ಪ್ರಜ್ವಲ್​ ರೇವಣ್ಣಗೆ ಸೇರಿದ ಅಕ್ರಮ ಕಟ್ಟಡ ತೆರವುಗೊಳಿಸಿದ ಹಾಸನ ನಗರಸಭೆ

ಕಳೆದ 6 ವರ್ಷಗಳ ಹಿಂದೆ ಬಿಎಂ ರಸ್ತೆಯಲ್ಲಿ ನಗರ ಸಭೆಯ ಜಾಗದಲ್ಲಿ ಪ್ರಜ್ವಲ್ ರೇವಣ್ಣ ಮತ್ತು ಸೂರಜ್ ರೇವಣ್ಣ ರವರು ಅಕ್ರಮವಾಗಿ ಕಟ್ಟಡ ಕಟ್ಟಿದ್ದರು ಎನ್ನಲಾಗಿದೆ

G Hareeshkumar | news18
Updated:January 12, 2019, 1:11 PM IST
ಪ್ರಜ್ವಲ್​ ರೇವಣ್ಣಗೆ ಸೇರಿದ ಅಕ್ರಮ ಕಟ್ಟಡ ತೆರವುಗೊಳಿಸಿದ ಹಾಸನ ನಗರಸಭೆ
ಸಾಂದರ್ಭಿಕ ಚಿತ್ರ
G Hareeshkumar | news18
Updated: January 12, 2019, 1:11 PM IST
-ಡಿಎಂಜಿಹಳ್ಳಿ ಅಶೋಕ್

ಹಾಸನ (ಜ.12) :  ಸಚಿವ ಹೆಚ್​.ಡಿ ರೇವಣ್ಣ ಪುತ್ರರಾದ ಪ್ರಜ್ವಲ್ ಹಾಗೂ ಸೂರಜ್ ರೇವಣ್ಣ ಅವರು ನಗರಸಭೆಗೆ ಸೇರಿದ ಜಾಗದಲ್ಲಿದ್ದ ಅಕ್ರಮ ಕಟ್ಟಡವನ್ನು ಹಾಸನ ನಗರಸಭೆ ತೊರವುಗೊಳಿಸಿದೆ. ಇದು ನ್ಯೂಸ್ 18 ಕನ್ನಡ ಇಂಪ್ಯಾಕ್ಟ್.​

ಕಳೆದ 6 ವರ್ಷಗಳ ಹಿಂದೆ ಬಿಎಂ ರಸ್ತೆಯಲ್ಲಿ ನಗರ ಸಭೆಗೆ ಸೇರಿದ ಜಾಗದಲ್ಲಿ ಪ್ರಜ್ವಲ್ ರೇವಣ್ಣ ಮತ್ತು ಸೂರಜ್ ರೇವಣ್ಣ ರವರು ಅಕ್ರಮವಾಗಿ ಕಟ್ಟಡವನ್ನು ಖರೀದಿಸಿದ್ದರು ಎನ್ನಲಾಗಿದೆ. ಕಳೆದ ತಿಂಗಳು ಸಚಿವರ ಪ್ರಭಾವದಿಂದ ಕಟ್ಟಡ ತೆರವುಗೊಳಿಸದ ಬಗ್ಗೆ ನ್ಯೂಸ್ 18 ಕನ್ನಡ ವರದಿ ಪ್ರಸಾರ ಮಾಡಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆಯಿಂದ ಕಟ್ಟಡ ತೆರವು ಕಾರ್ಯಾಚರಣೆ ನಡೆಸಲಾಗಿತ್ತು.ಇಂದು ಕಟ್ಟಡವನ್ನು ನಗರಸಭೆ ತೆರವುಗೊಳಿಸಿದೆ.

ಇದನ್ನೂ ಓದಿ :  ಪ್ರಜ್ವಲ್​ ರೇವಣ್ಣಗೆ ಸೇರಿದ ಅಕ್ರಮ ಕಟ್ಟಡ ತೆರವುಗೊಳಿಸಿದ ಹಾಸನ ನಗರಸಭೆ

ಈ ಸಂಬಂಧ ಮೂರು ತಿಂಗಳಿನಿಂದ ಹಾಸನ ನಗರಸಭೆ ಅಕ್ರಮ ಕಟ್ಟಡ ತೆರವುಗೊಳಿಸುವಂತೆ ಸಚಿವ ಎಚ್​ ಡಿ ರೇವಣ್ಣ ಪುತ್ರರಿಗೆ ನೋಟೀಸ್ ನೀಡಲಾಗಿತ್ತು. ಬಿಎಂ ರಸ್ತೆಯ ಒಟ್ಟು 41 ಮಂದಿಗೆ ಹಾಸನ ನಗರಸಭೆ ನೋಟೀಸ್ ನೀಡಿತ್ತು, ಮೂರು ಕಟ್ಟಡಗಳ ಮಾಲೀಕರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು.

First published:January 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ