಿಲ್ ಯುದ್ದ ನಡೆಯುವಾಗ ಮತ್ತು ಯುದ್ದ ಮುಗಿದ ಬಳಿಕ ಒಂದು ವರ್ಷಗಳ ಕಾಲ ಲೇಹ್ ನಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಇವರು ಯುದ್ದ ನಡೆಯುವಾಗ ಸಿಗ್ನಲ್ ಕಮ್ಯೂನಿಕೇಷನ್ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಯುದ್ದ ನಡೆಯುವಾಗ ಸೈನಿಕರಿಗೆ ಅಗತ್ಯ ವಸ್ತು ಪೂರೈಸುವುದು ಮತ್ತು ಗಡಿಯಲ್ಲಿ ಶತ್ರುಗಳ ಚಲನವಲನದ ಬಗ್ಗೆ ಮಾಹಿತಿ ನೀಡಿ ನಮ್ಮ ಸೈನಿಕರಿಗೆ ಸಂಪರ್ಕ ಸೇತುವಾಗಿ ಕಾರ್ಯ ನಿರ್ವಹಿಸಿದ್ದಾರೆ. ಸೈನ್ಯದಲ್ಲಿ ಸುಮಾರು 16 ವರ್ಷಗಳ ಕಾಲ‌ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ.

ಭಾರತ ಮಾತೆಯನ್ನು ರಕ್ಷಿಸಲು 130 ಕೋಟಿ ಭಾರತೀಯರನ್ನು ರಕ್ಷಿಸಲು ನಮ್ಮ ಸೈನಿಕರು ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ. ಈಗ ನಾವು ಕಾರ್ಗಿಲ್ ವಿಜಯ್ ದಿವಸ್ ಆಚರಿಸುವುದು ನಮ್ಮೆಲ್ಲಾ ಭಾರತೀಯರಿಗೆ ಒಂದು ಸಂತೋಷದ ವಿಚಾರ. ಹಾಗೆಯೇ ಈ ಕಾರ್ಗಿಲ್ ನಲ್ಲಿ ಮಡಿದ ವೀರ ಯೋಧರಿಗೆ ಕೋಟಿ ಕೋಟಿ ನಮನ ಸಲ್ಲಿಸಿದ್ರೂ ಸಾಲದು. ಈ ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ದೊರಕಲಿ ಮತ್ತು ಕಾರ್ಗಿಲ್ ನಲ್ಲಿ ಮಡಿದ ಸೈನಿಕರ ಕುಟುಂಬಕ್ಕೆ ಆ ದೇವರು ಒಳ್ಳೆಯದು ಮಾಡಲಿ ಎಂದು ಕೋಟಿ ಕೋಟಿ ಭಾರತೀಯರು ಪ್ರಾರ್ಥಿಸೋಣ. ನ್ಯೂಸ್18ಕನ್ನಡ ವಾಹಿನಿಯಿಂದ ವೀರ ಯೋಧರಿಗೊಂದು ಸಲಾಂ.(ವರದಿ: ಡಿಎಂಜಿ ಹಳ್ಳಿ ಅಶೋಕ್)
Published by: Sushma Chakre
First published: July 23, 2020, 2:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories