• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • HD Devegowda: ಹಾಸನ ಟಿಕೆಟ್ ಜಟಾಪಟಿಯಿಂದ ದೇವೇಗೌಡರು ಬೇಸರ, ಬಹಳ ನೊಂದು ಮಾತನಾಡಿದ್ದಾರೆ ಎಂದ ಹೆಚ್​​ಡಿಕೆ

HD Devegowda: ಹಾಸನ ಟಿಕೆಟ್ ಜಟಾಪಟಿಯಿಂದ ದೇವೇಗೌಡರು ಬೇಸರ, ಬಹಳ ನೊಂದು ಮಾತನಾಡಿದ್ದಾರೆ ಎಂದ ಹೆಚ್​​ಡಿಕೆ

ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ

ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ

ಹಾಸನ ಟಿಕೆಟ್ ಗೊಂದಲಕ್ಕೆ ತೆರೆ ಬೀಳಲಿದೆ. ಯಾವುದೇ ಗೊಂದಲವಿಲ್ಲದೆ ದೇವೇಗೌಡರು ಸಮಸ್ಯೆ ಬಗೆಹರಿಸುತ್ತಾರೆ ಎಂದು ಮಾಜಿ ಸಿಎಂ ಹೆಚ್​​ಡಿ ಕುಮಾರಸ್ವಾಮಿ ಹೇಳಿದ್ದಾರೆ.

 • Share this:

ಬೆಂಗಳೂರು: ಹಾಸನ (Hassan) ಟಿಕೆಟ್​ ದಂಗಲ್​​ ಕ್ಲೈಮ್ಯಾಕ್ಸ್​ ಹಂತಕ್ಕೆ ತಲುಪಿದೆ. ಹೆಚ್​​.ಡಿರೇವಣ್ಣ (HD Revanna)- ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ನಡುವೆ ಹಗ್ಗಜಗ್ಗಾಟ ನಡೆಯುತ್ತಿದೆ. ಏಪ್ರಿಲ್ 3ರಂದು 2ನೇ ಲಿಸ್ಟ್ ಬಿಡುಗಡೆಯಾಗುವ ಸಾಧ್ಯತೆ ಇದೆ. ಹೀಗಾಗಿ ಇಬ್ಬರ ನಡುವೆ ಸಂಧಾನಕ್ಕೆ ದೇವೇಗೌಡರು (HD Devegowda) ಯತ್ನಿಸುತ್ತಿದ್ದಾರೆ. ಈಗಾಗಲೇ ದೇವೇಗೌಡರು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಮಾಡಿದ್ದು, ದೇವೇಗೌಡರು ಸೂಚಿಸಿದವರಿಗೆ ಹಾಸನ ಟಿಕೆಟ್ ನೀಡಲಾಗುತ್ತೆ. ಈ ಬಗ್ಗೆ ಬೆಂಗಳೂರಿನ (Bengaluru) ಯಲಹಂಕದಲ್ಲಿ ಮಾತನಾಡಿದ ಹೆಚ್​​ಡಿಕೆ, ದೇವೇಗೌಡರು ಬಹಳ ನೊಂದಕೊಂಡಿದ್ದಾರೆ ಎಂದು ಹೇಳಿದ್ದಾರೆ.


ದೇವೇಗೌಡರು ಆರೋಗ್ಯ, ಆಯಸ್ಸು, ನನಗೆ ಮುಖ್ಯ


ಯಲಹಂಕದ ಪಂಚರತ್ನ ಯಾತ್ರೆ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಹೆಚ್​ಡಿಕೆ, ದೇವೆಗೌಡರು ಸಭೆ ಕರೆದಿದ್ದಾರೆ. ನಾನು ಕೂಡ ಸಭೆಗೆ ಹೋಗುತ್ತಿದ್ದೇನೆ. ಆದರೆ ದೇವೇಗೌಡರು ನೊಂದು ಮಾತನಾಡಿದ್ದಾರೆ. ಕುಟುಂಬದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇರಬಾರದು ಎಂದು ಹೇಳಿದ್ದಾರೆ. ದೇವೇಗೌಡರು ಆರೋಗ್ಯ, ಆಯಸ್ಸು, ನನಗೆ ಮುಖ್ಯ. ಈ ಬಗ್ಗೆ ಅವರಿಗೂ ಮನವರಿಕೆ ಇದೆ.


ಇದನ್ನೂ ಓದಿ: Jaishankar: ವಿದೇಶಾಂಗ ಸಚಿವರಿಗೆ ಕರುನಾಡ ನಂಟು! ಬೆಂಗಳೂರು, ಚಿಕ್ಕೋಡಿಯ ನಂಟು ಬಿಚ್ಚಿಟ್ಟ ಜೈಶಂಕರ್


ಅವರು ಜನರ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ. ನಮ್ಮ ನಿರ್ಣಯ ಏನೇ ಇದ್ದರೂ, ದೇವವೇಗೌಡರ ನಿರ್ಣಯಕ್ಕೆ ತಲೆಬಾಗಿದ್ದೇವೆ. ದೇವೇಗೌಡರ ಮಧ್ಯಸ್ಥಿಕೆ ಎಲ್ಲದಕ್ಕೂ ತೆರೆ ಎಳೆಯಲಿದೆ. ಅಲ್ಲದೆ, ಇಷ್ಟು ದಿನಗಳ ಚರ್ಚೆಯಲ್ಲಿದ್ದ ಹಾಸನ ಟಿಕೆಟ್ ಗೊಂದಲಕ್ಕೆ ತೆರೆ ಬೀಳಲಿದೆ. ಯಾವುದೇ ಗೊಂದಲವಿಲ್ಲದೆ ದೇವೇಗೌಡರು ಸಮಸ್ಯೆ ಬಗೆಹರಿಸುತ್ತಾರೆ ಎಂದರು.
ಕಾರಂತ ಬಡಾವಣೆ ನಿರ್ಮಾಣದ ಹೆಸರಲ್ಲಿ ರೈತರಿಗೆ ಭಾರೀ ಅನ್ಯಾಯ

top videos


  ಯಲಹಂಕದಲ್ಲಿ ನಡೆಸುತ್ತಿರುವ ಪಂಚರತ್ನ‌ ಯಾತ್ರೆ ಉತ್ತಮ‌ ಸ್ಪಂದನೆ ಸಿಗುತ್ತಿದೆ. ಮಹಿಳೆಯರು, ಯುವಕರು ಹೆಚ್ಚಿನ‌ ಸಂಖ್ಯೆಯಲ್ಲಿ ಭಾಗಿಯಾಗುತ್ತಿದ್ದಾರೆ. ಶಿವರಾಮ್ ಕಾರಂತ ಬಡಾವಣೆ ನಿರ್ಮಾಣದ ಹೆಸರಲ್ಲಿ ರೈತರಿಗೆ ಭಾರೀ ಅನ್ಯಾಯ ಆಗಿದೆ. ಯಲಹಂಕ ಸ್ಥಳೀಯ ಶಾಸಕ ಅಧಿಕಾರದ ಉದ್ಧಟತನ ಬಗ್ಗೆ ಜನರು ನನ್ನ ಗಮನಕ್ಕೆ ತಂದಿದ್ದಾರೆ, ಜನಪ್ರತಿನಿಧಿಯ ನಡವಳಿಕೆ ಬಗ್ಗೆ ಜನತೆ ಬೇಸತ್ತಿದ್ದಾರೆ ಎಂದು ಬಿಡಿಎ ಅಧ್ಯಕ್ಷ, ಶಾಸಕ ಎಸ್.ಆರ್.ವಿಶ್ವನಾಥ್ ಹೆಸರು ಹೇಳದೆ ಚಾಟಿ ಬೀಸಿದರು.

  First published: