ಚುನಾವಣೆ ಹೊತ್ತಲ್ಲಿ ಹಾಸನ ಎಸ್​ಪಿ ಪ್ರಕಾಶ್ ಗೌಡ ಎತ್ತಂಗಡಿ; ಚೇತನ್ ಸಿಂಗ್ ರಾಥೋಡ್ ನೂತನ ಎಸ್​ಪಿ

ಜೆಡಿಎಸ್ ಪಕ್ಷದ ಪರವಾಗಿ ಎಸ್​ಪಿ ಪ್ರಕಾಶ್ ಗೌಡ ಕೆಲಸ ಮಾಡುತ್ತಿದ್ದಾರೆಂದು ಬಿಜೆಪಿ ಶಾಸಕ ಪ್ರೀತಮ್ ಗೌಡ ಅವರು ಚುನಾವಣಾ ಆಯೋಗಕ್ಕೆ ಪತ್ರವನ್ನು ಬರೆದಿದ್ದರು ಎನ್ನಲಾಗಿದೆ.

G Hareeshkumar | news18
Updated:April 4, 2019, 6:01 PM IST
ಚುನಾವಣೆ ಹೊತ್ತಲ್ಲಿ ಹಾಸನ ಎಸ್​ಪಿ ಪ್ರಕಾಶ್ ಗೌಡ ಎತ್ತಂಗಡಿ; ಚೇತನ್ ಸಿಂಗ್ ರಾಥೋಡ್ ನೂತನ ಎಸ್​ಪಿ
ವಿಧಾನ ಸೌಧ
G Hareeshkumar | news18
Updated: April 4, 2019, 6:01 PM IST
ಹಾಸನ (ಏ. 04): ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯ ಸರ್ಕಾರ ಹಾಸನ ಎಸ್​ಪಿ ಡಾ. ಎ.ಎನ್​​. ಪ್ರಕಾಶ್ ಗೌಡ ಅವರನ್ನು ವರ್ಗಾವಣೆ ಮಾಡಿದೆ. ನೂತನ ಎಸ್​ ಪಿ ಯಾಗಿ ಚೇತನ್ ಸಿಂಗ್ ರಾಥೋರ್ ಅವರನ್ನು ನೇಮಕ ಮಾಡಲಾಗಿದೆ. ಚೇತನ್ ಸಿಂಗ್ ರಾಥೋರ್ ಬೆಂಗಳೂರು ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ನಿರ್ದೇಶಕರಾಗಿದ್ದರು.

ಜೆಡಿಎಸ್ ಪಕ್ಷದ ಪರವಾಗಿ ಎಸ್​ಪಿ ಪ್ರಕಾಶ್ ಗೌಡ ಕೆಲಸ ಮಾಡುತ್ತಿದ್ದಾರೆಂದು ಬಿಜೆಪಿ ಶಾಸಕ ಪ್ರೀತಮ್ ಗೌಡ ಅವರು ಚುನಾವಣಾ ಆಯೋಗಕ್ಕೆ ಪತ್ರವನ್ನು ಬರೆದಿದ್ದರು ಎನ್ನಲಾಗಿದೆ. ಈ ದೂರಿನ ಮೇರೆಗೆ ಪ್ರಕಾಶ್ ಗೌಡ ಅವರನ್ನು ವರ್ಗಾವಣೆ ಮಾಡಿರುವ ಸಾಧ್ಯತೆ ಇದೆ. 

ಆದರೆ  ಡಾ.ಎ.ಎನ್​​.ಪ್ರಕಾಶ್ ಗೌಡ ಅವರಿಗೆ ಯಾವುದೇ ಹುದ್ದೆಯನ್ನು ತೋರಿಸದೇ ಸರ್ಕಾರ ವರ್ಗಾವಣೆ ಮಾಡಿದೆ ಎನ್ನಲಾಗಿದೆ. ಏಳು ತಿಂಗಳ ಹಿಂದೆ ಹಾಸನ ಜಿಲ್ಲೆಗೆ ವರ್ಗಾವಣೆಯಾಗಿ ಬಂದಿದ್ದರು.  ಈ ಮೊದಲು ಮೈಸೂರಿನಲ್ಲಿ ಎಸಿಪಿಯಾಗಿ ಕೆಲಸ ಮಾಡುತ್ತಿದ್ದರು.

ಇದನ್ನೂ ಓದಿ : ಹಾಸನ, ವಿಜಯಪುರ, ಬೆಳಗಾವಿ ಜಿಲ್ಲಾಧಿಕಾರಿಗಳ ದಿಢೀರ್ ವರ್ಗಾವಣೆ
Loading...

ಡಾ.ಎ.ಎನ್​​ ಪ್ರಕಾಶ್ ಗೌಡ ಅವರು ಸಾರಿಗೆ ಸಚಿವ ಡಿಸಿ ತಮ್ಮಣ್ಣ ಅವರ ಸಂಬಂಧಿ ಎನ್ನುವ ಆರೋಪವೂ ಸಹ ಕೇಳಿ ಬಂದಿದೆ. 
First published:April 4, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626